ಮುಂಬೈಗೆ KNOCK OUT ಟಿಕೆಟ್ – 4 ಟೀಂ.. 7 ಫೈಟ್.. ಟಾಪ್-2 ಯಾರು?

ಇನ್ನೂ ಒಂದು ವಾರಗಳ ಕಾಲ ಲೀಗ್ ಹಂತದ ಪಂದ್ಯಗಳು ಬಾಕಿ ಇರುವಂತೆಯೇ ಪ್ಲೇಆಫ್ ಸುತ್ತಿಗೆ ನಾಲ್ಕು ತಂಡಗಳು ಫೈನಲ್ ಆಗಿದೆ. ಗುಜರಾತ್ ಟೈಟನ್ಸ್, ಆರ್ಸಿಬಿ, ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ತಂಡಗಳು ನಾಕೌಟ್ ಸುತ್ತಿಗೆ ಅರ್ಹತೆ ಪಡೆದಿವೆ. ಇದೀಗ ಈ 4 ತಂಡಗಳ ನಡುವೆ ಟಾಪ್ 2 ಸ್ಥಾನಕ್ಕೆ ಪೈಪೋಟಿ ನಡೆಯಲಿದೆ. ಪ್ಲೇಆಫ್ ಸುತ್ತಿನಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯವಾಡುವ ತಂಡಗಳು ಯಾವುವು ಅನ್ನೋದು ನಿರ್ಧಾರ ಆಗಿಲ್ಲ. ಗುಜರಾತ್, ಬೆಂಗಳೂರು ಹಾಗೇ ಪಂಜಾಬ್ ತಂಡಗಳಿಗೆ ಇನ್ನೂ ಎರಡೆರಡು ಪಂದ್ಯಗಳು ಬಾಕಿ ಇವೆ. ಹಾಗೇ ಮುಂಬೈ ಕೂಡ ಲೀಗ್ ಹಂತದಲ್ಲಿ ಇನ್ನೊಂದು ಪಂದ್ಯ ಆಡಲಿದೆ. ಈ ಎಲ್ಲಾ ಪಂದ್ಯಗಳು ಮುಗಿದ ಬಳಿಕ ಕ್ಲಿಯರ್ ಪಿಕ್ಚರ್ ಸಿಗಲಿದೆ.
ಇದನ್ನೂ ಓದಿ : DCಗೆ ಸೋಲಿನ ಗೆರೆ ಎಳೆದ್ರಾ KL? – ಮುಂಬೈ ವಿರುದ್ಧ ಸೋತ ಬಳಿಕ ರಾಹುಲ್ ಟ್ರೋಲ್
ಟಾಪ್-2 ಸ್ಥಾನಕ್ಕೆ ಮೂವರ ಪೈಪೋಟಿ!
ಟೇಬಲ್ ಟಾಪರ್ ಗುಜರಾತ್ 18 ಅಂಕ ಪಡೆದು ಮೊದಲ ಸ್ಥಾನ
ಮುಂದಿನ 2 ಪಂದ್ಯಗಳಲ್ಲಿ ಗುಜರಾತ್ ಟೈಟಾನ್ಸ್ ಗೆದ್ರೆ 22 ಅಂಕ
ಮೊದಲ ಕ್ವಾಲಿಫೈಯರ್ ಪಂದ್ಯವಾಡಲು ಅರ್ಹತೆ ಪಡೆಯಬಹುದು
ಆರ್ಸಿಬಿ ತಂಡವು ಈವರೆಗೆ 12 ಪಂದ್ಯ, ಈ ವೇಳೆ 8ರಲ್ಲಿ ಜಯ
ಕೆಕೆಆರ್ ವಿರುದ್ಧದ ಒಂದು ಪಂದ್ಯ ಮಳೆಯ ಕಾರಣದಿಂದಾಗಿ ರದ್ದು
ರಾಯಲ್ ಚಾಲೆಂಜರ್ಸ್ ಬೆಂಗಳೂರು 17 ಅಂಕಗಳೊಂದಿಗೆ ಸೆಕೆಂಡ್ ಪ್ಲೇಸ್
21 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಅಥವಾ ದ್ವಿತೀಯ ಸ್ಥಾನ
ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವು ಈವರೆಗೆ 12 ಮ್ಯಾಚ್
8 ಜಯಗಳಿಸಿ ಒಟ್ಟು 17 ಅಂಕ, 2 ಪಂದ್ಯಗಳನ್ನ ಗೆದ್ರೆ ಒಟ್ಟು 21 ಅಂಕ
ಈ ಮೂಲಕ ಮೊದಲ ಕ್ವಾಲಿಫೈಯರ್ ಪಂದ್ಯವಾಡಲು ಅವಕಾಶ
ಇಲ್ಲಿ ಇನ್ನೊಂದು ಟ್ವಿಸ್ಟ್ ಕೂಡ ಇದೆ. ಈ ಮೂರೂ ತಂಡಗಳಿಗೆ ಲೀಗ್ ಹಂತದಲ್ಲಿ ಎರಡೆರಡು ಮ್ಯಾಚ್ ಇರೋದ್ರಿಂದ ಒಬ್ಬರ ಸೋಲು ಇನ್ನೊಬ್ಬರಿಗೆ ಪ್ಲಸ್ ಆಗುತ್ತೆ. ಗುಜರಾತ್ ತಂಡ ಮುಂದಿನ ಎರಡೂ ಪಂದ್ಯಗಳನ್ನ ಸೋತು ಬೆಂಗಳೂರು ಮತ್ತು ಪಂಜಾಬ್ ಒಂದೊಂದು ಮ್ಯಾಚ್ಗಳನ್ನ ಗೆದ್ಕೊಂಡ್ರೂ ಇವ್ರೇ ಕ್ವಾಲಿಫೈಯರ್ 1ಗೆ ಸೆಲೆಕ್ಟ್ ಆಗ್ತಾರೆ. ಸೋ ಮೇ 27ರ ಕೊನೇ ಮ್ಯಾಚ್ ವರೆಗೂ ಕ್ವಾಲಿಫೈಯರ್ 1 ಆಡುವ ಟೀಮ್ಸ್ ಯಾವುದು ಅನ್ನೋದು ಗೊತ್ತಾಗಲ್ಲ.
ನಾಲ್ಕನೇ ತಂಡವಾಗಿ ಪ್ಲೇಆಫ್ಗೆ ಕಾಲಿಟ್ಟಿರೋ ಮುಂಬೈ ಇಂಡಿಯನ್ಸ್ಗೂ ಕೂಡ ಕ್ವಾಲಿಫೈಯರ್ 1ನಲ್ಲಿ ಆಡುವ ಅವಕಾಶ ಇದೆ. ಬಟ್ ಅದು ಬೇರೆ ತಂಡಗಳ ಸೋಲಿನ ಮೇಲೆ ನಿಂತಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಈಗಾಗಲೇ 13 ಪಂದ್ಯಗಳನ್ನಾಡಿದೆ. ಈ ವೇಳೆ 8ರಲ್ಲಿ ಜಯ ಸಾಧಿಸಿ 16 ಅಂಕಗಳನ್ನು ಪಡೆದುಕೊಂಡಿದೆ. ಇನ್ನುಳಿದ 1 ಪಂದ್ಯದಲ್ಲಿ ಗೆದ್ರೆ ಒಟ್ಟು 18 ಅಂಕಗಳನ್ನು ಪಡೆಯಲಿದೆ. ಒಂದು ವೇಳೆ ಆರ್ಸಿಬಿ, ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ತನ್ನ ಮುಂದಿನ ಪಂದ್ಯಗಳಲ್ಲಿ ಸತತ ಸೋಲನುಭವಿಸಿದರೆ, 18 ಅಂಕಗಳೊಂದಿಗೆ ಮುಂಬೈ ಇಂಡಿಯನ್ಸ್ ಮೊದಲ ಅಥವಾ ದ್ವಿತೀಯ ಸ್ಥಾನ ಅಲಂಕರಿಸಿ ಮೊದಲ ಕ್ವಾಲಿಫೈಯರ್ ಪಂದ್ಯವಾಡಲು ಅರ್ಹತೆ ಪಡೆಯಬಹುದು. ಒಂದು ವೇಳೆ ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂದಿನ ಪಂದ್ಯಗಳಲ್ಲಿ ಒಂದರಲ್ಲಿ ಗೆದ್ರೂ ಮುಂಬೈ ಇಂಡಿಯನ್ಸ್ ತಂಡವು ಎಲಿಮಿನೇಟರ್ ಪಂದ್ಯವಾಡುವುದು ಖಚಿತವಾಗಲಿದೆ. ಯಾಕಂದ್ರೆ ಗುಜರಾತ್ ಟೈಟಾನ್ಸ್ ಮುಂದಿನ ಮ್ಯಾಚ್ನಲ್ಲಿ ಗೆದ್ದರೆ ಒಟ್ಟು ಅಂಕಗಳ ಸಂಖ್ಯೆ 20 ಕ್ಕೇರಲಿದೆ. ಹಾಗೆಯೇ ಆರ್ಸಿಬಿ, ಪಂಜಾಬ್ ಒಂದರಲ್ಲಿ ಗೆದ್ರೂ 19 ಪಾಯಿಂಟ್ ಆಗಲಿದೆ. ಇತ್ತ ಮುಂಬೈ ಇಂಡಿಯನ್ಸ್ ಮುಂದಿನ ಮ್ಯಾಚ್ನಲ್ಲಿ ಗೆದ್ದರೂ 18 ಅಂಕಗಳನ್ನು ಮಾತ್ರ ಹೊಂದಲಿದೆ. ಹೀಗಾಗಿ ಆರ್ಸಿಬಿ, ಪಿಬಿಕೆಎಸ್ ಮತ್ತು ಜಿಟಿ ಮುಂದಿನ ಮ್ಯಾಚ್ನಲ್ಲಿ ಗೆಲ್ಲುವುದರೊಂದಿಗೆ ಮುಂಬೈ ಇಂಡಿಯನ್ಸ್ ತಂಡದ ಎಲಿಮಿನೇಟರ್ ಪಂದ್ಯವಾಡುವುದು ಫಿಕ್ಸ್ ಆಗಲಿದೆ.
ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 63 ಪಂದ್ಯಗಳು ಮುಗಿದಿದ್ದು, ಇನ್ನುಳಿದಿರುವುದು ಕೇವಲ 7 ಮ್ಯಾಚ್ಗಳು ಮಾತ್ರ. ಈ ಪಂದ್ಯಗಳಿಗೂ ಮುನ್ನವೇ 4 ತಂಡಗಳು ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ. ಹಾಗೆಯೇ 6 ತಂಡಗಳು ಈಗಾಗಲೇ ಐಪಿಎಲ್ನಿಂದ ಹೊರಬಿದ್ದಿದೆ. ಮೇ 27ಕ್ಕೆ ಬೆಂಗಳೂರು ಮತ್ತು ಲಕ್ನೋ ತಂಡಗಳು ಮುಖಾಮುಖಿಯಾಗಲಿದ್ದು ಲೀಗ್ ಹಂತಕ್ಕೆ ತೆರೆ ಬೀಳಲಿದೆ. ಆ ಬಳಿಕ ಪ್ಲೇಆಫ್ಸ್ ಫೈಟ್ ಶುರುವಾಗಲಿದ್ದು, ಜೂನ್ 3ರಂದು ಫೈನಲ್ ಪಂದ್ಯ ನಡೆಯಲಿದೆ.