RCB ತಂಡಕ್ಕೆ ಬಿಗ್‌ ಶಾಕ್‌ – ಫೈನಲ್‌ನಲ್ಲಿ ಸಾಲ್ಟ್‌ ಆಡೋದು ಅನುಮಾನ

RCB ತಂಡಕ್ಕೆ ಬಿಗ್‌ ಶಾಕ್‌ – ಫೈನಲ್‌ನಲ್ಲಿ ಸಾಲ್ಟ್‌ ಆಡೋದು ಅನುಮಾನ

ಇಂಡಿಯನ್ ಪ್ರೀಮಿಯರ್ ಲೀಗ್​ನ ಮಹಾಕದನಕ್ಕೆ ವೇದಿಕೆ ಸಿದ್ಧವಾಗಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಆದ್ರೀಗ ಆರ್‌ಸಿಬಿ ಓಪನರ್‌ ಫಿಲ್‌ ಸಾಲ್ಟ್‌ ಫೈನಲ್‌ ಪಂದ್ಯ ಆಡುವುದು ಅನುಮಾನ ಎನ್ನಲಾಗುತ್ತಿದೆ.

ಇದನ್ನೂ ಓದಿ: IPL ಮಹಾಸಮರಕ್ಕೆ ಕೌಂಟ್ ಡೌನ್ – ಬೆಂಗ್ಳೂರಲ್ಲಿ ಅವಧಿಗೂ ಮೀರಿ ಪಬ್ ಓಪನ್ ಮಾಡಿದ್ರೆ FIR

ಇಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಫೈನಲ್‌ ಪಂದ್ಯ ನಡೆಯಲಿದೆ. ಫೈನಲ್‌ ಪಂದ್ಯಕ್ಕೂ ಮುನ್ನ ಆರ್‌ಸಿಬಿಯ ಅಭ್ಯಾಸ ವೇಳೆ ಸಾಲ್ಟ್‌ ಕಾಣಿಸಿಲ್ಲ ಎಂದು ವರದಿಯಾಗಿದೆ.

ಇಂಗ್ಲೆಂಡಿನ ಫಿಲ್‌ ಸಾಲ್ಟ್‌ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಹೀಗಾಗಿ ಅವರು ತವರಿಗೆ ತೆರಳಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಆರ್‌ಸಿಬಿ ಅಧಿಕೃತವಾಗಿ ಸಾಲ್ಟ್‌ ಅಲಭ್ಯರಾಗುವ ಬಗ್ಗೆ ತಿಳಿಸಿಲ್ಲ.

ಆರ್‌ಸಿಬಿ ಪರ 12 ಪಂದ್ಯ ಆಡಿರುವ ಸಾಲ್ಟ್‌ ಒಟ್ಟು 387 ರನ್‌ ಹೊಡೆದು ಟಾಪ್‌ 20 ಬ್ಯಾಟರ್‌ ಪಟ್ಟಿಯಲ್ಲಿ 20ನೇ ಸ್ಥಾನದಲ್ಲಿದ್ದಾರೆ.

ಪಂಜಾಬ್‌ ವಿರುದ್ಧದ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಸಾಲ್ಟ್‌ ಔಟಾಗದೇ 56 ರನ್‌(27 ಎಸೆತ, 6 ಬೌಂಡರಿ, 3 ಸಿಕ್ಸ್‌ ) ಹೊಡೆದು ಜಯವನ್ನು ತಂದುಕೊಟ್ಟಿದ್ದರು.

Shwetha M