ENGನಲ್ಲಿ ಚರಿತ್ರೆ ಸೃಷ್ಟಿಸುತ್ತಾ ಭಾರತ – 18 ವರ್ಷದಿಂದ ಗೆದ್ದಿಲ್ಲ.. ಸವಾಲುಗಳೆಷ್ಟು?
RO-KO ಇಲ್ಲದ ಟೆಸ್ಟ್ ಅಗ್ನಿಪರೀಕ್ಷೆನಾ?

ENGನಲ್ಲಿ ಚರಿತ್ರೆ ಸೃಷ್ಟಿಸುತ್ತಾ ಭಾರತ – 18 ವರ್ಷದಿಂದ ಗೆದ್ದಿಲ್ಲ.. ಸವಾಲುಗಳೆಷ್ಟು?RO-KO ಇಲ್ಲದ ಟೆಸ್ಟ್ ಅಗ್ನಿಪರೀಕ್ಷೆನಾ?

ಚಾಂಪಿಯನ್ಸ್ ಟ್ರೋಫಿ ಬಳಿಕ ಐಪಿಎಲ್​ನಲ್ಲಿ ಬ್ಯುಸಿ ಆಗಿದ್ದ ಟೀಂ ಇಂಡಿಯಾ ಆಟಗಾರರು ಮತ್ತೆ ಅಂತಾರಾಷ್ಟ್ರೀಯ ಫೈಟ್​ಗೆ ವಾಪಸ್ ಆಗಿದ್ದಾರೆ.. ಜೂನ್ 20ರಿಂದ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭ ಆಗಲಿದೆ. ಇಂಗ್ಲೆಂಡ್ ಟೆಸ್ಟ್ ಸರಣಿಗೆ ಶುಭ್‌ಮನ್ ಗಿಲ್ ಕ್ಯಾಪ್ಟನ್ ಆಗಿದ್ರೆ ವಿಕೆಟ್ ಕೀಪರ್ ಬ್ಯಾಟ್ಸ್​​ಮನ್ ರಿಷಭ್ ಪಂತ್​ಗೆ ವೈಸ್ ಕ್ಯಾಪ್ಟನ್ಸಿ ನೀಡಲಾಗಿದೆ. ಅಲ್ದೇ ಆಟಗಾರರ ಆಯ್ಕೆಯಲ್ಲೂ ಕೂಡ ಸಾಕಷ್ಟು ಅಚ್ಚರಿಯ ಹೆಸರುಗಳು ಸೇರ್ಪಡೆಯಾಗಿದ್ದು ಕುತೂಹಲ ಮೂಡಿಸಿದೆ. ಐಪಿಎಲ್​ನಲ್ಲಿ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿರುವ ಸಾಯಿ ಸುದರ್ಶನ್ ಹಾಗೇ ಕನ್ನಡಿಗ ಕರುಣ್ ನಾಯರ್ ಸುಮಾರು 9 ವರ್ಷಗಳ ನಂತರ ಭಾರತ ತಂಡಕ್ಕೆ ವಾಪಸ್ ಆಗಿದ್ದಾರೆ. ಶಾರ್ದೂಲ್ ಠಾಕೂರ್‌ಗೂ ಮತ್ತೆ ಭಾರತ ತಂಡದಲ್ಲಿ ಅವಕಾಶ ಸಿಕ್ಕಿದೆ. ಹೀಗಾಗಿ ಪ್ಲೇಯಿಂಗ್ 11ನಲ್ಲಿ ಯಾರಿಗೆಲ್ಲಾ ಚಾನ್ಸ್ ಸಿಗಬಹುದು ಅನ್ನೋ ಕುತೂಹಲವೂ ಜೋರಾಗಿದೆ.

ಇದನ್ನೂ ಓದಿ : ರೋಹಿತ್ ODI ನಿವೃತ್ತಿಗೆ ಮುಹೂರ್ತ  – ಶ್ರೇಯಸ್ ಅಯ್ಯರ್ ಹೆಗಲಿಗೆ ಏಕದಿನ ಸಾರಥ್ಯ?

ಸಂಭಾವ್ಯ ಪ್ಲೇಯಿಂಗ್ 11!

ಯಶಸ್ವಿ ಜೈಸ್ವಾಲ್

ಕೆ.ಎಲ್.ರಾಹುಲ್

ಕರುಣ್ ನಾಯರ್

ಶುಭ್‌ ಮನ್‌ ಗಿಲ್

ಸಾಯಿ ಸುದರ್ಶನ್

ರಿಷಭ್ ಪಂತ್

ರವೀಂದ್ರ ಜಡೇಜಾ

ಶಾರ್ದೂಲ್ ಠಾಕೂರ್

ಜಸ್ಪ್ರೀತ್ ಬುಮ್ರಾ

ಮೊಹಮ್ಮದ್ ಸಿರಾಜ್

ಪ್ರಸಿದ್ಧ್ ಕೃಷ್ಣ

ಈ ಮೂಲಕ ಭಾರತ ತಂಡ ಮೊದಲ ಟೆಸ್ಟ್‌ನಲ್ಲಿ 6 ಬ್ಯಾಟ್ಸ್‌ಮನ್‌ಗಳು, 2 ಆಲ್ರೌಂಡರ್‌ಗಳು ಮತ್ತು 3 ವೇಗದ ಬೌಲರ್‌ಗಳೊಂದಿಗೆ ಆಡುವ ಸಾಧ್ಯತೆ ದಟ್ಟವಾಗಿದೆ. ರವೀಂದ್ರ ಜಡೇಜಾ ಸ್ಪಿನ್ನರ್ ಆಗಿ ಮತ್ತು ಶಾರ್ದೂಲ್ ಠಾಕೂರ್ ಮಧ್ಯಮ ವೇಗದ ಬೌಲರ್ ಆಗಿ ಆಡಲಿದ್ದಾರೆ. ಇನ್ನುಳಿದಂತೆ ತಂಡಕ್ಕೆ ಆಯ್ಕೆಯಾಗಿರುವ ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್‌, ನಿತೀಶ್ ಕುಮಾರ್ ರೆಡ್ಡಿ, ಅಭಿಮನ್ಯು ಈಶ್ವರನ್, ಆಕಾಶ್ ದೀಪ್ ಮತ್ತು ಧ್ರುವ್ ಜುರೇಲ್ ಗೆ ಅವಕಾಶ ಸಿಗೋದು ಡೌಟ್ ಇದೆ.

ಇಂಗ್ಲೆಂಡ್ ವಿರುದ್ಧದ ಈ ಟೆಸ್ಟ್ ಸರಣಿ ಟೀಮ್ ಇಂಡಿಯಾದ ಅನೇಕ ಆಟಗಾರರಿಗೆ ಬಹಳ ಮುಖ್ಯವಾಗಲಿದೆ.ಅ ದ್ರಲ್ಲಿ ರವೀಂದ್ರ ಜಡೇಜಾ ಕೂಡ ಒಬ್ಬರು. ಇಂಗ್ಲೆಂಡ್‌ನಲ್ಲಿ ಇದುವರೆಗೆ 12 ಟೆಸ್ಟ್ ಪಂದ್ಯಗಳಲ್ಲಿ ಜಡೇಜಾ 29.18 ರ ಸರಾಸರಿಯಲ್ಲಿ ಒಟ್ಟು 642 ರನ್ ಗಳಿಸಿದ್ದಾರೆ, ಇದರಲ್ಲಿ ಒಂದು ಅದ್ಭುತ ಶತಕವೂ ಸೇರಿದೆ. ಅದೇ ಸಮಯದಲ್ಲಿ, ಬೌಲಿಂಗ್‌ನಲ್ಲಿ, ಅವರು 43.48 ರ ಸರಾಸರಿಯಲ್ಲಿ 27 ವಿಕೆಟ್‌ಗಳನ್ನು ಪಡೆದಿದ್ದಾರೆ. ಈಗ ಈ ಸರಣಿಯಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬ ಕುತೂಹಲವೂ ಇದೆ. ಯಾಕಂದ್ರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಹಿರಿಯ ಆಟಗಾರರು ಸಹ ಈ ಸರಣಿಯಲ್ಲಿ ಇಲ್ಲ. ಇಂಗ್ಲೆಂಡ್ ಪ್ರವಾಸ ಪ್ರಾರಂಭವಾಗುವ ಮೊದಲೇ ಇಬ್ಬರೂ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ಹೆಚ್ಚು ಯುವ ಆಟಗಾರರಿಂದಲೇ ಕೂಡಿರುವ ಈ ಟೂರ್ನಿಯಲ್ಲಿ ಜಡ್ಡು ಅನುಭವ ಮತ್ತು ಆಟ ಮೋಸ್ಟ್ ಇಂಪಾರ್ಟೆಂಟ್ ಆಗಲಿದೆ.

ಗಿಲ್ ಕ್ಯಾಪ್ಟನ್ಸಿಯಲ್ಲಿ ಆಂಗ್ಲರ ನಾಡಿಗೆ ಕಾಲಿಟ್ಟಿರೋ ಭಾರತ ತಂಡ ಹೇಗೆ ಪ್ರದರ್ಶನ ನೀಡುತ್ತೆ ಅನ್ನೋ ಕುತೂಹಲ ಹೆಚ್ಚಾಗ್ತಿದೆ. ಈಗಾಗಲೇ ಭಾರತ ಯುವ ಪಡೆ ಇಂಗ್ಲೆಂಡ್​ಗೆ ತೆರಳಿದ್ದು, ಸಮರಾಭ್ಯಾಸವನ್ನೂ ಆರಂಭಿಸಿದೆ. ಜೂನ್ 6 ರಂದು ಲಂಡನ್ ತಲುಪಿದ ಭಾರತ ತಂಡದ ಆಟಗಾರರು ಲಂಡನ್‌ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಪ್ರಾಕ್ಟೀಸ್ ಆರಂಭಿಸಿದ್ದಾರೆ. ಭಾರತ ತಂಡವು ಜೂನ್ 20 ರಂದು ಹೆಡಿಂಗ್ಲಿ ಮೈದಾನದಲ್ಲಿ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಆಡಲಿದೆ. ಇದರ ನಂತರ, ಜುಲೈ 2 ರಿಂದ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಎರಡನೇ ಟೆಸ್ಟ್ ಪಂದ್ಯವನ್ನು ಆಡಲಿದೆ. ಮೂರನೇ ಟೆಸ್ಟ್ ಪಂದ್ಯ ಜುಲೈ 10 ರಿಂದ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ. ಅದೇ ಸಮಯದಲ್ಲಿ, ನಾಲ್ಕನೇ ಟೆಸ್ಟ್ ಪಂದ್ಯ ಜುಲೈ 23 ರಿಂದ ಮ್ಯಾಂಚೆಸ್ಟರ್ ಮೈದಾನದಲ್ಲಿ ನಡೆಯಲಿದ್ದು, ಈ ಟೆಸ್ಟ್ ಸರಣಿಯು ಜುಲೈ 31 ರಿಂದ ಲಂಡನ್‌ನ ಓವಲ್ ಮೈದಾನದಲ್ಲಿ ನಡೆಯಲಿರುವ ಕೊನೆಯ ಟೆಸ್ಟ್ ಪಂದ್ಯದೊಂದಿಗೆ ಕೊನೆಗೊಳ್ಳಲಿದೆ.

Shantha Kumari