ಪ್ರಾರ್ಥನೆ ಫಲಿಸಲಿಲ್ಲ – ಬದುಕಿನ ಪಯಣ ಮುಗಿಸಿದ ನಟ ಶ್ರೀಧರ್‌ ನಾಯ್ಕ್

ಪ್ರಾರ್ಥನೆ ಫಲಿಸಲಿಲ್ಲ – ಬದುಕಿನ ಪಯಣ ಮುಗಿಸಿದ ನಟ ಶ್ರೀಧರ್‌ ನಾಯ್ಕ್

ಸ್ಯಾಂಡಲ್‌ವುಡ್ ನಟ ಶ್ರೀಧರ್ ನಾಯಕ್ (47) ಅವರು ಮೇ 26ರ ತಡರಾತ್ರಿ ನಿಧನ ಹೊಂದಿದ್ದಾರೆ.‌ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಧರ್ ನಾಯಕ್ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

ಇದನ್ನೂ ಓದಿ: ಮುಂಬೈಗೆ ಬಿಗ್ ಶಾಕ್ ನೀಡಿದ ಪಂಜಾಬ್ ಕಿಂಗ್ಸ್ – ಕ್ವಾಲಿಫೈಯರ್‌ಗೆ ಎಂಟ್ರಿಕೊಟ್ಟ PBKS

ಕಳೆದ ಆರು ತಿಂಗಳಿನಿಂದ ಶ್ರೀಧರ್‌ ಅನಾರೋಗ್ಯದಿಂದ ಬಳಲುತ್ತಿದ್ದರು. ಹಲವು ದಿನಗಳಿಂದ ಶ್ರೀಧರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುತೇ ಸಿಗದಷ್ಟು ಬದಲಾಗಿ ಶ್ರೀಧರ್ ನಾಯಕ್ ಬೆಡ್ ಮೇಲೆ ಮಲಗಿದ್ದು ನೋಡಿ ಹಲವರಿಗೆ ಶಾಕ್ ಆಗಿತ್ತು. ಸಹಾಯ ಮಾಡುವಂತೆ ಅನೇಕರು ಕೋರಿಕೊಂಡಿದ್ದರು.  ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರು ಎಳೆದಿದ್ದಾರೆ. ಬೆಂಗಳೂರಿನ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಅವರ ಮೃತ ಶರೀರವನ್ನು ಇಡಲಾಗಿದೆ.

‘ಪಾರು’ ಮತ್ತು ‘ವಧು’ ಧಾರಾವಾಹಿಗಳಲ್ಲಿ ಅವರ ಪಾತ್ರಗಳು ಜನಪ್ರಿಯವಾಗಿದ್ದವು. ‘ಮ್ಯಾಕ್ಸ್’ ಚಿತ್ರದಲ್ಲೂ ಅವರು ನಟಿಸಿದ್ದರು. ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಶ್ರೀಧರ್ ನಾಯ್ಕ್ ಅವರು ಮೇಕಪ್ ಆರ್ಟಿಸ್ಟ್ ಕೂಡ ಆಗಿದ್ದರು, ಜೊತೆಗೆ ನಿರೂಪಕರಾಇಯು, ಆಕ್ಟಿಂಗ್ ಟ್ರೈನರ್ ಆಗಿಯೂ, ರಂಗ ಶಿಕ್ಷಕನಾಗಿ ಕೆಲಸ ಮಾಡಿದ್ದಾರೆ. ಡಬ್ಬಿಂಗ್ ಕಲಾವಿದರಿಗೆ ವಾಯ್ಸ್ ಟ್ರೈನರ್ ಆಗಿಯೂ ಅವರು ಕೆಲಸ ಮಾಡುತ್ತಿದ್ದರು. ಶ್ರೀಧರ್‌ ಅವರು ಹಲವು ಮಕ್ಕಳ ಶಿಬಿರ ಕಾರ್ಯಕ್ರಮಗಳನ್ನು ನೀಡುತ್ತಿದ್ದರು.

Shwetha M