RCBಯ ಚಿಲ್ ಬಾಯ್ ಸ್ವಸ್ತಿಕ್ ಚಿಕಾರ -1 ಪಂದ್ಯ.. 585 ರನ್.. ಎಂಥಾ ಟ್ಯಾಲೆಂಟ್?
ಕೊಹ್ಲಿ ನೆರಳು.. ಮತ್ತೊಬ್ಬ ಸಿರಾಜ್ ಆದ್ರಾ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಈ ಸೀಸನ್ನಲ್ಲಿ ಅತ್ಯದ್ಭುತ ಪ್ರದರ್ಶನಗಳನ್ನೇ ನೀಡಿದೆ. ಕೊಲ್ಕತ್ತಾ ವಿರುದ್ಧದ ಉದ್ಘಾಟನಾ ಪಂದ್ಯದಿಂದ ಹಿಡ್ದು ಲಕ್ನೋ ವಿರುದ್ಧದ ಲೀಗ್ ಹಂತದ ಕೊನೇ ಪಂದ್ಯದವರೆಗೂ ರೆಡ್ ಆರ್ಮಿ ಸಾಲಿಡ್ ಫಾರ್ಮ್ನಲ್ಲಿದೆ. ಈ ಇಡೀ ಸೀಸನ್ನಲ್ಲಿ ಆರ್ಸಿಬಿ ಒಂದು ಸಲನೂ ಬ್ಯಾಕ್ ಟು ಬ್ಯಾಕ್ ಮ್ಯಾಚ್ ಸೋತಿಲ್ಲ. ಹಾಗೇ ಅವೇ ಪಿಚ್ನಲ್ಲಿ ಯಾರ ವಿರುದ್ಧವೂ ಸೋಲೊಪ್ಪಿಕೊಂಡಿಲ್ಲ. ಅಂದ್ರೆ ಆರ್ಸಿಬಿಯ ಪ್ಲೇಯಿಂಗ್ 11 ಬ್ಯಾಲೆನ್ಸ್ಡ್ ಆಗಿದೆ. ಸೋ ನಿರೀಕ್ಷೆಯಂತೆಯೇ ರಿಸಲ್ಟ್ ಬರ್ತಿದೆ. ಅದ್ರಲ್ಲಿ ಎರಡು ಮಾತಿಲ್ಲ. ಇದೇ ಕಾರಣಕ್ಕೆ ಸಾಕಷ್ಟು ಪ್ರತಿಭಾವಂತ ಪ್ಲೇಯರ್ಸ್ ಈಗ್ಲೂ ಬೆಂಚ್ ಕಾಯ್ತಿದ್ದಾರೆ. ಅದ್ರಲ್ಲಿ ಈ ಸ್ವಸ್ತಿಕ್ ಚಿಕಾರ ಕೂಡ ಒಬ್ರು.
ಇದನ್ನೂ ಓದಿ : RCB Vs PBKS.. ಯಾರಿಗೆ ಫೈನಲ್ – ರೆಡ್ ಆರ್ಮಿ ಅಸ್ತ್ರವಾಗ್ತಾರಾ ಸೈಫರ್ಟ್?
ಆರ್ಸಿಬಿ ಕ್ಯಾಂಪ್ನಲ್ಲಿರೋ ಯಂಗ್ ಸ್ಟರ್ ಸ್ವಸ್ತಿಕ್ ಚಿಕಾರಗೆ ಇದುವರೆಗೂ ಒಂದೇ ಒಂದು ಪಂದ್ಯದಲ್ಲೂ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಸಿಕ್ಕಿಲ್ಲ. ಬಟ್ ಅವ್ರೊಬ್ಬ ಪ್ರತಿಭಾವಂತ ಪ್ಲೇಯರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. 19 ವರ್ಷದ ಸ್ವಸ್ತಿಕ್ ಚಿಕಾರ ಅವರನ್ನು ಐಪಿಎಲ್ ಹರಾಜಿನಲ್ಲಿ ಆರ್ ಸಿಬಿ ಫ್ರಾಂಚೈಸಿ ₹30 ಲಕ್ಷ ರೂಪಾಯಿಗೆ ಖರೀದಿ ಮಾಡಿತ್ತು. ಬಟ್ ಚಿಕಾರ 14ನೇ ವಯಸ್ಸಿನಿಂದಲೇ ಕ್ರಿಕೆಟ್ನಲ್ಲಿ ಸೌಂಡ್ ಮಾಡ್ತಿದ್ದಾರೆ. ಅದ್ರಲ್ಲೂ ಒಂದು ಮ್ಯಾಚಲ್ಲಿ 167 ಎಸೆತಗಳಲ್ಲಿ 55 ಬೌಂಡರಿ ಮತ್ತು 52 ಸಿಕ್ಸರ್ಗಳೊಂದಿಗೆ 585 ರನ್ ಚಚ್ಚಿದ್ರು. 2019ರ ಡಿಸೆಂಬರ್ನಲ್ಲಿ ಗೋರಖ್ಪುರದ ಎಸಿಇ ಕ್ರಿಕೆಟ್ ಅಕಾಡೆಮಿ ವಿರುದ್ಧದ 40 ಓವರ್ಗಳ ಪಂದ್ಯದಲ್ಲಿ ಮಹಿ ಕ್ರಿಕೆಟ್ ಅಕಾಡೆಮಿ ಪರ ಕಣಕ್ಕಿಳಿದು ಈ ದಾಖಲೆ ಬರೆದಿದ್ರು. ಚಿಕಾರ ಅವ್ರ ಈ ಅದ್ಭುತ ಇನ್ನಿಂಗ್ಸ್ ಮೂಲಕ ಇವ್ರ ತಂಡ ಬರೋಬ್ಬರಿ 704 ರನ್ ಕಲೆ ಹಾಕಿತ್ತು. ಬಳಿಕ ಈ ಪಂದ್ಯವನ್ನ 355 ರನ್ಗಳ ಬೃಹತ್ ಅಂತರದಿಂದ ಗೆದ್ದುಕೊಂಡಿದ್ರು. ಅಲ್ದೇ 2024ರಲ್ಲಿ ಯುಪಿ ಟಿ-20 ಲೀಗ್ನಲ್ಲಿ 12 ಪಂದ್ಯಗಳಿಂದ 499 ರನ್ಸ್ ಕಲೆ ಹಾಕಿದ್ರು.
ಅಸಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ಯಾಂಪ್ ಸೇರುವ ಮುನ್ನ ಸ್ವಸ್ತಿಕ್ ಚಿಕಾರ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಭಾಗವಾಗಿದ್ದರು. ಬಟ್ ಆಡೋಕೆ ಅವಕಾಶ ಸಿಕ್ಕಿರಲಿಲ್ಲ. ಹೀಗಿರುವಾಗ್ಲೇ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್ಸಿಬಿ ಅವರನ್ನು ₹30 ಲಕ್ಷ ರೂಪಾಯಿಗೆ ಖರೀದಿ ಮಾಡಿತ್ತು. ಬಟ್ ಇವ್ರ ಹರಾಜು ಪ್ರಕ್ರಿಯೆ ವಿವಾದಕ್ಕೆ ಕಾರಣವಾಗಿತ್ತು. ಯಾಕಂದ್ರೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಚಿಕಾರಾ ಅವರನ್ನು ಬಿಡ್ ಮಾಡಲು ಪ್ಯಾಡಲ್ ಎತ್ತಿದೆ ಎಂದು ಹೇಳಿಕೊಂಡಿತ್ತು. ಆದರೆ ಹರಾಜುದಾರರು ಅದನ್ನು ಗಮನಿಸಲಿಲ್ಲ. ಈ ಪ್ರಕ್ರಿಯೆಯ ಸಮಯದಲ್ಲಿ ತಮ್ಮ ಬಿಡ್ ಅನ್ನು ನಿರ್ಲಕ್ಷಿಸಲಾಗಿದೆ ಎಂದು ಫ್ರಾಂಚೈಸ್ ಆರೋಪಿಸಿತ್ತು. ಬಟ್ ಅಷ್ಟ್ರಲ್ಲಾಗ್ಲೇ ಚಿಕಾರ ಆರ್ ಸಿಬಿ ತೆಕ್ಕೆಗೆ ಜಾರಿಯಾಗಿತ್ತು.
ಇನ್ನು ಆರ್ಸಿಬಿ ಕ್ಯಾಂಪ್ನಲ್ಲಿ ಸಾಕಷ್ಟು ಪ್ಲೇಯರ್ಸ್ ಬೆಂಚ್ ಕಾಯ್ತಿದ್ರೂ ಕೂಡ ಚಿಕಾರ ಮಾತ್ರ ಆಗ್ಗಾಗ್ಗೆ ಸದ್ದು ಮಾಡ್ತಿದ್ದಾರೆ. ಅದಕ್ಕೆ ಕಾರಣ ವಿರಾಟ್ ಕೊಹ್ಲಿ. ಕ್ರಿಕೆಟ್ ಜಗತ್ತು ಕಂಡ ಲೆಜೆಂಡರಿ ಪ್ಲೇಯರ್ ವಿರಾಟ್ ಕೊಹ್ಲಿ. ಅವ್ರು ಬೇರೆಯವ್ರಿಗೆ ಎಷ್ಟೇ ಕೀಟಲೆ ಮಾಡಿದ್ರೂ ಬೇರೆಯವ್ರು ಯಾರು ಕೊಹ್ಲಿ ಜೊತೆ ಚೇಷ್ಟೆ ಮಾಡೋಕೆ ಹೋಗಲ್ಲ. ಬಟ್ ಸ್ವಸ್ತಿಕ್ ಚಿಕಾರ ಮಾತ್ರ ಇದಕ್ಕೆ ಡೆಡ್ ಆಪೋಸಿಟ್. ಅದ್ರಲ್ಲೂ ಆರ್ಸಿಬಿ ಕ್ಯಾಂಪ್ನಲ್ಲಿ ಕೊಹ್ಲಿ ಆನ್ಫೀಲ್ಡ್, ಆಫ್ ದಿ ಫೀಲ್ಡ್ನಲ್ಲಿ ನೆರಳು ಇಲ್ಲದೆ ಇದ್ರೂ ಚಿಕಾರ ಮಾತ್ರ ಅವ್ರ ಹಿಂದೆಯೇ ಇರ್ತಾರೆ. ಅದೆಷ್ಟರ ಮಟ್ಟಿಗೆ ಅಂದ್ರೆ ಆರ್ಸಿಬಿ ಪಂದ್ಯಗಳಲ್ಲಿ ಫೀಲ್ಡಿಂಗ್ ಟೈಮಲ್ಲಿ ಕೊಹ್ಲಿ ಬೌಂಡರಿ ಲೈನ್ಗಳ ಬಳಿಯೇ ಫೀಲ್ಡಿಂಗ್ ಮಾಡ್ತಾರೆ. ಇಂಥಾ ಟೈಮಲ್ಲಿ ಕೊಹ್ಲಿ ಹಿಂದೆಯೇ ಬೌಂಡರಿ ಲೈನಿಂದ ಆಚೆ ವಾಟರ್ ಬಾಟೆಲ್ ಹಿಡಿದು ಚಿಕಾರ ನಿಂತೇ ಇರ್ತಾರೆ. ಕೊಹ್ಲಿ ಕೂಡ ಆಟದ ಮಧ್ಯೆ ಚಿಕಾರ ಬಳಿ ಹೋಗಿ ಮಾತಾಡ್ತಾ ಇರ್ತಾರೆ. ಸೋ ನೀವು ಕೂಡ ಇದನ್ನ ನೋಟಿಸ್ ಮಾಡೇ ಇರ್ತೀರಾ.
ಆಫ್ ದಿ ಫೀಲ್ಡ್ನಲ್ಲೂ ಇವ್ರಿಬ್ಬರ ಬಾಂಡಿಂಗ್ ಹೀಗೇ ಕಂಟಿನ್ಯೂ ಆಗ್ತಾ ಇದೆ. ಡ್ರೆಸ್ಸಿಂಗ್ ರೂಮ್ನಲ್ಲಿ ಕೊಹ್ಲಿ ಜೊತೆ ಚೇಷ್ಟೆ ಮಾಡೋ ಚಿಕಾರ ಒಂದ್ಸಲ ಅವ್ರ ಪರ್ಮಿಷನ್ ಕೂಡ ಪಡೆಯದೇ ಬ್ಯಾಗ್ನಿಂದ ಪರ್ಫ್ಯೂಮ್ ತಗೊಂಡು ಯೂಸ್ ಮಾಡಿದ್ರು. ಚಿಕಾರ ವರ್ತನೆಗೆ ಇತರೆ ಆಟಗಾರರು ಶಾಕ್ ಆಗಿದ್ರು. ಯಾಕಂದ್ರೆ ಕೊಹ್ಲಿ ವಿಚಾರದಲ್ಲಿ ಯಾರೂ ಕೂಡ ಈ ಥರ ಕೀಟಲೆ ಮಾಡೋಕೆ ಹೋಗಲ್ಲ. ಅದೂ ಅಲ್ದೇ ಕಳೆದ ಏಪ್ರಿಲ್ 30ರಂದು ಚಿಕಾರ ಬರ್ತಡೇ ಸೆಲೆಬ್ರೇಟ್ ಮಾಡ್ಲಾಗಿತ್ತು. ಈ ಟೈಮಲ್ಲಿ ಕೊಹ್ಲಿ ಕೇಕ್ ತಿನ್ನಿಸುವಾಗ ಚಿಕಾರ ಕೊಹ್ಲಿ ಬೆರಳುಗಳನ್ನ ಕಚ್ಚಿ ಹಾಗೇ ಇದ್ರು. ಈ ವೇಳೆ ಕೊಹ್ಲಿ ನಗುತ್ತಲೇ ನನ್ನ ಬೆರಳಾದ್ರೂ ಬಿಡಪ್ಪ ಅಂದಿದ್ರು. ಈ ಟೈಮಲ್ಲಿ ಡ್ರೆಸ್ಸಿಂಗ್ ರೂಮ್ನಲ್ಲಿ ಎಲ್ಲರಿಗೂ ನಗುವೇ ನಗು. ಇಷ್ಟಕ್ಕೇ ಸುಮ್ಮನಾಗದ ಚಿಕಾರ ನನ್ನ ಬರ್ತಡೆಗೆ ವಿರಾಟ್ ಭಾಯ್ ಒಂದೆರಡು ನಿಮ್ಮ ವಾಚ್ ಗಿಫ್ಟ್ ಕೊಡಿ ಅಂತಾ ಓಪನ್ ಆಗೇ ಕೇಳಿದ್ರು. ಸೋ ಚಿಕಾರ ಮೈದಾನಕ್ಕೆ ಇಳಿಯದೇ ಇದ್ರೂ ಈ ರೀತಿ ವಿಚಾರಗಳಿಂದ ಸದ್ದು ಮಾಡ್ತಿದ್ದಾರೆ. ಅಲ್ದೇ ವಿರಾಟ್ ಅಕ್ಕಪಕ್ಕವೇ ಶಾಡೋ ಥರ ಸುತ್ತಾಡೋ ಚಿಕಾರರನ್ನ ಕೆಲವ್ರು ಮೊಹಮ್ಮದ್ ಸಿರಾಜ್ ಅವ್ರ ಎರಡನೇ ವರ್ಷನ್ ಅಂತಿದ್ದಾರೆ.

ನೋಡಿರಿ

