ಮಹಿಳಾ ವಿರೋಧಿ ಕಾಂಗ್ರೆಸ್ ಸೋನಿಯಾರನ್ನು ಹೇಗೆ ಸಹಿಸಿಕೊಂಡರು? – ಬಿಜೆಪಿ ಸರಣಿ ಟ್ವೀಟ್

ಮಹಿಳಾ ವಿರೋಧಿ ಕಾಂಗ್ರೆಸ್ ಸೋನಿಯಾರನ್ನು ಹೇಗೆ ಸಹಿಸಿಕೊಂಡರು? – ಬಿಜೆಪಿ ಸರಣಿ ಟ್ವೀಟ್

ಚುನಾವಣೆ ಎಂಬುದು ಪಕ್ಷಗಳು, ಅವರ ಸಿದ್ಧಾಂತಗಳು ಮತ್ತು ಪ್ರಣಾಳಿಕೆಗಳ ನಡುವಿನ ಸ್ಪರ್ಧೆಯೇ ಹೊರತು ಅದೊಂದು ಸೌಂದರ್ಯ ಸ್ಪರ್ಧೆಯಲ್ಲ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿಕೆ ನೀಡಿದ್ದರು. ಈ ಬಗ್ಗೆ ಬಿಜೆಪಿ ತಿರುಗೇಟು ನೀಡಿದೆ.

ಜೈರಾಮ್ ರಮೇಶ್ ಹೇಳಿಕೆ ಖಂಡಿಸಿ ಸರಣಿ ಟ್ವೀಟ್ ಮಾಡಿದ್ದು, ‘ಸರ್ವಶಕ್ತ ಮಹಿಳೆಯನ್ನು ಸೌಂದರ್ಯಕ್ಕೆ ಸೀಮಿತ ಮಾಡುವ ಮುನ್ನ ಜೈರಾಮ್ ರಮೇಶ್ ದೇಶದ ವೀರ ನಾರಿಯರ, ಮಹಿಳಾ ಸಾಧಕರ ಇತಿಹಾಸವನ್ನರಿಯಬೇಕು. ಅಂತರಿಕ್ಷಕ್ಕೆ ಅಡಿಯಿಟ್ಟ ಸ್ತ್ರೀ ಸಂಕುಲವನ್ನು ಸೌಂದರ್ಯ ಮೇಳಕ್ಕೆ ಸೀಮಿತಗೊಳಿಸುವ ಸಂಕುಚಿತ ಬುದ್ಧಿ ಅವರ ಸಂಸ್ಕಾರವನ್ನು ಹೇಳುತ್ತದೆ’ಟೀಕಿಸಿದೆ.

ಇದನ್ನೂ ಓದಿ: 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ – ಶಿಕ್ಷಣ ಇಲಾಖೆ ಆದೇಶ

‘ಒಂದು ಕಡೆ ಕಾಂಗ್ರೆಸ್ ಪಕ್ಷ ‘ಮೈ ಲಡ್ಕಿ ಹೂಂ ಮೈ ಲಡ್ ಸಕ್ತಿ ಹೂಂ’ ಎಂದು ಸುಳ್ಳು ಪ್ರಚಾರ ಮಾಡುತ್ತಾರೆ. ಮತ್ತೊಂದೆಡೆ ಚುನಾವಣೆಯೆಂದರೆ ಸೌಂದರ್ಯ ಸ್ಪರ್ಧೆಯಲ್ಲ ಎನ್ನುತ್ತಾ ಮಹಿಳೆಯರು ಸಿಎಂ ಹುದ್ದೆಗೆ ಅನರ್ಹರು ಎಂದು ಮಹಿಳಾ ವಿರೋಧಿ ನೀತಿಯನ್ನು ಪ್ರದರ್ಶಿಸುತ್ತಾರೆ. ಇದೇನಾ ನಿಮ್ಮ ಮಹಿಳಾ ಸಬಲೀಕರಣ?’ ಎಂದು ಬಿಜೆಪಿ ಪ್ರಶ್ನಿಸಿದೆ.

‘ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕಗಳೇ ಕಳೆದರೂ ಇನ್ನೂ ಮಹಿಳೆಯರಿಗೆ ಚುನಾವಣೆಗೆ ಸ್ಪರ್ಧಿಸುವ ಸ್ವಾತಂತ್ರ್ಯವನ್ನು ರಚನಾತ್ಮಕವಾಗಿ ಹತ್ತಿಕ್ಕುತ್ತಾ ಬಂದಿದ್ದು ಇದೇ ಕಾಂಗ್ರೆಸ್. ಇದಕ್ಕೆ ತಾಜಾ‌‌ ಉದಾಹರಣೆ ಜೈರಾಮ್ ರಮೇಶ್ ಅವರ ನುಡಿಮುತ್ತುಗಳು.‌ ಇವರೆಲ್ಲ ಸೋನಿಯಾ ಗಾಂಧಿಯವರನ್ನು‌ ಹೇಗೆ ಸಹಿಸಿಕೊಂಡರು‌ ಎಂಬುದೇ ಯಕ್ಷಪ್ರಶ್ನೆಯಾಗಿದೆ’ಎಂದು ಕುಹಕವಾಡಿದೆ.

suddiyaana