ಗಿಲ್ ಗೆ ವಿದೇಶಿ ಪಿಚ್ ಗಳೇ ವಿಲನ್.. ENGನಲ್ಲಿ 18 ವರ್ಷಗಳ ಬಿಗ್ ಟಾಸ್ಕ್! – ಸರಣಿ ಗೆದ್ರಷ್ಟೇ TESTನಲ್ಲಿ ಪಾಸ್

ಗಿಲ್ ಗೆ ವಿದೇಶಿ ಪಿಚ್ ಗಳೇ ವಿಲನ್.. ENGನಲ್ಲಿ 18 ವರ್ಷಗಳ ಬಿಗ್ ಟಾಸ್ಕ್! – ಸರಣಿ ಗೆದ್ರಷ್ಟೇ TESTನಲ್ಲಿ ಪಾಸ್

ಹೊಸ ಕ್ಯಾಪ್ಟನ್.. ಹೊಸ ಪ್ಲೇಯರ್ಸ್.. 18 ವರ್ಷಗಳ ಬಳಿಕ ಚರಿತ್ರೆ ಸೃಷ್ಟಿಸೋ ಟಾರ್ಗೆಟ್. ಟೀಂ ಇಂಡಿಯಾ ಟೆಸ್ಟ್​ ಫಾರ್ಮೆಟ್​ನಲ್ಲಿ ಇನ್ಮುಂದೆ ನ್ಯೂ ಚಾಪ್ಟರ್ ಓಪನ್ ಆಗ್ತಿದೆ. ಇಂಗ್ಲೆಂಡ್ ವಿರುದ್ಧದ ಸರಣಿ ಮೂಲಕ ಹೊಸ ಮನ್ವಂತರಕ್ಕೆ ಭಾರತ ಅಡಿಗಲ್ಲು ಹಾಕ್ತಿದೆ. 2025-27ರ ಡಬ್ಲ್ಯೂಟಿಸಿ ಫೈನಲ್ ರೇಸ್ ಆಂಗ್ಲರ ವಿರುದ್ಧದ ಟೆಸ್ಟ್ ಸರಣಿಯಿಂದ ಶುರುವಾಗಲಿದೆ. ಲೆಜೆಂಡರಿ ಪ್ಲೇಯರ್ಸ್ ಆಬ್ಸೆನ್ಸ್​ನಲ್ಲಿ ಇಂಗ್ಲೆಂಡ್​ಗೆ ಹಾರಿರೋ ಭಾರತ ಭರ್ಜರಿ ಪ್ರಾಕ್ಟೀಸ್​ನಲ್ಲಿದ್ರೆ ನಾಯಕನಾಗಿ ಶುಭ್​ಮನ್ ಗಿಲ್ ಮುಂದೆ ಸಾಲು ಸಾಲು ಸವಾಲುಗಳಿವೆ. ಗಿಲ್ ತಂಡವನ್ನ ಗೆಲ್ಲಿಸೋದ್ರ ಜೊತೆಗೆ ತನ್ನನ್ನೂ ಪ್ರೂವ್ ಮಾಡಿಕೊಳ್ಬೇಕಿದೆ.

ಇದನ್ನೂ ಓದಿ: WTC ಫೈನಲ್ ನಲ್ಲಿ ಗೋಲ್ಡನ್ ಸ್ಟಾರ್ಸ್ – ಸೋಲೇ ಕಾಣದವರಲ್ಲಿ ಸೋಲೋದ್ಯಾರು?

ಟೆಸ್ಟ್ ಕ್ರಿಕೆಟ್‌ನಿಂದ ರೋಹಿತ್ ಶರ್ಮಾ ದಿಢೀರ್ ನಿವೃತ್ತಿ ಘೋಷಣೆ ಮಾಡಿದ್ದು ರೋಹಿತ್ ಉತ್ತರಾಧಿಕಾರಿಯಾಗಿ ಶುಭ್​ಮನ್ ಗಿಲ್ ನಾಯಕತ್ವ ವಹಿಸಿಕೊಂಡಿದ್ದಾರೆ. 25ನೇ ವಯಸ್ಸಿನಲ್ಲಿ, ಗಿಲ್ ಭಾರತದ 37 ನೇ ಟೆಸ್ಟ್ ಕ್ಯಾಪ್ಟನ್ ಆಗಿದ್ದಾರೆ. ಮನ್ಸೂರ್ ಅಲಿ ಖಾನ್ ಪಟೌಡಿ, ಸಚಿನ್ ತೆಂಡೂಲ್ಕರ್, ಕಪಿಲ್ ದೇವ್ ಮತ್ತು ರವಿಶಾಸ್ತ್ರಿ ನಂತರದ ಕಿರಿಯ ಕ್ಯಾಪ್ಟನ್ ಎನಿಸಿಕೊಂಡಿದ್ದಾರೆ. 2020ರಲ್ಲಿ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಗಿಲ್ ಈಗ ತಮ್ಮ ಕ್ರಿಕೆಟ್ ಕರಿಯರ್​ನ ಮಹತ್ವದ ಘಟ್ಟದಲ್ಲಿದ್ದಾರೆ. ಬ್ಯಾಟಿಂಗ್ ದಿಗ್ಗಜರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ, ಸ್ಪಿನ್ ದಿಗ್ಗಜ ಆರ್. ಅಶ್ವಿನ್ ಮತ್ತು ವೇಗಿ ಮೊಹಮ್ಮದ್ ಶಮಿಯಂತಹ ಅನುಭವಿಗಳೂ ತಂಡದಲ್ಲಿಲ್ಲ. ಹೀಗಾಗಿ ಈ ಪಂದ್ಯ ಬರೀ ಸೋಲು ಗೆಲುವಿನ ಪ್ರಶ್ನೆಯಾಗಿರದೆ ಅವ್ರ ಕ್ಯಾಪ್ಟನ್ಸಿ ಅಸ್ತಿತ್ವದ ಪ್ರಶ್ನೆಯೂ ಆಗಿದೆ.

ಗಿಲ್ ಮುಂದೆ ಹಲವು ಸವಾಲ್! 

25 ವರ್ಷದ ಶುಭ್​ಮನ್ ಗಿಲ್​ಗೆ ಕ್ಯಾಪ್ಟನ್ಸಿ ಹೊಸದೇನು ಅಲ್ಲ. ಈಗಾಗ್ಲೇ ಐಪಿಎಲ್​ನಲ್ಲಿ ನಾಯಕನಾಗಿ ತಂಡವನ್ನ ಮುನ್ನಡೆಸಿದ್ದಾರೆ. ಬಟ್ 20 ಓವರ್​ಗಳ ಐಪಿಎಲ್​ಗೂ ಪೇಷನ್ಸ್ ಟೆಸ್ಟ್ ಮಾಡೋ ಟೆಸ್ಟ್ ಮ್ಯಾಚಸ್​ಗೂ ತುಂಬಾನೇ ವ್ಯತ್ಯಾಸ ಇದೆ. 5 ದಿನಗಳ ಸುದೀರ್ಘ ಪಂದ್ಯದಲ್ಲಿ ತಾಳ್ಮೆಯೇ ಅಸ್ತ್ರ. ಕ್ಯಾಪ್ಟನ್ ಸ್ವಲ್ಪ ಪೇಷನ್ಸ್ ಕಳ್ಕೊಂಡ್ರೂ ಇಡೀ ತಂಡಕ್ಕೆ ಏಟು ಬೀಳುತ್ತೆ. ರೆಡ್​ ಬಾಲ್​ ಫಾರ್ಮೆಟ್​ಗೆ ಬಂದ್ರೆ ಒಂದು ರಣಜಿ ಪಂದ್ಯದಲ್ಲಿ ಮಾತ್ರ ಗಿಲ್​ ನಾಯಕತ್ವ ನಿಭಾಯಿಸಿದ್ದಾರೆ. ಇದೀಗ ಟೀಂ ಇಂಡಿಯಾ ಕ್ಯಾಪ್ಟನ್ ಆಗಿ ಅದೂ ಇಂಗ್ಲೆಂಡ್ ಸರಣಿ ಆಡ್ತಿರೋದ್ರಿಂದ ಒತ್ತಡವನ್ನ ನಿಭಾಯಿಸಬೇಕಿದೆ. ಬಟ್ ಇಲ್ಲಿ ಗಿಲ್​ಗೆ ಇರೋ ಮೇನ್ ಚಾಲೆಂಜ್ ಅಂದ್ರೆ ವಿದೇಶಿ ಪಿಚ್. ಭಾರತದಲ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ಗಿಲ್ ಅದ್ಭುತ ಆಟಗಾರ. ಅದ್ರಲ್ಲಿ ಎರಡು ಮಾತಿಲ್ಲ. ಆದ್ರೆ  ವಿದೇಶಿ ಪಿಚ್​ಗಳಲ್ಲಿ ಅವ್ರ ಬ್ಯಾಟ್ ಸೌಂಡ್ ಮಾಡಿಲ್ಲ. ವಿದೇಶದಲ್ಲಿ ಕೇವಲ 27.53ರ ಸರಾಸರಿ ಹೊಂದಿರೋ ಗಿಲ್​​, ಬಾಂಗ್ಲಾದೇಶ ವಿರುದ್ಧ ಒಂದು ಶತಕ ಸಿಡಿಸಿದ್ದಾರಷ್ಟೇ. ಇನ್ನೊಂದು ಬಿಗ್ ಚಾಲೆಂಜ್ ಅಂದ್ರೆ ಬರೋಬ್ಬರಿ 18 ವರ್ಷಗಳಿಂದ ಆಂಗ್ಲರ ನೆಲದಲ್ಲಿ ಟೆಸ್ಟ್​ ಸರಣಿಯನ್ನ ಭಾರತ ಗೆದ್ದೇ ಇಲ್ಲ. 2011, 2014, 2018, 2022ರ ಪ್ರವಾಸದಲ್ಲಿ ಸೋಲು ಕಂಡಿದೆ. ಸೋ ಈ ಸೋಲಿನ ಜರ್ನಿಗೆ ಬ್ರೇಕ್ ಹಾಕಿ 18 ವರ್ಷಗಳ ಬಳಿಕ ಇಂಗ್ಲೆಂಡ್ ​ನಲ್ಲಿ ಗೆಲ್ಲೋ ಟಾಸ್ಕ್ ಗಿಲ್ ಮುಂದಿದೆ. ಅದೂ ಅಲ್ದೇ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ​, ಅಶ್ವಿನ್​ರಂತ ಅನುಭವಿಗಳು ಟೆಸ್ಟ್​ ತಂಡದಲ್ಲಿಲ್ಲ. ಬಹುತೇಕರು ಯುವ ಆಟಗಾರರೇ ಇದ್ದಾರೆ. ಅದ್ರಲ್ಲಿ ಕೆಲವರರಿಗೆ ಇದು ಮೊದಲ ಇಂಗ್ಲೆಂಡ್​ ಟೂರ್. ಹೀಗಾಗಿ ಎಲ್ಲರನ್ನೂ ಸಮರ್ಥವಾಗಿ ನಿಭಾಯಿಸೋ ಹೊಣೆ ಗಿಲ್ ಮೇಲಿದೆ.

ಮೊದ್ಲಿಂದಲೂ ವಿರಾಟ್ ಕೊಹ್ಲಿಯವ್ರನ್ನ ಟೀಂ ಇಂಡಿಯಾ ಕಿಂಗ್ ಅಂದ್ರೆ ಶುಭ್​ಮನ್ ಗಿಲ್ ಪ್ರಿನ್ಸ್ ಅಂತಾನೇ ಕರೆಸಿಕೊಳ್ತಿದ್ರು. ಇದೀಗ ಯುವರಾಜನ ಪಟ್ಟವೂ ಸಿಕ್ಕಿದೆ. ಆದ್ರೆ ಕೊಹ್ಲಿಯಂತೆ ತಂಡಕ್ಕೆ ಬ್ಯಾಕ್ ಬೋನ್ ಆಗ್ತಾರಾ ಅಂದ್ರೆ ಆ ಭರವಸೆ ಇನ್ನೂ ಸಾಬೀತಾಗಿಲ್ಲ. ಕೊಹ್ಲಿಯಂತೆ, ಗಿಲ್ ಎಲ್ಲಾ ಸ್ವರೂಪದ ಆಟಗಾರ, ಆದರೆ ಕೊಹ್ಲಿಯಂತೆ ಇನ್ನೂ ಯಾವುದೇ ಇಂಪ್ರೆಸ್ಸಿವ್ ಇನ್ನಿಂಗ್ಸ್ ಬಂದಿಲ್ಲ. ವಿಶೇಷವಾಗಿ ಟೆಸ್ಟ್ ಪಂದ್ಯಗಳಲ್ಲಿ.. ರೆಡ್ ಬಾಲ್ ಫಾರ್ಮೆಟ್​ನಲ್ಲಿ 32 ಪಂದ್ಯಗಳನ್ನ ಆಡಿದ್ದು 1,893 ರನ್‌ಗಳನ್ನು ಗಳಿಸಿದ್ದಾರೆ. ಇನ್ಮುಂದೆ ಈ ನಂಬರ್ಸ್ ಮತ್ತಷ್ಟು ಎಫೆಕ್ಟಿವ್ ಆಗ್ಲೇ ಬೇಕಿದೆ. ಒಟ್ನಲ್ಲಿ ಮೊದಲ ಟೆಸ್ಟ್​​ ಸರಣಿಯಲ್ಲೇ ಯುವ ನಾಯಕ ಗಿಲ್​​ಗೆ ಕಠಿಣ ಸವಾಲುಗಳು ಎದುರಾಗಲಿವೆ. ಇದನ್ನೆಲ್ಲಾ ಹೇಗೆ ನಿಭಾಯಿಸ್ತಾರೆ ಅನ್ನೋದನ್ನ ಕಾದು ನೋಡ್ಬೇಕು.

Shwetha M

Leave a Reply

Your email address will not be published. Required fields are marked *