ಕಾಸ್ಟ್ಲಿ ಪ್ಲೇಯರ್ಸ್‌.. ದುಬಾರಿ ಜೆಟ್.. ಕಿಂಗ್‌ ಕೊಹ್ಲಿ ಜೆಟ್‌ ಹೇಗಿದೆ ಗೊತ್ತಾ? – ಕ್ರಿಕೆಟ್‌ ದಿಗ್ಗಜರ ಐಷಾರಾಮಿ ಬದುಕು!

ಕಾಸ್ಟ್ಲಿ ಪ್ಲೇಯರ್ಸ್‌.. ದುಬಾರಿ ಜೆಟ್.. ಕಿಂಗ್‌ ಕೊಹ್ಲಿ ಜೆಟ್‌ ಹೇಗಿದೆ ಗೊತ್ತಾ? – ಕ್ರಿಕೆಟ್‌ ದಿಗ್ಗಜರ ಐಷಾರಾಮಿ ಬದುಕು!

ಕ್ರಿಕೆಟ್‌ನ ಮಹಿಮೆ ಒಂದೆರಡಲ್ಲ.. ಕಡು ಬಡತನದಲ್ಲಿ ಬೆಳೆದ ಅದೆಷ್ಟೋ ಕ್ರಿಕೆಟರ್ಸ್ ಈಗ ಕೋಟ್ಯಾಧಿಪತಿಗಳಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ಆವ್ರ ಇನ್ಕಮ್ ಡಬಲ್ ಆಗ್ತಿದೆ. ಎಷ್ಟರ ಮಟ್ಟಿಗೆ ಅಂದ್ರೆ ಈಗ ಕೆಲ ಆಟಗಾರರು ಪ್ರೈವೆಟ್ ಜೆಟ್ ಹೊಂದಿದ್ದಾರೆ. ಟೀಮ್ ಇಂಡಿಯಾದ ಹಾಲಿ, ಮಾಜಿ ಆಟಗಾರರು ಪ್ರೈವೇಟ್ ಜೆಟ್ ನಲ್ಲೇ ಓಡಾಡ್ತಾರೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಸರಣಿ ಭೂಕಂಪ – ಕರಾಚಿಯ00ಕ್ಕೂ ಹೆಚ್ಚು ಕೈದಿಗಳು ಎಸ್ಕೇಪ್ ಜಿಲ್ಲಾ ಕಾರಾಗೃಹದಲ್ಲಿದ್ದ 2

ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಲ್ಲ.. ಅದೊಂದು ಧರ್ಮ ಎಂಬ ಮಾತಿದೆ.. ಇದು ಅಕ್ಷರಶಃ ನಿಜ.. ಭಾರತದಲ್ಲಿ ಕ್ರಿಕೆಟ್‌ ಅಭಿಮಾನಿಗಳ ಪಾಲಿಗೆ ಅವರ ನೆಚ್ಚಿನ ಆಟಗಾರರೇ ಆರಾಧ್ಯ ದೇವರು. ನಮ್ಮ ದೇಶದಲ್ಲಿ ಜನ ಇನ್ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇದ್ರೂ ಕ್ರಿಕೆಟ್‌ ಬಗ್ಗೆ ಮಾತ್ರ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿರುತ್ತಾರೆ.. ತಂಡ ಗೆದ್ದಾಗ, ತಾವೇ ಆಡಿ ಗೆದ್ದೆವೇನೋ ಎಂಬಂತೆ ಸಂಭ್ರಮಿಸುತ್ತಾರೆ. ಸೋತಾಗ ತಂಡದ ಆಟಗಾರರನ್ನು ಹಿಗ್ಗಾಮುಗ್ಗಾ ಬೈತಾರೆ.. ಅದ್ರಲ್ಲೂ ಐಪಿಎಲ್‌ ಶುರುವಾದ್ಮೇಲಂತೂ, ತಮ್ಮ ಫ್ರಾಂಚೈಸಿ ಪರವಾಗಿ ನಿಂತು ಬೇರೆ ಟೀಂಗಳ ಆಟಗಾರರನ್ನು ಹಿಗ್ಗಾ ಮುಗ್ಗಾ ಟ್ರೋಲ್‌ ಮಾಡ್ತಿರುತ್ತಾರೆ.. ಅಷ್ಟರಮಟ್ಟಿಗೆ ನಮ್ಮ ದೇಶದಲ್ಲಿ ಕ್ರಿಕೆಟ್‌ ಕ್ರೇಜ್‌ ಇದೆ. ಕ್ರಿಕೆಟ್‌ ಪ್ರಿಯರ ಇಷ್ಟೊಂದು ಅಭಿಮಾನದಿಂದಾಗಿಯೇ  ಬಿಸಿಸಿಐ ಇಂದು ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿದೆ. ಪ್ರತಿ ವರ್ಷ ತನ್ನ ಆಟಗಾರರಿಗೆ ಕೋಟಿ ಕೋಟಿ ದುಡ್ಡು ಸುರಿತಾ ಇದೆ. ಇದಲ್ಲದೆ, ಆಟಗಾರರು ಐಪಿಎಲ್ ಫ್ರಾಂಚೈಸಿಗಳಿಂದ ಮತ್ತು ಬ್ರಾಂಡ್ ಎಂಡಾರ್ಸ್ಮೆಂಟ್ಗಳ ಮೂಲಕ ದೊಡ್ಡ ಮೊತ್ತವನ್ನೂ ಸಂಭಾವನೆಯಾಗಿ ಪಡಿತಿದ್ದಾರೆ. ಹೀಗಾಗಿ  ಭಾರತದ ಟಾಪ್ ಕ್ರಿಕೆಟಿಗರು ಇಂದು ಐಶಾರಾಮಿ ಜೀವನ ನಡೆಸುತ್ತಿದ್ದಾರೆ. ಅದರಲ್ಲೂ ಭಾರತ ತಂಡದ ಪರ ಮಿಂಚಿದ ಕೆಲ ವಿಶ್ವ ಶ್ರೇಷ್ಠ ಆಟಗಾರರು ಪ್ರೈವೇಟ್ ಜೆಟ್ ಅನ್ನು ಹೊಂದಿದ್ದಾರೆ.

ಕಪಿಲ್ ದೇವ್ ಭಾರತದ ಶ್ರೇಷ್ಠ ಕ್ರಿಕೆಟಿಗ. ಸಾರ್ವಕಾಲಿಕ ಲೆಜೆಂಡರಿ ಆಲ್ರೌಂಡರ್ಗಳಲ್ಲಿ ಒಬ್ಬರು. ಕಪಿಲ್ ದೇವ್ ನಾಯಕತ್ವದಲ್ಲಿ  ಭಾರತ 1983ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಗೆದ್ದುಕೊಂಡಿತ್ತು. ಕಪಿಲ್ ದೇವ್ ಕ್ರಿಕೆಟ್ನಲ್ಲಿ ಕ್ಲಿಕ್ ಆಗ್ತಿದ್ದಂತೆ ಅವ್ರ ಆದಾಯ ಕೂಡ ಹೆಚ್ಚಾಗ್ತಾ ಹೋಯ್ತು.. ಸದ್ಯ ಕಪಿಲ್ ವಾರ್ಷಿಕ ಆದಾಯ 220 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಕಪಿಲ್ ದೇವ್  ಬಳಿಕ ಖಾಸಗಿ ಜೆಟ್ ಕೂಡ ಇದೆ. ದೇಶದಲ್ಲಿ ಖಾಸಗಿ ಜೆಟ್ ಖರೀದಿಸಿದ ಮೊದಲ ಕ್ರಿಕೆಟರ್ ಕಪಿಲ್ ದೇವ್ ಆಗಿದ್ದಾರೆ. ಕಪಿಲ್ ದೇವ್ ಬಳಿ ಇರುವ ಖಾಸಗಿ ಜೆಟ್ನ ಬೆಲೆ 110 ಕೋಟಿ ರುಪಾಯಿ..

ಇನ್ನು ಕ್ರಿಕೆಟ್ ದೇವರು ಎಂದೇ ಖ್ಯಾತಿ ಗಳಿಸಿರುವ ಸಚಿನ್ ತೆಂಡೂಲ್ಕರ್ ವಿಶ್ವದ ಸರ್ವ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು. ಜತೆಗೆ ವಿಶ್ವದ ಶ್ರೀಮಂತ ಕ್ರಿಕೆಟರ್ ಕೂಡ ಆಗಿದ್ದಾರೆ. ತೆಂಡೂಲ್ಕರ್ ವಾರ್ಷಿಕ ಆದಾಯ 1250 ಕೋಟಿ ರುಪಾಯಿ ಎಂದು ಅಂದಾಜಿಸಲಾಗಿದೆ.. ಸಚಿನ್ 2016 ರಲ್ಲಿ ಖಾಸಗಿ ಜೆಟ್ ಪರ್ಚೇಸ್ ಮಾಡಿದ್ದಾರೆ. ಈ ಜೆಟ್  ಅತ್ಯಂತ ದುಬಾರಿಯದ್ದಾಗಿದೆ. ಸಚಿನ್‌ ಬಳಿಯಿರುವ ಖಾಸಗಿ ಜೆಟ್‌ನ ಬೆಲೆ ಬರೋಬ್ಬರಿ 250 ಕೋಟಿ ರೂಪಾಯಿ..

ಇನ್ನು ಎಂ. ಎಸ್ ಧೋನಿ..  ವಿಶ್ವದ ಅತ್ಯುತ್ತಮ ವಿಕೆಟ್ ಕೀಪರ್, ಫಿನಿಶರ್ ಮತ್ತು ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿದ್ದಾರೆ. ಅವರ ನಾಯಕತ್ವದಲ್ಲಿ, ಟೀಂ ಇಂಡಿಯಾ T20 ವಿಶ್ವಕಪ್, ODI ವಿಶ್ವಕಪ್ ಮತ್ತು ICC ಟೆಸ್ಟ್‌ ಚಾಂಪಿಯನ್‌ ಟ್ರೋಫಿ ಸೇರಿದಂತೆ ಎಲ್ಲಾ ಮೂರು ಪ್ರಮುಖ ICC ಟೂರ್ನಮೆಂಟ್ಗಳ ಪ್ರಶಸ್ತಿಗಳನ್ನು ಗೆದ್ದಿದೆ. ಇದಲ್ಲದೇ ಧೋನಿ ನಾಯಕತ್ವದಲ್ಲಿ ಸಿಎಸ್ಕೆ 5 ಬಾರಿ ಚಾಂಪಿಯನ್ ಆಗಿದೆ. ಧೋನಿ ಮೈದಾನದಲ್ಲಿ ಬ್ಯಾಟ್ ಬೀಸಿದಂತೆ ಅವ್ರ ಇನ್ಕಮ್ ಕೂಡ ಜಾಸ್ತಿ ಆಗ್ತಾ ಹೋಗಿದೆ. ಧೋನಿ ಆದಾಯ ಸಾವಿರ ಕೋಟಿ ದಾಟಿದ್ದು, ವಿಶ್ವದ ಶ್ರೀಮಂತ ಕ್ರೀಡಾಪಟು ಎನಿಸಿಕೊಂಡಿದ್ದಾರೆ. ಎಂಎಸ್ ಧೋನಿ ಖಾಸಗಿ ಜೆಟ್ ಮಾಲೀಕ ಸಹ ಆಗಿದ್ದಾರೆ. ಇವರ ಬಳಿಯಿರುವ ಜೆಟ್ನ ಬೆಲೆ 110 ಕೋಟಿ ಮೌಲ್ಯದ್ದಾಗಿದೆ.

ಆರ್ಸಿಬಿ ಕಿಂಗ್.. ರನ್ ಮಶಿನ್ ಕೊಹ್ಲಿ ಬಗ್ಗೆ ಹೇಳ್ಬೇಕಂತಿಲ್ಲ.. ಕೊಹ್ಲಿ ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ರು.. ಇವ್ರ ಐಶರಾಮಿ ಜೀವನ ಕಳಿತಾ ಇದ್ದಾರೆ. ಇತ್ತೀಚೆಗಂತೂ ವಿದೇಶದಲ್ಲೇ ಹೆಚ್ಚು ಕಾಲ ಕಳಿತಾ ಇದ್ದಾರೆ.  ಕೊಹ್ಲಿ ಬಳಿ ದುಬಾರಿ ಬೆಲೆಯ ಕಾರು ಸೇರಿದಂತೆ ಪ್ರೈವೇಟ್ ಜೆಟ್ ಕೂಡ ಇದೆ. ಕೊಹ್ಲಿ ಅವರ ಖಾಸಗಿ ಜೆಟ್ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿದೆ. ಇದರ ಬೆಲೆ 120 ಕೋಟಿ ರೂಪಾಯಿ ಎಂದು ಹೇಳಲಾಗ್ತಿದೆ.

ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರೋದು ನಿಮ್ಗೆಲ್ಲಾ ಗೊತ್ತೇ ಇದೆ.  ಟಿ20 ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ತೋರಿರುವ ಪಾಂಡ್ಯ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈಗ ಐಪಿಎಲ್ನಲ್ಲೂ ಮಿಂಚುತ್ತಾ ಇದ್ದಾರೆ.  ಹಾರ್ದಿಕ್ ಕೂಡ  ಭಾರತದ ಶ್ರೀಮಂತ ಕ್ರಿಕೆಟ್ರಗಳಲ್ಲಿ ಒಬ್ಬರಾಗಿದ್ದು, ಐಶರಾಮಿ ಜೀವನ ನಡೆಸ್ತಿದ್ದಾರೆ. ಪಾಂಡ್ಯ ಬಳಿ ಖಾಸಗಿ ಜೆಟ್ ಇದೆ. ಈ ಜೆಟ್ ಬೆಲೆ  40 ಕೋಟಿ  ಎಂದು ಹೇಳಲಾಗ್ತಿದೆ.

ಹೀಗೆ ಆಟಗಾರರು ತಮ್ಮ ಆಟದ ಮೂಲಕವೇ ಕೋಟಿ ಕೋಟಿ ಗಳಿಸಿದ್ದಾರೆ. ಇದೇ ಕಾರಣಕ್ಕಾಗಿ ತಮ್ಮ ಆಟಕ್ಕೆ ಅವರು ಸಿಕ್ಕಾಪಟ್ಟೆ ಕಮಿಟ್‌ಮೆಂಟ್‌ ತೋರಿಸ್ತಾ ಬಂದಿದ್ದರು ಎನ್ನುವುದನ್ನು ಮರೆಯಬಾರದು. ಅಂದ್ರೆ ಕ್ರಿಕೆಟ್‌ಗಾಗಿ ಅವರು ಅಷ್ಟೆಲ್ಲಾ ಕಷ್ಟಪಟ್ಟಿದ್ದರಿಂದಲೇ, ಕ್ರಿಕೆಟ್‌ ಅವರಿಗೆ ದೊಡ್ಡ ಮಟ್ಟದಲ್ಲಿಒಲಿದು, ಕೋಟಿ ಕೋಟಿ ಸಂಪಾದಿಸುವಂತೆ ಮಾಡಿತ್ತು ಎಂದರೂ ತಪ್ಪಾಗಲಾರದು.

Shwetha M