ಮುಂದಿನ ಸಲ ಕಪ್‌ ಪಂಜಾಬ್‌ ಗೆ? – ಪ್ರತಿಷ್ಠೆಯ ಆಟ.. ನೀತಾ, ಕಾವ್ಯಗಿಂತ ಫ್ಯಾನ್ಸ್‌ಗೆ ಪ್ರೀತಿನೇ ಇಷ್ಟ!

ಮುಂದಿನ ಸಲ ಕಪ್‌ ಪಂಜಾಬ್‌ ಗೆ? – ಪ್ರತಿಷ್ಠೆಯ ಆಟ.. ನೀತಾ, ಕಾವ್ಯಗಿಂತ ಫ್ಯಾನ್ಸ್‌ಗೆ ಪ್ರೀತಿನೇ ಇಷ್ಟ!

ಐಪಿಎಲ್‌ ಸೀಸನ್‌ 18 ಮುಕ್ತಾಯಗೊಂಡಿದೆ. ಆರ್‌ಸಿಬಿ ಚೊಚ್ಚಲ ಕಪ್‌ ಗೆದ್ದುಕೊಂಡಿದೆ. ಐಪಿಎಲ್‌ ಟೂರ್ನಿ ಮುಗಿದು ಒಂದು ವಾರ ಆಗ್ತಾ ಬಂತು.. ಇದೀಗ ಆಟಗಾರರ ಜೊತೆಗೆ ಟೀಮ್‌ ಮಾಲೀಕರು ಕೂಡ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.. ಫ್ರಾಂಚೈಸಿ ಮಾಲೀಕರು ಒಂದು ಟೂರ್ನಿಯಿಂದ ಬೇಕಾದಷ್ಟು ದುಡ್ಡು ಮಾಡ್ಕೊಂಡಿದ್ದಾರೆ.. ಇದೀಗ ಐಪಿಎಲ್‌ ನ ಟೀಮ್‌ ಗಳ ಲೇಡಿ ಓನರ್‌ ಗಳು ಮಾತ್ರ ಎಲ್ಲರಿಗಿಂತ ಹೆಚ್ಚು ಸುದ್ದಿಯಲ್ಲಿದ್ದಾರೆ.. ಇದೀಗ ಕ್ರಿಕೆಟ್‌ ಮಾಲೀಕರ ಮಧ್ಯೆ ಯಾವ ಟೀಮ್ ನ ಮಾಲೀಕರು ಬೆಸ್ಟ್‌.. ಯಾರು ಮುಂದಿನ ವರ್ಷ ಕಪ್‌ ಗೆದ್ರೆ ಒಳ್ಳೆದು ಅನ್ನೋ ಚರ್ಚೆ ನಡಿತಾ ಇದೆ.

ಇದನ್ನೂ ಓದಿ: ರೋಹಿತ್ ODI ನಿವೃತ್ತಿಗೆ ಮುಹೂರ್ತ  – ಶ್ರೇಯಸ್ ಅಯ್ಯರ್ ಹೆಗಲಿಗೆ ಏಕದಿನ ಸಾರಥ್ಯ?

ಐಪಿಎಲ್ ಟೂರ್ನಿ ಅಂದ್ಮೇಲೆ ಇಲ್ಲಿ ಆಟಗಾರರ ಜೊತೆಗೆ ತಂಡಗಳ ಮಾಲೀಕರ ಸಖತ್‌ ಹೈಲೈಟ್. ಎಲ್ಲಾ ತಂಡಗಳ ಓನರ್‌ಗಳು ಟೀಂ ಜೊತೆ ಕಾಣಿಸಿಕೊಂಡರೂ ಈ ಆರ್‌ಸಿಬಿಯ ಓನರ್‌ಗಳು ಕಾಣಿಸಿಕೊಳ್ಳೋದು ತುಂಬಾ ಕಡಿಮೆ.. ಆದ್ರೆ ತಂಡದ ಹೆಚ್ಚು ಕಾಣಿಸಿಕೊಳ್ಳೋದ್ರಲ್ಲಿ ಎಲ್‌ಎಸ್‌ಜಿ ತಂಡದ ಮಾಲೀಕ ಸಂಜೀವ್‌ ಗೋಯೆಂಕಾ ಕೂಡ ಒಬ್ರು.. ಮೈದಾನದಲ್ಲೇ ಆಟಗಾರರಿಗೆ ಕ್ಲಾಸ್‌ ತೆಗೆದುಕೊಂಡು  ಟ್ರೋಲ್‌ ಆಗಿದ್ದೇ ಹೆಚ್ಚು.. ಗೊಯೆಂಕಾ ಅವ್ರನ್ನ ಬಿಟ್ರೆ ಮೈದಾನದಲ್ಲಿ ಹೆಚ್ಚು ಕಾಣಿಸಿಕೊಳ್ಳೋದು MI ತಂಡದ ಮಾಲಕಿ ನೀತಾ ಅಂಬಾನಿ.. ಪ್ರೀತಿ ಝಿಂಟಾ ಹಾಗೂ ಕಾವ್ಯಾ ಮಾರನ್‌.. ಇದೀಗ ಈ ಮಾಲಕಿಯರಲ್ಲಿ ಯಾರು ಬೆಸ್ಟ್‌ ಅನ್ನೋ ಚರ್ಚೆ ಶುರುವಾಗಿದೆ.  ಐಪಿಎಲ್‌ನಲ್ಲಿ ಮೂವರು ಸುಂದರಿಯರು ತಮ್ಮ ತಂಡದ ಮ್ಯಾಚ್‌ ಇರೋವಾಗ ಮೈದಾನದಲ್ಲಿ ಹಾಜರ್‌ ಆಗ್ತಾರೆ.. ಇವ್ರು ಗ್ಯಾಲರಿಯಲ್ಲಿ ಕೂತ್ರೂ ಅಂದ್ರೆ ಕ್ಯಾಮರಗಳೆಲ್ಲಾ ಇವ್ರ ಕಡೆಗೆ ಫೋಕಸ್‌ ಆಗುತ್ತೆ.. ಇವ್ರು ಕೊಡೊ ಒಂದೊಂದು ಎಕ್ಸ್‌ಪ್ರೆಷನ್‌ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತೆ.. ಈ ಮೂರು ಓನರ್‌ಗಳ ಬಗ್ಗೆ ಹೇಳಲೇಬೇಕು..

ಸನ್‌ರೈಸರ್ಸ್‌ ಹೈದರಾಬಾದ್ ತಂಡ ಯಾವುದೇ ಮೈದಾನದಲ್ಲಿ ಆಡಲು ಇಳಿದ್ರೂ, ಆಟಗಾರರನ್ನು ಹುರಿದುಂಬಿಸಲು ಮಾಲೀಕಿ ಕಾವ್ಯಾ ಮಾರನ್ ಹಾಜರಿರುತ್ತಾರೆ. ಕಾವ್ಯ ಮೈದಾನದಲ್ಲಿ ಇದ್ದಾರೆ ಎಂದರೆ, ಕ್ಯಾಮೆರಾ ಕಣ್ಣುಗಳು ಅವರ ಮೇಲೆ ಪೋಕಸ್ ಆಗಿರುತ್ತವೆ. ಪಂದ್ಯ ಗೆಲ್ಲುತ್ತಿದೆ, ತಂಡ ಚೆನ್ನಾಗಿ ಆಡುತ್ತಿದೆ ಎಂದಾಗ ಕಾವ್ಯಾ ಮಾರನ್ ಅವರು ಖುಷಿಯಿಂದ ಇರುತ್ತಾರೆ.. ಆದರೆ, ಸೋಲುವಾಗ ಅವರ ಎಕ್ಸ್ಪ್ರೆಷನ್ ಬೇರೆಯೇ ಆಗಿರುತ್ತದೆ. ನಿರಾಸೆ, ಸಿಟ್ಟು. ಬೇಜಾರು ಎಲ್ಲಾನೂ ಇರುತ್ತೆ.. ಇದೇ ಕಾರಣಕ್ಕೆ ಕಾವ್ಯಾ ಮಾರನ್‌ ಬೇಸರವನ್ನು ಟಿವಿಲಿ ನೋಡೋಕೆ ಆಗಲ್ಲ ಎಂದು ಸೂಪರ್‌ಸ್ಟಾರ್‌ ರಜಿನಿಕಾಂತ್‌ ಕೂಡ ಒಮ್ಮೆ ತಮಾಷೆ ಮಾಡಿದ್ದರು..  ಹೀಗಾಗಿ ಕಳೆದ ವರ್ಷ ಒಳ್ಳೇ ಟೀಂ ಕಟ್ಟಿ ಫೈನಲ್‌ವರೆಗೂ ಹೈದ್ರಾಬಾದ್‌ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಈ ವರ್ಷ ಎಸ್‌ಆರ್‌ಹೆಚ್‌ ಕಂಪ್ಲೀಟ್‌ ಫೈಲ್ಯೂರ್‌ ಆಗಿದೆ. ಈ ವರ್ಷದ ಟೂರ್ನಿಯಲ್ಲಿ ಎಸ್‌ ಆರ್‌ ಹೆಚ್‌ ಪಾಯಿಂಟ್ಸ್‌ ಟೇಬಲ್‌ನಲ್ಲಿ 6 ಪ್ಲೇಸ್‌ಗೆ ತೃಪ್ತಿಪಟ್ಟುಕೊಂಡಿದೆ.

ಇನ್ನು ಮುಂಬೈ ಇಂಡಿಯನ್ಸ್‌ ತಂಡದ ಮಾಲಕಿ ನೀತಾ ಅಂಬಾನಿ.. ಮುಂಬೈ ತಂಡದ ಪ್ರತಿ ಮ್ಯಾಚ್‌ ವೇಳೆಯೂ ಮೈದಾನಕ್ಕೆ ಬರ್ತಾರೆ. ಮ್ಯಾಚ್‌ ಗೆದ್ರೆ ಫುಲ್‌ ಸಂಭ್ರಮಿಸ್ತಾರೆ.. ಸೋತ್ರೆ ಪ್ಲೇಯರ್ಸ್‌ ಕಡೆ ಗುರಾಸಿ ನೋಡೋದು.. ಬೇಜಾರಿನಲ್ಲಿ ಕೂರೋದೆಲ್ಲಾ ಕಾಮನ್‌ ಆಗಿದೆ. ಈಗಾಗಲೇ ಮುಂಬೈ ಇಂಡಿಯನ್ಸ್‌ 5 ಬಾರಿ ಚಾಂಪಿಯನ್‌ ಆಗಿದೆ.. ಹೀಗಾಗೇ ಮೈದಾನದಲ್ಲಿ ನೀತಾ ಅಂಬಾನಿ ಆಟಿಟ್ಯೂಡ್‌ ತೋರಿಸ್ತಾರೆ ಅನ್ನೋದು ಕ್ರಿಕೆಟ್‌ ಫ್ಯಾನ್ಸ್‌ ವಾದ.

ಇನ್ನು ಪಂಜಾಬ್ ಕಿಂಗ್ಸ್ ತಂಡದ ಮಾಲಕಿ ಪ್ರೀತಿ ಝಿಂಟಾ ಎಲ್ಲರಂತಲ್ಲ.. ಫುಲ್ ಡಿಫ್ರೆಂಟ್.. ತಂಡ ಸೋಲಲಿ.. ಗೆಲ್ಲಲಿ.. ಅವ್ರ ಮುಖದ ಎಕ್ಸ್ ಪ್ರೆ‌‍ಷನ್ ಜಾಸ್ತಿ ಚೇಂಜ್ ಆಗಲ್ಲ.. ಮುಂಚೆಯೆಲ್ಲಾ ಪಂದ್ಯ ಗೆದ್ದಾಗ ಕುಣಿದು ಕುಪ್ಪಳಿಸುತ್ತಿದ್ದ ಪ್ರೀತಿಗೆ ಈಗೀಗ ಐಪಿಎಲ್‌ ಅನುಭವ ಜಾಸ್ತಿಯಾಗುತ್ತಿದ್ದಂತೆ ಸೋಲು ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸ್ತಾರೆ. ಹೌದು.. ಪ್ರೀತಿ ಜಿಂಟಾ, ನೀತಾ ಅಂಬಾನಿಯಂತೆ ಪದೇ ಪದೇ ಗೆದ್ದು ಉತ್ಸಾಹ ಉಳಿಸಿಕೊಂಡವರಲ್ಲ.. ಹೈದರಾಬಾದ್ ತಂಡದ ಕಾವ್ಯ ಮಾರನ್‌ ತರ ವಿವಿಧ ಭಾವ ಭಂಗಿಗಳನ್ನು ಪ್ರದರ್ಶಿಸಿ ಸುದ್ದಿಯಾಗಿಲ್ಲ. ಪ್ರೀತಿ ತಂಡವನ್ನು ಅತ್ಯಂತ ಪ್ರೀತಿ ಮತ್ತು ವೃತ್ತಿಪರತೆಯಿಂದ ಮುನ್ನಡೆಸಿಕೊಂಡು ಹೋಗ್ತಿದ್ದಾರೆ. ಇನ್ನು ತಾನು ಸುಂದರ ನಟಿಯಾದರೂ ತೀರಾ ಗ್ಲಾಮರಸ್ ಆಗಿ ಮೈದಾನದಲ್ಲಿ ಕಾಣಿಸಿಕೊಳ್ಳೋದಿಲ್ಲ. ಅಷ್ಟೇ ಅಲ್ಲ ಆಕೆ ಯಾವುದೇ ವಿವಾದಗಳನ್ನು ಮಾಡಿಕೊಳ್ಳೋದಿಲ್ಲ. ಯಾವುದೇ ಸಂದರ್ಭದಲ್ಲೂ ತಂಡವನ್ನು ಎಂದಿಗೂ ಬಿಟ್ಟುಕೊಟ್ಟಿಲ್ಲ. ಪ್ರತಿ ವರ್ಷವೂ ಹೊಸ ಹೊಸ ಯೋಜನೆಗಳು ಮತ್ತು ಆಟಗಾರರೊಂದಿಗೆ ಕಣಕ್ಕಿಳಿದಳು. ಇದೀಗ ಪ್ರೀತಿ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸೋಲನ್ನು ಗೆಲುವಾಗಿಸಿಕೊಳ್ಳಲು ಸಹನೆ ತುಂಬಾ ಮುಖ್ಯ..  ಹದಿನೆಂಟು ವರ್ಷ ಪ್ರೀತಿ ತಾಳ್ಮೆಯಿಂದಲೇ ತಂಡವನ್ನ ಮುನ್ನಡೆಸಿಕೊಂಡು ಬರ್ತಿದ್ದಾರೆ. ಹೆಣ್ಣೆಂದರೆ ಸೌಂದರ್ಯ, ಆಕರ್ಷಣೆ ಎಂದಷ್ಟೇ ಭಾವಿಸುವ ಸಮಾಜಕ್ಕೆ ತನ್ನ ವೃತ್ತಿಪರತೆ ಮಾತ್ರ ಕಾಣುವಂತೆ ನಡೆದುಕೊಂಡಿದ್ದಾರೆ. ಇದೇ ಕಾರಣಕ್ಕೆ ಪ್ರೀತಿ ಝಿಂಟಾ ಒಡೆತನದ ಪಂಜಾಬ್‌ ಕಿಂಗ್ಸ್‌, ಯಾವತ್ತೂ ಐಪಿಎಲ್‌ನಲ್ಲಿ ಕಪ್‌ ಗೆಲ್ಲದಿದ್ದರೂ ಅಭಿಮಾನಿಗಳ ಪಡೆಯನ್ನು ಉಳಿಸಿಕೊಳ್ಳೋದ್ರಲ್ಲಿ ಯಶಸ್ವಿಯಾಗಿದೆ. ಈ ಬಾರಿ ಶ್ರೇಯಸ್‌ ಅಯ್ಯರ್‌ ನೇತೃತ್ವದಲ್ಲಿ ಟೀಂ ಒಳ್ಳೆಯ ಪ್ರದರ್ಶನ ನೀಡಿದ್ದು, ರನ್ನರಪ್‌ ಆಗಿದೆ.  ಮುಂದಿನ ವರ್ಷ ಈಕೆಯ ಟೀಮ್‌ ಕಪ್‌ ಗೆಲ್ಲಲಿ ಅಂತಾ ಫ್ಯಾನ್ಸ್‌ ಹೇಳ್ತಿದ್ದಾರೆ.

Shwetha M