ಸೈನಿಕನಾಗಲು ಹೊರಟಿದ್ದೇಕೆ ಜಿತೇಶ್ – 4% ಮಾರ್ಕ್ಗಾಗಿ ಕ್ರಿಕೆಟ್ಗೆ ಎಂಟ್ರಿ
ಡಿಕೆ ಕಣ್ಣಿಗೆ ಬಿದ್ದಿದ್ದೇಗೆ ಬಿಗ್ ಹಿಟ್ಟರ್

ಜಿತೇಶ್ ಶರ್ಮಾ RCB ಪರ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಅದು ಸಹ ಬರೋಬ್ಬರಿ 227 ರನ್ಗಳ ಗುರಿಯನ್ನು ಬೆನ್ನತ್ತುವ ಮೂಲಕ. ಆರ್ಸಿಬಿ ತಂಡಕ್ಕೆ ಕಳೆದ 17 ವರ್ಷಗಳಲ್ಲಿ 210 ಕ್ಕಿಂತ ಹೆಚ್ಚಿನ ರನ್ ಚೇಸ್ ಮಾಡಿ ಗೆದ್ದ ಇತಿಹಾಸವಿರಲಿಲ್ಲ. ಆದರೆ ಈ ಬಾರಿ ಹೊಸ ಇತಿಹಾಸ ಬರೆಯುವಲ್ಲಿ ಜಿತೇಶ್ ಶರ್ಮಾ ಯಶಸ್ವಿಯಾಗಿದ್ದಾರೆ.
ಜಿತೇಶ್ ಶರ್ಮಾ ಅವರು ಮಹಾರಾಷ್ಟ್ರದ ಅಮರಾವತಿಯವರು. ಆರ್ಸಿಬಿಗೆ ಬರೋ ಮುಂಚೆ ಇವರು ಪಂಜಾಬ್ ಕಿಂಗ್ಸ್ನಲ್ಲಿದ್ರು. ಹೀಗಾಗಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ಯುವ ವಿಕೆಟ್ ಕೀಪರ್ನನ್ನು ಈ ಬಾರಿ ಆರ್ಸಿಬಿ ಆಯ್ಕೆ ಮಾಡಿಕೊಂಡಿತ್ತು. ಇವರನ್ನ ಕೇವಲ ವಿಕೆಟ್ ಕೀಪರ್ ಅಂತ ಆಯ್ಕೆ ಮಾಡಿಕೊಂಡಿಲ್ಲ. ಜಿತೇಶ್ ಶರ್ಮಾ ಅವರನ್ನು ಆಯ್ಕೆ ಮಾಡಲು ಮುಖ್ಯ ಕಾರಣ ಇವರ ಸಖತ್ ಆಗಿ ಸಿಕ್ಸ್ ಬಾರಿಸುವ ಸಾಮರ್ಥ್ಯ ಹೊಂದಿದ್ದಕ್ಕೆ. ಸಿಚುವೇಷನ್ ಹೇಗ್ ಬೇಕಾದ್ರೂ ಇರಲಿ. ಎಂತಹ ಟೈಂನಲ್ಲಿ ಬೇಕಾದ್ರೂ ಸಿಕ್ಸ್ ಸಿಡಿಸುವ ಕಲೆ ಜಿತೇಶ್ ಶರ್ಮಾಗಿದೆ.. ಈ ಸಲ ಆರ್ಸಿಬಿ ಕೂಡ ವಿಕೆಟ್ ಕೀಪರ್ ಬ್ಯಾಟರ್ನ ಹುಡುಕಾಟದಲ್ಲಿತ್ತು. ಈ ವೇಳೆ ದಿನೇಶ್ ಕಾರ್ತಿಕ್ ಕಣ್ಣಿಗೆ ಬಿದ್ದವನೇ ಜಿತೇಶ್ ಶರ್ಮಾ.
ಜಿತೇಶ್ ಶರ್ಮಾ ಬಿಗ್ ಹಿಟ್ಗಳ ಮೂಲಕ ಪಂದ್ಯ ಗೆಲ್ಲಿಸಿಕೊಡಬಲ್ಲ ಆಟಗಾರ. ಹಾಗಾಗಿ ನಾವು ಆತನಿಗಾಗಿ ಬಿಡ್ ಮಾಡಿದ್ದೇವೆ ಎಂದು ದಿನೇಶ್ ಕಾರ್ತಿಕ್ ಹೇಳಿಕೊಂಡಿದ್ರು. ದಿನೇಶ್ ಕಾರ್ತಿಕ್ ಅವರ ಮಾತು ಈಗ ಆರ್ಸಿಬಿ ಫ್ಯಾನ್ಸ್ಗೆ ನಿಜ ಎನಿಸುತ್ತಿದೆ. ಎಲ್ಸಿಜಿ ವಿರುದ್ದ ಜಿತೇಶ್ ಕೇವಲ 33 ಎಸೆತಗಳಲ್ಲಿ ಅಜೇಯ 85 ರನ್ಗಳನ್ನು ಬಾರಿಸುವ ಮೂಲಕ ತನ್ನ ತಾಕತ್ತು ತೋರಿಸಿದ್ದಾರೆ.
ಕ್ರಿಕೆಟರ್ ಆಗಿಲ್ಲ ಅಂದಿದ್ರೆ ಸೈನಿಕ ಆಗುತ್ತಿದ್ದ ಜಿತೇಶ್
ಈ ಜಿತೇಶ್ ಶರ್ಮಾ ಚಿಕ್ಕವನು ಇದ್ದಾಗ ಕ್ರಿಕೆಟರ್ ಆಗಬೇಕು ಅಂತ ಕನಸು ಇರಲಿಲ್ಲ ಅಂತೆ.. ಇವರಿಗೆ ಇದ್ದ ಕನಸು ನಾನು ದೇಶ ಸೇವೆ ಮಾಡಬೇಕು.. ದೇಶವನ್ನ ಕಾಯಬೇಕು ಅಂತ.. ಅಂದ್ರೆ ಸೈನಿಕನಾಗಬೇಕು ಅನ್ನೋ ಕನಸನ್ನ ಜಿತೇಶ್ ಶರ್ಮಾ ಹೊಂದಿದ್ರು. ಸೇನೆಗ ಸೇರುವ ಗುರಿ ಇತ್ತು. ಇದ್ರ ಜೊತೆ ಟೈಂ ಪಾಸಿಗಾಗಿ ಕ್ರಿಕೆಟ್ ಆಡುತ್ತಿದ್ದರು ಜಿತೇಶ್ ಶರ್ಮಾ.. ಅಲ್ಲದೇ ಪಿಯುಸಿ ಪಾಸ್ ಆದ ನಂತ್ರ ಭಾರತೀಯ ಸೇನೆಗೆ ಸೇರಲು ಎನ್ಡಿಎ ಸೇರುವುದು ಅವರ ಗುರಿಯಾಗಿತ್ತು. ಆದ್ರೆ ಆದರೆ ಮಹಾರಾಷ್ಟ್ರ ರಾಜ್ಯ ಮಂಡಳಿಯು ರಾಜ್ಯ ಮಟ್ಟದಲ್ಲಿ ಕ್ರೀಡೆಗಳನ್ನು ಆಡುವ ವಿದ್ಯಾರ್ಥಿಗಳಿಗೆ 4% ಹೆಚ್ಚಿನ ಅಂಕಗಳನ್ನು ನೀಡುತ್ತಿದ್ದರು. ಅದರಂತೆ ಶೇ.4 ರಷ್ಟು ಹೆಚ್ಚುವರಿ ಅಂಕ ಪಡೆಯೋಕೆ ಕ್ರಿಕೆಟ್ ಮೈದಾನಕ್ಕೆ ಗೊಂದಲದಲ್ಲೇ ಇಳಿದಿದ್ರು.
ಆಕಸ್ಮಿಕವಾಗಿ ವಿಕೆಟ್ ಕೀಪರ್ ಆದ ಜಿತೇಶ್ ಶರ್ಮಾ
ಇನ್ನೂ ಸ್ಪೋರ್ಟ್ಸ್ ಫಾರ್ಮ್ನಲ್ಲಿ ಜಿತೇಶ್ ಶರ್ಮಾ ಬ್ಯಾಟರ್/ಬೌಲರ್ ಅಥವಾ ವಿಕೆಟ್ ಕೀಪರ್ ಎಂಬುದನ್ನು ಭರ್ತಿ ಮಾಡಲೇಬೇಕಿತ್ತು. ಈ ವೇಳೆ ವಿಕೆಟ್ ಕೀಪರ್ ಪಟ್ಟಿಯಲ್ಲಿ ಕೇವಲ ಮೂವರ ಹೆಸರುಗಳು ಮಾತ್ರ ಕಾಣಿಸಿದ್ದವು. ಹೀಗಾಗಿ ಜಿತೇಶ್ ಶರ್ಮಾ ಇಲ್ಲೇ ಮೂರು ಹೆಸರು ಮಾತ್ರ ಇದೆ. ನಂದೂ ಒಂದು ಇರ್ಲಿ ಅಂತ ವಿಕೆಟ್ ಕೀಪರ್ ಅಂತ ಬರೆದಿದ್ರು. ಅಲ್ಲಿಂದ ಜಿತೇಶ್ ಶರ್ಮಾ ಜೀವನವೇ ಫುಲ್ ಚೇಂಜ್ ಆಯ್ತು. ಸೈನ್ಯಕ್ಕೆ ಸೇರುವ ಆಸೆ ಹೊತ್ತಿದ್ದ ಜಿತೇಶ್ ಕ್ರಿಕೆಟ್ ಹುಚ್ಚು ಹಿಡಿತು. ಹಿರಿಯ ಆಟಗಾರರಿಂದ ಹಾಗೂ ಯೂಟ್ಯೂಬ್ ನೋಡಿ ಕ್ರಿಕೆಟ್ ಅನ್ನು ಕರಗತ ಮಾಡಿದ್ರು. ಆಮೇಲೆ ಜಿತೇಶ್ ಶರ್ಮಾ ಸ್ಟಾರ್ ಬದಲಾಗಿ ಹೋಯ್ತು.
2014 ರಲ್ಲಿ ದೇಶೀಯ ಕ್ರಿಕೆಟ್ಗೆ ಎಂಟ್ರಿ
ಇನ್ನು ಜಿತೇಶ್ 2014 ರಲ್ಲಿ ವಿದರ್ಭ ಪರ ದೇಶೀಯ ಕ್ರಿಕೆಟ್ನಲ್ಲಿ ಪಾದಾರ್ಪಣೆ ಮಾಡಿದರು. ಅದೇ ವರ್ಷ, ವಿಜಯ್ ಹಜಾರೆ ಟ್ರೋಫಿಯಲ್ಲಿ ಪಾದಾರ್ಪಣೆ ಮಾಡುವ ಅವಕಾಶವನ್ನು ಪಡೆದರು. 2015 ರಲ್ಲಿ ತಮ್ಮ ಮೊದಲ ಪ್ರಥಮ ದರ್ಜೆ ಪಂದ್ಯವನ್ನು ಸಹ ಆಡಿದರು. ವಿದರ್ಭ ಪರ ಆರಂಭಿಕನಾಗಿ ಬ್ಯಾಟಿಂಗ್ ಮಾಡುವಾಗ, ಜಿತೇಶ್ ತುಂಬಾ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಈ ಆಕ್ರಮಣಕಾರಿ ಬ್ಯಾಟಿಂಗ್ ಐಪಿಎಲ್ ಎಂಟ್ರಿಗೆ ದಾರಿ ಮಾಡಿಕೊಟ್ಟಿತ್ತು.
2017 ರ ಐಪಿಎಲ್ಗಾಗಿ ಜಿತೇಶ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಯ್ಕೆಯಾದರು. ಈ ವೇಳೆ ಅವರ ವಯಸ್ಸು ಕೇವಲ 23 ವರ್ಷಗಳು ಮಾತ್ರ. ಆ ಬಳಿಕ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಯಾದರು. ಪಂಜಾಬ್ ಪರ ಸ್ಪೋಟಕ ಬ್ಯಾಟಿಂಗ್ನೊಂದಿಗೆ ಗಮನ ಸೆಳೆದರು. ಈ ಭರ್ಜರಿ ಪ್ರದರ್ಶನದ ಫಲವಾಗಿ 2023 ರಲ್ಲಿ ಟೀಮ್ ಇಂಡಿಯಾಗೆ ಆಯ್ಕೆಯಾದರು. ಆ ಬಳಿಕ ಭಾರತ ಟಿ20 ತಂಡದಿಂದ ಹೊರಬಿದ್ದ ಜಿತೇಶ್ ಶರ್ಮಾ ಅವರ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕಣ್ಣಿಟ್ಟಿತು. ಅದರಂತೆ ಈ ಬಾರಿಯ ಐಪಿಎಲ್ನಲ್ಲಿ ಜಿತೇಶ್ ಶರ್ಮಾ ಅವರನ್ನು ಬರೋಬ್ಬರಿ 11 ಕೋಟಿ ರೂ. ನೀಡಿ ತನ್ನ ತೆಕ್ಕೆಗೆ ತೆಗೆದುಕೊಳ್ತು. ಈ ಸೀಸನ್ನಲ್ಲಿ ಜಿತೇಶ್ ಆರ್ಸಿಬಿ ತಂಡದ ಖಾಯಂ ವಿಕೆಟ್ ಕೀಪರ್ ಆಗಿ ಕಣಕ್ಕಿಳಿದಿದ್ದು, ತುಂಬಾ ಮುಖ್ಯವಾದ ಪಂದ್ಯವನ್ನ ಗೆಲ್ಲಿಸಿಕೊಟ್ಟು ಆರ್ಸಿಬಿ ಫ್ಯಾನ್ಸ್ ಹೃದಯವನ್ನ ಗೆದ್ದಿದ್ದಾರೆ. ಒಟ್ಟಿನಲ್ಲಿ ಇಂಡಿಯನ್ ಆರ್ಮಿ ಸೇರಲು ಹೊರಟಿದ್ದ ಹುಡುಗ ಇದೀಗ ರೆಡ್ ಆರ್ಮಿ ಪರ ಕಣಕ್ಕಿಳಿಯುತ್ತಿದ್ದಾರೆ. ಈ ಸಲ ಆರ್ಸಿಬಿಗೆ ಕಪ್ ಗೆಲ್ಲಿಸಿಕೊಡುವುದೇ ನನ್ನ ಗುರಿ ಅಂತ ಜಿತೇಶ್ ಶರ್ಮಾ ಪಣ ತೊಟ್ಟದ್ದಾರೆ.

ನೋಡಿರಿ

