ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ಟೆಸ್ಟ್ ತಂಡ ಪ್ರಕಟ – ಶುಭ್ಮನ್ ಗಿಲ್‌ಗೆ ನಾಯಕನ ಪಟ್ಟ

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ಟೆಸ್ಟ್ ತಂಡ ಪ್ರಕಟ –  ಶುಭ್ಮನ್ ಗಿಲ್‌ಗೆ ನಾಯಕನ ಪಟ್ಟ

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತ ಟೆಸ್ಟ್  ತಂಡವನ್ನು ಪ್ರಕಟಿಸಲಾಗಿದೆ.  ಶುಭ್​ಮನ್​ ಗಿಲ್ ಅವರಿಗೆ ನಾಯಕನ ಪಟ್ಟ ನೀಡಲಾಗಿದೆ.   ಭವಿಷ್ಯದ ದೃಷ್ಟಿಯಿಂದ ಗಿಲ್ ಅವರಿಗೆ ನಾಯಕತ್ವ ನೀಡಲಾಗಿದೆ. ಹಾಗೆಯೇ ಉಪನಾಯಕನಾಗಿ ರಿಷಭ್ ಪಂತ್ ಆಯ್ಕೆಯಾಗಿದ್ದಾರೆ.

ಇನ್ನು ತಂಡದಲ್ಲಿ ಆರಂಭಿಕರಾಗಿ ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್ ಹಾಗೂ ಸಾಯಿ ಸುದರ್ಶನ್ ಕಾಣಿಸಿಕೊಂಡಿದ್ದಾರೆ. ಇವರಲ್ಲಿ ಇಬ್ಬರು ಇನಿಂಗ್ಸ್ ಆರಂಭಿಸುವುದು ಖಚಿತ. ಅಲ್ಲದೆ ಮತ್ತೊಬ್ಬರು ಮೂರನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯಿದೆ. ಮಧ್ಯಮ ಕ್ರಮಾಂಕದ ಬ್ಯಾಟರ್​ಗಳಾಗಿ ಕೆಎಲ್ ರಾಹುಲ್, ಕರುಣ್ ನಾಯರ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಆಯ್ಕೆಯಾಗಿದ್ದಾರೆ. ಆಲ್​ರೌಂಡರ್​ಗಳಾಗಿ ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್​ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ವೇಗದ ಬೌಲರ್​ಗಳಾಗಿ ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್ ಹಾಗೂ ಅರ್ಷದೀಪ್ ಸಿಂಗ್  ಆಯ್ಕೆಯಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ  …

 ಶುಭ್​ಮನ್ ಗಿಲ್ – ನಾಯಕ

ರಿಷಭ್ ಪಂತ್ – ಉಪನಾಯಕ

ಯಶಸ್ವಿ ಜೈಸ್ವಾಲ್

ಕೆಎಲ್ ರಾಹುಲ್

ಸಾಯಿ ಸುದರ್ಶನ್

ಅಭಿಮನ್ಯು ಈಶ್ವರನ್

ಕರುಣ್ ನಾಯರ್

ನಿತೀಶ್ ಕುಮಾರ್ ರೆಡ್ಡಿ

ರವೀಂದ್ರ ಜಡೇಜಾ

ಧ್ರುವ್ ಜುರೇಲ್

ವಾಷಿಂಗ್ಟನ್ ಸುಂದರ್

ಶಾರ್ದೂಲ್ ಠಾಕೂರ್

ಜಸ್​ಪ್ರೀತ್ ಬುಮ್ರಾ

ಮೊಹಮ್ಮದ್ ಸಿರಾಜ್

ಪ್ರಸಿದ್ಧ್ ಕೃಷ್ಣ

ಆಕಾಶ್ ದೀಪ್

ಕುಲ್ದೀಪ್ ಯಾದವ್

ಅರ್ಷದೀಪ್ ಸಿಂಗ್

 

Kishor KV

Leave a Reply

Your email address will not be published. Required fields are marked *