RCB ಕಪ್ ಕನಸಿಗೆ ಮಳೆ ವಿಘ್ನ? – ಪಂದ್ಯ ರದ್ದಾದ್ರೆ PBKS ಚಾಂಪಿಯನ್
ಓವರ್ ಕಡಿತ.. ಮೀಸಲು ದಿನ.. ಹೇಗಿದೆ?  

RCB ಕಪ್ ಕನಸಿಗೆ ಮಳೆ ವಿಘ್ನ? – ಪಂದ್ಯ ರದ್ದಾದ್ರೆ PBKS ಚಾಂಪಿಯನ್ಓವರ್ ಕಡಿತ.. ಮೀಸಲು ದಿನ.. ಹೇಗಿದೆ?  

18ನೇ ಸೀಸನ್ ಐಪಿಎಲ್​ನ ಪಾಯಿಂಟ್ಸ್ ಟೇಬಲ್ ಟಾಪರ್​ಗಳೇ ಫೈನಲಿಸ್ಟ್​ಗಳಾಗಿ ಫೈಟ್​ಗೆ ರೆಡಿಯಾಗಿದ್ದಾರೆ. ಚೊಚ್ಚಲ ಟ್ರೋಫಿಗಾಗಿ ಬೆಂಗಳೂರು ಹಾಗೂ ಪಂಜಾಬ್ ನಡುವೆ ರಣರೋಚಕ ಕಾಳಗ ನಡೆಯಲಿದೆ. ಅಹಮದಾಬಾದ್​ನ ನರೇಂದ್ರಮೋದಿ ಸ್ಟೇಡಿಯಮ್​ನಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯಕ್ಕೆ ಕೌಂಟ್​ಡೌನ್ ಶುರುವಾಗಿದೆ. ಬಟ್ ಪಂದ್ಯದ ಆರಂಭಕ್ಕೂ ಮುನ್ನವೇ ಮಳೆ ಭೀತಿ ಎದುರಾಗಿದೆ. ಕ್ವಾಲಿಫೈಯರ್ 2ಗೂ ಮಳೆ ಕಾಟ ಕೊಟ್ಟಿದ್ದನ್ನ ನೀವೆಲ್ಲಾ ನೋಡೇ ಇದ್ದೀರಾ. ಆದ್ರೆ ಫೈನಲ್ ಮ್ಯಾಚ್ ಮಳೆಯಿಂದ ಕ್ಯಾನ್ಸಲ್ ಆದ್ರೆ ಆರ್​ಸಿಬಿಯ ಕೋಟ್ಯಂತರ ಅಭಿಮಾನಿಗಳ ಹಾರ್ಟ್ ಬ್ರೇಕ್ ಆಗಲಿದೆ.

ಇದನ್ನೂ ಓದಿ : RCB ಸೂಪರ್‌ ಫ್ಯಾನ್‌ ಸುಗುಮಾರ್‌.. RCB ಫ್ಯಾನ್ಸ್ ರಾಯಭಾರಿ ಆಗಿದ್ಹೇಗೆ?‌ – ಅಭಿಮಾನಿಗೂ ಫ್ರಾಂಚೈಸಿಯಿಂದ ದುಡ್ಡು?

ಬೆಂಗಳೂರು ವರ್ಸಸ್ ಪಂಜಾಬ್ ನಡುವಿನ ಐಪಿಎಲ್ ಫೈನಲ್ ಯುದ್ಧಕ್ಕೆ ಕೆಲವೇ ಗಂಟೆಗಳಷ್ಟೇ ಬಾಕಿ. ಸತತ 17 ವರ್ಷಗಳಿಂದ ಟ್ರೋಫಿಗಾಗಿ ಕಾಯ್ತಿರೋ ಉಭಯ ತಂಡಗಳಲ್ಲೂ ಎಕ್ಸೈಟ್​ಮೆಂಟ್ ಜಾಸ್ತಿಯಾಗ್ತಿದೆ. ಕರ್ನಾಟಕದಲ್ಲಂತೂ ಫೈನಲ್ ಕ್ರೇಜ್​ ನೆಕ್ಸ್​ಟ್ ಲೆವೆಲ್​ನಲ್ಲಿದೆ. ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಚಾಂಪಿಯನ್ ಯಾರಾಗ್ತಾರೆ ಅಂತಾ ಕುತೂಹಲದಿಂದ ಕಾಯ್ತಿದ್ರೆ ಇತ್ತ ಮಳೆರಾಯ ಕೂಡ ಹೊಡೆತ ಕೊಡೋಕೆ ರೆಡಿಯಾಗಿದ್ದಾನೆ.

ಭಾನುವಾರ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆದ ಕ್ವಾಲಿಫೈಯರ್-2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಎದುರು ಬದುರಾಗಿದ್ವು. ಬಟ್ ಟಾಸ್ ಆಗಿ ಇನ್ನೇನು ಮ್ಯಾಚ್ ಸ್ಟಾರ್ಟ್ ಆಗ್ಬೇಕು ಅನ್ನುವಷ್ಟ್ರಲ್ಲಿ ಮಳೆ ಎಂಟ್ರಿ ಕೊಟ್ಟಿತ್ತು. ಸೋ ಪಂದ್ಯವನ್ನ 2 ಗಂಟೆಗಳು ತಡವಾಗಿ ಆರಂಭ ಮಾಡ್ಲಾಗಿತ್ತು. ಈ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಭರ್ಜರಿ ಗೆಲುವು ಸಾಧಿಸಿದ್ದು, ಆರ್‌ಸಿಬಿ ಜೊತೆ ಜೂನ್‌ 3ರಂದು ಫೈನಲ್‌ ಪಂದ್ಯ ಆಡಲಿದೆ. ಆದರೆ, ಈ ಪಂದ್ಯಕ್ಕೂ ಮಳೆರಾಯ ಅಡ್ಡಿ ಆಗುವ ಆತಂಕ ಎದುರಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮ ಇನ್ನು ಒಂದು ವಾರ ಅಂದರೆ ಜೂನ್‌ 7ರವರೆಗೂ ದೇಶದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಗುಜರಾತ್‌, ಮಹಾರಾಷ್ಟ್ರ, ರಾಜಸ್ಥಾನ, ನವದೆಹಲಿ ಸೇರಿದಂತೆ ಹಲವೆಡೆ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.

ಫೈನಲ್ ಪಂದ್ಯವನ್ನ ಜೂನ್ 3ಕ್ಕೆ ಫಿಕ್ಸ್ ಮಾಡಲಾಗಿದೆ. ಆದ್ರೆ ಗುಜರಾತ್‌ನ ಅಹಮದಬಾದ್‌ನಾದ್ಯಂತ ಭಾರೀ ಮಳೆಯಾಗೋ ಸಾಧ್ಯತೆ ಇದೆ. ಒಂದು ವೇಳೆ ಎಂಟ್ರಿ ಕೊಟ್ರೆ 2 ಗಂಟೆಗಳ ಹೆಚ್ಚುವರಿ ಸಮಯಾವಕಾಶ ನೀಡಲಾಗುತ್ತೆ. ಅಂದ್ರೆ 7.30ಕ್ಕೆ ಶುರುವಾಗಬೇಕಿದ್ದ ಪಂದ್ಯ 9.30 ಒಳಗೆ ಶುರುವಾದ್ರೆ ಪೂರ್ತಿ ಓವರ್​ಗಳ ವರೆಗೂ ಮ್ಯಾಚ್ ಆಡಿಸ್ತಾರೆ. ಹಾಗೇನಾದ್ರೂ ಮಳೆ ಕಂಟಿನ್ಯೂ ಆದ್ರೆ ಓವರ್ ಕಡಿತಗೊಳಿಸೋಕೆ ಅವಕಾಶ ಇರುತ್ತೆ. ಇಲ್ಲ ಮಳೆ ಬಿಡ್ತಾನೇ ಇಲ್ಲ ಅಂದ್ರೆ ಬಿಸಿಸಿಐ ಫೈನಲ್ ಪಂದ್ಯಕ್ಕೆ ಮೀಸಲು ದಿನ ನಿಗದಿ ಪಡಿಸಿದೆ. ಸೋ ಅದ್ರಂತೆ ಜೂನ್ 4ಕ್ಕೆ ಮತ್ತೆ ಅದೇ ಸ್ಟೇಡಿಯಮ್​ನಲ್ಲೇ ಫೈನಲ್ ಮ್ಯಾಚ್ ಆಡಿಸ್ತಾರೆ.

ಜೂನ್ 4ರಂದು ಅಂಧ್ರೆ ಮೀಸಲು ದಿನವೂ ಮಳೆ ಕಂಟಿನ್ಯೂ ಆಗಿ ಪಂದ್ಯ ರದ್ದಾದ್ರೆ ಅದು ಪಂಜಾಬ್ ತಂಡಕ್ಕೆ ಪ್ಲಸ್ ಆಗಲಿದೆ. ಅಂದ್ರೆ ಲೀಗ್ ಹಂತದ ಕೊನೆಯಲ್ಲಿ ಪಾಯಿಂಟ್ಸ್ ಪಟ್ಟಿಯಲ್ಲಿ ಹೆಚ್ಚು ಸ್ಥಾನ ಪಡೆದ ತಂಡಕ್ಕೆ ಟ್ರೋಫಿಯನ್ನು ನೀಡಲಾಗುತ್ತದೆ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ 14 ಪಂದ್ಯಗಳಲ್ಲಿ ಒಂಬತ್ತು ಮ್ಯಾಚ್ ಗೆದ್ದು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ತಂಡ ಟ್ರೋಫಿಯನ್ನ ಎತ್ತಿ ಹಿಡಿಯಲಿದೆ.  ಪೂರ್ವನಿಯೋಜಿತವಾಗಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.

Shantha Kumari