ಸ್ಟೇಜ್‌ನಲ್ಲಿ ಗಿಲ್ಲಿ – ಡ್ರೋನ್ ಫೈಟ್.. ಪಾರ್ಟ್ನರ್‌ ಪರೀಕ್ಷೆಯಲ್ಲಿ ಪಾಸ್ ಯಾರು?‌ -ಗಿಲ್ಲಿನಟ ಮಲೇಷ್ಯಾ ಸಿಕ್ರೇಟ್‌ ರಿವೀಲ್!‌

ಸ್ಟೇಜ್‌ನಲ್ಲಿ ಗಿಲ್ಲಿ – ಡ್ರೋನ್ ಫೈಟ್.. ಪಾರ್ಟ್ನರ್‌ ಪರೀಕ್ಷೆಯಲ್ಲಿ ಪಾಸ್ ಯಾರು?‌ -ಗಿಲ್ಲಿನಟ ಮಲೇಷ್ಯಾ ಸಿಕ್ರೇಟ್‌ ರಿವೀಲ್!‌

ಭರ್ಜರಿ ಬ್ಯಾಚುಲರ್ಸ್‌ ದಿನದಿಂದ ದಿನಕ್ಕೆ ವೀಕ್ಷಕರಿಗೆ ಸಖತ್‌ ಮನರಂಜನೆ ನೀಡ್ತಿದೆ. ಪ್ರತಿವಾರ ಬ್ಯಾಚುಲರ್ಸ್‌ ತಮ್ಮ ಮೆಂಟರ್ಸ್‌ಗೆ ವಿಭಿನ್ನವಾಗಿ ಸರ್‌ಪ್ರೈಸ್‌ ನೀಡ್ತಾ ಬಂದಿದ್ದಾರೆ. ಆದ್ರೆ ಈ ವಾರ ಈ ಶೋ ಕೊಂಚ ಡಿಫ್ರೆಂಟ್‌ ಆಗಿದೆ. ಈ ಸಲ ಸೀನಿಯರ್ಸ್‌ ಜೂನಿಯರ್ಸ್‌ ಮಧ್ಯೆ ಫೈಟ್ ನಡೆದಿದೆ. ಈ ವೇಳೆ ಗಿಲ್ಲಿ ಹಾಗೂ ಡ್ರೋನ್‌ ಮುಖಾಮುಖಿಯಾಗಿದ್ದಾರೆ. ಸ್ಟೇಜ್‌ನಲ್ಲಿ ನೀನಾ ನಾನಾ ನೋಡೇ ಬಿಡೋಣಾ ಅಂತಾ ಭರ್ಜರಿ ಪರ್ಫಾಮೆನ್ಸ್‌ ನೀಡಿದ್ದಾರೆ.. ಅಷ್ಟೇ ಅಲ್ಲ ಗಿಲ್ಲಿ ಹಾಗೂ ಡ್ರೋನ್‌ ಗೆ ತಮ್ಮ ಪಾರ್ಟ್ನರ್‌ ಬಗ್ಗೆ ಕೆಲ ಪ್ರಶ್ನೆ ಕೇಳಲಾಗಿದೆ.. ಈ ವೇಳೆ ಗಿಲ್ಲಿ ಡ್ರೋನ್‌ಗೆ ಸರಿಯಾಗೇ ಠಕ್ಕರ್‌ ಕೊಟ್ಟಿದ್ದಾರೆ.

ಇದನ್ನೂ ಓದಿ: ‘ಕಾಂತಾರ ಚಾಪ್ಟರ್ 1’ ಬಿಡುಗಡೆ ದಿನಾಂಕದ ಬಗ್ಗೆ ಬಿಗ್‌ ಅಪ್‌ಡೇಟ್‌ – ಹೊಂಬಾಳೆ ಫಿಲಂಸ್ ಹೇಳಿದ್ದೇನು?

ಜೀ ಕನ್ನಡ ರಿಯಾಲಿಟಿ ಶೋನಲ್ಲಿ ಗಿಲ್ಲಿ ನಟ ಹಾಗೂ ಗಗನಾದ್ದೇ ಹವಾ ಇತ್ತು.. ಗಿಲ್ಲಿ ಗಗನಾ ಕಾಲೆಳೆಯೋದೇನು? ಗಗನಾ ಪಂಚಿಂಗ್‌ ಡೈಲಾಗ್ಸ್‌.. ವೀಕ್ಷಕರಿಗೆ ಸಖತ್‌ ಮನರಂಜನೆ ನೀಡಿತ್ತು.. ಆದ್ರೀಗ ಭರ್ಜರಿ ಬ್ಯಾಚುಲರ್ಸ್‌ನಲ್ಲಿ ಗಗನಾಗೆ ಡ್ರೋನ್‌ ಪ್ರತಾಪ್‌ ಜೋಡಿಯಾಗಿದ್ದಾರೆ. ಪ್ರತಿ ಸಂಚಿಕೆಯಲ್ಲಿ ಗಗನಾಗೆ ಸರ್‌ಪ್ರೈಸ್‌ ಕೊಡ್ತಾನೆ ಬಂದಿದ್ದಾರೆ.. ಕಳೆದ ವಾರ ಗಗನಾ ಕನ್ನಡ ಚಿತ್ರರಂಗದಲ್ಲಿ ಬೆಳಿಬೇಕು ಅಂತ ಡ್ರೋನ್‌ ಪ್ರತಾಪ್‌ ಹರಕೆ ಹೊತ್ತಿದ್ರು.. ದೇವಸ್ಥಾನದಲ್ಲಿ ಉರುಳು ಸೇವೆ ಮಾಡಿ, ನೆಲದಲ್ಲೇ ಊಟ ಮಾಡಿದ್ರು. ಇದ್ರಿಂದ ಗಗನಾ ಭಾವುಕರಾಗಿದ್ರು..  ಸ್ಟೇಜ್‌ನಲ್ಲೇ ಆನಂದ ಭಾಷ್ಪ ಹಾಕಿದ್ರು. ಆದ್ರೆ ಈ ವಾರ ಗಿಲ್ಲಿ ಹಾಗೂ ಡ್ರೋನ್‌ ಪ್ರತಾಪ್‌ ಮುಖಾಮುಖಿಯಾಗಿದ್ದಾರೆ. ಡ್ರೋನ್‌ ಗೆ ಗಿಲ್ಲಿ ಸರಿಯಾಗೇ ಠಕ್ಕರ್‌ ಕೊಟ್ಟಿದ್ದಾರೆ.

ಈ ವಾರ ಭರ್ಜರಿ ಡಮ್ಕಿ ಡಮಲ್‌ ರೌಂಡ್‌ ಮಾಡಲಾಗಿತ್ತು. ಈ ಸಂಚಿಕೆಯಲ್ಲಿ ಸೀನಿಯರ್ಸ್‌ ವರ್ಸಸ್‌ ಜೂನಿಯರ್ಸ್‌ ಸಮಾಗಮ ಆಗಿದ್ರು. ಸೀನಿಯರ್ಸ್‌ ಹಾಗೂ ಜೂನಿಯರ್ಸ್‌ ನಡುವೆ ಫೈಟ್‌ ಏರ್ಪಟ್ಟಿತ್ತು. ಈ ವೇಳೆ ಗಗನಾ ಡ್ರೋನ್‌ ಪ್ರತಾಪ್‌ ಒಂದ್ಕಡೆ ಪರ್ಫಾಮೆನ್ಸ್‌ ಮಾಡಿದ್ರೆ, ಮತ್ತೊಂದ್ಕಡೆ ಗಿಲ್ಲಿ ಹಾಗೂ ಯಶಸ್ವಿನಿ ಭರ್ಜರಿ ಪಾರ್ಫಾಮೆನ್ಸ್‌ ನೀಡಿದ್ರು.. ತಮ್ಮ ಪಾರ್ಟ್ನರ್‌ ಜೊತೆ ಭರಾಟೆ ಸಿನಿಮಾದ ಭರ ಭರ ರಾಟೆ ಸಾಂಗ್‌ ಡ್ಯಾನ್ಸ್‌ ಮಾಡಿದ್ರು.. ಬಳಿಕ ಡ್ರೋನ್‌ ಪ್ರತಾಪ್‌ ಹಾಗೂ ಗಿಲ್ಲಿ ನಟನಿಗೆ ತಮ್ಮ ಪಾರ್ಟ್ನರ್‌ ಬಗ್ಗೆ ಕೆಲ ಪ್ರಶ್ನೆಗಳನ್ನ ನೀಡಲಾಗಿತ್ತು. ತಮ್ಮ ಮೆಂಟರ್ಸ್‌ನ ಎಷ್ಟು ಅರ್ಥ ಮಾಡಿಕೊಂಡಿದ್ದೀರಾ ಅಂತಾ ನಿರಂಜನ್‌ ಕೆಲ ಪ್ರಶ್ನೆಗಳನ್ನ ಕೇಳಿದ್ರು.. ಈ ವೇಳೆ ಡ್ರೋನ್ ಪ್ರತಾಪ್‌  ಬಹುತೇಕ ಎಲ್ಲಾ ಪ್ರಶ್ನೆಗಳಿಗೆ ಸರಿಯಾಗೇ ಆನ್ಸರ್‌ ಮಾಡಿದ್ದಾರೆ. ಇನ್ನು ಗಿಲ್ಲಿ ನಟ ಡ್ರೋನ್‌ ಕಾಲೆಳೆದಿದ್ದಾರೆ. ನೀನು ಹೆಲಿಕಾಪ್ಟರ್‌ ನಲ್ಲಿ ಗಗನಾಳನ್ನ ಕರ್ಕೋಂಡು ಹೋಗಿಲ್ವಾ.. ಆದ್ರೆ ನಾನು ಯಶಸ್ವಿನಿಯನ್ನ ಮಲೇಷ್ಯಾಗೆ ಕರ್ಕೊಂಡು ಹೋಗಿದ್ದೇನೆ ಎಂತಾ ಹೇಳಿದ್ದಾರೆ.. ಇವರಿಬ್ರ ಫನ್ನಿ ಫೈಟ್‌ಗೆ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ.

Shwetha M

Leave a Reply

Your email address will not be published. Required fields are marked *