ಮೇ 23ಕ್ಕೆ ಬೆಂಗಳೂರು & ಹೈದ್ರಾಬಾದ್ ಮುಖಾಮುಖಿ – ಕಳೆದ ವರ್ಷದ ಪಂದ್ಯದ ರಿಸಲ್ಟ್ ನೆನಪಿದ್ಯಾ?

ಮೇ 23ಕ್ಕೆ ಬೆಂಗಳೂರು & ಹೈದ್ರಾಬಾದ್ ಮುಖಾಮುಖಿ – ಕಳೆದ ವರ್ಷದ ಪಂದ್ಯದ ರಿಸಲ್ಟ್ ನೆನಪಿದ್ಯಾ?

ಮೇ 23 ರಂದು ಸನ್ ರೈಸರ್ಸ್ ಹೈದ್ರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಲಕ್ನೋದಲ್ಲಿ ಮುಖಾಮುಖಿಯಾಗಲಿವೆ. ಮಳೆ ಕಾರಣಕ್ಕೆ ಪಂದ್ಯವನ್ನ ಏಕನಾ ಸ್ಟೇಡಿಯಮ್ ನಲ್ಲಿ ನಡೆಸೋಕೆ ಬಿಸಿಸಿಐ ನಿರ್ಧಾರ ತೆಗೆದುಕೊಂಡಿದೆ. ಹೈದ್ರಾಬಾದ್ ಈ ಸೀಸನ್ ನಲ್ಲಿ ಅಷ್ಟೇನು ಒಳ್ಳೆ ಪ್ರದರ್ಶನ ನೀಡದೇ ಇದ್ರೂ ಲಾಸ್ಟ್ ಇಯರ್ ಮ್ಯಾಚ್ ನ ಮರೆಯೋಕೆ ಸಾದ್ಯನೇ ಇಲ್ಲ.

ಇದನ್ನೂ ಓದಿ : RCBಗೆ 17+4=21 ಚಾಲೆಂಜ್  – ಟಾಪ್ -2 ಸೇಫ್.. ಡೇಂಜರ್ ಝೋನ್ ಏನು?

3 ವಿಕೆಟ್ ನಷ್ಟಕ್ಕೆ 287 ರನ್!

2024ರ ಸೀಸನ್ ​ನಲ್ಲಿ ಏಪ್ರಿಲ್ 15ರಂದು ಆರ್ ಸಿಬಿ ವಿರುದ್ಧ ಇತಿಹಾಸ

ಹೈದರಾಬಾದ್‌ ತಂಡ 20 ಓವರ್​ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ 287 ರನ್

ಅಭಿಷೇಕ್ ಶರ್ಮಾ 34 ರನ್, ಹೆಡ್ ಕೇವಲ 41 ಎಸೆತಗಳಲ್ಲಿ 102 ರನ್‌

ಹೆನ್ರಿಚ್ ಕ್ಲಾಸೆನ್ ಕೂಡ 67 ರನ್, ಮಾರ್ಕ್ರಾಮ್ 32, ಸಮದ್ 37 ರನ್

287 ರನ್ ಗಳ ಟಾರ್ಗೆಟ್ ಬೆನ್ನತ್ತಿದ ಆರ್ ಸಿಬಿ 267 ರನ್ ಗಳನ್ನ ಕಲೆ ಹಾಕಿದ್ರು

ಪಂದ್ಯದಲ್ಲಿ ಎರಡೂ ತಂಡಗಳು ಸೇರಿ ಒಟ್ಟಾರೆಯಾಗು 549 ರನ್

ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟ್ಸ್‌ಮನ್ಸ್ 22 ಸಿಕ್ಸರ್‌ ಗಳನ್ನು ಸಿಡಿಸಿದ್ರು

ಬೆಂಗಳೂರು ತಂಡ ಕೂಡ 16 ಸಿಕ್ಸರ್‌, ಒಟ್ಟು 38 ಸಿಕ್ಸರ್‌ಗಳು ದಾಖಲು

ಸದ್ಯ ಆರ್ ಸಿಬಿ ಮತ್ತು ಎಸ್ ಆರ್ ಹೆಚ್ ತಂಡಗಳು ಕಳೆದ ಪಂದ್ಯಗಳಲ್ಲಿ ಗೆಲುವಿನ ಮೂಲಕವೇ ಎದುರು ಬದುರಾಗ್ತಿದೆ. ಮೇ 3ರಂದು ಆರ್ ಸಿಬಿ ತಂಡ ಬೆಂಗಳೂರಿನಲ್ಲಿ ಸಿಎಸ್ ಕೆ ವಿರುದ್ಧ 2 ರನ್ ಗಳ ರೋಚಕ ಗೆಲುವು ದಾಖಲಿಸಿತ್ತು. ಆ ಬಳಿಕ ಮೇ 17ರಂದು ಕೆಕೆಆರ್ ವಿರುದ್ಧ ಮ್ಯಾಚ್ ಇದ್ರೂ ಕೂಡ ರದ್ದಾಗಿತ್ತು. ಇನ್ನು ಹೈದ್ರಾಬಾದ್ ಟೀಂ ಮೇ 19ರಂದು ಲಕ್ನೋ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತ್ತು. ಈ ಮೂಲಕ ಎರಡೂ ತಂಡಗಳು ಗೆಲುವಿನಲ್ಲೇ ಕಾಲಿಡ್ತಿದೆ. ಆರ್‌ಸಿಬಿ ಮತ್ತು ಎಸ್‌ಆರ್‌ಹೆಚ್ ತಂಡಗಳು ಇದುವರೆಗೆ 25 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಈ 25 ಪಂದ್ಯಗಳಲ್ಲಿ ಆರ್‌ಸಿಬಿ 11 ಪಂದ್ಯಗಳಲ್ಲಿ ಗೆದ್ದಿದ್ದರೆ, ಎಸ್‌ಆರ್‌ಹೆಚ್ 13 ಬಾರಿ ಜಯಗಳಿಸಿದೆ. 1 ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿತು. ಈ ಸ್ಟಾಟ್ಸ್ ನೋಡಿದ್ರೆ ಹೈದ್ರಾಬಾದ್ ಮೇಲು ಗೈ ಸಾಧಿಸಿದೆ. ಕಳೆದ ಐದು ಪಂದ್ಯಗಳ ರಿಸಲ್ಟ್ ನೋಡಿದ್ರೆ ಆರ್ ಸಿಬಿ ಮೂರು ಬಾರಿ ಗೆದ್ದಿದೆ.

ಈ ಸೀಸನ್​ನಲ್ಲಿ ಆರ್​ಸಿಬಿ ಬೆಸ್ಟ್​ ಪರ್ಫಾಮೆನ್ಸ್ ಕೊಡ್ತಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಅಲ್ಟಿಮೇಟ್ ಆಗಿದೆ. ಅದ್ರಲ್ಲೂ ಈ ಸೀಸನ್​ನಲ್ಲಿ ಆರ್​ಸಿಬಿಗೆ ಪ್ಲಸ್ ಪಾಯಿಂಟ್ ಅಂದ್ರೆ ಅವೇ ಪಿಚ್​ನಲ್ಲಿ ಆಡಿರುವಂತ ಎಲ್ಲಾ ಪಂದ್ಯಗಳನ್ನ ಗೆದ್ದಿರೋದು. ಇದೀಗ ಲಕ್ನೋಗೆ ಪಂದ್ಯ ಶಿಫ್ಟ್ ಆಗಿರೋದು ಪ್ಲಸ್ಸೇ ಆಗಲಿದೆ. ಹೊರಗಿನ ಮೈದಾನಗಳಲ್ಲಿ ಆರಕ್ಕೆ ಆರೂ ಪಂದ್ಯಗಳನ್ನ ಗೆದ್ದಿದೆ. ಹೋಂ ಗ್ರೌಂಡ್​ನಲ್ಲಿ ಮೂರು ಮ್ಯಾಚ್ ಸೋತು ಎರಡು ಪಂದ್ಯ ಗೆದ್ದಿದೆ. ಕೆಕೆಆರ್ ವಿರುದ್ಧದ ಪಂದ್ಯ ಕ್ಯಾನ್ಸಲ್ ಆಗಿದೆ. ಸೋ ಆರ್​ಸಿಬಿಗೆ ಅವೇ ಪಿಚ್ ಅದೃಷ್ಟ ಇರೋದ್ರಿಂದ ಲಕ್ನೋದಲ್ಲಿ ಹೈದ್ರಾಬಾದ್ ತಂಡವನ್ನ ಬಗ್ಗು ಬಡಿಯೋ ಎಲ್ಲಾ ಚಾನ್ಸಸ್ ಇದೆ. ಆ ಬಳಿಕ ಲಕ್ನೋ ಸೂಪರ್ ಜೈಂಟ್ಸ್​ ಜೊತೆ ಬೆಂಗಳೂರು ತಂಡ ಅದೇ ಮೈದಾನದಲ್ಲಿ ಮೇ 27 ರಂದು ಕಣಕ್ಕಿಳಿಯಲಿದೆ. ಮೇ 29 ರಿಂದ ಪ್ಲೇ-ಆಫ್ ಪಂದ್ಯಗಳು ನಡೆಯಲಿವೆ. ಜೂನ್ 3 ರಂದು ಫೈನಲ್ ಮ್ಯಾಚ್ ನಡೆಯಲಿದೆ.

Shantha Kumari