CSK ಗೆದ್ದಿದ್ದು RCBಗೆ ಲಾಭ – LSG ಸೋತ್ರೆ ಟಾಪ್-2 ಫಿಕ್ಸ್
ರೆಡ್ ಆರ್ಮಿಗೆ ಈಗ ಅಸಲಿ JOSH

CSK ಗೆದ್ದಿದ್ದು RCBಗೆ ಲಾಭ – LSG ಸೋತ್ರೆ ಟಾಪ್-2 ಫಿಕ್ಸ್ರೆಡ್ ಆರ್ಮಿಗೆ ಈಗ ಅಸಲಿ JOSH

ಇಂಡಿಯನ್ ಪ್ರೀಮಿಯರ್ ಲೀಗ್ ಈಗ ರೋಚಕ ಘಟ್ಟ ತಲುಪಿದೆ. ಈಗಾಗ್ಲೇ ಕೆಲ ತಂಡಗಳು ಈ ಸೀಸನ್​ಗೆ ವಿದಾಯ ಕೂಡ ಹೇಳಿವೆ. ನಾಲ್ಕು ತಂಡಗಳು ಪ್ಲೇಆಫ್​ಗೆ ಕ್ವಾಲಿಫೈ ಆಗಿ ವಾರ ಕಳೆದ್ರೂ ಕ್ವಾಲಿಫೈಯರ್ 1 ಆಡೋರು ಯಾರು ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ. ಇವತ್ತಿನ ಪಂದ್ಯ ಹಾಗೂ ನಾಳೆ ಪಂದ್ಯದ ಬಳಿಕವೇ ಕ್ಲೈಮ್ಯಾಕ್ಸ್ ಪಿಕ್ಚರ್ ಸಿಗಲಿದೆ. ಇಂಟ್ರೆಸ್ಟಿಂಗ್ ಅಂದ್ರೂ ನಾಲ್ಕೂ ತಂಡಗಳಿಗೂ ಟೇಬಲ್ ಟಾಪರ್ ಆಗೋಕೆ ಈಗ್ಲೂ ಚಾನ್ಸ್ ಇದೆ.

ಇದನ್ನೂ ಓದಿ : RCB ಪ್ಲೇಆಫ್ಸ್ ಆಡಲ್ಲ ಸಾಲ್ಟ್ – ಮೊದಲ ಮಗುವಿಗಾಗಿ ವಿದೇಶಕ್ಕೆ ವಾಪಸ್

ಪ್ರಸ್ತುತ ಸೀಸನ್​ನಲ್ಲಿ ಲೀಗ್ ಹಂತದ 68 ಪಂದ್ಯಗಳು ಕಂಪ್ಲೀಟ್ ಆಗಿದ್ದು ಇನ್ನೆರಡು ಮ್ಯಾಚ್​ಗಳಷ್ಟೇ ಬಾಕಿ. ಈ ವೇಳೆಗೆ ಬ್ಯಾಕ್ ಟು ಬ್ಯಾಕ್ 2 ಮ್ಯಾಚ್​ಗಳನ್ನ ಸೋತ್ರೂ ಗುಜರಾತ್ ಟೈಟಾನ್ಸ್ ನಂಬರ್ 1 ಪ್ಲೇಸ್​ನಲ್ಲಿದೆ. 18 ಅಂಕಗಳನ್ನ ಪಡೆದಿದೆ. ಇನ್ನು 17 ಪಾಯಿಂಟ್ಸ್​ಗಳೊಂದಿಗೆ ಪಂಜಾಬ್ ಕಿಂಗ್ಸ್ ತಂಡವು ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇನ್ನು ಆರ್​ಸಿಬಿ ತಂಡ ಕೂಡ 17 ಪಾಯಿಂಟ್ಸ್ ಪಡೆದಿದ್ರೂ ನೆಟ್ ರನ್ ರೇಟ್ ಕಡಿಮೆ ಇರೋದ್ರಿಂದ ಮೂರನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ 16 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ನಾಲ್ಕೂ ತಂಡಗಳ ನಡುವೆ ಟಾಪ್-2ಗಾಗಿ ಟಫ್ ಫೈಟ್ ನಡೀತಿದೆ. ಈ ಪೈಪೋಟಿ ನಡುವೆ ಕ್ವಾಲಿಫೈಯರ್ ಆಡುವ 1 ಟೀಂ ಯಾವ್ದು ಅನ್ನೋದು ಕನ್ಫರ್ಮ್ ಆಗಲಿದೆ. ಜೈಪುರದ ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್​ನ 69ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲಿದ್ದು, ಈ ಮೂಲಕ ಪ್ಲೇಆಫ್ ಸುತ್ತಿನಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯವನ್ನಾಡಲು ಅರ್ಹತೆ ಪಡೆಯಲಿದೆ. ಮುಂಬೈ ತಂಡ ಗೆದ್ರೆ ಈಗಿರೋ 16 + 2 ಅಂಕ ಸೇರಿ ಟೋಟಲ್ 18 ಅಂಕ ಆಗಲಿದೆ. ನೆಟ್ ರನ್ ರೇಟ್ ಅತ್ಯದ್ಭುತವಾಗಿರೋದ್ರಿಂದ ನಂಬರ್ ಸ್ಥಾನಕ್ಕೇರಲಿದೆ. ಹಾಗೇ ಪಂಜಾಬ್ ಗೆದ್ರೆ ಈಗಿರೋ 17 + 2 ಪಾಯಿಂಟ್ಸ್ ಸೇರಿ ಟೋಟಲ್ 19 ಪಾಯಿಂಟ್ಸ್​ಗಳೊಂದಿಗೆ ನಂಬರ್ 1ಸ್ಥಾನಕ್ಕೇರಲಿದೆ. ಸೋ ಇಂದಿನ ಪಂದ್ಯ ಇಬ್ಬರಿಗೂ ಕೂಡ ಮಸ್ಟ್ ವಿನ್ ಗೇಮ್ ಆಗಿದೆ.

ಲೀಗ್ ಹಂತದಲ್ಲಿ ಸದ್ಯ 13 ಪಂದ್ಯಗಳನ್ನ ಆಡಿರೋ ಆರ್​ಸಿಬಿ 8 ಪಂದ್ಯಗಳನ್ನ ಗೆದ್ದಿದೆ. ಹಾಗೇ ಕೆಕೆಆರ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಸೋ ಟೋಟಲ್ ಆಗಿ 17 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮಂಗಳವಾರ ನಡೆಯಲಿರುವ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಆರ್‌ಸಿಬಿ ಲಕ್ನೋ ವಿರುದ್ಧ ಕಣಕ್ಕಿಳಿಯಲಿದೆ. ಈ ಮ್ಯಾಚಲ್ಲಿ ಗೆದ್ರೆ 19 ಅಂಕಗಳೊಂದಿಗೆ ಕ್ವಾಲಿಫೈಯರ್ 1ಗೆ ಸೆಲೆಕ್ಟ್ ಆಗುತ್ತೆ. ಒಂದು ವೇಳೆ ಸೋತ್ರೆ ನಿಜಕ್ಕೂ ಬ್ಯಾಡ್​ಲಕ್. ಯಾಕಂದ್ರೆ ಎಲಿಮಿನೇಟರ್ ಮ್ಯಾಚ್ ಆಡ್ಬೇಕಾಗುತ್ತೆ. ಸೋ ಆರ್​ಸಿಬಿ ಪಾಲಿಗೆ ಈ ಮ್ಯಾಚ್ ಮಸ್ಟ್ ವಿನ್ ಆಗಿದೆ. ಅಷ್ಟಕ್ಕೂ ಆರ್​ಸಿಬಿ ಪ್ಲೇಆಫ್ಸ್​ಗೆ ಸೆಲೆಕ್ಟ್ ಆದಾಗಿಂದ್ಲೂ ಟಾಪ್-2 ಸ್ಥಾನವನ್ನೇ ಪಡೀಬೇಕು ಅಂತಾ ಯಾಕೆ ಅಷ್ಟೊಂದು ಒತ್ತಿ ಹೇಳ್ತಿದ್ದೇವೆ ಅಂದ್ರೆ ಅದಕ್ಕೆ ಕಾರಣ ಅಲ್ಲಿರೋ ಅಡ್ವಾಂಟೇಜಸ್.

ಕ್ವಾಲಿಫೈಯರ್ 1 ಅಡ್ವಾಂಟೇಜಸ್!

ಮೊದಲ 2 ಸ್ಥಾನಗಳಲ್ಲಿ ಉಳಿಯೋ ತಂಡಕ್ಕೆ ಬಿಗ್ ಅಡ್ವಾಂಟೇಜ್

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲುವ ತಂಡವು ನೇರವಾಗಿ ಫೈನಲ್

​ಸೋತವರು ದ್ವಿತೀಯ ಕ್ವಾಲಿಫೈಯರ್ ಪಂದ್ಯವಾಡಲು ಅವಕಾಶ

ಮೂರನೇ ಮತ್ತು ನಾಲ್ಕನೇ ತಂಡಗಳು ಎಲಿಮಿನೇಟರ್ ಪಂದ್ಯವನ್ನಾಡಬೇಕು

ಹೆಸರೇ ಹೇಳುವಂತೆ ಈ ಪಂದ್ಯದಲ್ಲಿ ಸೋಲುವ ತಂಡ ಎಲಿಮಿನೇಟ್

ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಸೋಲುವ ತಂಡಕ್ಕೆ ಮತ್ತೊಂದು ಅವಕಾಶ

ಎಲ್ಲಾ ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯವಾಡೋಕೆ ಹೆಚ್ಚು ಟಾರ್ಗೆಟ್

ಗೆದ್ದ ತಂಡ ಮತ್ತೆ ಮೊದಲ ಕ್ವಾಲಿಫೈಯರ್​ನಲ್ಲಿ ಸೋತ ತಂಡದ ಎದುರು ಆಟ

ಎಲಿಮಿನೇಟರ್ ​ನಲ್ಲಿ ಸೋತ್ರೆ ಮನೆಗೆ ಗೆದ್ರೂ ಕೂಡ ಕ್ವಾಲಿಫೈಯರ್ 2 ಪಂದ್ಯ

Shantha Kumari