RCB Vs PBKS.. ಸೇಮ್ ಫೈಟ್ – ಯಾರ ಕೈಗೆ IPLನ ಚೊಚ್ಚಲ ಕಪ್?

RCB Vs PBKS.. ಸೇಮ್ ಫೈಟ್ – ಯಾರ ಕೈಗೆ IPLನ ಚೊಚ್ಚಲ ಕಪ್?

ಕ್ವಾಲಿಫೈಯರ್ 1 ಮ್ಯಾಚ್​ನಲ್ಲೇ ಕಂಪ್ಲೀಟ್ ಡಾಮಿನೇಟ್ ಮಾಡಿ ಫಸ್ಟ್ ಫೈನಲಿಸ್ಟ್​ ಆಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಟ್ರೋಫಿಯನ್ನ ಎತ್ತಿ ಹಿಡಿಯೋ ಜೋಶ್​ನಲ್ಲಿದೆ. ಮತ್ತೊಂದೆಡೆ ಡೈರೆಕ್ಟ್ ಟು ಫಿನಾಲೆ ಟಿಕೆಟ್ ಮಿಸ್ ಆದ್ರೂ ವೀ ಆರ್ ಬೌನ್ಸ್ ಬ್ಯಾಕ್ ಅಂತಾ ಕ್ವಾಲಿಫೈಯರ್ 2 ಫೈಟ್​ನಲ್ಲಿ ಮುಂಬೈಗೆ ನೀರು ಕುಡಿಸಿ ಫೈನಲ್​ಗೆ ಬಂದಿರೋ ಪಂಜಾಬ್ ಕೂಡ ಮೊದಲ ಐಪಿಎಲ್ ಟ್ರೋಫಿಗೆ ಮುತ್ತಿಡೋ ತವಕದಲ್ಲಿದೆ. ಹೊಸ ನಾಯಕರ ಜೊತೆ ಜರ್ನಿ ಆರಂಭಿಸಿದ್ದ ಉಭಯ ತಂಡಗಳು ವಿಕ್ಟರಿ, ರನ್ಸ್, ವಿಕೆಟ್ಸ್ ಹೀಗೆ ಎಲ್ಲದ್ರಲ್ಲೂ ಈಕ್ವಲ್ ಕಾಂಪಿಟೇಷನ್ ಕೊಡ್ತಾನೇ ಬಂದಿದ್ದಾರೆ.

ಇದನ್ನೂ ಓದಿ : RCBಗೆ ಯಾರು ಫೈನಲ್ ವಿಲನ್? -PBKSಗಿಂತ MI ಬಂದ್ರೆ ಡೇಂಜರ್?

ಪಿಬಿಕೆಎಸ್ ಮತ್ತು ಆರ್‌ಸಿಬಿ ಲೀಗ್ ಹಂತದಿಂದಲೇ ಜೊತೆ ಜೊತೆಯಲ್ಲೇ ಹೋರಾಟ ನಡೆಸಿಕೊಂಡು ಬಂದಿದೆ. ಉಭಯ ತಂಡಗಳು ತಲಾ 14 ಪಂದ್ಯಗಳಿಂದ ಒಂಬತ್ತು ಗೆಲುವುಗಳು, ನಾಲ್ಕು ಸೋಲುಗಳು ಮತ್ತು ಒಂದು ಮ್ಯಾಚ್ ರದ್ದಾಗಿತ್ತು. ಪಾಯಿಂಟ್ಸ್ ಕೂಡ 19 ಇತ್ತು. ಬಟ್ ರನ್ ರೇಟ್ ಸ್ವಲ್ಪ ಜಾಸ್ತಿ ಇದ್ದಿದ್ರಿಂದ ಪಂಜಾಬ್ ಟೇಬಲ್ ಟಾಪರ್ ಆಗಿತ್ತು. ಲೀಗ್ ಹಂತದಲ್ಲಿ ಎರಡು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ತಂಡ ಆರ್​ಸಿಬಿಯನ್ನ ಸೋಲಿಸಿತ್ತು. ಹಾಗೇ ಮುಲ್ಲನ್‌ಪುರದಲ್ಲಿ ನಡೆದ ಮ್ಯಾಚಲ್ಲಿ ಬೆಂಗಳೂರು ಟೀಂ ಗೆದ್ದು ಬೀಗಿತ್ತು. ಬಳಿಕ ಮೇ 29 ರಂದು ಮುಲ್ಲನ್‌ಪುರದಲ್ಲಿ ನಡೆದ ಕ್ವಾಲಿಫೈಯರ್ 1 ರಲ್ಲಿ ಎರಡೂ ತಂಡಗಳು ಮೂರನೇ ಬಾರಿ ಮುಖಾಮುಖಿಯಾಗಿದ್ವು. ಅಲ್ಲಿ ಆರ್​ಸಿಬಿ ಗೆದ್ದು ಫೈನಲ್ ಪ್ರವೇಶ ಪಡೆದಿತ್ತು. ಇದೀಗ ಪಂಜಾಬ್ ಕೂಡ ಫೈನಲ್​ಗೆ ಬಂದಿರೋದ್ರಿಂದ ಈ ಎರಡು ತಂಡಗಳು ಈ ಸೀಸನ್​ನಲ್ಲೇ ನಾಲ್ಕನೇ ಬಾರಿ ಮುಖಾಮುಖಿಯಾಗಲಿವೆ. ಸೋ ಉಭಯ ತಂಡಗಳಲ್ಲಿ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಕೊಡೋ ಪ್ಲೇಯರ್ಸ್ ಇರೋದ್ರಿಂದಲೇ ಇಂಥಾದ್ದೊಂದು ರಿಸಲ್ಟ್ ಬರ್ತಿರೋದು. ಎರಡೂ ತಂಡಗಳಲ್ಲೂ ಬೆಸ್ಟ್ ಪ್ಲೇಯರ್ಸ್ ಇದ್ದಾರೆ.. ಪಂಜಾಬ್ ಪರ ಇನ್ನಿಂಗ್ಸ್ ಆರಂಭಿಸೋ ಪ್ರಿಯಾನ್ಶ್ ಆರ್ಯ ಚೆನ್ನೈ ವಿರುದ್ಧ 39 ಎಸೆತಗಳಲ್ಲೇ ಸೆಂಚುರಿ ಸಿಡಿಸಿ ಸದ್ದು ಮಾಡಿದ್ರು. ಇತ್ತ ಆರ್​ಸಿಬಿ ಪರ ಬೆಸ್ಟ್ ಫೀಲ್ಡರ್ ಆಗಿರೋ ಫಿಲ್ ಸಾಲ್ಟ್ 8 ಕ್ಯಾಚ್​ಗಳನ್ನ ಹಿಡಿದಿದ್ದಾರೆ.

ಕಳೆದ 18 ಆವೃತ್ತಿಗಳಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಪಂಜಾಬ್‌ ಕಿಂಗ್ಸ್‌ ತಂಡಗಳು ಟ್ರೋಫಿ ಗೆದ್ದಿಲ್ಲ. ಆರ್‌ಸಿಬಿ ಇದಕ್ಕೂ ಮುನ್ನ 3 ಬಾರಿ ಫೈನಲ್‌ ಆಡಿದ್ರೆ ಪಂಜಾಬ್ ಒಂದು ಬಾರಿ ಫೈನಲ್ ಆಡಿ ಸೋಲು ಕಂಡಿತ್ತು.  ಅದ್ರಲ್ಲೂ ಪಂಜಾಬ್ ತಂಡ 2011 ರಲ್ಲಿ ನಾಕೌಟ್ ಸಿಸ್ಟಮ್ ಇಂಪ್ಲಿಮೆಂಟ್ ಆದಾಗಿಂದ್ಲೂ ಒಂದೇ ಒಂದು ಸಲ ಮಾತ್ರ ಪ್ಲೇಆಫ್ ಪ್ರವೇಶಿಸಿದೆ. ಅದೂ ಕೂಡ 2014ರಲ್ಲಿ. ಬಟ್ ಆರ್​ಸಿಬಿಗೆ ಹಾಗಲ್ಲ ಕಪ್ ಗೆದ್ದಿಲ್ಲ ಅಂದ್ರೂ ಇದು 11ನೇ ಸಲ ಪ್ಲೇಆಫ್ ಜರ್ನಿ ಅವ್ರದ್ದು. 2009, 2011 ಮತ್ತು 2016 ರಲ್ಲಿ ರನ್ನರ್ ಅಪ್ ಆಗಿ ಮುಗಿಸಿದ್ದ ಆರ್‌ಸಿಬಿ ತಮ್ಮ ನಾಲ್ಕನೇ ಐಪಿಎಲ್ ಫೈನಲ್ ಪಂದ್ಯವನ್ನು ಆಡಲಿದೆ.

2025ರ ಐಪಿಎಲ್​ಗೂ ಮುನ್ನ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಹೊಸ ನಾಯಕರ ಅಡಿಯಲ್ಲಿ ಅಖಾಡಕ್ಕೆ ಇಳಿದಿವೆ. ಪಂಜಾಬ್ ಸಾರಥಿಯಾಗಿ ಶ್ರೇಯಸ್ ಅಯ್ಯರ್ ಜವಾಬ್ದಾರಿ ತಗೊಂಡಿದ್ರು. ಬಟ್ ಶ್ರೇಯಸ್​ಗೆ ಕ್ಯಾಪ್ಟನ್ಸಿ, ಫೈನಲ್ ಹೊಸದೇನು ಅಲ್ಲ. ಅಲ್ದೇ ಟ್ರೋಫಿ ಎತ್ತಿ ಹಿಡಿದು ಚಾಂಪಿಯನ್ ಆಗಿರೋ ನಾಯಕ ಅವ್ರು. ಅದೂ ಅಲ್ದೇ ಕ್ಯಾಪ್ಟನ್ ಆಗಿ ಮೂರು ಬೇರೆ ಬೇರೆ ತಂಡಗಳನ್ನ ಫೈನಲ್​ಗೆ ಏರಿಸಿರೋ ಏಕೈಕ ನಾಯಕ ಕೂಡ. 2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನ ಫಿನಾಲೆಗೆ ಕೊಂಡೊಯ್ದಿದ್ರು. 2024ರಲ್ಲಿ ಕೆಕೆಆರ್​ಗೆ ಚಾಂಪಿಯನ್ ಪಟ್ಟ ಕೊಡಿಸಿದ್ರು. ಈಗ ಪಂಜಾಬ್ ಲೀಡ್ ಆಗಿ ಮತ್ತೆ ಫೈನಲ್​ಗೇರಿದ್ದಾರೆ. ಬಟ್ ರಜತ್​​ಗೆ ಈ ವರ್ಷವೇ ಕ್ಯಾಪ್ಟನ್ಸಿ ಸಿಕ್ಕಿದೆ. ಆರ್​ಸಿಬಿ ನಾಯಕನಾದ ಮೊದಲ ವರ್ಷವೇ ಫೈನಲ್​ಗೇರಿದ್ದಾರೆ. ಹೀಗಾಗಿ ಇಬ್ಬರ ಮೇಲೂ ಸಾಕಷ್ಟು ನಿರೀಕ್ಷೆಗಳಿವೆ.

Shantha Kumari