ENG ಫೈಟ್ ಗೆಲ್ತಾರಾ ಕನ್ನಡಿಗರು? – ಕೆಎಲ್, ಕರುಣ್ ಚರಿತ್ರೆ ಸೃಷ್ಟಿಸ್ತಾರಾ?
ಬೌಲರ್ಸ್ ಸ್ವರ್ಗದಲ್ಲಿ ಕೃಷ್ಣನೇ ಹೀರೋ!

ENG ಫೈಟ್ ಗೆಲ್ತಾರಾ ಕನ್ನಡಿಗರು? – ಕೆಎಲ್, ಕರುಣ್ ಚರಿತ್ರೆ ಸೃಷ್ಟಿಸ್ತಾರಾ?ಬೌಲರ್ಸ್ ಸ್ವರ್ಗದಲ್ಲಿ ಕೃಷ್ಣನೇ ಹೀರೋ!

ಆಂಗ್ಲರ ನಾಡಿನಲ್ಲಿ ಭಾರತ ಟೆಸ್ಟ್ ಮ್ಯಾಚ್ ಗೆದ್ದು 18 ವರ್ಷಗಳೇ ಕಳೆದಿವೆ. ಇದೀಗ ಶುಭ್​ಮನ್ ಗಿಲ್ ನಾಯಕತ್ವದಲ್ಲಿ ಈ ಸೋಲಿನ ಸರಣಿಗೆ ಬ್ರೇಕ್ ಹಾಕ್ಬೇಕಿದೆ. ಇಂಗ್ಲೆಂಡ್​ನಲ್ಲಿ ಹೇಳಿ ಕೇಳಿ ಬೌಲರ್​​ಗಳೇ ಮ್ಯಾಚ್​ ವಿನ್ನರ್ಸ್​. ವೇಗಿಗಳಿಗೆ ನೆರವಾಗೋ ಪೇಸ್​​ ಅಂಡ್ ಬೌನ್ಸಿ ಟ್ರ್ಯಾಕ್​​ನಲ್ಲಿ ಬೌಲರ್​​​ಗಳೇ ಪಾರುಪತ್ಯ ಮೆರೀತಾರೆ.  ಪೇಸರ್ಸ್ ಪಾಲಿಗೆ ಇಂಗ್ಲೆಂಡ್​ನ ಕಂಡಿಷನ್ಸ್​​ ಅಂದ್ರೆ ಸ್ವರ್ಗ. ಈ ಬೌಲರ್​​ಗಳ ಪಾಲಿನ ಸ್ವರ್ಗದಲ್ಲಿ ಹೊಸ ಸವಾಲಿಗೆ ಟೀಮ್ ಇಂಡಿಯಾ ಸಜ್ಜಾಗ್ತಿದೆ. ಹಾಗೇ ಈ ಮೂವರು ಕನ್ನಡಿಗರೂ ಕೂಡ ಮಿಂಚಬೇಕಿದೆ. ಈಗಾಗ್ಲೇ ಇಂಡಿಯಾ ಎ ಟೀಮ್​ನಲ್ಲಿ ಅಬ್ಬರಿಸಿರೋ ಕೆಎಲ್ ರಾಹುಲ್ ಮೇಲೆ ಎಲ್ಲರ ಚಿತ್ತ ಇದೆ.

ಇದನ್ನೂ ಓದಿ : 7 ಪ್ಲೇಯರ್ಸ್ ಗೆ RCB ಗೇಟ್ ಪಾಸ್ – ಲಿಯಾಮ್, ರಸಿಕ್, ಮಯಾಂಕ್ ಔಟ್?

ಈಗಾಗಲೇ ವಿಶ್ವ ಕ್ರಿಕೆಟ್‌ನಲ್ಲಿ ಸದ್ದು ಮಾಡಿರುವ ಕೆಎಲ್ ರಾಹುಲ್ ಇಂಗ್ಲೆಂಡ್‌ ಲಯನ್ಸ್‌ ವಿರುದ್ಧದ ಅನಧಿಕೃತ ಟೆಸ್ಟ್‌ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ 116 ರನ್‌ ಬಾರಿಸಿದ್ರು. ಸೆಕೆಂಡ್ ಇನ್ನಿಂಗ್ಸ್​ನಲ್ಲೂ ಆಫ್ ಸೆಂಚುರಿ ಬಾರಿಸಿದ್ರು. ಇಂಗ್ಲೆಂಡ್​​ನಲ್ಲಿ ಕೆ.ಎಲ್.ರಾಹುಲ್, 18 ಇನ್ನಿಂಗ್ಸ್​ಗಳಿಂದ 34.11ರ ಬ್ಯಾಟಿಂಗ್ ಅವರೇಜ್​ನಲ್ಲಿ 614 ರನ್ ಗಳಿಸಿದ್ದಾರೆ. 2 ಶತಕ, 1 ಅರ್ಧಶತಕ ಹೊಂದಿರುವ ಕೆ.ಎಲ್.ರಾಹುಲ್, ಇಂಗ್ಲೆಂಡ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿ ನಂತರದ ಸ್ಥಾನದಲ್ಲಿದ್ದಾರೆ. ಇನ್ನು ಪೂಜಾರ, 18 ಇನ್ನಿಂಗ್ಸ್​ಗಳಿಂದ 36.50ರ ಬ್ಯಾಟಿಂಗ್ ಅವರೇಜ್​ನಲ್ಲಿ 584 ರನ್ ಗಳಿಸಿದ್ದು, 1 ಶತಕ, 4 ಅರ್ಧಶತಕ ದಾಖಲಿಸಿದ್ದಾರೆ.

ಇನ್ನೇನು ಕ್ರಿಕೆಟ್ ಜರ್ನಿ ಮುಗ್ದೇ ಹೋಯ್ತು ಅನ್ನುವಾಗ ಕರುಣ್ ನಾಯರ್​ಗೆ ಕ್ರಿಕೆಟ್ ಎರಡನೇ ಚಾನ್ಸ್ ಕೊಟ್ಟಿದೆ. ಟೀಮ್ ಇಂಡಿಯಾದಿಂದ ದೀರ್ಘಕಾಲ ದೂರವಿದ್ದ ನಾಯರ್ ದೇಶೀಯ ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಸುಮಾರು ಏಳು ವರ್ಷಗಳ ನಂತರ, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜೂನ್ 20ರಂದು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು ಮೈದಾನಕ್ಕಿಳಿದರೆ, ಎಂಟು ವರ್ಷಗಳ ನಂತರ ಭಾರತ ಪರ ಮೊದಲ ಪಂದ್ಯ ಆಡಲಿದ್ದಾರೆ. ಕರುಣ್ ಕೊನೆಯ ಬಾರಿಗೆ ಭಾರತ ಪರ ಟೆಸ್ಟ್ ಪಂದ್ಯ ಆಡಿದ್ದು 2017ರಲ್ಲಿ. 2018 ರಲ್ಲಿ ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತೀಯ ತಂಡದಲ್ಲಿ ಆಯ್ಕೆಯಾಗಿದ್ದರೂ, ಅಂತಿಮ ತಂಡದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ಇಂಗ್ಲೆಂಡ್ ಸರಣಿಗೆ ಸೆಲೆಕ್ಟ್ ಆಗಿದ್ದು ಈಗಾಗ್ಲೇ ಭಾರತ ಎ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಕರುಣ್ 281 ಎಸೆತಗಳಲ್ಲಿ 26 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 204 ರನ್ ಗಳಿಸಿದರು. ಸೋ ಪ್ಲೇಯಿಂಗ್ 11ನಲ್ಲಿ ಆಡೋದು ಪಕ್ಕಾ ಇದ್ದು ಮೂರನೇ, ನಾಲ್ಕನೇ ಅಥವಾ ಐದನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಇವರಿಗಿದೆ. ವಿರಾಟ್ ಮತ್ತು ರೋಹಿತ್ ಶರ್ಮಾ ಟೆಸ್ಟ್‌ನಿಂದ ನಿವೃತ್ತರಾದ ನಂತರ ತೆರವಾದ ಎರಡು ಸ್ಥಾನಗಳನ್ನು ಭರ್ತಿ ಮಾಡಲು ಸಾಯಿ ಸುದರ್ಶನ್ ಮತ್ತು ಕರುಣ್ ನಾಯರ್ ಅಂತಿಮ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಇಂಡೋ-ಇಂಗ್ಲೆಂಡ್​ ನಡುವಿನ ಬ್ಯಾಟಲ್​​ನಲ್ಲಿ ಬೌಲರ್​​​ಗಳೇ ಮ್ಯಾಚ್​ ವಿನ್ನರ್ಸ್​. ಹೆಡ್ಡಿಂಗ್ಲೆ, ಎಡ್ಜ್​ಬ್ಯಾಸ್ಟನ್​, ಲಾರ್ಡ್ಸ್​, ಮ್ಯಾಂಚೆಸ್ಟರ್​​, ಕೆನ್ನಿಂಗ್ಟನ್​​ ಓವಲ್​.. ಐದು ಟೆಸ್ಟ್​​ ಪಂದ್ಯಗಳು ನಡೆಯೋ ಈ ಐದೂ ಸ್ಟೇಡಿಯಂಗಳೂ ಬೌಲರ್​​ಗಳಿಗೆ ಹೆಚ್ಚು ನೆರವಾಗಲಿದೆ. ಟೀಮ್​ ಇಂಡಿಯಾದ ಬೌಲಿಂಗ್​ ವಿಭಾಗ ಇಂಗ್ಲೆಂಡ್​​ಗೆ ಹೋಲಿಸಿದ್ರೆ ಡಲ್​​ ಹೊಡೆಯುತ್ತಿದೆ. ಬೂಮ್ರಾ ಒಬ್ರೇ ಬೌಲಿಂಗ್​ ಬಲ.. ಆಂಗ್ಲರ ನಾಡಲ್ಲಿ 17 ಇನ್ನಿಂಗ್ಸ್​ಗಳನ್ನಾಡಿರುವ ಬೂಮ್ರಾ, 37 ವಿಕೆಟ್​ ಉರುಳಿಸಿದ್ದಾರೆ. ಉಳಿದೆಲ್ಲಾ ಬೌಲರ್​​ಗಳಿಂತ ಇಂಗ್ಲೆಂಡ್​ನಲ್ಲಿ ಹೆಚ್ಚು ಪಂದ್ಯಗಳನ್ನಾಡಿದ ಅನುಭವ ಬೂಮ್ರಾಗಿದೆ. ಈ ಅನುಭವಿ ಬೂಮ್ರಾ 5 ಪಂದ್ಯಗಳ ಪೈಕಿ 3 ಪಂದ್ಯದಲ್ಲಿ ಮಾತ್ರ ಆಡಲಿದ್ದಾರೆ. 2 ಪಂದ್ಯಗಳಲ್ಲಿ ಬೂಮ್ರಾ ಅಲಭ್ಯತೆ ಟೀಮ್​ ಇಂಡಿಯಾ ಕಾಡಲಿದೆ. ಸೋ ಈ ಪ್ರೆಶರ್​ನ ಪ್ರಸಿದ್ಧ್ ಕೃಷ್ಣ ಹ್ಯಾಂಡಲ್ ಮಾಡ್ಬೇಕಿದೆ. ಸಿರಾಜ್ ಇಂಗ್ಲೆಂಡ್​ನಲ್ಲಿ 5 ಪಂದ್ಯಗಳಿಂದ 24 ವಿಕೆಟ್​ ಬೇಟೆಯಾಡಿದ್ದಾರೆ. ಸೋ ಸಿರಾಜ್​ಗೆ ಪ್ರಸಿದ್ಧ್ ಸಾಥ್ ಕೊಡ್ಬೇಕಿದೆ. ಕರ್ನಾಟಕದ ವೇಗಿ ಪ್ರಸಿದ್ಧ ಕೃಷ್ಣ ಸದ್ಯ ಸಾಲಿಡ್​ ಫಾರ್ಮ್​ನಲ್ಲಿದ್ದಾರೆ. ಐಪಿಎಲ್​ನಲ್ಲಿ ಹೈಯೆಸ್ಟ್​ ವಿಕೆಟ್​ ಬೇಟೆಯಾಡಿ ಪರ್ಪಲ್​ ಕ್ಯಾಪ್​ ಗೆದ್ದ ಪ್ರಸಿದ್ಧ್​​ ಇದೀಗ ಇಂಗ್ಲೆಂಡ್​ ಚಾಲೆಂಜ್​ಗೆ ಸಜ್ಜಾಗಿದ್ದಾರೆ. ರೆಡ್​ಬಾಲ್​ ಫಾರ್ಮೆಟ್​​ಗೆ ಶಿಫ್ಟ್​ ಆಗ್ತಿರೋ ಪ್ರಸಿದ್ಧ್​ಗೆ ಇಂಗ್ಲೆಂಡ್​​ನಲ್ಲಿ ಟೆಸ್ಟ್​ ಕ್ರಿಕೆಟ್​ ಆಡಿದ ಅನುಭವವಿಲ್ಲ. ಕೌಂಟಿ ಕ್ರಿಕೆಟ್​ನಲ್ಲಿ 3 ಪಂದ್ಯ ಆಡಿದ್ರೂ 4 ವಿಕೆಟ್​ ಉರುಳಿಸಿದ್ದಾರಷ್ಟೇ. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಡಿದ ಒಂದೇ ಪಂದ್ಯದಲ್ಲಿ ಪ್ರಸಿದ್ಧ್​ 6 ವಿಕೆಟ್​ ಉರುಳಿಸಿದ್ರು. ಇಂಗ್ಲೆಂಡ್​​ ಕಂಡಿಷನ್ಸ್​​ಗೆ ಸಾಮ್ಯತೆ ಇರೋ ಆಸ್ಟ್ರೇಲಿಯಾದಲ್ಲಿ ಬೆಸ್ಟ್ ಪ್ರದರ್ಶನ ಬಂದಿರೋದು ಈ ಸಿರೀಸ್​ನಲ್ಲಿ ಹೆಲ್ಪ್ ಆಗ್ಬೋದು.

Shantha Kumari