MIಗೆ ಮಣ್ಣು ಮುಕ್ಕಿಸಿದ PBKS – ಶ್ರೇಯಸ್ ಅಸಲಿ ಆಟ ಈಗ ಶುರು
ಚೊಚ್ಚಲ ಕಪ್ ಗೆಲ್ತಾರಾ ಪಂಜಾಬ್?

MIಗೆ ಮಣ್ಣು ಮುಕ್ಕಿಸಿದ PBKS – ಶ್ರೇಯಸ್ ಅಸಲಿ ಆಟ ಈಗ ಶುರುಚೊಚ್ಚಲ ಕಪ್ ಗೆಲ್ತಾರಾ ಪಂಜಾಬ್?

ಫೈನಲಿ 18ನೇ ಸೀಸನ್​ ಐಪಿಎಲ್​ನ ಫೈನಲಿಸ್ಟ್​ ತಂಡಗಳು ಕನ್ಪರ್ಮ್ ಆಯ್ತು. 5 ಸಲ ಚಾಂಪಿಯನ್ ಮುಂಬೈ ತಂಡವನ್ನ ಬಗ್ಗು ಬಡಿದು ಪಂಜಾಬ್ ಕಿಂಗ್ಸ್ ಫಿನಾಲೆಗೆ ಲಗ್ಗೆ ಇಟ್ಟಿದೆ. ಮಳೆ ಕಣ್ಣಾಮುಚ್ಚಾಲೆ ಬಳಿಕ 2 ಗಂಟೆ ಲೇಟಾಗಿ ಸ್ಟಾರ್ಟ್ ಆದ್ರೂ ಪಂಜಾಬ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಪ್ಲ್ಯಾನ್ ವರ್ಕೌಟ್ ಆಯ್ತು.

ಇದನ್ನೂ ಓದಿ : ಮುಂಬೈ ವಿರುದ್ಧ ಪಂಜಾಬ್ ಕಿಂಗ್ಸ್‌ಗೆ ಜಯ – 11 ವರ್ಷದ ಬಳಿಕ ಫೈನಲ್‌ಗೆ ಎಂಟ್ರಿ

ಟಾಸ್ ಸೋತು ಬ್ಯಾಟಿಂಗ್​ ಆರಂಬಿಸಿದ ಮುಂಬೈ ಪರ ಆರಂಭಿಕಗಾಗಿ ರೋಹಿತ್ ಶರ್ಮಾ ಮತ್ತು ಬೈರ್‌ಸ್ಟೋವ್ ಇನ್ನಿಂಗ್ಸ್ ಆರಂಭಿಸಿದ್ರು. ಆದ್ರೆ ರೋಹಿತ್ 8 ರನ್​ಗಳಿಗೆ ಔಟಾಗಿ ನಿರಾಸೆ ಮೂಡಿಸಿದ್ರು. ಈ ವೇಳೆ ತಿಲಕ್ ವರ್ಮಾ ಕ್ರೀಸ್​ಗೆ ಬಂದಿದ್ದು ಬೈರ್​​ಸ್ಟೋವ್ ಜೊತೆ ಒಳ್ಳೆ ಜೊತೆಯಾಟವಾಡಿದ್ರು. ಪವರ್ ಪ್ಲೇ ವೇಳೆಗೆಲ್ಲಾ 65 ರನ್ಸ್ ಕಂಪ್ಲೀಟ್ ಮಾಡಿದ್ರು. ಬಟ್ ಬೈರ್​ಸ್ಟೋವ್ 38 ರನ್​ಗೆ ಔಟಾದ್ರು. ಇನ್ನು ತಿಲಕ್ ಹಾಗೇ ಸೂರ್ಯ ತಲಾ 44 ರನ್ಸ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ನಮನ್ ಧೀರ್ 37 ರನ್ ಗಳಿಸಿದ್ರು. ಸೋ 20 ಓವರ್ ಗಳಲ್ಲಿ 6 ವಿಕೆಟ್​ ನಷ್ಟಕ್ಕೆ ಮುಂಬೈ ತಂಡ 203 ರನ್​ ಕಲೆಹಾಕಿತು.

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 200 ರನ್​ಗಳಿಸಿ ಒಮ್ಮೆಯೂ ಸೋಲದ ತಂಡವಾಗಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಕೊನೆಗೂ ಸೋಲುಣಿಸುವಲ್ಲಿ ಪಂಜಾಬ್ ಕಿಂಗ್ಸ್ ತಂಡ ಯಶಸ್ವಿಯಾಗಿದೆ. ಅದು ಕೂಡ 19 ಓವರ್​ಗಳಲ್ಲಿ 203 ರನ್​ಗಳನ್ನು ಚೇಸ್ ಮಾಡಿ ಫಿನಾಲೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದೆ. ಆರಂಭದಲ್ಲಿ ವಿಕೆಟ್ಸ್ ಕಳ್ಕೊಂಡ್ರು ನಾಯಕ ಶ್ರೇಯಸ್ ಅಯ್ಯರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. 41 ಎಸೆತಗಳನ್ನು ಎದುರಿಸಿದ ಅಯ್ಯರ್ 8 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 87 ರನ್ ಬಾರಿಸಿದರು. ನೇಹಾಲ್ ವದೇರಾ ಕೂಡ 48 ರನ್ ಬಾರಿಸಿದ್ರು. ಈ ಮೂಲಕ ಪಂಜಾಬ್ ಕಿಂಗ್ಸ್ 19 ಓವರ್​ಗಳಲ್ಲಿ 207 ರನ್​ಗಳಿಸಿ 5 ವಿಕೆಟ್​ಗಳ ವಿಕ್ಟರಿಯೊಂದಿಗೆ ಫೈನಲ್ ತಲುಪಿದೆ. ಅದೂ ಕೂಡ 11 ವರ್ಷಗಳ ಬಳಿಕ. ಪಂಜಾಬ್ ಪಡೆ ಕೊನೆಯ ಬಾರಿ ಫೈನಲ್ ಆಡಿದ್ದು 2014 ರಲ್ಲಿ. ಇದೀಗ ದಶಕದ ಬಳಿಕ ಮತ್ತೊಮ್ಮೆ ಅಂತಿಮ ಪಂದ್ಯವಾಡಲು ಪಂಜಾಬ್ ಕಿಂಗ್ಸ್ ಸಜ್ಜಾಗಿದೆ.

ಈ ಸೀಸನ್​ನ ಬ್ಯೂಟಿ ಅಂದ್ರೆ ಇದೇ ನೋಡಿ. 2008ರಿಂದಲೂ ಐಪಿಎಲ್ ಆಡ್ತಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಗ್ಲಿ ಅಥವಾ ಪಂಜಾಬ್ ಆಗ್ಲಿ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಆದ್ರೀಗ ಉಭಯ ತಂಡಗಳು ಫಿನಾಲೆಗೆ ಲಗ್ಗೆ ಇಟ್ಟಿವೆ. ಸೋ ಜೂನ್ 3 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಈ ಎರಡು ತಂಡಗಳಲ್ಲಿ ಯಾರೇ ಗೆದ್ರೂ ಇತಿಹಾಸ ಸೃಷ್ಟಿಯಾಗುತ್ತೆ. ಇನ್ನೊಂದು ಅಚ್ಚರಿಯ ವಿಷ್ಯ ಅಂದ್ರೆ ಕ್ವಾಲಿಫೈಯರ್ 1ನಲ್ಲೇ ಈ ಉಭಯ ತಂಡಗಳು ಮುಖಾಮುಖಿಯಾಗಿದ್ವು. ಬಟ್ ಪಂದ್ಯದಲ್ಲಿ ಕಂಪ್ಲೀಟ್ ಡಾಮಿನೇಟ್ ಮಾಡಿದ್ದ ಆರ್​ಸಿಬಿ ಗೆದ್ದು ಸೀದಾ ಫೈನಲ್ ಟಿಕೆಟ್ ಪಡೆದಿತ್ತು. ಇದೀಗ ಕ್ವಾಲಿಫೈಯರ್ 2ನಲ್ಲಿ ಮುಂಬೈ ತಂಡವನ್ನ ಮಣಿಸಿ ಪಂಜಾಬ್ ಫೈನಲ್​ಗೆ ಲಗ್ಗೆ ಇಟ್ಟಿದೆ.

Shantha Kumari

Leave a Reply

Your email address will not be published. Required fields are marked *