ರಾಮನಗರದಿಂದ ಶ್ರೀರಾಮನಿಗೆ ಬೆಳ್ಳಿ ಇಟ್ಟಿಗೆ ಸಮರ್ಪಣೆ

ರಾಮನಗರ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ರಾಮಮಂದಿರ ನಿರ್ಮಾಣಕ್ಕೆ ವಿವಿಧೆಡೆಯಿಂದ ಬೆಳ್ಳಿ ಇಟ್ಟಿಗೆಗಳನ್ನು ಅರ್ಪಿಸಲಾಗುತ್ತಿದೆ. ಇದೀಗ ರಾಮನಗರದಿಂದಲೂ ಬೆಳ್ಳಿ ಇಟ್ಟಿಗೆಯನ್ನು ರಾಮಮಂದಿರಕ್ಕೆ ಅರ್ಪಿಸಲಾಗುತ್ತಿದೆ. ಡಿಸೆಂಬರ್ 12ರಂದು ಸೋಮವಾರ ಬೆಳ್ಳಿ ಇಟ್ಟಿಗೆಗೆ ವಿಶೇಷ ಪೂಜೆ ನೆರವೇರಿಸಲಾಗಿದೆ.
ಇದನ್ನೂ ಓದಿ: ಟ್ವಿಟ್ಟರ್ನಲ್ಲಿ ಅಕ್ಷರ ಮಿತಿ ಹೆಚ್ಚಳ – ಎಲಾನ್ ಮಸ್ಕ್ ಹೇಳಿದ್ದೇನು?
ರಾಮನಗರದಲ್ಲಿರುವ ಕೆಂಗಲ್ ಆಂಜನೇಯ ದೇವಾಲಯ ಮತ್ತು ರಾಮದೇವರ ಬೆಟ್ಟದಲ್ಲಿ ಬೆಳ್ಳಿ ಇಟ್ಟಿಗೆಗೆ ಪೂಜೆ ಸಲ್ಲಿಸಲಾಯಿತು. ಈ ವೇಳೆ ಮಾಜಿ ಸಚಿವ ಸಿ.ಪಿ ಯೋಗೇಶ್ವರ್, ಬಿಜೆಪಿ ಮುಖಂಡ ಗೌತಮ್ ಗೌಡ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು. ಬಿಜೆಪಿ ಮುಖಂಡ ಗೌತಮ್ ಗೌಡ ನೇತೃತ್ವದಲ್ಲಿ 150 ಮಂದಿ ಶ್ರೀರಾಮ ಭಕ್ತರು ಅಯೋಧ್ಯೆಗೆ ತೆರಳಿ ಬೆಳ್ಳಿ ಇಟ್ಟಿಗೆ ಸಮರ್ಪಿಸಲು ನಿರ್ಧರಿಸಿದ್ದಾರೆ.
ಈ ವೇಳೆ ಮಾತನಾಡಿರುವ ಮಾತನಾಡಿದ ಮಾಜಿ ಸಚಿವ ಸಿ.ಪಿ ಯೋಗೇಶ್ವರ್, ರಾಮನಗರ ಭಕ್ತಾಧಿಗಳಿಂದ ಬೆಳ್ಳಿಯ ಇಟ್ಟಿಗೆ ನೀಡಲಾಗುತ್ತಿದೆ. ಈಗಾಗಲೇ ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಆದಷ್ಟು ಬೇಗ ನಿರ್ಮಾಣ ಕಾರ್ಯ ಮುಗಿದು ರಾಮನ ದರ್ಶನವಾಗಲಿ ಎನ್ನುವುದು ರಾಮ ಭಕ್ತರ ಆಶಯ ಎಂದರು. ಈಗಾಗಲೇ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಗರ್ಭಗುಡಿಯ ಮೊದಲ ಮಹಡಿಯ ನಿರ್ಮಾಣವೂ ಬಹುತೇಕ ಪೂರ್ಣವಾಗಿದೆ ಎನ್ನಲಾಗುತ್ತಿದೆ.