ಮಲ್ಯ ಆರ್‌ಸಿಬಿ ಖರೀದಿಸಿದ್ದು ಬೆಂಗಳೂರು ಮೇಲಿನ ಪ್ರೀತಿಗಲ್ವಂತೆ
RCB ಕಟ್ಟಿದ ಗುಟ್ಟು ಬಿಚ್ಚಿಟ್ಟ ಮಲ್ಯ

ಮಲ್ಯ ಆರ್‌ಸಿಬಿ ಖರೀದಿಸಿದ್ದು ಬೆಂಗಳೂರು ಮೇಲಿನ ಪ್ರೀತಿಗಲ್ವಂತೆRCB ಕಟ್ಟಿದ ಗುಟ್ಟು ಬಿಚ್ಚಿಟ್ಟ ಮಲ್ಯ

ಆರ್‌ಸಿಬಿ ಗೆಲುವಿನ ಸಂಭ್ರಮದಲ್ಲಿ ಮಾಜಿ ಮಾಲೀಕ ವಿಜಯ್ ಮಲ್ಯ ಅವರು ಒಂದು ಪಾಡ್‌ಕ್ಯಾಸ್ಟ್‌ನಲ್ಲಿ ಹಳೆಯ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಬ್ಯಾಂಕುಗಳಿಗೆ ಸಾಲ ಮರು ಪಾವತಿ ಮಾಡುವುದೇ ನನ್ನ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ. ರಾಜ್ ಶಾಮಾನಿ ಅವರ ಜನಪ್ರಿಯ ಪಾಡ್‌ಕ್ಯಾಸ್ಟ್ ನಲ್ಲಿ ನಾಲ್ಕು ಗಂಟೆಗಳ ವಿಜಯ ಮಲ್ಯ ಅವರ ಸಂದರ್ಶನದ ಎಪಿಸೋಡ್ ಈ ವಾರ ಬಿಡುಗಡೆಯಾಗಿದ್ದು, ಅವರು ತನ್ನ ಕಾನೂನು ಹೋರಾಟವನ್ನು ಸಮರ್ಥಿಸಿಕೊಂಡಿದ್ದಾರೆ.

 ಲಲಿತ್ ಮೋದಿ ಮಾತು ಕೇಳಿ RCB ಖರೀದಿಸಿದೆ.

ಐಪಿಎಲ್ ಶುರುವಾಗಿದ್ದಾಗ, ತಂಡಗಳನ್ನು ಖರೀದಿಸುವ ಪ್ರಕ್ರಿಯೆ ನಡೀತಿತ್ತು. ಆಗ್ಲೇ ಐಪಿಎಲ್ ಮಾಜಿ ಚೇರ್ಮನ್  ಲಲಿತ್ ಮೋದಿ ನನ್ನ ಹತ್ರ ಬಂದು “ಒಂದು ತಂಡವನ್ನು ಖರೀದಿಸಿ” ಅಂತ ಹೇಳಿದ್ರು. ಲಲಿತ್ ಮೋದಿ ಅವರ ಮಾತುಗಳಿಂದ ಪ್ರಭಾವಿತನಾಗಿ, ನಾನು ಆರ್‌ಸಿಬಿ ಖರೀದಿಸಲು ನಿರ್ಧರಿಸಿದೆ ಅಂತ ಮಲ್ಯ ಹೇಳಿದ್ದಾರೆ.

ರೂ.14,100 ಕೋಟಿ ಮರುಪಾವತಿ

ಇನ್ನೂ ಇತ್ತೀಚಿನ ಹಣಕಾಸು ಸಚಿವಾಲಯದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, 6,203 ಕೋಟಿ ರೂಪಾಯಿ ಸಾಲ ವಸೂಲಾತಿ ನ್ಯಾಯಮಂಡಳಿ ತೀರ್ಪಿನ ಎರಡು ಪಟ್ಟು ಹೆಚ್ಚು ಅಂದರೆ 14,100 ಕೋಟಿ ರೂ. ಸಾಲ ಮರುಪಾವತಿ ಮಾಡಿಸಿಕೊಂಡಿರುವುದಾಗಿ ಹೇಳಿದೆ. ನಾನು ನಿಜವಾಗಿಯೂ ಬ್ಯಾಂಕ್‌ಗಳಿಗೆ ವಂಚನೆ ಮಾಡಿದ್ದರೆ, ಸರ್ಕಾರ ಅಷ್ಟು ಹಣವನ್ನು ಹೇಗೆ ವಸೂಲಿ ಮಾಡಿತು?” ಅವರು ಕೇಳಿದರು. 2008 ರ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ವಿಮಾನಯಾನವನ್ನು ಕಡಿಮೆ ಮಾಡದಂತೆ ಕೇಳಿದ್ದಕ್ಕಾಗಿ ಅಂದಿನ ಸರ್ಕಾರದ ಮೇಲೆ ಆರೋಪ ಹೊರಿಸಿದ ಮಲ್ಯ, ಆಗಿನ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರೊಂದಿಗಿನ ಮಾತುಕತೆಯನ್ನು ನೆನಪಿಸಿಕೊಂಡರು. ಬ್ಯಾಂಕುಗಳ ಸಾಲ ನೀಡುವ ಭರವಸೆಯೊಂದಿಗೆ ಸಂಪರ್ಕ ಮತ್ತು ಉದ್ಯೋಗದ ಸಲುವಾಗಿ ಏರ್ ಲೈನ್ಸ್ ಕಾರ್ಯಾಚರಣೆ ನಡೆಸುವಂತೆ ಕೇಳಿಕೊಂಡಿದ್ದರು ಎಂದು ಅವರು ಆರೋಪಿಸಿದರು.

 ಸಾರ್ವಜನಿಕರ ಕ್ಷಮೆ ಕೇಳಿದ ಮಲ್ಯ

ಅದ್ದೂರಿ 60 ನೇ ಹುಟ್ಟುಹಬ್ಬದ ಪಾರ್ಟಿ ಮತ್ತು ಸಾಗರೋತ್ತರ ಹೂಡಿಕೆ ಸೇರಿದಂತೆ ನನ್ನ ಜೀವನಶೈಲಿಗಳಿಂದ ಜನ ಆಕ್ರೋಶಗೊಂಡದ್ದಾರೆ. ವಿಮಾನಯಾನದ ವೈಫಲ್ಯಕ್ಕಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.

 ಭಾರತಕ್ಕೆ ಬರೋ ಹಿಂಟ್ ಕೊಟ್ಟ ಮಲ್ಯ

ನ್ಯಾಯಯುತ ವಿಚಾರಣೆಯ ಭರವಸೆ ಸಿಕ್ಕರೆ ಭಾರತಕ್ಕೆ ಮರಳಲು ಸಿದ್ಧರಿದ್ದೀರಾ ಎಂದು ಕೇಳಿದಾಗ, ‘ನನಗೆ ಭರವಸೆ ಸಿಕ್ಕರೆ, ನಾನು ಅದರ ಬಗ್ಗೆ ಗಂಭೀರವಾಗಿ ಯೋಚಿಸುತ್ತೇನೆ’ ಎಂದು ಹೇಳಿದ್ದಾರೆ. ಗಡೀಪಾರು ಪ್ರಕರಣದಲ್ಲಿ ಯುಕೆ ಹೈಕೋರ್ಟ್ ತೀರ್ಪನ್ನು ಅವರು ಉಲ್ಲೇಖಿಸಿದರು, ಕೆಲವರನ್ನು ಇಂಗ್ಲೆಂಡ್‌ನಿಂದ ಭಾರತಕ್ಕೆ ಹಸ್ತಾಂತರಿಸುವಂತೆ ಭಾರತ ಕೇಳಿಕೊಂಡಿದೆ ಎಂದಿದ್ದಾರೆ. ನನಗೆ ನ್ಯಾಯಯುತ ವಿಚಾರಣೆಯ ಭರವಸೆ ನೀಡಿದರೆ ಭಾರತಕ್ಕೆ ಮರಳುವ ಇಚ್ಚೆ ವ್ಯಕ್ತಪಡಿಸಿದ್ರು.

ಕಳ್ಳ ಅಂತ ಯಾಕೆ ಕರೆಯುತ್ತೀರಾ?

ಭಾರತದಿಂದ ತೆರಳಿದ್ದಕ್ಕೆ ‘ಪರಾರಿ’ ಎಂದು ಕರೆದಿರುವುದು ನ್ಯಾಯಯುತವಾದರೂ, ಕಳ್ಳ ಎಂದು ಏಕೆ ಕರೆಯುತ್ತಾರೆ ಮತ್ತು ಕಳ್ಳತನ ಮಾಡಿದ್ದೇನು ಎಂದು ಮಲ್ಯ ಪ್ರಶ್ನಿಸಿದ್ದಾರೆ.  2016ರ ಮಾರ್ಚ್ ನಂತರ ಭಾರತಕ್ಕೆ ವಾಪಾಸ್ಸಾಗಿಲ್ಲ ಎಂದು ನನ್ನನ್ನು ಪರಾರಿಯಾಗಿದ್ದಾನೆ ಎಂದು ಕರೆಯಿರಿ. ನಾನು ಓಡಿಹೋಗಲಿಲ್ಲ, ಪೂರ್ವನಿಗದಿತ ಭೇಟಿಗಾಗಿ ಭಾರತದಿಂದ ಬಂದಿದ್ದೆ. ಮಾನ್ಯವೆಂದು ಪರಿಗಣಿಸುವ ಕಾರಣಗಳಿಗಾಗಿ ನಾನು ಹಿಂತಿರುಗಲಿಲ್ಲ, ಆದ್ದರಿಂದ ನೀವು ನನ್ನನ್ನು ಪರಾರಿಯಾಗಿದ್ದಾನೆ ಎಂದು ಕರೆಯಲು ಖುಷಿಯಾದ್ರೆ ಹಾಗೇ ಕರೆಯಿರಿ. ಆದ್ರೆ  ಕಳ್ಳ ಎಂದು ಏಕೆ ಕರೆಯುತ್ತಾರೆ ಎಂದು ಪ್ರಶ್ನಿಸಿದರು

ಸಾಲ ಕಟ್ಟೋದೆ ನನ್ನ ಉದ್ದೇಶ

ಮಾತಿನ ವೇಳೆ ಮೀಡಿಯಾ ವಿರುದ್ದ ಮಲ್ಯ ಕೆಂಡ ಕಾರಿದ್ದಾರೆ.  ನನ್ನನ್ನು ವಿವಿಧ ಹೆಸರುಗಳಿಂದ ಕರೆದು ನಿಂದಿಸಲಾಗಿದೆ. ಜನರ ಕೋಪ ಹೆಚ್ಚಾಗುವಂತೆ ಅಸ್ತ್ರವಾಗಿ ಬಳಸಲಾಗುತ್ತಿದೆ. ಮಾಧ್ಯಮಗಳು ನಿರಂತರವಾಗಿ ಟೀಕೆ ಮಾಡುತ್ತಿವೆ. ಆದರೆ, ಕಿಂಗ್‌ಫಿಷರ್ ಏರ್‌ಲೈನ್ಸ್‌ಗಾಗಿ ತೆಗೆದುಕೊಂಡ ಸಾಲವನ್ನು ಮರುಪಾವತಿ ಮಾಡುವುದೇ ನನ್ನ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

Kishor KV