ವೈಭವ್ IPLನಿಂದ ಗಳಿಸಿದ್ದು ಎಷ್ಟು? 500 Miss Call, ಫೋನ್ ಸ್ವಿಚ್ ಆಫ್!
ಸೂರ್ಯವಂಶಿಗೆ ದ್ರಾವಿಡ್ ಎಚ್ಚರಿಕೆ ಏನು?

ವೈಭವ್ IPLನಿಂದ ಗಳಿಸಿದ್ದು ಎಷ್ಟು? 500 Miss Call, ಫೋನ್ ಸ್ವಿಚ್ ಆಫ್!ಸೂರ್ಯವಂಶಿಗೆ ದ್ರಾವಿಡ್ ಎಚ್ಚರಿಕೆ ಏನು?

ರಾಜಸ್ಥಾನ್ ರಾಯಲ್ಸ್ ಈ ಸಲ ಹೇಳಿಕೊಳ್ಳುವಂತಹ ಆಟ ಆಡಿಲ್ಲ. ಆದ್ರೆ ಆರ್‌ಆರ್‌ ಹೆಸರು ಮಾತ್ರ ರಾರಾಜಿಸುತ್ತಿದೆ. ಅದ್ದಕ್ಕೆ ಕಾರಣ ವೈಭವ್ ಸೂರ್ಯವಂಶಿ. ವೈಭವ್‌  ಕಳೆದ ವರ್ಷದ ರಣಜಿ ಟ್ರೋಫಿಯಲ್ಲಿ ಪದಾರ್ಪಣೆ ಮಾಡುವ ಮೂಲಕ ಸುದ್ದಿಯಲ್ಲಿದ್ದರು. ಇವರ ತಾಕತ್ತು ಗುರುತಿಸಿದ್ದ ರಾಜಸ್ಥಾನ ರಾಯಲ್ಸ್ ತಂಡ ಇವರಿಗೆ ಭಾರೀ ಹಣವನ್ನು ನೀಡಿ ಹರಾಜಿನಲ್ಲಿ ತಮ್ಮ ತಂಡಕ್ಕೆ ಸೇರಿಸಿಕೊಂಡಿತು. ಸೌದಿಯಲ್ಲಿ ನಡೆದ ಐಪಿಎಲ್‌ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡ 1.1 ಕೋಟಿ ರೂ.ನೀಡಿ ವೈಭವ್‌ ಸೂರ್ಯವಂಶಿ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತ್ತು. ಇವರು ಈಗಾಗಲೇ ಭಾರತದ ಪರ ಅಂಡರ್ 19 ಪಂದ್ಯಗಳಲ್ಲಿ ಮಿಂಚಿದ್ದಾರೆ. ಇವರಲ್ಲಿನ ಪ್ರತಿಭೆಯನ್ನು ಗುರುತಿಸಿದ್ದ ರಾಜಸ್ಥಾನ ರಾಯಲ್ಸ್‌ ಇವರಿಗೆ ತಂಡದಲ್ಲಿ ಸ್ಥಾನ ನೀಡಿತು. ವೈಭವ್‌ ಸಹ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಸ್ಟಾರ್ ಆಟಗಾರರೇ ನಾಚಿಸುವಂತೆ 14 ವರ್ಷದ ವೈಭವ್ ಸೂರ್ಯವಂಶಿ ಆಟ ಆಡಿದ್ದಾರೆ.

ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ಗಳಿಸಿದ್ದೇಷ್ಟು?

ಈ ಸೀಸನ್‌ನಲ್ಲಿ ವೈಭವ್ 7 ಪಂದ್ಯಗಳನ್ನ ಆಡಿದ್ದಾರೆ. ಇವರು ಒಂದು ಪಂದ್ಯ ಆಡೋಕೆ  7.5 ಲಕ್ಷ ರೂ. ಪಡೆದಿದ್ದಾರೆ. ಒಟ್ಟು 7 ಪಂದ್ಯದಿಂದ ವೈಭವ್ 52.5 ಲಕ್ಷ ಜೇಬಿಗೆ ಇಳಿಸಿಕೊಂಡಿದ್ದಾರೆ. ಇದಲ್ಲದೆ ಪಂದ್ಯ ಶ್ರೇಷ್ಠ, ಬೆಸ್ಟ್‌ ಸ್ಟ್ರೈಕರ್ ಪ್ರಶಸ್ತಿಯನ್ನೂ ಗೆದ್ದಿದ್ದಾರೆ. ಅದಕ್ಕಾಗಿ ಅವರಿಗೆ ತಲಾ ಒಂದು ಲಕ್ಷ ರೂಪಾಯಿ ಪಡೆದಿದ್ದಾರೆ. ಒಟ್ಟಾರೆ ಐಪಿಎಲ್‌ನಿಂದ ವೈಭವ್‌ 1,64,50,000 ರೂಪಾಯಿ ಪಡೆದಿದ್ದಾರೆ. ವೈಭವ್ ಪ್ರತಿ ರನ್‌ಗೆ ಸುಮಾರು 43,650 ರೂಪಾಯಿಗಳನ್ನು ಪಡೆದಿದ್ದಾರೆ. ಐಪಿಎಲ್ ಹರಾಜಿನಲ್ಲಿ 1 ಕೋಟಿ 10 ಲಕ್ಷ ನೀಡಲಾಗಿತ್ತು. ಇದ್ದಕ್ಕೆ 52 ಲಕ್ಷ ಹೆಚ್ಚು ಪಂದ್ಯಗಳಿಂದ ಬಂದಿದೆ. ಇದ್ರಲ್ಲಿ ಇವರಿಗೆ 30 ಪರ್ಸೆಂಟ್ ಟ್ಯಾಕ್ ಕಟ್ ಆಗುತ್ತೆ. 1,64,50,000 ಲಕ್ಷಕ್ಕೆ ಸುಮಾರು 45 ಲಕ್ಷ ಟ್ಯಾಕ್ಸ್‌ನ್ನ ವೈಭವ್ ಸೂರ್ಯವಂಶಿ ಕಟ್ಟಬೇಕಿದೆ. ಎಲ್ಲವನ್ನೂ ಕಳೆದು ಇದು ಒಂದೇ ಸೀಸನ್‌ನಲ್ಲಿ ಇವರು ಒಂದು ಕೋಟಿ 15 ಲಕ್ಷ ಹಣ ಗಳಿಸಿದ್ದಾರೆ. ಮೂಲಗಳ ಪ್ರಕಾರ, ವೈಭವ್ ಸೂರ್ಯವಂಶಿ ಅವರ ನಿವ್ವಳ ಮೌಲ್ಯ 2 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

500 ಮಿಸ್ಡ್ ಕಾಲ್, 4 ದಿನ ಫೋನ್ ಸ್ವಿಚ್ ಆಫ್

ಐಪಿಎಲ್ ಟೂರ್ನಿಯಲ್ಲಿ ಉತ್ತಮ ಲಯದಲ್ಲಿರುವ ವೈಭವ್ ಸೂರ್ಯವಂಶಿ ತಮ್ಮ ಆಟದ ಮೇಲೆ ಫೋಕಸ್ ಮಾಡಲು ಸಾಕಷ್ಟು ಹರಸಾಹಸವನ್ನೇ ಪಟ್ಟಿದ್ದಾರೆ. ಪ್ರಮುಖವಾಗಿ ತಮ್ಮ ಚೊಚ್ಚಲ ಶತಕದ ಬಳಿಕ ವೈಭವ್ ಸೂರ್ಯವಂಶಿಗೆ ಬರೊಬ್ಬರಿ 500 ಮಿಸ್ ಕಾಲ್ ಬಂದಿತ್ತಂತೆ. ಈ ಬಗ್ಗೆ ವೈಭವ್ ಕೂಡ ಥ್ರಿಲ್ ಆಗಿದ್ರಂತೆ. ಆದರೆ ಗುರು ರಾಹುಲ್ ದ್ರಾವಿಡ್ ಅವರ ಭಯದಿಂದ ವೈಭವ್ ಆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಬದಲಿಗೆ 4 ದಿನಗಳ ತಮ್ಮ ಮೊಬೈಲ್ ಅನ್ನೇ ಸ್ವಿಚ್ ಆಫ್ ಮಾಡಿದ್ದರಂತೆ.

ಈ ಬಗ್ಗೆ ಮಾತನಾಡಿದ್ದ ವೈಭವ್ ನನಗೆ 500 ಕ್ಕೂ ಹೆಚ್ಚು ಮಿಸ್ಡ್ ಕಾಲ್‌ಗಳು ಬಂದಿದ್ದವು, ಆದರೆ ನಾನು ನನ್ನ ಫೋನ್ ಅನ್ನು ಸ್ವಿಚ್ ಆಫ್ ಮಾಡಿದ್ದೆ. ನಾನು ಶತಕ ಗಳಿಸಿದ ನಂತರ ಬಹಳಷ್ಟು ಜನರು ನನ್ನನ್ನು ಸಂಪರ್ಕಿಸುತ್ತಿದ್ದರು. ಆದರೆ ನನಗೆ ಅದು ಇಷ್ಟವಿರಲಿಲ್ಲ. ನಾನು ದೂರವಿರಲು ಪ್ರಯತ್ನಿಸುತ್ತೇನೆ. ನಾನು 4 ದಿನಗಳ ಕಾಲ ನನ್ನ ಫೋನ್ ಅನ್ನು ಆಫ್ ಮಾಡಿದ್ದೆ. ಮನೆಯಲ್ಲಿ ನನ್ನ ಕುಟುಂಬಸ್ಥರು ಮತ್ತು ಕೆಲವು ಸ್ನೇಹಿತರ ಸುತ್ತಲೂ ಇರುವುದು ನನಗೆ ಇಷ್ಟ’ ಎಂದು ವೈಭವ್ ಹೇಳಿದ್ದಾರೆ.

ವೈಭವ್‌ಗೆ ಕೋಚ್ ರಾಹುಲ್ ದ್ರಾವಿಡ್ ಎಚ್ಚರಿಕೆ

ಐಪಿಎಲ್‌ನಲ್ಲಿ ಅಬ್ಬರಿಸಿ ಹೆಸರು ಮಾಡಿರೋ ವೈಭವ್ ಸೂರ್ಯವಂಶಿಗೆ ರೋಚ್ ರಾಹುಲ್ ದ್ರಾವಿಡ್ ಎಚ್ಚರಿಕೆಯನ್ನ ನೀಡಿದ್ದಾರಂತೆ. ಈ ಸೀಸನ್ ಚೆನ್ನಾಗಿತ್ತು,  ನೀವು ಮಾಡಿದ್ದನ್ನು ಮಾಡುತ್ತಲೇ ಇರಿ, ಚೆನ್ನಾಗಿ ಆಡಿ, ಚೆನ್ನಾಗಿ ಅಭ್ಯಾಸ ಮಾಡಿ. ಆದರೆ ಮುಂದಿನ ವರ್ಷ, ಎದುರಾಳಿ ತಂಡಗಳ ಬೌಲರ್‌ಗಳು ನಿಮ್ಮ ವಿರುದ್ಧ ಹೆಚ್ಚು ಸಿದ್ಧರಾಗಿ ಬರುತ್ತಾರೆ ಎಂಬುದನ್ನು ನೆನಪಿನಲ್ಲಿಡಿ. ಆದ್ದರಿಂದ ನಾವು ಕೂಡ ತಯಾರಿ ನಡೆಸಬೇಕು. ಕಠಿಣ ತರಬೇತಿ ನೀಡಬೇಕು ಮತ್ತು ಹೆಚ್ಚಿನ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ರಾಹುಲ್ ದ್ರಾವಿಡ್ ವೈಭವ್ ಸೂರ್ಯವಂಶಿಗೆ ಎಚ್ಚರಿಕೆ ನೀಡಿದ್ದಾರೆ. ಸೂರ್ಯವಂಶಿ  ಮುಂದಿನ ತಿಂಗಳು ಇಂಗ್ಲೆಂಡ್‌ಗೆ ಪ್ರಯಾಣಿಸಲಿದ್ದಾರೆ. ಅಲ್ಲಿ ಭಾರತದ ಪಅಂಡರ್-19 ತಂಡವು ಇಂಗ್ಲೆಂಡ್ ಅಂಡರ್ 19 ತಂಡದ ವಿರುದ್ಧ ಐದು ಏಕದಿನ ಪಂದ್ಯಗಳು ಮತ್ತು ಮೂರು ನಾಲ್ಕು ದಿನಗಳ ಟೆಸ್ಟ್ ಪಂದ್ಯಗಳಲ್ಲಿ ಸ್ಪರ್ಧಿಸಲಿದೆ. ಇದ್ರಲ್ಲಿ ವೈಭವ್ ಸೂರ್ಯವಂಶಿ ಮಿಂಚು ಹರಿಸಿದ್ರೆ, ನೆಕ್ಟ್ ಭಾರತ ತಂಡದಲ್ಲಿ ಚಾನ್ಸ್ ಪಡೆಯೋದು ಪಕ್ಕಾ.

 

Kishor KV

Leave a Reply

Your email address will not be published. Required fields are marked *