ಕಪ್ ಗೆದ್ದು ಕೊಹ್ಲಿ ಕಣ್ಣೀರ ಅಭಿಷೇಕ.. ಸಾಲ್ಟ್ ಕ್ಯಾಚ್.. ಕೃನಾಲ್ ಹೀರೋ -18ರ ನಂಟು.. ಹೇಗಿತ್ತು RCB ಗೇಮ್?

ಇದೊಂದು ಕಣ್ಣೀರು.. ಇದೊಂದು ಆನಂದ ಭಾಷ್ಪ.. ಇದೊಂದು ಸಾರ್ಥಕ ಗಳಿಗೆ.. ಈ ಗೆಲುವಿನ ತೂಕ ಎಂಥಾದ್ದು.. ಇದೊಂದು ಟ್ರೋಫಿಗಾಗಿ ಅದೆಂಥಾ ಹಸಿವಿತ್ತು. ಈ ಕಪ್ಗಾಗಿ ಸಾಗಿದ ಮೈಲುಗಳೆಷ್ಟು ಅನ್ನೋದನ್ನ ಇಡೀ ಜಗತ್ತಿಗೇ ಸಾರಿ ಸಾರಿ ಹೇಳಿದೆ. ಕ್ರಿಕೆಟ್ಗಾಗಿ ತನ್ನನ್ನೇ ಅರ್ಪಿಸಿಕೊಂಡ ಅಪ್ರತಿಮ ವೀರನಿಗೆ ಕೊನೆಗೂ ವಿಜಯದೇವತೆ ಒಲಿದಿದ್ದಾಳೆ. ಪಂಜಾಬ್ ವಿರುದ್ಧದ ಫೈನಲ್ ಮ್ಯಾಚ್ ಗೆದ್ದ ಆರ್ಸಿಬಿ 18ನೇ ಸೀಸನ್ ಐಪಿಎಲ್ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 18 ವರ್ಷಗಳ ಟ್ರೋಫಿ ವನವಾಸ ವಿಮೋಚನೆಗೊಂಡಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ 2025ರ ಐಪಿಎಲ್ನ ಟ್ರೋಫಿ ಗೆದ್ದು ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ಇದು ಬರೀ ತಂಡದ ಗೆಲುವಲ್ಲ. ಅಥವಾ ಫ್ರಾಂಚೈಸಿ ವಿಕ್ಟರಿಯಲ್ಲ. ಕೋಟ್ಯಂತರ ಕನ್ನಡಿಗರ, ಜಗದಲಗ ಇರುವಂಥ ಅಭಿಮಾನಿಗಳ ಪ್ರಾರ್ಥನೆಯಾಗಿತ್ತು. ಅದ್ರಲ್ಲೂ ಸೆಕೆಂಡ್ ಇನ್ನಿಂಗ್ಸ್ನ ಲಾಸ್ಟ್ ಓವರ್ನಲ್ಲಿ ವಿರಾಟ್ ಅವ್ರ ಎಮೋಷನ್ಸ್ ಕೋಟ್ಯಂತರ ಕಣ್ಣುಗಳನ್ನ ಒದ್ದೆಯಾಗಿಸಿತ್ತು.
ಗೆಲುವು ಖಚಿತವಾಗ್ತಿದ್ದಂತೆ ಕಣ್ಣೀರು.. ಮಂಡಿಯೂರಿದ ವಿರಾಟ್!
ವಿರಾಟ್ ಕೊಹ್ಲಿ.. ದಶಕದಿಂದಲೂ ಕ್ರಿಕೆಟ್ ಜಗತ್ತಿನ ಅನಭಿಶಕ್ತ ದೊರೆ. ಬರೆಯದ ದಾಖಲೆಗಳಿಲ್ಲ. ತಲುಪದ ಮೈಲುಗಲ್ಲುಗಳಿಲ್ಲ. ಮೈದಾನಕ್ಕೆ ಕಾಲಿಟ್ರು ಅವ್ರು ಸದಾ ಜ್ವಾಲಾಮುಖಿ. ಅವ್ರ ಕಣ್ಣಲ್ಲಿ ಬರೀ ಆವೇಶವನ್ನೇ ಕಂಡಿದ್ರು. ರಿವೇಂಜ್ನೇ ನೋಡ್ತಿದ್ರು. ಬಟ್ ಈಗ ಅದೇ ವಿರಾಟ್ ಕಣ್ಣಲ್ಲಿ ನೀರು ಹರಿದಿದೆ. ಕೊನೇ ಓವರ್ನಲ್ಲಿ ಪಂಜಾಬ್ ಗೆಲುವಿಗೆ 29 ರನ್ಗಳು ಬೇಕಿತ್ತು. ಈ ಟೈಮಲ್ಲಿ ಆರ್ಸಿಬಿ ಗೆಲುವು ಗ್ಯಾರಂಟಿ ಆಗ್ತಿದ್ದಂತೆ ವಿರಾಟ್ ಕೊಹ್ಲಿ ಅವರ ಕಣ್ಣುಗಳಲ್ಲಿ ನೀರು ತುಂಬಿತ್ತು. ಪುಟ್ಟ ಮಗುವಿನಂತೆ ಬಿಕ್ಕಿ ಬಿಕ್ಕಿ ಅಳ್ತಿದ್ರು. ಅದರಲ್ಲೂ ಆರ್ಸಿಬಿ ಗೆದ್ದಾಗ ಮೈದಾನದಲ್ಲಿ ಮಂಡಿಯೂರಿ ಭಾವುಕರಾದ್ರು. ಆ ಬಳಿಕ ತಂಡದ ಇತರೆ ಆಟಗಾರರು ಕೂಡ ಆ ಕ್ಷಣಕ್ಕೆ ಸಾಕ್ಷಿಯಾದ್ರು. ಇಂಥಾದ್ದೊಂದು ಐತಿಹಾಸಿಕ ಗಳಿಗೆಗೆ ಸಾಕ್ಷಿಯಾದ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಹೊಸ ಚಾಂಪಿಯನ್ನ ಉದಯವಾಯ್ತು.
ಆರ್ ಸಿಬಿ ಬ್ಯಾಟರ್ ಗಳನ್ನ ಕಾಡಿದ ಪಂಜಾಬ್ ಬೌಲರ್ಸ್!
ಮೊದ್ಲಿಗೆ ಈ ಹೈವೋಲ್ಟೇಜ್ ಮ್ಯಾಚ್ ಬಗ್ಗೆ ಹೇಳಲೇಬೇಕು. ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಆರ್ಸಿಬಿಗೆ ಪಂಜಾಬ್ ಬೌಲರ್ಸ್ ಅಕ್ಷರಶಃ ಕಾಟ ಕೊಟ್ರು. ಒಬ್ಬ ಬ್ಯಾಟರ್ ಕೂಡ ಸೆಟಲ್ ಆಗೋಕೆ ಬಿಡ್ಲೇ ಇಲ್ಲ. ಫಸ್ಟ್ ಓವರ್ನಲ್ಲೇ ಸಿಕ್ಸ್, ಫೋರ್ ಬಾರಿಸಿ ಬಿಗ್ ಇನ್ನಿಂಗ್ಸ್ ನ ಹಿಂಟ್ ಕೊಟ್ಟಿದ್ದ ಫಿಲ್ ಸಾಲ್ಟ್ 16 ರನ್ಗಳಲ್ಲೇ ವಿಕೆಟ್ ಒಪ್ಪಿಸಿದ್ರು. ಆ ಬಳಿಕ ಕೊಹ್ಲಿಗೆ ಜೊತೆಯಾದ ಮಯಾಂಕ್ ವೇಯ್ಟಿಂಗ್ ಗೇಮ್ ಶುರು ಮಾಡಿದ್ರು. ಇನ್ನೇನು ಮಯಾಂಕ್ ಬ್ಯಾಟ್ ಬಿಚ್ಚಬೇಕು ಅನ್ನುವಷ್ಟ್ರಲ್ಲೇ 24 ರನ್ಗೆ ಔಟಾದ್ರು. ರಜತ್ ಪಾಟಿದಾರ್, ಲಿಯಾಮ್ ಲಿವಿಂಗ್ ಸ್ಟೋನ್ ರದ್ದೂ ಕೂಡ ಇದೇ ಕಥೆ. ಇನ್ನು ವಿರಾಟ್ 43 ರನ್ಗಳಿಗೆ ಆಟ ಮುಗಿಸಿದ್ರು. ಬಟ್ ಜಿತೇಶ್ ಅಂತೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡ್ತಿದ್ರು. ಇನ್ನೇನು ಬಿಗ್ ಇನ್ನಿಂಗ್ಸ್ ಬರ್ಬೋದು ಅನ್ನುವಷ್ಟ್ರಲ್ಲೇ ಬ್ಯಾಟ್ ಎಡ್ಜ್ ಆಗಿ ಬೌಲ್ಡ್ ಆದ್ರು. ಅದ್ರಲ್ಲೂ ಡೆತ್ ಓವರ್ಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ರನ್ಸ್ ಬರ್ಲಿಲ್ಲ. 20ನೇ ಓವರ್ನಲ್ಲಿ ಅರ್ಶದೀಪ್ ಸಿಂಗ್ ಮೂರು ವಿಕೆಟ್ ಕಿತ್ತು 3 ರನ್ ಅಷ್ಟೇ ಕೊಟ್ರು. ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ 9 ವಿಕೆಟ್ ನಷ್ಟಕ್ಕೆ 190 ರನ್ ಗಳನ್ನ ಕಲೆ ಹಾಕಿತು.
ಆರ್ ಸಿಬಿ ಪರ ಬೆಸ್ಟ್ ಪ್ರದರ್ಶನ ನೀಡಿದ ಬೌಲರ್ಸ್!
191 ರನ್ ಗಳ ಟಾರ್ಗೆಟ್ ಬೆನ್ನತ್ತಿದ ಪಂಜಾಬ್ ತಂಡಕ್ಕೆ ಆರ್ ಸಿಬಿ ಬೌಲರ್ಸ್ ಕೂಡ ಕಾಟ ಕೊಟ್ರು. ಆರಂಭದಲ್ಲಿ ಪ್ರಿಯಾನ್ಶ್ ಆರ್ಯ ಮತ್ತು ಪ್ರಭ್ ಸಿಮ್ರಾನ್ ಸಿಂಗ್ ಕಾಟ ಕೊಡ್ತಾರೆ ಅನ್ನಿಸಿದ್ರೂ ಆ ಬಳಿಕ ಮ್ಯಾಚ್ ಕಂಟ್ರೋಲ್ಗೆ ತಗೊಂಡ್ರು. ಆರ್ಸಿಬಿಯಂತೆ ಪಂಜಾಬ್ನಲ್ಲೂ ಕೂಡ ಶಶಾಂಕ್ರನ್ನ ಬಿಟ್ರೆ ಬೇರೆ ಯಾವುದೇ ಬ್ಯಾಟರ್ನಿಂದ ಬಿಗ್ ಸ್ಕೋರ್ ಬರ್ಲಿಲ್ಲ. ಅದ್ರಲ್ಲೂ ಕೃನಾಲ್ ಪಾಂಡ್ಯ ಮತ್ತು ಶೆಫರ್ಡ್ ಗೇಮ್ ಚೇಂಜಿಂಗ್ ವಿಕೆಟ್ ಬೇಟೆಯಾಡಿದ್ರು. 4 ಓವರ್ಗಳಲ್ಲಿ ಕೇವಲ 17 ರನ್ ನೀಡಿದ ಪಾಂಡ್ಯ ಪ್ರಭ್ ಸಿಮ್ರಾನ್ ಹಾಗೇ ಜೋಸ್ ಇಂಗ್ಲಿಶ್ಗೆ ಪೆವಿಲಿಯನ್ ಹಾದಿ ತೋರಿಸಿದ್ರು. ಅದ್ರಲ್ಲೂ ತುಂಬಾನೇ ಡೇಂಜರಸ್ ಆಗ್ತಿದ್ದ ಶ್ರೇಯಸ್ ಅಯ್ಯರ್ ನ ಜಸ್ಟ್ 1 ರನ್ಗೆ ಕಟ್ಟಿ ಹಾಕಿ ರೊಮ್ಯಾರಿಯೋ ಶೆಫರ್ಡ್ ಬಿಗ್ ರಿಲೀಫ್ ತನ್ಕೊಟ್ರು. ದಯಾಳ್ ಕೂಡ 6ರ ಎಕಾನಮಿಯಲ್ಲಿ ರನ್ ನೀಡಿದ್ರು. ಭುವಿ & ಹೇಜಲ್ವುಡ್ ದುಬಾರಿಯಾದ್ರೂ ಕ್ರೂಶಿಯಲ್ ವಿಕೆಟ್ ತನ್ಕೊಟ್ಟಿದ್ದೇ ಗೆಲುವಿಗೆ ಕಾರಣವಾಯ್ತು.
ಪಂಜಾಬ್ ಪರ ಶಶಾಂಕ್ ಸಿಂಗ್ ಏಕಾಂಗಿ ಹೋರಾಟ!
191 ರನ್ ಚೇಸ್ ಮಾಡೋದು ಪಂಜಾಬ್ಗೆ ಕಷ್ಟವಾಗಲ್ಲ ಅಂತಾನೇ ಮೊದ್ಲು ಪ್ರೆಡಿಕ್ಟ್ ಮಾಡ್ಲಾಗ್ತಾ ಇತ್ತು. ಆರಂಭವೂ ಚೆನ್ನಾಗೇ ಇತ್ತು. ಬಟ್ ಜೋಶ್ ಇಂಗ್ಲಿಶ್ 39 ರನ್ ಗಳಿಸಿದ್ದು ಬಿಟ್ರೆ ಟಾಪ್ ಆರ್ಡರ್ ಕಂಪ್ಲೀಟ್ ಫೇಲ್ಯೂರ್ ಆಗಿತ್ತು. ಇಂಥಾ ಟೈಮಲ್ಲಿ ಪಂಜಾಬ್ ಪರ ಏಕಾಂಗಿ ಹೋರಾಟ ನಡೆಸಿದ್ದು ಶಶಾಂಕ್ ಸಿಂಗ್. 30 ಬಾಲ್ಗಳಲ್ಲಿ 6 ಸಿಕ್ಸರ್, 3 ಫೋರ್ ಬಾರಿಸಿ 61 ರನ್ ಬಾರಿಸಿ ಅಜೇಯರಾದ್ರು. ಅಂತಿಮವಾಗಿ 20 ಓವರ್ಗಳಲ್ಲಿ 184 ರನ್ ಬಾರಿಸಿದ ಪಂಜಾಬ್ 6 ರನ್ಗಳಿಂದ ಸೋಲೊಪ್ಪಿಕೊಳ್ತು. ಹಾಗಾದ್ರೆ ಇಲ್ಲಿ ಆರ್ಸಿಬಿ ಫೈನಲ್ ಪಂದ್ಯವನ್ನ ಈಸಿಯಾಗಿ ಗೆಲ್ತಾ ಅಂದ್ರೆ ನೋ ವೇ.. ಚಾನ್ಸೇ ಇಲ್ಲ. ಕೊನೇ ಓವರ್ವರೆಗೂ ಸ್ಟಗಲ್ಸ್ ಇದ್ದೇ ಇತ್ತು.
ಗೇಮ್ ಚೇಂಜಿಂಗ್ ಪಾಯಿಂಟ್ಸ್!
ಫೈನಲ್ ಮ್ಯಾಚ್ ಅಂದಾಗ್ಲೇ ಎರಡೂ ತಂಡಗಳು ತುಂಬಾನೇ ಪ್ರೆಶರ್ನಲ್ಲಿದ್ವು. 1 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ತುಂಬಿದ್ದ ಸ್ಟೇಡಿಯಮ್ನಲ್ಲಿ ಕೂಗಾಟ, ಚೀರಾಟ, ಡು ಆರ್ ಡೈ ಮ್ಯಾಚ್ ಅಂದಾಗ್ಲೇ ಎದೆಬಡಿತ ಜೋರಾಗಿತ್ತು. ಅಲ್ದೇ ಈ ಸೀಸನ್ನಲ್ಲಿ ಆರ್ಸಿಬಿಗೆ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಫಸ್ಟ್ ಮ್ಯಾಚ್ ಇದೇ ಆಗಿತ್ತು. ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಆರ್ಸಿಬಿಗೆ ನಿರೀಕ್ಷಿತ ಮಟ್ಟದಲ್ಲಿ ಆರಂಭ ಸಿಗ್ಲಿಲ್ಲ. ಫಿಲ್ ಸಾಲ್ಟ್ ಬೇಗನೆ ಔಟಾದ್ರು. ಆ ಬಳಿಕ ಬಂದ ಬ್ಯಾಟರ್ಸ್ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲೋಕೆ ಆಗ್ತಿಲ್ಲ. ಹೀಗಿದ್ರೂ ನಂಬರ್ 7 ಬ್ಯಾಟರ್ಸ್ವರೆಗೂ ಯಾರೊಬ್ರೂ ಸಿಂಗಲ್ ಡಿಜಿಟ್ಗೆ ಔಟ್ ಆಗ್ಲಿಲ್ಲ. ವೇಯ್ಟಿಂಗ್ ಗೇಮ್ಗೆ ಜಾಸ್ತಿ ಇಂಪಾರ್ಟೆನ್ಸ್ ಕೊಟ್ಟು ಆಡಿದ್ರು. ಹಾಗೇ ಜಿತೇಶ್ ಶರ್ಮಾ ಜಸ್ಟ್ 10 ಬಾಲ್ಗಳಲ್ಲಿ 24 ರನ್ ಸಿಡಿಸಿದ್ದು ಕೂಡ ಪ್ಲಸ್ ಆಯ್ತು. ಇದು ಕ್ರೂಶಿಯಲ್ ರನ್ಸ್ ಅಂದ್ರೂ ತಪ್ಪಾಗಲ್ಲ. ಆದ್ರೆ ಬ್ಯಾಟಿಂಗ್ಗಿಂತ ಡಿಫೆನ್ಸ್ನಲ್ಲಿ ಆರ್ಸಿಬಿ ಟೀಂ ತುಂಬಾನೇ ಎಫೆಕ್ಟಿವ್ ಆಗಿತ್ತು. ಅದ್ರಲ್ಲೂ ಪ್ರಿಯಾನ್ಶ್ ಆರ್ಯರ ಅದ್ಭುತ ಕ್ಯಾಚ್ ಹಿಡಿದು ಬ್ರೇಕ್ ಥ್ರ್ಯೂ ತಂಡುಕೊಟ್ಟಿದ್ದೇ ಫಿಲ್ ಸಾಲ್ಟ್. ಬೌಂಡರಿ ಲೈನ್ ಬಳಿ ಕ್ಯಾಚ್ ಹಿಡ್ದು ಅದನ್ನ ಒಳಗೆ ಎಸೆದು ಬೌಂಡರಿ ಗೆರೆ ದಾಟಿ ಮತ್ತೆ ಒಳಗೆ ಬಂದು ಕಂಪ್ಲೀಟ್ ಮಾಡಿದ್ರು. ಹಾಗೇ ಮೋಸ್ಟ್ ಡೇಂಜರಸ್ ಆಗ್ಬೇಕಿದ್ದ ಶ್ರೇಯಸ್ ಅಯ್ಯರ್ ರನ್ನ ಜಸ್ಟ್ 1 ರನ್ಗೆ ಕಟ್ಟಿ ಹಾಕಿದ್ದೇ ಅಸಲಿ ಟರ್ನಿಂಗ್ ಪಾಯಿಂಟ್. ಇನ್ನು ಈ ಮ್ಯಾಚಲ್ಲಿ ಕೃನಾಲ್ ಪಾಂಡ್ಯ ಬಗ್ಗೆಯೂ ಹೇಳಲೇಬೇಕು. 2 ಕ್ರೂಶಿಯಲ್ ವಿಕೆಟ್ಸ್ ತೆಗೆದು ಪಂಜಾಬ್ಗೆ ಅರ್ಧ ಡ್ಯಾಮೇಜ್ ಮಾಡಿದ್ದೇ ಇವ್ರು. ಅದೂ ಕೂಡ 4 ಓವರ್ಗಳಲ್ಲಿ ಜಸ್ಟ್ 17 ರನ್ಸ್ ನೀಡಿದ್ರು. ಇನ್ನು ಭುವಿ ಕೂಡ ಫಸ್ಟ್ ಬಾಲಲ್ಲೇ ಸಿಕ್ಸ್ ಹೊಡೆದು ಕಾಟ ಕೊಡ್ತಿದ್ದ ಮಾರ್ಕಸ್ ಸ್ಟೊಯಿನಿಸ್ಗೆ ಪೆವಿಲಿಯನ್ ದಾರಿ ತೋರಿಸಿದ್ರು. ವದೇರಾ ವಿಕೆಟ್ ತೆಗೆದಿದ್ದೂ ಪ್ಲಸ್ ಆಯ್ತು. ಇದೆಲ್ಲಕ್ಕಿಂತ ಇಂಟ್ರೆಸ್ಟಿಂಗ್ ಅಂದ್ರೆ ಈ ಸೀಸನ್ನಲ್ಲಿ ಆರ್ಸಿಬಿ 180+ ರನ್ ಸ್ಕೋರ್ ಮಾಡ್ದಾಗ ಸೋತೇ ಇಲ್ಲ. ಈ ಸೀಸನ್ನಲ್ಲಿ 4 ಬಾರಿ 180+ ಸ್ಕೋರ್ ಮಾಡಿ ಡಿಫೆನ್ಸ್ ಮಾಡ್ಕೊಂಡಿದೆ. ಇದೇ ಕಾನ್ಫಿಡೆನ್ಸ್ ಇಲ್ಲೂ ಕೂಡ ವರ್ಕೌಟ್ ಆಯ್ತು.
ನಾವೇನೋ ಗೆದ್ದಿದ್ದೇವೆ ನಿಜ. ಬಟ್ ಪಂಜಾಬ್ ತಂಡದ ಪ್ರದರ್ಶನವನ್ನೂ ಮೆಚ್ಚಲೇಬೇಕು. ಈ ಸೀಸನ್ನಲ್ಲಿ ಕಂಪ್ಲೀಟ್ ಡಿಫ್ರೆಂಟ್ ಆಗಿದ್ದ ಪಂಜಾಬ್ ತಂಡ ಟೇಬಲ್ ಟಾಪರ್ ಆಗಿತ್ತು. ಶ್ರೇಯಸ್ ಅಯ್ಯರ್ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ್ರು. ಅವ್ರೂ ಕೂಡ ಚೊಚ್ಚಲ ಕಪ್ ಗೆಲುವಿನ ನಿರೀಕ್ಷೆಯಲ್ಲಿದ್ರು. ಬಟ್ ಫೈನಲಿ ಗೆದ್ದಿದ್ದು ನಮ್ಮ ರೆಡ್ ಆರ್ಮಿ.
ಒಟ್ನಲ್ಲಿ ಆರ್ಸಿಬಿ ಪಾಲಿಗೆ ಈ 18 ವರ್ಷಗಳ ಸುದೀರ್ಘ ಜರ್ನಿ ಈಸಿಯಾಗಿರಲಿಲ್ಲ. ಜಗಮೆಚ್ಚಿದ ಆಟಗಾರರೇ ಇದ್ರೂ ಚುಚ್ಚುಮಾತುಗಳನ್ನೇ ಬೆಂದು ಹೋಗಿದ್ರು. ಆರ್ಸಿಬಿ ಇಡೀ ಜಗತ್ತಲ್ಲೇ ನಂಬರ್ 1 ಫ್ಯಾನ್ ಬೇಸ್ ಇರೋ ಫ್ರಾಂಚೈಸಿ. ಬಟ್ ಅಷ್ಟೇ ಹೇಟರ್ಸ್ ಕೂಡ ಇದ್ದಾರೆ. ಈ ಸಲ ಕಪ್ಪು ಲಾಲಿ ಪಪ್ಪು ಅಂದವ್ರೆಷ್ಟೋ.. ಚೋಕರ್ಸ್ ಅಂತಾ ಹೀಗಳೆದವರೆಷ್ಟೋ.. ಅದನ್ನ ಮೌನವಾಗೇ ಸಹಿಸಿಕೊಂಡಿದ್ದವ್ರು ಈಗ ಸಿಡಿಲಮರಿಗಳಂತೆ ಸಿಡಿದು ಕಪ್ ಗೆದ್ದಿದ್ದಾರೆ. ಇದು ಬರೀ ಗೆಲುವಲ್ಲ. ಬರೀ ಟ್ರೋಫಿಯಲ್ಲ. ಇದೊಂದು ಇತಿಹಾಸ. ಹೀಗಾಗೇ ಆರ್ಸಿಬಿ ಗೆಲ್ತಿದ್ದಂತೆ ಇಡೀ ಕರುನಾಡಿನುದ್ದಕ್ಕೂ ಪಟಾಕಿಗಳನ್ನ ಸಿಡಿಸಿ ಸೆಲೆಬ್ರೇಟ್ ಮಾಡಿದ್ದಾರೆ. ಅದ್ರಲ್ಲೂ ಟ್ರೋಫಿ ರ್ಯಾಲಿ ಅಂತೂ ನೆಕ್ಸ್ಟ್ ಲೆವೆಲ್ನಲ್ಲೇ ಇರುತ್ತೆ.

ನೋಡಿರಿ

