ಏರ್​ಇಂಡಿಯಾದಿಂದ 500 ವಿಮಾನಗಳ ಖರೀದಿ! ಏನಿದು ಟಾಟಾ ಮೆಗಾ ಡೀಲ್?

ಏರ್​ಇಂಡಿಯಾದಿಂದ 500 ವಿಮಾನಗಳ ಖರೀದಿ!  ಏನಿದು ಟಾಟಾ ಮೆಗಾ ಡೀಲ್?

ಮುಂಬೈ: ಭಾರತದ ವಿಮಾನಯಾನ ಸಂಸ್ಥೆ ಏರ್​ಇಂಡಿಯಾ ಬರೋಬ್ಬರಿ 500 ಹೊಸ ವಿಮಾನಗಳನ್ನ ಖರೀದಿಸಲು ಮುಂದಾಗಿದೆ. ವಿಮಾನ ನಿರ್ಮಾಣ ಸಂಸ್ಥೆಗಳಾದ ಏರ್​​ಬಸ್ ಮತ್ತು ಏರ್​ಬೋಯಿಂಗ್​ನಿಂದ ಒಟ್ಟು 500 ವಿಮಾನಗಳನ್ನು ಖರೀದಿಸಲಾಗ್ತಿದೆ. 400 ಸಣ್ಣ ಗಾತ್ರದ ವಿಮಾನಗಳು ಹಾಗೂ 100 ದೊಡ್ಡ ಗಾತ್ರದ ವಿಮಾನಗಳನ್ನ ಏರ್​ ಇಂಡಿಯಾ ಖರೀದಿಸ್ತಿದೆ. ಸಾವಿರಾರು ಬಿಲಿಯನ್ ಡಾಲರ್ ಮೊತ್ತದ ಈ ಒಪ್ಪಂದ ಈಗ ಅಂತಿಮ ಹಂತಕ್ಕೆ ಬಂದು ತಲುಪಿದೆ. ಜಾಗತಿಕ ವಿಮಾನಯಾನದ ಇತಿಹಾಸದಲ್ಲೇ ಇದೊಂದು ಮೈಲುಗಲ್ಲಾಗಿದೆ. ಯಾಕಂದ್ರೆ, 10 ವರ್ಷಗಳ ಹಿಂದೆ ಅಮೆರಿಕನ್ ಏರ್​ಲೈನ್ಸ್​  460 ವಿಮಾನಗಳನ್ನು ಏಕಕಾಲಕ್ಕೆ ಖರೀದಿಸಿತ್ತು. ಇನ್ನು ಏರ್​​ಇಂಡಿಯಾ ಬುಕ್ ಮಾಡ್ತಿರೋ ಈ 500 ವಿಮಾನಗಳು ಸಂಸ್ಥೆಯ ಕೈಸೇರಲು ಕನಿಷ್ಠ 10 ವರ್ಷ ಕಾಯಬೇಕಿದೆ. ಈಗಾಗ್ಲೇ ವಿಸ್ತಾರ ವಿಮಾನಯಾನ ಸಂಸ್ಥೆ ಹೊಂದಿರುವ ಟಾಟಾ ಸಂಸ್ಥೆ ಏರ್​ಇಂಡಿಯಾದಲ್ಲೂ ಈಗ ಹೊಸತನ ತರಲು ಮುಂದಾಗಿದೆ.

suddiyaana