ಮಲೇರಿಯಾ ಪತ್ತೆಗೆ ಹೊಸ ವಿಧಾನ – ಕೇವಲ 5 ಸೆಕೆಂಡ್​ನಲ್ಲಿ ವರದಿ ಲಭ್ಯ

ಮಲೇರಿಯಾ ಪತ್ತೆಗೆ ಹೊಸ ವಿಧಾನ – ಕೇವಲ 5 ಸೆಕೆಂಡ್​ನಲ್ಲಿ ವರದಿ ಲಭ್ಯ

ಕ್ವೀನ್ಸ್​ಲ್ಯಾಂಡ್ (ಆಸ್ಟ್ರೇಲಿಯಾ): ಸಾಮಾನ್ಯವಾಗಿ ಮಲೇರಿಯಾ ಜ್ವರವನ್ನು ರಕ್ತ ಪರೀಕ್ಷೆಯಿಂದ ಕಂಡುಹಿಡಿಯಲಾಗುತ್ತದೆ. ರಕ್ತ ಪರೀಕ್ಷೆಯ ವರದಿ ಪಡೆಯಲು ಕೊಂಚ ಸಮಯ ಕಾಯಬೇಕಾಗುತ್ತದೆ. ಇದಕ್ಕಾಗಿಯೇ ಸಂಶೋಧಕರ ತಂಡವೊಂದು ತ್ವರಿತ ಮತ್ತು ಸೂಚಿರಹಿತವಾಗಿ ಮಲೇರಿಯಾವನ್ನು ಪತ್ತೆ ಹಚ್ಚುವ ತಂತ್ರಜ್ಞಾನವೊಂದನ್ನು ಕಂಡುಹಿಡಿದ್ದಾರೆ. ಈ ಸಾಧನ ಮೂಲಕ ಕೇವಲ 5 ರಿಂದ 10 ಸೆಕೆಂಡುಗಳ ಮೂಲಕ ಮಲೇರಿಯಾವನ್ನು ಪತ್ತೆಹಚ್ಚಬಹುದಾಗಿದೆ.

ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯದ ಸಂಶೋಧಕರು ಕೆಂಪು ವಿಕಿರಣಗಳ ಮೂಲಕ ಮಲೇರಿಯಾ ಪತ್ತೆ ಹಚ್ಚಲು ಮುಂದಾಗಿದ್ದಾರೆ. ಈ ಸಾಧನವನ್ನು ರೋಗಿಯ ಕಿವಿ ಅಥವಾ ಬೆರಳಿನ ಮೇಲಿಟ್ಟರೆ ಕೇವಲ 5ರಿಂದ 10 ಸೆಕೆಂಡುಗಳಲ್ಲಿ ರೋಗ ಪತ್ತೆ ಮಾಡಬಹುದಾಗಿದೆ.

ಇದನ್ನೂ ಓದಿ: ನೀರಿನ ಮಹತ್ವ ಸಾರಲು ಕನ್ಯಾಕುಮಾರಿಯಿಂದ ಬಾಂಗ್ಲಾದೇಶಕ್ಕೆ ಪ್ರಯಾಣ- ಯುವಕನ ಶ್ರಮಕ್ಕೆ ಹ್ಯಾಟ್ಸಾಪ್

‘ದೊಡ್ಡ ಹಳ್ಳಿ ಅಥವಾ ಪಟ್ಟಣಗಳಂತಹ ಪ್ರದೇಶಗಳಲ್ಲಿ ಜನಸಂಖ್ಯೆ ಹೆಚ್ಚಾಗಿರುತ್ತದೆ. ಅಂತಹ ಪ್ರದೇಶಗಳಲ್ಲಿ ಈ ತಂತ್ರಜ್ಞಾನ ಸಹಕಾರಿಯಾಗಿದೆ. ಹಾಗಾಗಿ ಈ ಉಪಕರಣದಿಂದ ಇಡೀ ಗ್ರಾಮ ಮಲೇರಿಯಾದಿಂದ ಬಳಲುತ್ತಿದೆಯೇ ಎಂಬುದನ್ನು ಕಂಡುಕೊಳ್ಳಬಹುದು. ಅಲ್ಲದೇ ನಾವು ಜಾಗತಿಕವಾಗಿ ಮಲೇರಿಯಾ ವಿರುದ್ಧ ಹೋರಾಡಬಹುದು’ ಎಂದು ಯುಕ್ಯೂ ಸ್ಕೂಲ್ ಆಫ್ ಬಯೋಲಾಜಿಕಲ್ ಸೈನ್ಸ್​ನ ಇಂಟರ್ನಾಷನಲ್ ಟೀಮ್ ಲೀಡರ್ ಡಾ. ಮ್ಯಾಗಿ ಲಾರ್ಡ್ ತಿಳಿಸಿದ್ದಾರೆ.

ಈ ತಂತ್ರಜ್ಞಾನ ರಾಸಾಯನಿಕ ಹಾಗೂ ಸೂಜಿ ಮುಕ್ತವಾಗಿದೆ. ಸ್ಮಾರ್ಟ್ ಫೋನ್ ಚಾಲಿತ. ಈ ಉಪಕರಣವನ್ನು ಕಿವಿ ಅಥವಾ ಬೆರಳಿಗೆ ಸ್ಪರ್ಶಿಸಿದರೆ, ಮಲೇರಿಯಾವನ್ನು ಪತ್ತೆ ಹಚ್ಚಿ ಕೆಂಪು ವಿಕಿರಣ ತೋರಿಸುತ್ತದೆ. ಅಲ್ಲದೇ ಈ ಸಾಧನ ಝೀಕಾ ಮತ್ತು ಡೆಂಗ್ಯೂ ಮುಂತಾದ ರೋಗಗಳನ್ನು ಪತ್ತೆ ಹಚ್ಚಲು ಸಹಾಯಕವಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

suddiyaana