IPLನ ಬಾಲ್‌ ಬೆಲೆ 20,000! – 2 ಬಾಲ್‌.. ಚೆಂಡು ಮಿಸ್‌ ಆದ್ರೆ!?

IPLನ ಬಾಲ್‌ ಬೆಲೆ 20,000! – 2 ಬಾಲ್‌.. ಚೆಂಡು ಮಿಸ್‌ ಆದ್ರೆ!?

ಐಪಿಎಲ್ 2025 ಇನ್ನೇನು ಮುಕ್ತಾಯದ ಹಂತದಲ್ಲಿದೆ. ಎಲ್ಲರ ಕಣ್ಣು ಈಗ ಕಪ್ ಮೇಲಿದೆ. ಈ ವರ್ಷದ ಚಾಂಪಿಯನ್ ಯಾರಾಗ್ತಾರೆ? ಕಪ್ ಯಾರಾ ಪಾಲಾಗುತ್ತೆ ಅನ್ನೋ ಕ್ಯೂರಿಯಾಸಿಟಿ ಕ್ರಿಕೆಟ್ ಫ್ಯಾನ್ಸ್ ನಡುವೆ ಹೆಚ್ಚಾಗಿದೆ. ಇದೆಲ್ಲಾ ಒಂದ್ಕಡೆಯಾದ್ರೆ ಮತ್ತೊಂದೆಡೆ ಐಪಿಎಲ್‌ನಲ್ಲಿ ಆಟಗಾರರು ಧರಿಸೋ ಜರ್ಸಿಯಿಂದ ಹಿಡಿದು, ಬ್ಯಾಟ್ ಹಾಗೂ ಬಾಲ್ ವರೆಗೂ ಕ್ರಿಕೆಟ್‌ ಪ್ರಿಯರಲ್ಲಿ ಕುತೂಹಲ ಇದ್ದೇ ಇದೆ.  ಅಂದ್ಹಾಗೆ ಐಪಿಎಲ್ನಲ್ಲಿ ಬಳಸಲಾಗುವ ಬಾಲ್ ನಲ್ಲೂ ಒಂದು ವಿಶೇಷತೆಯಿದೆ.

ಇದನ್ನೂ ಓದಿ: ನಿಲ್ಲದ ಉಕ್ರೇನ್ ರಷ್ಯಾ ಯುದ್ಧ – ಉಕ್ರೇನ್ ಡ್ರೋನ್ ದಾಳಿಗೆ ರಷ್ಯಾದ 40 ಕ್ಕೂ ಹೆಚ್ಚು ವಿಮಾನ ನಾಶ

ಐಪಿಎಲ್ ನಲ್ಲಿ ಬಳಸುವ ಬಿಳಿ ಬಣ್ಣದ ಬಾಲ್ ತಯಾರಿಸೋದು ಕೂಕಬುರ್ರಾ ಕಂಪನಿ. ಆಸ್ಟ್ರೇಲಿಯಾದ ಕುಕಾಬುರ್ರಾ ಕಂಪನಿಯ ಬಾಲ್‌ ಹಾಗೂ ಬ್ಯಾಟ್‌ಗಳು ಕ್ರಿಕೆಟ್‌ ವಿಚಾರದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿವೆ. ನೀವೆಲ್ಲಾ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳು ಬಳಸುವ ಬ್ಯಾಟ್‌ಗಳಲ್ಲಿ ಹಕ್ಕಿಯ ಸಿಂಬಲ್‌ ಇರೋದನ್ನು ಗಮನಿಸಿರುತ್ತೀರಾ. ಅದು ಆಸ್ಟ್ರೇಲಿಯಾದಲ್ಲಿರುವ ಮಿಂಚುಳ್ಳಿ ಪ್ರಬೇಧದ ಹಕ್ಕಿ ಕುಕಾಬುರ್ರಾ. ಇದೇ ಕುಕಾಬುರ್ರಾ ಹಕ್ಕಿಯ್ನೇ ಕುಕಾಬುರ್ರಾ ಕಂಪನಿ ತನ್ನ ಲೋಗೋವಾಗಿ ಬಳಸಿಕೊಂಡಿದೆ. ಐಸಿಸಿಯ ಪಂದ್ಯಾವಳಿಗಳಲ್ಲಿ ಕುಕಾಬುರ್ರಾ ಕಂಪನಿ ಉತ್ಪಾದಿಸುವ ಬಿಳಿಯ ಬಾಲ್‌ಗಳನ್ನು ಮಾತ್ರ ,ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಬಳಸ್ತಾರೆ.. ಅಂದ್ರೆ ಟಿ20 ಹಾಗೂ ಏಕದಿನ ಪಂದ್ಯಗಳಿಗೆ ಈ ಕುಕಾಬುರ್ರಾ ಕಂಪನಿಯ ಬಾಲ್‌ಗಳನ್ನು ಮಾತ್ರ ಅಧಿಕೃತವಾಗಿ ಬಳಸಲಾಗುತ್ತದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ, ವೆಸ್ಟ್‌ಇಂಡೀಸ್‌ ಹಾಗೂ ಇಂಗ್ಲೆಂಡ್‌ ತಂಡಗಳನ್ನು ಹೊರತುಪಡಿಸಿದ್ರೆ, ಉಳಿದ ದೇಶಗಳಲ್ಲಿ ಕುಕುಬುರ್ರಾ ಕಂಪನಿಯ ಕೆಂಪು ಚೆಂಡುಗಳನ್ನೇ ಬಳಸಲಾಗುತ್ತದೆ.. ಭಾರತದಲ್ಲಿ ನಡೆಯುವ ಟೆಸ್ಟ್‌ ಪಂದ್ಯಗಳಲ್ಲಿ ಎಸ್‌ಜಿ ಕಂಪನಿಯ ಕೆಂಪು ಚೆಂಡು ಬಳಸಲಾಗುತ್ತದೆ.. ಇಂಗ್ಲೆಂಡ್‌ ಹಾಗೂ ವೆಸ್ಟ್‌ ಇಂಡೀಸ್‌ಗಳಲ್ಲಿ ಡ್ಯೂಕ್ಸ್‌ ಕಂಪನಿಯ ರೆಡ್‌ ಬಾಲ್‌ ಬಳಸಲಾಗುತ್ತದೆ. ಈಗ ಮತ್ತೆ ವೈಟ್‌ ಬಾಲ್‌ ವಿಚಾರಕ್ಕೆ ಬರೋಣ..

ಈ ಬಿಳಿ ಬಣ್ಣದ ಚೆಂಡನ್ನು 1970 ರಿಂದ ಬಳಸಲು ಆರಂಭಿಸಲಾಯಿತು.. ಸೀಮಿತ ಓವರ್‌ ಕ್ರಿಕೆಟ್‌ಗಳಿಗಾಗಿಯೇ ಈ ವೈಟ್‌ ಬಾಲ್‌ ಅನ್ನು ರೆಡಿ ಮಾಡಲಾಗಿದ್ದು, ಅತ್ಯಂತ ವೇಗವಾಗಿ ಈ ಬಾಲ್‌ ಚಲಿಸುತ್ತದೆ.. ರೆಡ್‌ ಬಾಲ್‌ಗೆ ಹೋಲಿಕೆ ಮಾಡಿದರೆ, ವೈಟ್‌ ಬಾಲ್‌ ಕಡಿಮೆ ಎಫರ್ಟ್‌ನಲ್ಲಿ ಬೌಂಡರಿ ಗೆರೆ ದಾಟುತ್ತದೆ..  ಅದರಲ್ಲೂ ಕೂಕಾ ಬುರ್ರಾ ಕಂಪನಿಯ ವೈಟ್‌ ಬಾಲ್‌ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಹೇಳಿ ಮಾಡಿಸಿದಂತಿದ್ದು, ಐಸಿಸಿಯ ಅಧಿಕೃತ ಮಾನ್ಯತೆ ಪಡೆದಿರೋದ್ರಿಂದ, ಐಪಿಎಲ್‌ನಲ್ಲೂ ಇದೇ ಕುಕಾಬುರ್ರಾ ವೈಟ್‌ ಬಾಲ್‌ಗಳನ್ನೇ ಬಳಕೆ ಮಾಡಲಾಗ್ತಿದೆ..  ಈ ಬಾಲ್  ಅನ್ನು ವಿಶೇಷವಾಗಿ ತಯಾರಿಸಲಾಗುತ್ತೆ. ಚೆಂಡಿನ ಹೊಲಿಗೆಯ ಒಳಗಿನ ಎರಡು ಪದರಗಳನ್ನು ಮಾತ್ರ ಕೈಯಿಂದ ಹೊಲಿಯಲಾಗುತ್ತದೆ. ಉಳಿದ ಎಲ್ಲಾ ಹೊಲಿಗೆಗಳನ್ನು ಯಂತ್ರದಿಂದ ಸಹಾಯದಿಂದ ಹೊಲಿಯಲಾಗಿರುತ್ತದೆ. ಇನ್ನು ಈ ಚೆಂಡಿನ ಮೇಲ್ಪದರ ಹೆಚ್ಚು ನುಣುಪಾಗಿದ್ದು, ಇದ್ರಿಂದಾಗಿ ಚೆಂಡು ತುಂಬಾ ಎತ್ತರಕ್ಕೆ ಚಿಮ್ಮುತ್ತೆ. ಇದೇ ಕಾರಣಕ್ಕೆ ಐಪಿಎಲ್ನಲ್ಲಿ ದೀರ್ಘ ಸಿಕ್ಸರ್‌ಗಳನ್ನು ನೀರು ಕುಡಿದಷ್ಟೇ ಸಲೀಸಾಗಿ ಬ್ಯಾಟ್ಸ್‌ಮನ್‌ಗಳು ಹೊಡೆಯುತ್ತಿರುತ್ತಾರೆ.. ಹಾಗಿದ್ರೆ ಈ ಕೂಕಾ ಬುರ್ರಾ ಬಾಲ್ ನ ಬೆಲೆ ಎಷ್ಟು ಎಂಬ ಪ್ರಶ್ನೆ ನಿಮ್ಮ ಕಾಡ್ತಿರಬಹುದು.. ಕ್ಲಬ್‌ ಕ್ರಿಕೆಟ್‌ಗಳಲ್ಲಿ ಬಳಸುವ ಕುಕಾಬುರ್ರಾ ಕಂಪನಿ ತಯಾರಿಸುವ ಒಂದು ವೈಟ್‌ ಬಾಲ್‌ನ ಬೆಲೆ ಅಂದಾಜು 86ರಿಂದ 88 ಆಸ್ಟ್ರೇಲಿಯನ್‌ ಡಾಲರ್‌ ಇರುತ್ತೆ. ಅಂದರೆ ಹತ್ತಿರ ಹತ್ತಿರ 4800 ರುಪಾಯಿವರೆಗೆ ಕ್ಲಬ್‌ ಮ್ಯಾಚ್‌ಗಳಲ್ಲಿ ಬಳಕೆಯಾಗುವ ಬಾಲ್‌ನ ಬೆಲೆಯಿದೆ. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಂದರೆ ಐಸಿಸಿ ಟೂರ್ನಮೆಂಟ್‌ಗಳಲ್ಲಿ ಬಳಕೆಯಾಗುವ ಕುಕಾಬುರ್ರಾ ಕಂಪನಿಯ ಟರ್ಫ್‌ ಇಂಟರ್‌ನ್ಯಾಷನಲ್‌ ಲೆದರ್‌ ಬಾಲ್‌ನ ಬೆಲೆ ಬರೋಬ್ಬರಿ 20 ಸಾವಿರದ 679 ರುಪಾಯಿಯಷ್ಟಿದೆ.. ಸದ್ಯ ಐಪಿಎಲ್‌ನ ಎರಡು ಇನ್ನಿಂಗ್ಸ್‌ಗಳಲ್ಲಿ ಎರಡು ಹೊಸ ಬಾಲ್‌ಗಳನ್ನು ಬಳಸಲಾಗುತ್ತಿದೆ.. ಅಲ್ಲದೆ ಒಂದು ವೇಳೆ ಸಿಕ್ಸರ್‌ ಬಾರಿಸಿದಾಗ ಬಾಲ್‌ ಏನಾದ್ರೂ ಮಿಸ್ಸಾದ್ರೆ ಆಗ ಆಲ್‌ರೆಡಿ ಬಳಕೆಯಾಗಿರುವ ಬಾಲ್‌ಗಳನ್ನು ಬಳಸಿ ಮ್ಯಾಚ್‌ ಮುಂದುವರಿಸಲಾಗುತ್ತದೆ. ಇದು ಐಪಿಎಲ್‌ನಲ್ಲಿ ಬಳಕೆಯಾಗುತ್ತಿರುವ ವೈಟ್‌ ಬಾಲ್‌ನ ವಿಶೇಷತೆ.

Shwetha M