18 ಸೀಸನ್.. 8,509 ರನ್ಸ್ – ಫ್ರಾಂಚೈಸಿಗಳ ವಿರುದ್ಧ ವಿರಾಟ್ ಕೊಹ್ಲಿ ವಿರಾಟ ರೂಪ!

18 ಸೀಸನ್.. 8,509 ರನ್ಸ್ – ಫ್ರಾಂಚೈಸಿಗಳ ವಿರುದ್ಧ ವಿರಾಟ್ ಕೊಹ್ಲಿ ವಿರಾಟ ರೂಪ!

ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಡೇ ಒನ್​ನಿಂದ ಪಂದ್ಯಗಳನ್ನ ಆಡ್ತಿರೋರ ಪೈಕಿ ವಿರಾಟ್ ಕೊಹ್ಲಿ ಕೂಡ ಒಬ್ರು. ಅದೂ ಒಂದೇ ಫ್ರಾಂಚೈಸಿಗಾಗಿ 18 ಸೀಸನ್​ಗಳನ್ನ ಆಡಿದ ಏಕೈಕ ಪ್ಲೇಯರ್. ಆರ್​ಸಿಬಿ ಟೀಂ ಐಕಾನ್ ಪ್ಲೇಯರ್ ಆಗಿರೋ ವಿರಾಟ್ ಐಪಿಎಲ್​ನಲ್ಲೂ ರನ್ ಮಳೆ ಸುರಿಸಿದ್ದಾರೆ. ಸೀಸನ್​ನಿಂದ ಸೀಸನ್​ಗೆ ಅವ್ರ ಬ್ಯಾಟಿಂಗ್ ಅಬ್ಬರ ಹೆಚ್ಚಾಗೇ ಇದೆ. ಐಪಿಎಲ್​ನಲ್ಲಿ ಇದುವರೆಗೆ 8,509 ರನ್ ಗಳಿಸಿದ್ದಾರೆ. ಪ್ರತಿಯೊಂದು ತಂಡದ ವಿರುದ್ಧವೂ ಹೈಯೆಸ್ಟ್ ಸ್ಕೋರ್ ಕಲೆ ಹಾಕಿದ್ದಾರೆ. ಅದ್ರಲ್ಲೂ ನಾಲ್ಕು ಟೀಂ ಎದುರಲ್ಲಿ ಸಾವಿರ ಪ್ಲಸ್ ರನ್ಸ್ ಕಲೆ ಹಾಕಿದ ಏಕೈಕ ಆಟಗಾರ ಕೊಹ್ಲಿ. ಸೋ ವಿರಾಟ್ ಯಾವ್ಯಾವ ತಂಡಗಳ ಎದುರು ಎಷ್ಟೆಷ್ಟು ರನ್ಸ್ ಸ್ಕೋರ್ ಮಾಡಿದ್ದಾರೆ ಅನ್ನೋದನ್ನ ನೋಡೋದಾದ್ರೆ.. ವಿರಾಟ್ ಕೊಹ್ಲಿ 2008ರಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಪರ ಕಣಕ್ಕಿಳಿಯುತ್ತಿದ್ದಾರೆ. ಇದುವರೆಗೆ 263 ಪಂದ್ಯಗಳನ್ನ ಆಡಿದ್ದು ಈ ಮೂಲಕ 8509 ರನ್ ಕಲೆ ಹಾಕಿದ್ದಾರೆ.

ಇದನ್ನೂ ಓದಿ : ಮ್ಯಾಚ್ ಶಿಫ್ಟ್ RCBಗೇ ಲಾಭ –  SRH, LSG ಸೋಲಿಸಿದ್ರೆ ಫೈನಲ್?

ಐಪಿಎಲ್ ನಲ್ಲಿ ವಿರಾಟ ರೂಪ!

ಎದುರಾಳಿ                 ಇನ್ನಿಂಗ್ಸ್                    ರನ್ಸ್

ಚೆನ್ನೈ                       34                        1,146

ಡೆಲ್ಲಿ                        30                        1,130

ಪಂಜಾಬ್                   34                        1,104

ಕೊಲ್ಕತ್ತಾ                   32                         1,021

ಮುಂಬೈ                     34                         922

ರಾಜಸ್ಥಾನ                  32                           896

ಹೈದ್ರಾಬಾದ್              23                           762

ಗುಜರಾತ್                 6                            351

ಲಕ್ನೋ                    5                            139

ಇವಿಷ್ಟು ಪ್ರಸ್ತುತ ಟೂರ್ನಿಯಲ್ಲಿ ಪರ್ಫಾಮ್ ಮಾಡ್ತಿರೋ ತಂಡಗಳು ಎದುರು ವಿರಾಟ್ ಕೊಹ್ಲಿ ಕಲೆ ಹಾಕಿರೋ ರನ್ಸ್.. ಇಷ್ಟೇ ಅಲ್ದೇ ಡೆಕ್ಕನ್ ಚಾರ್ಜರ್ಸ್ ವಿರುದ್ಧ 306, ಗುಜರಾತ್ ಲಯನ್ಸ್ ಎದುರು 283, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ 971, ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ 128, ಕೊಚ್ಚಿ ಟಸ್ಕರ್ಸ್ ವಿರುದ್ಧ 50  ರನ್ ಗಳಿಸಿದ್ದಾರೆ. ಬಟ್ ಈಗ ಈ ಐದು ತಂಡಗಳು ಈಗ ಐಪಿಎಲ್‌ನಲ್ಲಿ ಆಡುತ್ತಿಲ್ಲ. ಸೋ ಎಲ್ಲಾ ಟೀಮ್​ಗಳ ಎದುರಿನ ಸ್ಕೋರ್​ಗಳನ್ನ ಸೇರಿಸಿ ಎಂಟೂವರೆ ಸಾವಿರಕ್ಕೂ ಹೆಚ್ಚು ರನ್ ಕಲೆ ಹಾಕಿದ್ದಾರೆ. ಸದ್ಯ ಈ ಲಿಸ್ಟ್​ನಲ್ಲಿ ಸೆಕೆಂಡ್ ಪ್ಲೇಸ್​ನಲ್ಲಿರೋದು ರೋಹಿತ್ ಶರ್ಮಾ. ರೋಹಿತ್​ ಶರ್ಮಾ 268 ಇನ್ನಿಂಗ್ಸ್​ಗಳಿಂದ 6928 ರನ್ಸ್ ಸ್ಕೋರ್ ಮಾಡಿದ್ದಾರೆ. ಸದ್ಯದ ಪರಿಸ್ಥಿತಿ ನೋಡಿದ್ರೆ ಸದ್ಯಕ್ಕೆ ವಿರಾಟ್ ಅವ್ರ ಹೈಯೆಸ್ಟ್ ಸ್ಕೋರ್ ರೆಕಾರ್ಡ್ ನ ಬ್ರೇಕ್ ಮಾಡೋರು ಯಾರೂ ಇಲ್ಲ.

Shantha Kumari