ಪ್ರಿಯಾ ಜೊತೆ ರಿಂಕು ಹೊಸ ಇನ್ನಿಂಗ್ಸ್.. ನಿಶ್ಚಿತಾರ್ಥದ ರಿಂಗ್ ಬೆಲೆ 2,50,000!

ರಿಂಕು ಸಿಂಗ್.. ಸಿಕ್ಸರ್ ಕಿಂಗ್ ಎಂದೇ ಖ್ಯಾತಿ ಪಡೆದಿರೋ ರಿಂಕು ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ರು.. ಟೂರ್ನಿ ಮುಗಿಯುತ್ತಿದ್ದಂತೆ ರಿಂಕು ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಭಾನುವಾರ ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಜೊತೆ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಪ್ರಿಯಾ ಬೆರಳಿಗೆ ದುಬಾರಿ ರಿಂಗ್‌ನ ತೊಡಿಸಿದ್ದಾರೆ ರಿಂಕು.. ಇದೀಗ ಕ್ರಿಕೆಟರ್ ಹಾಗೇ ಸಂಸದೆ ಎಂಗೇಜ್‌ಮೆಂಟ್ ಮಾಡಿಕೊಳ್ತಿದ್ದಂತೆ ಅವ್ರ ಫ್ಯಾನ್ಸ್ ಇಬ್ಬರಲ್ಲಿ ಯಾರು ರಿಚ್.. ಉಂಗುರದ ಬೆಲೆ ಎಷ್ಟು ಅಂತಾ ಗೂಗಲ್‌ನಲ್ಲಿ ಸರ್ಚ್ ಮಾಡ್ತಿದ್ದಾರೆ.
ಇದನ್ನೂ ಓದಿ: ಮಧುಚಂದ್ರಕ್ಕೆ ಕರೆದು ಗಂಡನ ಕೊ*ಲೆ ಮಾಡಿದ ಕಿರಾತಕ ಹೆಂಡತಿ
ಟೀಮ್ ಇಂಡಿಯಾದ ಯಂಗ್ ಕ್ರಿಕೆಟರ್ ಹಾಗೂ ಕೆಕೆಆರ್ ತಂಡದ ಆಟಗಾರ ರಿಂಕು ಸಿಂಗ್ ಭಾನುವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಉತ್ತರ ಪ್ರದೇಶದ ಲಕ್ನೋ ನಗರದ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಎಂಗೇಜ್ಮೆಂಟ್ ಅದ್ಧೂರಿಯಾಗಿ ನೆರವೇರಿದೆ. ರಿಂಕು ಪ್ರಿಯಾ ಸರೋಜ್‌ಗೆ ರಿಂಗ್ ತೊಡಿಸುತ್ತಿದ್ದಂತೆ ಸಂಸದೆ ಭಾವುರಾದ್ರು.. ಈ ಮೂಲಕ ರಿಂಕು ತಮ್ಮ ಜೀವನದ ಹೊಸ ಶುರುಮಾಡಿದ್ದಾರೆ. ಇನ್ನು ಈ ಅದ್ದೂರಿ ಸಮಾರಂಭಕ್ಕೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಜಯಾ ಬಚ್ಚನ್, ಡಿಂಪಲ್ ಯಾದವ್ ಸೇರಿದಂತೆ ರಾಜಕೀಯ ಗಣ್ಯರು ಆಗಮಿಸಿದ್ದರು. ರಿಂಕು ಸಿಂಗ್ ಅವರ ಕ್ರಿಕೆಟ್ನ ಆತ್ಮೀಯ ಸ್ನೇಹಿತರು ಭಾಗಿಯಾಗಿದ್ದರು. ಇದರ ಜೊತೆಗೆ ಬಿಸಿಸಿಐನ ಉಪಾಧ್ಯಕ್ಷ ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಒಟ್ಟು 300 ಜನರಿಗೆ ಆಹ್ವಾನ ನೀಡಲಾಗಿತ್ತು ಎಂದು ಹೇಳಲಾಗುತ್ತಿದೆ.
ಇನ್ನು ಈ ಸ್ಪೆಷಲ್ ಮೂಮೆಂಟ್‌ಗೆ ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್ ವಿಶೇಷ ಉಂಗುರಗಳನ್ನು ಆರ್ಡರ್ ಮಾಡಿದ್ದರು. ಪ್ರಿಯಾ ಕೋಲ್ಕತ್ತಾದಿಂದ ಡಿಸೈನರ್ ಉಂಗುರವನ್ನು ಖರೀದಿಸಿದ್ದರೆ, ರಿಂಕು ಮುಂಬೈನಿಂದ ವಿಶೇಷ ಉಂಗುರವನ್ನು ಆರ್ಡರ್ ಮಾಡಿದ್ರು. ಎರಡೂ ಉಂಗುರಗಳ ಒಟ್ಟು ಬೆಲೆ ಸುಮಾರು 2.5 ಲಕ್ಷ ರೂ. ಎಂದು ಹೇಳಲಾಗುತ್ತದೆ. ಇನ್ನು ರಿಂಕು ಹಾಗೂ ಪ್ರಿಯಾ ಮದ್ವೆ ದಿನಾಂಕ ಕೂಡ ಫಿಕ್ಸ್ ಆಗಿದೆ. ನವೆಂಬರ್ 18 ರಂದು ವಾರಣಾಸಿಯ ಹೋಟೆಲ್ ತಾಜ್‌ನಲ್ಲಿ ಮದುವೆ ಸಮಾರಂಭ ನಡೆಯಲಿದೆ. ಕ್ರಿಕೆಟ್ ತಾರೆಯರು, ಚಲನಚಿತ್ರ ಸ್ಟಾರ್ಸ್ ಮತ್ತು ಉದ್ಯಮಿಗಳು ಮದುವೆಗೆ ಆಗಮಿಸಲಿದ್ದಾರೆ ಎಂದು ಹೇಳಲಾಗ್ತಿದೆ. ಮದುವೆ ಇರೋ ಕಾರಣ ರಿಂಕು ಸಿಂಗ್ ಟೀಮ್ ಇಂಡಿಯಾದ ಕೆಲ ಪಂದ್ಯಗಳಿಗೆ ಗೈರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನು ರಿಂಕು ಪ್ರಿಯಾ ಜೊತೆ ಎಂಗೇಜ್‌ಮೆಂಟ್ ಮಾಡಿಕೊಳ್ತಿದ್ದಂತೆ ಇಬ್ಬರಲ್ಲಿ ಯಾರು ರಿಚ್ ಅಂತಾ ಫ್ಯಾನ್ಸ್ ಗೂಗಲ್‌ನಲ್ಲಿ ಸರ್ಚ್ ಮಾಡ್ತಿದ್ದಾರೆ. ಅಂದ್ಹಾಗೆ ರಿಂಕು ಸಿಂಗ್ ಭಾವಿ ಪತ್ನಿ ಪ್ರಿಯಾ ಸರೋಜ್ 26 ವರ್ಷದವರು. 2024 ರಲ್ಲಿ ಉತ್ತರಪ್ರದೇಶದ ಮಚ್ಲಿಶಹರ್‌ನಿಂದ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. 2024 ರ ಚುನಾವಣಾ ಅಫಿಡವಿಟ್ ಪ್ರಕಾರ, ಪ್ರಿಯಾ ಸರೋಜ್ ನಿವ್ವಳ ಮೌಲ್ಯ 11.26 ಲಕ್ಷ ರೂಪಾಯಿ. ಈಕೆ ಬಳಿ ಎರಡು ಬ್ಯಾಂಕ್ ಖಾತೆಗಳಿವೆ. ಯೂನಿಯನ್ ಬ್ಯಾಂಕ್ ಖಾತೆಯಲ್ಲಿ 10.10 ಲಕ್ಷ ರೂ. ಮತ್ತು ಕೆನರಾ ಬ್ಯಾಂಕ್ ಖಾತೆಯಲ್ಲಿ 8,719 ರೂಪಾಯಿ. ಹಾಗೇ ನಗದು 75,000 ರೂಪಾಯಿ ಇದೆ ಎಂದು ವರದಿಯಾಗಿತ್ತು. ಇನ್ನು ರಿಂಕು ಸಿಂಗ್ ಪ್ರಿಯಾ ಸರೋಜ್‌ಗಿಂತ ಶ್ರೀಮಂತರು. ವರದಿಗಳ ಪ್ರಕಾರ ರಿಂಕು ಸಿಂಗ್ ಅವರ ನಿವ್ವಳ ಮೌಲ್ಯ ಸುಮಾರು 18 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಕೆಕೆಆರ್ ತಂಡ ರಿಂಕುವನ್ನು 13 ಕೋಟಿ ರೂ.ಗೆ ರೀಟೈನ್ ಮಾಡಿಕೊಂಡಿತ್ತು. ಅಷ್ಟೇ ಅಲ್ಲ ರಿಂಕು ಸಿಂಗ್ 2024 ರಲ್ಲಿ 3 ಕೋಟಿ ರೂ. ಮೌಲ್ಯದ ಐಷಾರಾಮಿ ಮನೆ ಖರೀದಿಸಿದ್ದಾರೆ. ಇನ್ನು ರಿಂಕು ಸಿಂಗ್ ಬಿಸಿಸಿಐನ ‘ಸಿ’ ವರ್ಗದ ಆಟಗಾರ ಆಗಿದ್ದಾರೆ. ಅವರಿಗೆ ವಾರ್ಷಿಕ 1 ಕೋಟಿ ರೂ. ಸಂಭಾವನೆ ಸಿಗುತ್ತದೆ. ಇನ್ನು ಬ್ರ್ಯಾಂಡ್ ಎಂಡೋರ್ಸ್‌ಮೆಂಡ್, ಹಾಗೇ ಕೆಲ ಜಾಹಿರಾತುಗಳಿಂದಲೂ ರಿಂಕು ಅದಾಯ ಗಳಿಸ್ತಾ ಇದ್ದಾರೆ.