RCB ಸೂಪರ್‌ ಫ್ಯಾನ್‌ ಸುಗುಮಾರ್‌.. RCB ಫ್ಯಾನ್ಸ್ ರಾಯಭಾರಿ ಆಗಿದ್ಹೇಗೆ?‌ – ಅಭಿಮಾನಿಗೂ ಫ್ರಾಂಚೈಸಿಯಿಂದ ದುಡ್ಡು?

RCB ಸೂಪರ್‌ ಫ್ಯಾನ್‌ ಸುಗುಮಾರ್‌.. RCB ಫ್ಯಾನ್ಸ್ ರಾಯಭಾರಿ ಆಗಿದ್ಹೇಗೆ?‌ – ಅಭಿಮಾನಿಗೂ ಫ್ರಾಂಚೈಸಿಯಿಂದ ದುಡ್ಡು?

ರಾಯಲ್ ಚಾಲೆಂಜರ್ಸ್ ಬೆಂಗಳೂರು.. ಅಭಿಮಾನಿಗಳ ಮನಸ್ಸಿನಲ್ಲಿ ರಾಜನಂತೆ ಮೆರೆಯುತ್ತಿರೋ ಟೀಮ್‌ ಅಂದ್ರೆ ತಪ್ಪಾಗಲ್ಲ. 18ನೇ ಸೀಸನ್‌ನಲ್ಲಿ ಫೈನಲ್ ತಲುಪಿರುವ ಆರ್‌ಸಿಬಿ ಚೊಚ್ಚಲ ಕಪ್‌ ಗೆಲ್ಲುವ ನಿರೀಕ್ಷೆಯಲ್ಲಿದೆ. ತಂಡ ಟ್ರೋಫಿ ಎತ್ತಿಹಿಡಿಯಲು ಇನ್ನು ಒಂದೇ ಒಂದು ಹೆಜ್ಜೆ ಬಾಕಿಯಿದೆ. RCB ಫೈನಲ್ ತಲುಪುತ್ತಿದ್ದಂತೆ ಅಭಿಮಾನಿಗಳು ಈ ಸಲ ಕಪ್‌ ನಮ್ದೇ ಅಂತಾ ಹೇಳ್ತಿದ್ದಾರೆ. ವಿಶ್ವದಲ್ಲೇ ಅಪಾರ ಫ್ಯಾನ್ಸ್‌ ಹೊಂದಿರುವ ತಂಡ ಅಭಿಮಾನಿಗಳಿಗೆ ಮತ್ತೊಂದು ಗೌರವ ನೀಡಿದೆ. ಆರ್‌ಸಿಬಿ ಬಸ್‌ ಮೇಲೆ ಅಭಿಯೊಬ್ಬರ ಫೋಟೋ ಹಾಕಿ ವಿಶೇಷ ರೀತಿಯಲ್ಲಿ ಗೌರವಿಸಿದೆ.

ಇದನ್ನೂ ಓದಿ: IPLನ ಬಾಲ್‌ ಬೆಲೆ 20,000! – 2 ಬಾಲ್‌.. ಚೆಂಡು ಮಿಸ್‌ ಆದ್ರೆ!?

ಫ್ಯಾನ್ಸ್‌ ಆರ್‌ಸಿಬಿ ಟೀಮ್‌ ನ‌ ಎಷ್ಟು ಪ್ರೀತಿಸುತ್ತಾರೋ, ಅದಕ್ಕಿಂತ ಹೆಚ್ಚಾಗಿ ಆರ್‌ಸಿಬಿ ಟೀಮ್‌ ಅಭಿಮಾನಿಗಳನ್ನ ಇಷ್ಟಪಡುತ್ತೆ. ಅಭಿಮಾನಿಗಳು ಸ್ಟ್ಯಾಂಡ್‌ನಲ್ಲಿ ಕೂಗುವ ಆರ್‌ಸಿಬಿ, ಆರ್‌ಸಿಬಿ, ಅನ್ನೋ ಮಂತ್ರವೇ ಆಟಗಾರರ ಶಕ್ತಿ. ಹೀಗಾಗೇ ಆರ್‌ಸಿಬಿ ತನ್ನ ತಂಡದ 12ನೇ ಸ್ಥಾನವನ್ನು ಫ್ಯಾನ್ಸ್‌ ಗೆ ನೀಡಿದೆ. ಆರ್‌ಸಿಬಿ ಮ್ಯಾಚ್‌ ಎಲ್ಲಿ ನಡೆದ್ರೂ ಸಾವಿರಾರು ಫ್ಯಾನ್ಸ್‌ ಅಲ್ಲಿ ನೆರೆದಿರ್ತಾರೆ. ಮೈದಾನದಲ್ಲಿ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಂಡಿರುತ್ತಾರೆ. ಅದ್ರಲ್ಲಿ ಸುಗುಮಾರ್ ಕುಮಾರ್ ಕೂಡ ಒಬ್ರು.. ಇದೀಗ ಆರ್‌ಸಿಬಿ ಸುಗುಮಾರ್‌ ಅವ್ರನ್ನ ಅಭಿಮಾನಿಗಳ ರಾಯಭಾರಿಯನ್ನಾಗಿ ಮಾಡ್ಕೊಂಡಿದೆ. ಅಷ್ಟೇ ಅಲ್ಲ, ಆಟಗಾರರ ಬಸ್‌ನಲ್ಲೂ ಸುಗುಮಾರ್‌ ಫೋಟೋ ಹಾಕಿಸಿಕೊಂಡಿದೆ.

ಹೌದು, ಸುಗುಮಾರ್‌ ಕುಮಾರ್‌ ಪ್ರತಿ ಪಂದ್ಯಕ್ಕೂ ಒಂದೊಂದು ರೀತಿಯ ಕಾಸ್ಟ್ಯೂಮ್‌ ಮೂಲಕ ಮೈದಾನದಲ್ಲಿ ಗಮನಸೆಳಿತಾರೆ. ಇವರನ್ನು ಆರ್‌ಸಿಬಿ ಅಭಿಮಾನಿ ಸಂಘಗಗಳ ರಾಯಭಾರಿ ಎಂದೇ ಕರೆಯಲಾಗುತ್ತಿದೆ. ಇವರ ಫೋಟೋವನ್ನ ಈ ಬಾರಿ ಆರ್‌ಸಿಬಿ ಬಸ್‌ ಮೇಲೆ ಹಾಕಲಾಗಿದೆ. ಇದು ಆರ್‌ಸಿಬಿ ಮ್ಯಾನೇಜ್ಮೆಂಟ್‌ ಫ್ಯಾನ್‌ಗೆ ನೀಡಿರುವ ದೊಡ್ಡ ಗೌರವಗಳಲ್ಲಿ ಒಂದು.

ಅಂದ್ಹಾಗೆ ಬೆಂಗಳೂರಿನ ಸುಗುಮಾರ್‌ ಗೆ ಚಿಕ್ಕವಯಸ್ಸಿನಿಂದಲೂ ಕ್ರಿಕೆಟ್‌ ಹಾಗೂ ಫ್ಯಾನ್ಸಿ ಡ್ರೆಸ್‌ ಮೇಲೆ ಹೆಚ್ಚಿನ ಆಸಕ್ತಿ. ಬೆಂಗಳೂರಿನಲ್ಲಿ ಆರ್‌ಸಿಬಿ ಮ್ಯಾಚ್‌ ಇದ್ದಾಗ ಮೈಸೂರು ಮಹಾರಾಜರ ಪೋಷಾಕಿನಲ್ಲಿ ಮೈದಾನಕ್ಕೆ ಸುಗುಮಾರ್‌ ಹೋಗಿದ್ರು. ಮರುದಿನ ಪತ್ರಿಕೆಗಳಲ್ಲಿ ಇವರದ್ದೇ ಫೋಟೋ ರಾರಾಜಿಸಿತ್ತು. ಅಂದಿನಿಂದ  ಆರಂಭವಾದ ಆರ್‌ಸಿಬಿ ಹಾಗೂ ಕ್ರಿಕೆಟ್‌ ಮೇಲಿನ ಪ್ರೀತಿ ಇಂದು ಹೆಮ್ಮರವಾಗಿ ಬೆಳೆದಿದೆ. ಕ್ರಿಕೆಟ್‌ ಆಟಗಾರರಿಗೆ ಅಭಿಮಾನಿಗಳು ಇರುವುದು ಕಾಮನ್‌. ಆದ್ರೆ ಅಭಿಮಾನಿಗೇ ಫ್ಯಾನ್ಸ್‌  ಇರುವುದು ತುಂಬ ವಿರಳ. ಆದ್ರೆ ಆರ್‌ಸಿಬಿ ಅಪಟ್ಟ ಅಭಿಮಾನಿ ಸುಗುಮಾರ್‌ಗೆ ಅಭಿಮಾನಿಗಳ ದೊಡ್ಡ ಬಳಗವಿದೆ. ಇವ್ರ ಜೊತೆ ಫ್ಯಾನ್ಸ್‌ ಹಾಗೂ ಕ್ರಿಕೆಟರ್ಸ್‌ ಕೂಡ ಫೋಟೋ ತೆಗೆಸಿಕೊಂಡಿದ್ದಾರೆ.

ಇನ್ನು ಸುಗುಮಾರ್ ಕ್ರೀಡಾ ಪ್ರೀತಿ ಕಂಡು ಹಲವು ಸಂಘ ಸಂಸ್ಥೆಗಳು ಬೆನ್ನು ತಟ್ಟಿವೆ. ಅಷ್ಟೇ ಅಲ್ಲ ಆಸ್ಟ್ರೇಲಿಯಾ ಲೆಜೆಂಡ್‌ ಕ್ರಿಕೆಟರ್‌ ಸ್ಟೀವ್ ವಾ ಒಂದು ಪುಸ್ತಕವನ್ನು ಬರೆದಿದ್ದಾರೆ. ಆ ಪುಸ್ತಕದಲ್ಲಿ ಸುಗುಮಾರ್‌ ಅವರ ಸಾಧನೆಗೆ 2 ಪೇಜ್‌ ಮೀಸಲಿವೆ. ಇದರಿಂದಲೇ ಇವರು ಕ್ರಿಕೆಟ್‌ನ ಎಷ್ಟು ದೊಡ್ಡ ಅಭಿಮಾನಿ ಅನ್ನೋದು ಗೊತ್ತಾಗುತ್ತೆ. ಇನ್ನು ಟೀಮ್ ಇಂಡಿಯಾದ ಪಂದ್ಯಗಳು ಪ್ರಪಂಚದ ಯಾವುದೇ ಮೂಲೆಯಲ್ಲೂ ನಡೆದ್ರೂ ಸುಗುಮಾರ್‌ ಅಲ್ಲಿ ಹಾಜರಿರುತ್ತಾರೆ. ಇವರ ಕೈಯಲ್ಲಿ ಭಾರತದ ಭಾವುಟ ಹಾಗೂ ಕರ್ನಾಟಕದ ಬಾವುಟ ಇದ್ದೇ ಇರುತ್ತದೆ. ಇವರ ಅಭಿಮಾನಕ್ಕೆ 2019ರಲ್ಲಿ ಭಾರತ ಹಾಗೂ ಪಾಕಿಸ್ತಾನ ಮಧ್ಯೆ ನಡೆದ ಪಂದ್ಯದಲ್ಲಿ ಗ್ಲೋಬಲ್‌ ಸ್ಪೋರ್ಟ್ಸ್ ಫ್ಯಾನ್‌ ಅವಾರ್ಡ್‌ ನೀಡಿ ಗೌರವಿಸಲಾಗಿದೆ. ಇನ್ನು ಸುಗುಮಾರ್ ಗೆ ಡಾ. ಎಸ್. ಕ್ಸೇವಿಯರ್ ಬ್ರಿಟ್ಟೊ ಅವರ ಕೆರ್ರಿ ಇಂಡೆವ್ ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ ಪ್ರಾಯೋಜಕತ್ವ ಮಾಡುತ್ತದೆ. ಅಲ್ಲದೆ ಇವರನ್ನು ಕಂಪನಿಯ ರಾಯಭಾರಿಯಾಗಿ ಮಾಡಿದೆ. ಅಷ್ಟೇ ಅಲ್ಲ 2008 ರಿಂದ ತವರಿನಲ್ಲಿ ನಡೆದ ಯಾವುದೇ ಆರ್‌ಸಿಬಿ ಪಂದ್ಯವನ್ನು ಸುಗುಮಾರ್‌ ಮಿಸ್ ಮಾಡಿಕೊಂಡಿಲ್ಲ. ಹೀಗಾಗಿ ಸುಗುಮಾರ್‌ ಆರ್‌ಸಿಬಿ ಸೂಪರ್‌ ಫ್ಯಾನ್ ಎನಿಸಿಕೊಂಡಿದ್ದು, ಆರ್‌ಸಿಬಿ ಮ್ಯಾನೇಜ್ಮೆಂಟ್‌ ಕೂಡ ಇವ್ರಿಗೆ ಪ್ರತಿ ಮ್ಯಾಚ್‌ ಟಿಕೆಟ್‌ಗಳನ್ನು ಫ್ರೀಯಾಗಿ ನೀಡ್ತಿದೆ.

ಒಟ್ಟಾರೆ ಆರ್‌ಸಿಬಿ, ಕ್ರಿಕೆಟ್‌ ಫ್ಯಾನ್‌ ಸುಗುಮಾರ್‌ ಈಗ ತಮ್ಮ ಅಭಿಮಾನದಿಂದಲೇ ಲ್ಡ್‌ ಫೇಮಸ್‌ ಆಗಿದ್ದಾರೆ. ಇವ್ರ ಅಭಿಮಾನಕ್ಕೆ ಆರ್‌ಸಿಬಿ ಟೀಮ್ ಕೂಡ ಗೌರವ ನಿಡಿರೋದು ಹೆಮ್ಮೆಯ ಸಂಗತಿ.

Shwetha M