ಫ್ರೋಜನ್ ಬಾಟಲ್ ಜ್ಯೂಸ್‌ ಕುಡಿಯೋ ಮುನ್ನ ಎಚ್ಚರ – ಗಾಜಿನ ಪೀಸ್‌ ನುಂಗಿ ಯುವತಿ ಅಸ್ವಸ್ಥ!

ಫ್ರೋಜನ್ ಬಾಟಲ್ ಜ್ಯೂಸ್‌ ಕುಡಿಯೋ ಮುನ್ನ ಎಚ್ಚರ – ಗಾಜಿನ ಪೀಸ್‌ ನುಂಗಿ ಯುವತಿ ಅಸ್ವಸ್ಥ!

ಆಹಾರ ಉತ್ಪನ್ನ ಕಂಪನಿಗಳು ಇತ್ತೀಚೆಗೆ ಜನರ ಜೀವದ ಜೊತೆ ಚೆಲ್ಲಾಟ ಆಡ್ತಿವೆ. ಸರ್ಕಾರ ಎಷ್ಟೇ ಕಠಿಣ ಕ್ರಮ ಕೈಗೊಂಡ್ರೂ ಕಂಪನಿಗಳು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಇದೀಗ ಸೀಲ್ ಮಾಡಿದ್ದ ಬೋಬಾ ಟೀ ಬಾಟಲಿಯಲ್ಲಿ ಗಾಜಿನ ತುಂಡು ಪತ್ತೆಯಾಗಿದೆ. ಇದನ್ನ ಐಸ್‌ಕ್ಯೂಬ್‌ ಎಂದು ಯುವತಿಯೊಬ್ಬಳು ಸೇವಿಸಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ವೈಭವ್ IPLನಿಂದ ಗಳಿಸಿದ್ದು ಎಷ್ಟು? 500 Miss Call, ಫೋನ್ ಸ್ವಿಚ್ ಆಫ್!

ಈ ಘಟನೆ ಚೆನ್ನೈನಲ್ಲಿ ನಡೆದಿದೆ.  ಏಪ್ರಿಲ್ 27 ರಂದು ಯುವತಿಯ ತಾಯಿ ಜಾಹ್ನವಿ ಸಂಘವಿ ಎಂಬುವವರು ತೋರೈಪಕ್ಕಂನಲ್ಲಿರುವ ಫ್ರೋಜನ್ ಬಾಟಲ್ ಔಟ್‌ಲೆಟ್‌ನಿಂದ ಬೋಬಾ ಟೀಯನ್ನು ಖರೀದಿಸಿದ್ದರು. ಅದನ್ನು ಅವರ ಮಗಳು ಕುಡಿದಿದ್ದಳು. ಬಾಯಿಗೆ ಗಾಜಿನ ತುಂಡುಗಳು ಹೋಗುತ್ತಿದ್ದಂತೆ, ಆಕೆ ಹೊರಗೆ ಉಗುಳಿದ್ದಳು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಈ ವಿಚಾರವನ್ನು ಕಂಪನಿಗೆ ತಿಳಿಸಲಾಯ್ತು. ಈ ವೇಳೆ, ಕಂಪನಿ ಆಸ್ಪತ್ರೆಯ ಖರ್ಚು ವೆಚ್ಚವನ್ನ ಸರಿದೂಗಿಸುತ್ತದೆ ಎಂದು ಭರವಸೆ ನೀಡಿತ್ತು. ನಾನು ಅಗತ್ಯವಿರುವ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ತಕ್ಷಣವೇ ಸಲ್ಲಿಸಿದೆ. ಈಗ 20 ದಿನಗಳಿಗಿಂತ ಹೆಚ್ಚು ಸಮಯ ಕಳೆದಿದೆ. ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಕಂಪನಿ ನನ್ನ ಕರೆಗಳು ಮತ್ತು ಇಮೇಲ್‌ಗಳನ್ನು ನಿರ್ಲಕ್ಷಿಸುತ್ತಿದೆ. ಈ ಸಮಸ್ಯೆ ಎಷ್ಟು ಗಂಭೀರವಾಗಿದೆ ಎಂದು ಅವರ ಗಮನಕ್ಕೆ ತಂದಿದ್ದೇನೆ. ಇದಕ್ಕೆ ಕಂಪನಿಯು, ತಿಂಗಳಿಗೆ 2.5 ಕೋಟಿಗೂ ಹೆಚ್ಚು ಬಾಟಲಿಗಳನ್ನು ತಯಾರಿಸುತ್ತದೆ. ಅಂತಹ ಒಂದು ಪ್ರಕರಣ ನಮ್ಮ ಬ್ರ್ಯಾಂಡ್‌ನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಉಡಾಫೆಯ ಪ್ರತಿಕ್ರಿಯೆ ನೀಡಿದೆ ಎಂದು ಆರೋಪಿಸಿದ್ದಾರೆ.

ಜನರ ಆರೋಗ್ಯ ಮತ್ತು ಸುರಕ್ಷತೆಯ ವಿಚಾರದಲ್ಲಿ ಕಂಪನಿ ನಿರ್ಲಕ್ಷ್ಯ ಮಾಡುತ್ತಿದೆ. ಈ ಬಗ್ಗೆ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿರುವುದಾಗಿ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ಅನೇಕರು ಕಾಮೆಂಟ್‌ ಮಾಡಿ ಜಾಹ್ನವಿಯವರಿಗೆ ಬೆಂಬಲಿಸಿದ್ದಾರೆ.

Shwetha M