ಆರ್ ಸಿಬಿ ಪ್ಲೇಆಫ್ ಜರ್ನಿ ಹಿಂದೆ 3 ಮಾಸ್ಟರ್ ಸ್ಟ್ರೋಕ್ಸ್ – ಫ್ರಾಂಚೈಸಿಗೆ ಏನೆಲ್ಲಾ ಪ್ಲಸ್ ಆಯ್ತು?

ಆರ್ ಸಿಬಿ ಪ್ಲೇಆಫ್ ಜರ್ನಿ ಹಿಂದೆ 3 ಮಾಸ್ಟರ್ ಸ್ಟ್ರೋಕ್ಸ್ – ಫ್ರಾಂಚೈಸಿಗೆ ಏನೆಲ್ಲಾ ಪ್ಲಸ್ ಆಯ್ತು?

2025ರ ಐಪಿಎಲ್ ಈಗ ಆಲ್ಮೋಸ್ಟ್ ಕ್ಲೈಮ್ಯಾಕ್ಸ್ ಸ್ಟೇಜ್​ಗೆ ಬಂದಿದೆ. ಮೇ 27ಕ್ಕೆ ಲೀಗ್ ಹಂತದ ಪಂದ್ಯಗಳೆಲ್ಲಾ ಮುಗಿದು ಆ ನಂತ್ರ ಪ್ಲೇಆಫ್ಸ್ ಬ್ಯಾಟಲ್ ಶುರುವಾಗುತ್ತೆ. ಜೂನ್ 3ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು ಚಾಂಪಿಯನ್ ಯಾರಾಗ್ತಾರೆ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಗ್ಲಿದೆ. ಸೋ ಈ ಸೀಸನ್​ನಲ್ಲಿ ಕ್ರಿಕೆಟ್ ಪ್ರೇಮಿಗಳೆಲ್ಲಾ ಮೆಚ್ಚಿದಂತ ಟೀಂ ಅಂದ್ರೆ ಅದು ಆರ್​ಸಿಬಿ. ಐಪಿಎಲ್ ಹಿಸ್ಟರಿಯಲ್ಲಿ ಈ ಸೀಸನ್​ ಒನ್ ಆಫ್ ದಿ ಬೆಸ್ಟ್. ಹೀಗಾಗಿ ಚಾಂಪಿಯನ್ ಪಟ್ಟಕ್ಕೇರೋ ನೆಚ್ಚಿನ ತಂಡಗಳಲ್ಲಿ ಆರ್ ಸಿಬಿ ಕೂಡ ಒಂದಾಗಿದೆ. ಚೊಚ್ಚಲ ಟ್ರೋಫಿ ನಿರೀಕ್ಷೆಯಲ್ಲಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನ ಪ್ಲೇಆಫ್‌ಗೆ ತಲುಪಿಸಿದ ಮೂರು ಮಾಸ್ಟರ್‌ಸ್ಟ್ರೋಕ್‌ಗಳ ಬಗ್ಗೆ ನೀವು ತಿಳ್ಕೊಳ್ಳೇಬೇಕು.

ಇದನ್ನೂ ಓದಿ : LSG ದಿಗ್ವೇಶ್ಗೆ ರೂಲ್ಸ್ ಇಲ್ವಾ? ರಾಥಿ ಜುಟ್ಟು ಹಿಡೀತಾರಾ ಅಭಿಷೇಕ್?

ಆರ್ ಸಿಬಿ ಮಾಸ್ಟರ್ ಸ್ಟ್ರೋಕ್ -1

ಮೆಗಾ ಹರಾಜಿನಲ್ಲಿ ಟಿಮ್ ಡೇವಿಡ್ & ಜಿತೇಶ್ ಶರ್ಮಾ ಖರೀದಿ!

ನಿಜ ಹೇಳ್ಬೇಕಂದ್ರೆ ಮೊದ್ಲಿಂದಲೂ ಆರ್​ಸಿಬಿ ಅಂದ್ರೆ ಬ್ಯಾಟಿಂಗ್​ನಲ್ಲಿ ಸೂಪರ್ ಸ್ಟ್ರಾಂಗ್ ಆಗೇ ಇದೆ. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್, ಮ್ಯಾಕ್ಸ್​ವೆಲ್ ಹೀಗೆ ಸಾಕಷ್ಟು ಪವರ್ ಹಿಟ್ಟರ್​ಗಳನ್ನ ಕಂಡಿದೆ. ಬಟ್ ಮೇಜರ್ ಮಿಸ್ಟೇಕ್ ಆಗ್ತಾ ಇದ್ದದ್ದು ಫಿನಿಶರ್ ರೋಲ್​ನಲ್ಲಿ. ಡಿಕೆ ಹೊರತುಪಡಿಸಿದ್ರೆ ಫಿನಿಷರ್ ಪಾತ್ರವನ್ನು ನಿರ್ವಹಿಸಬಲ್ಲ ಒಬ್ಬ ಸಮರ್ಥ ಆಟಗಾರನ ಕೊರತೆ ಮೊದ್ಲಿಂದಲೂ ಇತ್ತು. ಬಟ್ ಈ ಸಲ ಹಾಗಾಗಲಿಲ್ಲ. ಫಿನಿಶರ್ ಸ್ಲಾಟ್​ನಲ್ಲಿ ಕ್ರೀಸ್​ಗೆ ಬಂದು ಎದುರಾಳಿ ತಂಡವನ್ನ ಫಿನಿಶ್ ಮಾಡುವಂಥ ಆಟಗಾರರ ದಂಡೇ ಇದೆ. ಅದ್ರಲ್ಲೂ ಟಿಮ್ ಡೇವಿಡ್ ಮತ್ತು ಜಿತೇಶ್ ಶರ್ಮಾ ಸೆಲೆಕ್ಟನ್ ಅಂತೂ ಅಲ್ಟಿಮೇಟ್. ಮೆಗಾ ಹರಾಜಿನಲ್ಲಿ  ಟಿಮ್ ಡೇವಿಡ್ ಅವರನ್ನು 3 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದೇ ದೊಡ್ಡ ಪ್ಲಸ್ ಪಾಯಿಂಟ್. ಹಾಗೇ  ಮೆಗಾ ಹರಾಜಿನಲ್ಲಿ ವಿದರ್ಭದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ಅವರನ್ನು ಬರೋಬ್ಬರಿ 11 ಕೋಟಿ ರೂಪಾಯಿಗೆ ಖರೀದಿಸಿದ್ದು ಟರ್ನಿಂಗ್ ಪಾಯಿಂಟ್. ವಿಕೆಟ್ ಕೀಪರ್ ಬ್ಯಾಟರ್ ಆಗಿರೋ ಜಿತೇಶ್ 142.22 ಸ್ಟ್ರೈಕ್ ರೇಟ್‌ನಲ್ಲಿ 128 ರನ್ ಗಳಿಸಿದ್ದಲ್ಲದೆ, ಸ್ಟಂಪ್‌ಗಳ ಹಿಂದೆಯೂ ಕೈಚಳಕ ತೋರಿಸ್ತಿದ್ದಾರೆ. ಟಿಮ್ ಡೇವಿಡ್ ಅಂತೂ 93.00 ಸರಾಸರಿಯಲ್ಲಿ 186 ರನ್ ಗಳಿಸಿದ್ದಾರೆ. ಅದೂ ಕೂಡ 193.75 ರ ಅದ್ಭುತ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ವಿಷ್ಯ ಅಂದ್ರೆ ಇಡೀ ಸೀಸನ್​ನಲ್ಲಿ 2 ಸಲ ಮಾತ್ರವೇ ಔಟ್ ಆಗಿದ್ದು ಉಳಿದೆಲ್ಲಾ ಪಂದ್ಯಗಳಲ್ಲಿ ನಾಟೌಟ್ ಆಗಿ ಗೇಮ್ ಚೇಂಜಿಂಗ್ ಇನ್ನಿಂಗ್ಸ್ ಆಡಿದ್ದಾರೆ.

ಆರ್ ಸಿಬಿ ಮಾಸ್ಟರ್ ಸ್ಟ್ರೋಕ್ -2

ಭಾರತೀಯ ಆಟಗಾರರಿಗೆ ಅವಕಾಶ ಕೊಟ್ಟಿದ್ದೇ ಪ್ಲಸ್!

ಆರ್​ಸಿಬಿ ತಂಡದಲ್ಲಿ ಸಾಕಷ್ಟು ಅಂತಾರಾಷ್ಟ್ರೀಯ ಪ್ಲೇಯರ್ಸ್ ಇದ್ದಾರೆ. ಬಟ್ ಇವ್ರೆಲ್ಲಾ ಹೆಚ್ಚು ವಿದೇಶಿಗರೇ ಆಗಿದ್ದಾರೆ. ಇನ್ನು ವಿಶ್ವಕ್ರಿಕೆಟ್​ನ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೂಡ ಆರ್​ಸಿಬಿ ತಂಡದಲ್ಲಿ ಇದ್ದಾರೆ. ಬಟ್ ವಿರಾಟ್ ರನ್ನ ಹೊರತು ಪಡಿಸಿ ಫ್ರಾಂಚೈಸಿ ಬೆಂಗಳೂರು ತಂಡದಲ್ಲಿ ಸ್ಥಳೀಯ ಆಟಗಾರರಿಗೆ ಪ್ರಿಪರೆನ್ಸ್ ಕೊಟ್ಟಿದ್ದಾರೆ. ತಂಡಕ್ಕೆ ಗಣನೀಯ ಕೊಡುಗೆ ನೀಡಿರುವ ಭಾರತೀಯ ಆಟಗಾರರ ಮೇಲೆ ಹೆಚ್ಚಿನ ನಂಬಿಕೆ ಇಟ್ಟು ಅವಕಾಶಗಳನ್ನ ಕೊಡ್ತಿದ್ದಾರೆ. ರಜತ್ ಪಾಟಿದಾರ್ ಅವರನ್ನು ಹೊಸ ನಾಯಕರನ್ನಾಗಿ ನೇಮಿಸೋದ್ರ ಜೊತೆಗೆ ಕೃನಾಲ್ ಪಾಂಡ್ಯ, ದೇವದತ್ ಪಡಿಕ್ಕಲ್ ಮತ್ತು ಯಶ್ ದಯಾಳ್ ಅವರಂತಹ ಆಟಗಾರರಿಗೆ ಕ್ರೂಶಿಯಲ್ ಟೈಮ್​ಗಳಲ್ಲಿ ತಮ್ಮ ಸಾಮರ್ಥ್ಯ ಪ್ರೂವ್ ಮಾಡೋಕೆ ಅವಕಾಶ ಸಿಕ್ಕಿದೆ. ಮೊದ್ಲೆಲ್ಲಾ ಸ್ಟಾರ್​ಡಂ ಗೆ ಮಾತ್ರ ಇಂಪಾರ್ಟೆನ್ಸ್ ಕೊಡ್ತಿದ್ರು. ಬಟ್ ಈ ಸಲ ಪರ್ಫಾಮೆನ್ಸ್​ಗೆ ಅವಕಾಶ ಸಿಗ್ತಿದೆ. ಸೋ ಇದು ಈ ಟೂರ್ನಿಯಲ್ಲಿನ ಮಹತ್ವದ ಬದಲಾವಣೆ. ಇದ್ರಿಂದ ಎಫೆಕ್ಟಿವ್ ರಿಸಲ್ಟ್ ಕೂಡ ಬರ್ತಿದೆ.

ಆರ್ ಸಿಬಿ ಮಾಸ್ಟರ್ ಸ್ಟ್ರೋಕ್ -3

ಕ್ರೂಶಿಯಲ್ ಟೈಮಲ್ಲಿ ಜೋಶ್, ದಯಾಳ್ & ಭುವಿ ಮ್ಯಾಜಿಕ್!

ಡೇ ಒನ್​ನಿಂದಲೂ ಆರ್‌ಸಿಬಿಗೆ ಬ್ಯಾಟಿಂಗ್ ದೊಡ್ಡ ಸಮಸ್ಯೆಯಾಗಿಲ್ಲದಿದ್ದರೂ, ಬೌಲಿಂಗ್ ಮಾತ್ರ ಫೇಲ್ಯೂರ್ ಇದ್ದೇ ಇತ್ತು. ಆರ್​ಸಿಬಿ ಇಷ್ಟು ವರ್ಷ ಕಪ್ ಗೆಲ್ಲದೆ ಇರೋಕೆ ಪ್ರಮುಖ ಕಾರಣಗಳಲ್ಲಿಲ ಬೌಲಿಂಗ್ ಸ್ಕ್ವಾಡ್ ವೀಕ್ ಇದ್ದದ್ದೂ ಕೂಡ. ಬಟ್ ಈ ಸೀಸನ್​ನಲ್ಲಿ ಎಲ್ರೂ ಕೂಡ ಗೇಮ್ ಚೇಂಜಿಂಗ್ ಬೌಲಿಂಗ್ ಪ್ರದರ್ಶನ ನೀಡ್ತಿದ್ದಾರೆ. ಜೋಶ್ ಹ್ಯಾಜಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ಅವರಂತಹ ಆಟಗಾರರು ಪವರ್‌ಪ್ಲೇನಲ್ಲಿ ನಿರ್ಣಾಯಕ ವಿಕೆಟ್‌ಗಳನ್ನು ಬೇಟೆಯಾಡೋದ್ರ ಜೊತೆಗೆ ಡೆತ್ ಓವರ್​ಗಳಲ್ಲೂ ರನ್ಸ್ ಕಂಟ್ರೋಲ್ ಮಾಡ್ತಿದ್ದಾರೆ. ಅದ್ರಲ್ಲೂ 20ನೇ ಓವರ್​ನಲ್ಲಿ ಯಶ್ ದಯಾಳ್ ತಮ್ಮ ಮೇಲಿಟ್ಟಿರೋ ನಂಬಿಕೆ ಉಳಿಸಿಕೊಳ್ಳೋ ಥರ ಸ್ಪೆಲ್ ಹಾಕಿದ್ದಾರೆ. ಇದೇ ಪ್ರದರ್ಶನ ಹಲವು ಪಂದ್ಯಗಳನ್ನೂ ಗೆಲ್ಲಿಸಿಕೊಟ್ಟಿದೆ. ಜೋಶ್ ಹ್ಯಾಜಲ್‌ವುಡ್ ಸದ್ಯ ಆರ್​ಸಿಬಿ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದು, 17.27 ರ ಸರಾಸರಿಯಂತೆ 18 ವಿಕೆಟ್‌ಗಳನ್ನು ಪಡೆದಿದ್ದಾರೆ. ಮತ್ತು 8.44 ರ ಎಕಾನಮಿ ಹೊಂದಿದ್ದಾರೆ. ಭುವನೇಶ್ವರ್ ಕುಮಾರ್ 28.25 ರ ಸರಾಸರಿಯಲ್ಲಿ 12 ವಿಕೆಟ್‌ಗಳನ್ನು ಪಡೆದಿದ್ದಾರೆ ಮತ್ತು 8.92 ರ ಎಕಾನಮಿ ಹೊಂದಿದ್ದಾರೆ.

Shantha Kumari

Leave a Reply

Your email address will not be published. Required fields are marked *