ದಿ ಇಂಡಿಯನ್ ಹೌಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ – ಸಿನಿಮಾ ಸೆಟ್‌ನಲ್ಲಿ ದಿಢೀರ್ ಪ್ರವಾಹ

ದಿ ಇಂಡಿಯನ್ ಹೌಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ – ಸಿನಿಮಾ ಸೆಟ್‌ನಲ್ಲಿ ದಿಢೀರ್ ಪ್ರವಾಹ

ತೆಲುಗಿನ ದಿ ಇಂಡಿಯನ್ ಹೌಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ ನಡಿದೆದೆ. ಬೃಹತ್ ನೀರಿನ ಟ್ಯಾಂಕ್ ಒಡೆದುಹೋಗಿ ಸಿನಿಮಾ ಸೆಟ್‌ನಲ್ಲಿ ನೀರು ತುಂಬಿಕೊಂಡಿದೆ. ಈ ಅವಘಡದಲ್ಲಿ ಕೆಲವರು ಗಾಯಗೊಂಡಿದ್ದಾರೆ. ನಿಖಿಲ್ ನಟನೆಯ ದಿ ಇಂಡಿಯನ್ ಹೌಸ್ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ತೆಲುಗು ನಟ ರಾಮ್‌ಚರಣ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ:ಮಾತಾಡದೇ ಕನ್ನಡಿಗರ ಮನಗೆದ್ದ ಮಾದೇವ – ವಿಲನ್ ಆಗಿ ಶ್ರುತಿ ಅಬ್ಬರ, ಖಡಕ್ ಖಾಕಿಯಾಗಿ ಮಾಲಾಶ್ರೀ ಖದರ್

ಸಮುದ್ರದ ಸನ್ನಿವೇಶವನ್ನು ಚಿತ್ರೀಕರಿಸಲು ದೊಡ್ಡ ಟ್ಯಾಂಕ್‌ನಲ್ಲಿ ಸಾವಿರಾರು ಲೀಟರ್ ನೀರನ್ನು ಸಂಗ್ರಹಿಸಲಾಗಿತ್ತು. ಒಮ್ಮೆಲೆ ವಾಟರ್ ಟ್ಯಾಂಕ್‌ ಒಡೆದು ನೀರು ನುಗ್ಗಿದೆ. ಸಿನಿಮಾ ಸೆಟ್‌ನಲ್ಲಿ ದಿಢೀರ್ ಅಂತಾ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇನ್ನು ಸಿನಿಮಾ ಚಿತ್ರೀಕರಣಕ್ಕಾಗಿಯೇ ಟ್ಯಾಂಕ್‌ನಲ್ಲಿ ನೀರು ತುಂಬಿಸಲಾಗುತ್ತಿತ್ತು. ಇತ್ತ ಚಿತ್ರತಂಡ ಚಿತ್ರೀಕರಣದಲ್ಲಿ ಮಗ್ನವಾಗಿತ್ತು. ದಿಢೀರ್ ಅಂತಾ ಒಮ್ಮೆಲೆ ನೀರು ನುಗ್ಗಿದ್ದರಿಂದ ಶೂಟಿಂಗ್‌ನಲ್ಲಿದ್ದ ಕಲಾವಿದರು ಗಾಬರಿಯಾಗಿದ್ದಾರೆ. ಇಳಿಜಾರು ಇರುವ ಕಡೆಗೆ ನೀರು ಹರಿದುಬಂದಿದ್ದು, ಶೂಟಿಂಗ್ ಪರಿಕರಗಳನ್ನು ಕೊಚ್ಚಿಕೊಂಡು ಹೋಗಿದೆ. ಸಿನಿಮಾ ಚಿತ್ರೀಕರಣ ನಿಲ್ಲಿಸಲಾಗಿದ್ದು, ಗಾಯಗೊಂಡವರಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸೆಟ್‌ನಲ್ಲಿ ನೀರು ತುಂಬಿದ ನಂತರ ಸಿಬ್ಬಂದಿ ಕ್ಯಾಮೆರಾಗಳು ಮತ್ತು ಇತರ ಅಗತ್ಯ ಉಪಕರಣಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದನ್ನು ಕಂಡು ಬಂದಿದೆ. ಸಾಯಿ ಮಂಜ್ರೇಕರ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು ಅನುಪಮ್ ಖೇರ್ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ.

Sulekha