ಕಸದ ಬುಟ್ಟಿಯಲ್ಲಿದ್ದ ಮಗು ಮಹಾನಟಿ.. ದಿವ್ಯಾಂಜಲಿ ಆಕ್ಟಿಂಗ್..‌ ಪ್ರೇಮಾ ಕಣ್ಣೀರು! – ಬೀದರ್ ಹುಡುಗಿ ಕರುಣಾಜನಕ ಕತೆ!

ಕಸದ ಬುಟ್ಟಿಯಲ್ಲಿದ್ದ ಮಗು ಮಹಾನಟಿ.. ದಿವ್ಯಾಂಜಲಿ ಆಕ್ಟಿಂಗ್..‌ ಪ್ರೇಮಾ ಕಣ್ಣೀರು! – ಬೀದರ್ ಹುಡುಗಿ ಕರುಣಾಜನಕ ಕತೆ!

ಜೀಕನ್ನಡ ವಾಹಿನಿ ವೀಕ್ಷಕರಿಗೆ ಮನರಂಜನೆ ಕೊಡೋದ್ರಲ್ಲಿ ಎಕ್ಸಪರ್ಟ್..‌ ಹಾಗೇ ಪ್ರತಿಭೆಗಳನ್ನ ಗುರುತಿಸಿ.. ಅವ್ರಿಗೆ ಸಾಕಷ್ಟು ಅವಕಾಶಗಳನ್ನ ಕೊಡ್ತಾ ಬಂದಿದೆ. ಇತ್ತೀಚೆಗಷ್ಟೇ  ಸ ರಿ ಗ ಮ ಪ ಸೀಸನ್ 21ರ ಅದ್ಧೂರಿ ಫಿನಾಲೆ ನಡೆದಿತ್ತು. ಈ ಮೂಲಕ 21ನೇ ಸೀಸನ್‌ಗೆ ಅಂತ್ಯ ಹಾಡಲಾಗಿದೆ. ಈ ಬೆನ್ನಲ್ಲೇ ಜೀ ಕನ್ನಡದಲ್ಲಿ ಮತ್ತೊಂದು ಶೋ ಶುರುವಾಗ್ತಿದೆ. ಮಹಾನಟಿ ಸೀಸನ್‌ 2 ಇದೇ ಶನಿವಾರದಿಂದ ಶುರುವಾಗ್ತಿದೆ. ಇದೀಗ ಸ್ಪರ್ಧಿಗಳ ಆಯ್ಕೆ ಆಗಿದ್ದು, ಮೊದಲ ಪ್ರೋಮೋದಲ್ಲಿ ಬೀದರ್‌ನ ದಿವ್ಯಾಂಜಲಿ ತಮ್ಮ ಅಭಿನಯದ ಮೂಲಕ ವೀಕ್ಷಕರ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ಅಹಮದಾಬಾದ್ ವಿಮಾನ ದುರಂತ – ಕೇಂದ್ರ ಸರ್ಕಾರದಿಂದ ಉನ್ನತ ಮಟ್ಟದ ತನಿಖಾ ಸಮಿತಿ ರಚನೆ

ನಟಿಯಾಗ್ಬೇಕು.. ಸೀರಿಯಲ್‌, ಸಿನಿಮಾದಲ್ಲಿ ನಟಿಸ್ಬೇಕು ಅನ್ನೋದು ಅದೇಷ್ಟೋ ಯುವತಿಯರ ಕನಸಾಗಿರುತ್ತೆ.. ನಟನೆ ಗೊತ್ತಿದ್ರೂ ಅದೆಷ್ಟೋ ಜನರಿಗೆ ಬಣ್ಣದ ಲೋಕದಲ್ಲಿ ಅವಕಾಶ ಸಿಕ್ಕಿರಲ್ಲ. ಇಂತವರಿಗಾಗೇ ಜೀ ಕನ್ನಡ ವಾಹಿನಿಯ ಮಹಾನಟಿ ರಿಯಾಲಿಟಿ ಶೋ ಅತ್ಯುತ್ತಮ ವೇದಿಕೆ. ಮೊದಲ ಸೀಸನ್‌ ಸಕ್ಸಸ್‌ ಕಂಡಿತ್ತು. ಕೆಲ ಸ್ಪರ್ಧಿಗಳು ಈಗಾಗಲೇ ಹಲವು ಸಿನಿಮಾ, ಸೀರಿಯಲ್‌ ಮತ್ತು ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಿದ್ದಾರೆ. ಇದೀಗ ಮಹಾನಟಿ ಎರಡನೇ ಸೀಸನ್‌ ಶುರುವಾಗ್ತಿದೆ. ಇದೇ ಶನಿವಾರದಿಂದ ಶೋ ಆರಂಭವಾಗ್ತಿದೆ. ಆದ್ರೀಗ ಮೆಗಾ ಆಡಿಷನ್‌ ನಲ್ಲೇ ಬೀದರ್‌ ನ ದಿವ್ಯಾಂಜಲಿ ತನ್ನ ಅಭಿನಯದ ಮೂಲಕ ವೀಕ್ಷಕರ ಮನಗೆದ್ದಿದ್ದಾರೆ. ದಿವ್ಯಾಂಜಲಿ ನಟನೆಯ ಪ್ರೋಮೋವನ್ನ ಜೀಕನ್ನಡ ವಾಹಿನಿ ರಿಲೀಸ್‌ ಮಾಡಿದೆ. ಸಾವಿರಾರು ಮಂದಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಮೆಗಾ ಆಡಿಷನ್‌ ನಲ್ಲಿ ದಿವ್ಯಾಂಜಲಿ, ಹುಚ್ಚಿ ಪಾತ್ರವನ್ನ ಮಾಡಿದ್ರು.. ಹಸಿವಾದಾಗ ಈ ತಪ್ಪಿಯೇ ನನಗೆ ಊಟ ಕೊಟ್ಟಿದ್ದು ಎಂದು ಕಸದ ಬುಟ್ಟಿಯನ್ನ ಹುಡುಕಾಡ್ತಾರೆ. ಬಳಿಕ ಅದ್ರಲ್ಲಿರೋ ಮಗುವನ್ನ ಎತ್ತಿಕೊಂಡು.. ನಾನು ಹೀಗೆ ಸಿಕ್ಕಿದ್ದು ಎಂದು ಹೇಳಿದ್ದಾರೆ. ಈಕೆಯ ಆಕ್ಟಿಂಗ್‌ ಗೆ ಜಡ್ಜಸ್‌ ಫಿದಾ ಆಗಿದ್ದಾರೆ. ಬಳಿಕ ಈ ಕಾನ್ಸೆಪ್ಟ್‌ ಹೇಗೆ ಸಿಕ್ತು ಅಂತಾ ನಿಶ್ವಿಕಾ ನಾಯ್ಡು ಕೇಳಿದ್ರು.. ಆಗ ದಿವ್ಯಂಜಲಿ ಇದು ನನ್ನದೇ ಕತೆ ಅಂತಾ ಹೇಳಿದ್ದಾರೆ.. ನಾನು ಅನಾಥೆ.. ನಾನು ಹುಟ್ಟಿದ ಕೂಡ್ಲೇ ಮನೆಯವರು ಚೀಲದಲ್ಲಿ ಕಟ್ಟಿ ಕಸದ ತೊಟ್ಟಿಲಿ ಎಸೆದು ಹೋಗಿದ್ರು ಅಂತಾ ಹೇಳಿದ್ದಾರೆ.. ಈಕೆಯ ಕರುಣಾಜನಕ ಕತೆಯನ್ನ ಕೇಳಿ ಎಲ್ಲರೂ ಮರುಗಿದ್ರು. ತರುಣ್‌ ಸುದೀಪ್‌, ನಟಿ ಪ್ರೇಮಾ ಭಾವುಕರಾಗಿದ್ದು, ಆಕೆಯನ್ನ ಬಿಗಿಯಾಗಿ ತಬ್ಬಿಕೊಂಡ್ರು.  ಇದಾದ ಬಳಿಕ ತನ್ನದೇ ಕಥೆಯನ್ನು ಬಿಚ್ಚು ಮನಸ್ಸಿನಿಂದ ಅಭಿನಯಿಸಿ ಮಾಹಾನಟಿ ಸೀಸನ್ 2ಕ್ಕೆ ಆಯ್ಕೆಯಾಗಿದ್ದಾರೆ. ತನ್ನ ಜೀವನದ ಕಥೆಯನ್ನೇ ಇಟ್ಟುಕೊಂಡು ನಟನೆ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿಕೊಂಡಿದ್ದಾರೆ ದಿವ್ಯಾಂಜಲಿ.

Shwetha M