ಸೋಶಿಯಲ್ ಮೀಡಿಯಾಗೆ ದೀಪಿಕಾ ದಾಸ್ ಗುಡ್ಬೈ! – ನಟಿ ಈ ನಿರ್ಧಾರಕ್ಕೆ ಕಾರಣವೇನು?

ಬಿಗ್ ಬಾಸ್ ಕನ್ನಡ ಸೀಸನ್ 7 ಸ್ಪರ್ಧಿ ದೀಪಿಕಾ ದಾಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್. ಆಗಾಗ ತಮ್ಮ ಫೋಟೋ ರೀಲ್ಸ್ ಪೋಸ್ಟ್ ಮಾಡ್ತಾ ಇರ್ತಾರೆ. ಆದ್ರೀಗ ದೀಪಿಕಾ ತಮ್ಮ ಫ್ಯಾನ್ಸ್ಗೆ ಶಾಕ್ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬ್ರೇಕ್ ತೆಗೆದುಕೊಳ್ಳೋದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಸಂಜೆ ಪಾಕ್- ಭಾರತ ಗಡಿಯಲ್ಲಿರೋ ನಾಲ್ಕು ರಾಜ್ಯದಲ್ಲಿ ನಾಳೆ ಮಾಕ್ ಡ್ರಿಲ್
ನಟಿ ದೀಪಿಕಾ ದಾಸ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರ್ತಾರೆ. ಒಂದಾದ ಮೇಲೊಂದು ಫೋಟೋ, ವಿಡಿಯೋ ಶೇಕ್ ಮಾಡ್ತಿರ್ತಾರೆ. ಆದ್ರೀಗ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ, ನಾನು ಸೋಷಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ. ಧನ್ಯವಾದಗಳು ಎಂದು ನಟಿ ಬರೆದುಕೊಂಡಿದ್ದಾರೆ. ದಿಢೀರ್ ಎಂದು ನಟಿ ಹೀಗೆ ಪೋಸ್ಟ್ ಮಾಡಿದ್ದೇಕೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಕೆಲವರು ಕಾಮೆಂಟ್ ಬಾಕ್ಸ್ನಲ್ಲಿ ಏನಾದರೂ ಗುಡ್ ನ್ಯೂಸ್ ಕೊಡ್ತಿದ್ದೀರಾ, ತಾಯಿ ಆಗಿದ್ದೀರಾ ಎಂದು ನೇರವಾಗಿಯೇ ಪ್ರಶ್ನಿಸಿದ್ದಾರೆ. ನಟಿಗೆ ಏನಾಯ್ತು ಎಂದು ಕೆಲವರು ತಲೆ ಕೆಡಿಸಿಕೊಂಡಿದ್ದಾರೆ.
ಈ ವರ್ಷ ಜನವರಿ 31ರಂದು ದೀಪಿಕಾ ದಾಸ್ ನಟನೆಯ ಪಾರು ಪಾರ್ವತಿ ಸಿನಿಮಾ ರಿಲೀಸ್ ಆಗಿತ್ತು. ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
ನಾಗಿಣಿ, ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಅವರು ಉದ್ಯಮಿ ದೀಪಕ್ ಜೊತೆ ಕಳೆದ ವರ್ಷ ಮಾರ್ಚ್ನಲ್ಲಿ ಹಸೆಮಣೆ ಏರಿದರು. ಕುಟುಂಬಸ್ಥರ ಸಮ್ಮುಖದಲ್ಲಿ ಗೋವಾದಲ್ಲಿ ಅದ್ಧೂರಿಯಾಗಿ ಮದುವೆಯಾದರು.

ನೋಡಿರಿ

