ಡಿಕೆ + ಫ್ಲವರ್ + ಬೊಬಾಟ್ = ಕಪ್ – RCB ಟ್ರೋಫಿಗಾಗಿ ತ್ರಿಮೂರ್ತಿ ತಂತ್ರ
ಸಾಲ್ಟ್ To ಜೋಶ್ ಟೀಂ ಕಟ್ಟಿದ್ದೇ ರೋಚಕ

ಡಿಕೆ + ಫ್ಲವರ್ + ಬೊಬಾಟ್ = ಕಪ್ – RCB ಟ್ರೋಫಿಗಾಗಿ ತ್ರಿಮೂರ್ತಿ ತಂತ್ರಸಾಲ್ಟ್ To ಜೋಶ್ ಟೀಂ ಕಟ್ಟಿದ್ದೇ ರೋಚಕ

2025ರ ಐಪಿಎಲ್​ ನಲ್ಲಿ ಡೇ ಒನ್​ನಿಂದ ಹಿಡ್ದು ಫೈನಲ್​ವರೆಗೂ ಆರ್​ಸಿಬಿ ಜರ್ನಿ ಅಲ್ಟಿಮೇಟ್ ಆಗಿತ್ತು. ಆಲ್ ರೌಂಡ್ ಪ್ರದರ್ಶನದ ಮೂಲಕವೇ ತಮ್ಮ ಮೇಡನ್ ಟೈಟಲ್​ಗೆ ಮುತ್ತಿಟ್ಟಿದ್ದಾರೆ. ಆರ್​ಸಿಬಿ ಪರ ಓಪನರ್ ಟು ಡೆತ್ ಓವರ್ ಬೌಲರ್​ವರೆಗೂ ಎಲ್ಲರೂ ಮ್ಯಾಜಿಕಲ್ ಪ್ಲೇಯರ್​ಗಳೇ. ಆದ್ರೆ ಐಪಿಎಲ್ ಹರಾಜಿನ ಬಳಿಕ ಇದೇ ಪ್ಲೇಯರ್ಸ್, ಇದೇ ಟೀಂ ಕಂಡು ಎಷ್ಟೋ ಜನ ಗೇಲಿ ಮಾಡಿದ್ರು. ಯಾಕಂದ್ರೆ ಆರ್​ಸಿಬಿ ಯಾವುದೇ ಬಿಗ್ ಸ್ಟಾರ್​ ಮೇಲೆ ಬಿಡ್ ಮಾಡಿರಲಿಲ್ಲ. ಸೋ ಈ ಸಲನೂ ಇವ್ರು ಕಪ್ ಗೆದ್ದಂತೇ ಅಂತಾ ಗೇಲಿ ಮಾಡಿದ್ರು. ಆದ್ರೆ ಎಲ್ಲರ ಲೆಕ್ಕಾಚಾರಗಳನ್ನ ತಲೆ ಕೆಳಗಾಗಿಸಿದ್ದು ಕೋಚ್ ಌಂಡಿ ಫ್ಲವರ್, ಟೀಂ ನಿರ್ದೇಶಕ ಮೊ ಬೊಬಾಟ್ ಹಾಗೇ ಬ್ಯಾಟಿಂಗ್ ಕೋಚ್ & ಮೆಂಟರ್ ದಿನೇಶ್ ಕಾರ್ತಿಕ್!

ಇದನ್ನೂ ಓದಿ : RCB ಕಪ್ ಕ್ರೆಡಿಟ್ ಕೊಹ್ಲಿಗೆ ಮಾತ್ರನಾ? – ಕಿಂಗ್ ಮುಂದೆ ರಜತ್ ಸೈಡ್ ಲೈನ್ ಆದ್ರಾ?

ಆರ್​ಸಿಬಿ ಆಟಗಾರರ ಖರೀದಿ ಹಿಂದೆ ಈ ಮೂವರ ತಂತ್ರಗಳನ್ನ ಮೆಚ್ಚಲೇಬೇಕು. 2010ರಲ್ಲಿ ಇಂಗ್ಲೆಂಡ್ ತಂಡದ ಡೈರೆಕ್ಟರ್ ಆಗಿದ್ದ ಅಂಡಿ ಫ್ಲವರ್ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2015ರ ಏಕದಿನ ವಿಶ್ವಕಪ್ ನಲ್ಲಿ ಆರಂಭಿಕ ಹಂತದಲ್ಲೇ ಮನೆಗೆ ಹೋಗಿದ್ದ ಇಂಗ್ಲೆಂಡ್ ತಂಡಕ್ಕೆ ಹೊಸ ರೂಪ ಕೊಟ್ಟವರು ಮೊ ಬೊಬಾಟ್. ಈ ಟೈಮಲ್ಲೇ ಇಂಗ್ಲೆಂಡ್ ಟೀಂ ಏಕದಿನ ವಿಶ್ವಕಪ್ ಗೆದ್ದಿತ್ತು. ಹಾಗೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರನಾಗಿ ತಂಡದ ಆಳಅಗಲ ಅರಿತವರು ದಿನೇಶ್ ಕಾರ್ತಿಕ್. ಈ ಮೂವರ ಎಕ್ಸ್​​ಪೀರಿಯನ್ಸೇ ಈಗ ಟ್ರೋಫಿ ಗೆಲ್ಲುವಂತೆ ಮಾಡಿದೆ. ಮೆಗಾ ಹರಾಜಿಗೂ ಮುನ್ನ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಮತ್ತು ಯಶ್ ದಯಾಳ್  ಮೂವರನ್ನ ಮಾತ್ರ ಉಳಿಸಿಕೊಂಡು ಶಾಕ್ ಕೊಟ್ಟಿದ್ರು.

ಐಪಿಎಲ್ ಹರಾಜು ಎಂದಾಕ್ಷಣ ಮೊದಲು ಕಣ್ಮುಂದೆ ಬರೋದೇ ಬಿಗ್ ನೇಮ್ಸ್. ಈ ಸೀಸನ್ ಐಪಿಎಲ್​ಗೂ ಮುನ್ನ ಕೆಎಲ್ ರಾಹುಲ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಸೇರಿದಂತೆ ಹಲವರು ಹೆಸರು ಕ್ಯಾಪ್ಟನ್ಸಿ ಲಿಸ್ಟ್​ನಲ್ಲಿತ್ತು. ಆದ್ರೆ ದೊಡ್ಡ ಹೆಸರಿನ ಆಟಗಾರರನ್ನು ಖರೀದಿಸುವ ಬದಲು, ಪ್ಲೇಯಿಂಗ್ 11ಗೆ ಸೂಕ್ತ ಎನಿಸೋ ಪ್ಲೇಯರ್ಸ್ ಮೇಲೆ ಕಣ್ಣಿಟ್ಟಿದ್ರು. ಜಿತೇಶ್ ಶರ್ಮಾಗೆ 11 ಕೋಟಿ, ಜೋಶ್ ಹ್ಯಾಜಲ್‌ವುಡ್ 12.5 ಕೋಟಿ ರೂ, ಫಿಲ್ ಸಾಲ್ಟ್ 11.5 ಕೋಟಿ, ಲಿವಿಂಗ್ ಸ್ಟೋನ್ 8.75 ಕೋಟಿ, ಭುವನೇಶ್ವರ್ ಕುಮಾರ್ 10.75 ಕೋಟಿ, ಕೃನಾಲ್ ಪಾಂಡ್ಯ 5.75 ಕೋಟಿ ನೀಡಿ ಖರೀದಿಸಲಾಗಿತ್ತು. ಕೇವಲ ಸಾಲ್ಟ್, ಹ್ಯಾಜಲ್​​ವುಡ್ ಬಿಟ್ಟು ಉಳಿದವರಿಗೆ ವಿನಿಯೋಗಿಸಿದ ದುಡ್ಡೆಲ್ಲಾ ನೀರಲ್ಲಿ ಹೋಮಾ ಎಂದು ಟ್ರೋಲ್ ಮಾಡಲಾಗಿತ್ತು. ಆದರೆ ಈ ಎಲ್ಲಾ ಆಟಗಾರರ ಆಯ್ಕೆಯ ಹಿಂದೆ ಈ ತ್ರಿಮೂರ್ತಿಗಳಿದ್ರು. ವಿಶೇಷ ಅಂದ್ರೆ ಈ ಎಲ್ಲಾ ಆಟಗಾರರು ಈ ಬಾರಿ ಒಂದಲ್ಲಾ ಒಂದು ಪಂದ್ಯದಲ್ಲಿ ತಂಡಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಬಹುತೇಕರು ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.

ಇನ್ನು ಈ ಗೆಲುವಿನ ಅರ್ಧ ಕ್ರೆಡಿಟ್ ದಿನೇಶ್ ಕಾರ್ತಿಕ್​ಗೆ ಹೋಗಲೇಬೇಕು. ವಿಶ್ವದ ಅತ್ಯಂತ ಜನಪ್ರೀಯ ಫ್ರಾಂಚೈಸಿಯಲ್ಲಿ ದೊಡ್ಡ ಹುದ್ದೆ ಸಿಕ್ಕಿದೆ ಅಂತಾ ಎಸಿ ರೂಮ್​ನಲ್ಲಿ ಕೂರಲಿಲ್ಲ. ಭಾರತದ ಯುವ ಆಟಗಾರರಿಗೆ ಆರ್‌ಸಿಬಿ ಕ್ಯಾಂಪ್‌ನಲ್ಲಿ ಪ್ರತಿಭೆ ಅನಾವರಣಕ್ಕೆ ಅವಕಾಶ ಮಾಡಿಕೊಟ್ರು. ಅವ್ರ ಹಿಂದೆ ನಿಂತು ಸಾಮರ್ಥ್ಯಗಳನ್ನ ನೋಡಿದ್ರು. ಕ್ಯಾಂಪ್‌ನಿಂದ ಬೆಸ್ಟ್‌ ಪ್ಲೇಯರ್‌ಗಳನ್ನು ಪಿಕ್ ಮಾಡಿ ಆಕ್ಷನ್‌ನಲ್ಲಿ ಟಾರ್ಗೆಟ್‌ ಮಾಡಿದರು. ಮಾಸ್ಟರ್ ಮೈಂಡ್ ಕೃನಾಲ್‌ ಪಾಂಡ್ಯ, ಜಿತೇಶ್‌ ಶರ್ಮಾ, ಸುಯೇಶ್‌ ಶರ್ಮ, ಟೀಮ್ ಡೇವಿಡ್‌ ಅವರನ್ನು ತಂಡಕ್ಕೆ ಸೇರಿಸಿಕೊಂಡಾಗ ಅವ್ರ ಪ್ರದರ್ಶನದ ಬಗ್ಗೆ ಸಾಕಷ್ಟು ಪ್ರಶ್ನೆಗಳಿದ್ವು. ಆದ್ರೆ ಆರ್​ಸಿಬಿ ಟೀಂ ಒಂದೊಂದೇ ಪಂದ್ಯಗಳನ್ನ ಗೆದ್ದು ಪ್ಲೇಆಫ್​ಗೆ ಕಾಲಿಟ್ಟಾಗ, ಕ್ವಾಲಿಫೈಯರ್ 1ನಲ್ಲಿ ಗೆದ್ದು ಫೈನಲ್​ಗೆ ಲಗ್ಗೆ ಇಟ್ಟಾಗ ಹಾಗೇ ಪಂಜಾಬ್ ವಿರುದ್ಧ ರಣರೋಚಕ ರೀತಿಯಲ್ಲಿ ಗೆದ್ದಾಗ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ.

Shantha Kumari