ಜೈಲಿನಲ್ಲೇ ರಾಧಾ ಪಿತೂರಿ.. ಡಿಸಿ ಸ್ನೇಹ.. ಈಗ ಕಂಠಿ ಸಾವು? – ಸುತ್ತಿ ಬಳಸಿ ಸಾವಿನ ಸ್ಟೋರಿ?

ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಸೀರಿಯಲ್ ಡೈರೆಕ್ಟರ್ ಒಂದಾದ ಮೇಲೊಂದು ಟ್ವಿಸ್ಟ್ ಕೊಡ್ತಾ ಬರ್ತಿದ್ದಾರೆ. ರಾಧಾ ಬಂಡವಾಳ ಬಯಲಾಗ್ತಿದ್ದಂತೆ ಆಕೆಯನ್ನ ಜೈಲಿಗೆ ಕಳುಹಿಸಲಾಗಿತ್ತು. ಬಳಿಕ ಸ್ನೇಹ ಕಂಠಿ ಮದುವೆ ಮಾಡಿಸಲಾಯ್ತು.. ಎಲ್ಲಾ ಸರಿಹೋಯ್ತು.. ಇನ್ನು ಸೀರಿಯಲ್ ಮುಕ್ತಾಯ ಆಗುತ್ತೆ ಅಂತಾ ವೀಕ್ಷಕರು ಅಂದ್ಕೊಂಡಿದ್ರು.. ಆದ್ರೆ ಸೀರಿಯಲ್ ಡೈರೆಕ್ಟರ್ ವೀಕ್ಷಕರಿಗೆ ಶಾಕ್ ಕೊಟ್ಟಿದ್ದಾರೆ. ಇದೀಗ ಸೀರಿಯಲ್ ಸ್ಟೋರಿ ಹೊಸ ತಿರುವು ಪಡೆದುಕೊಳ್ಳೋ ಮುನ್ಸೂಚನೆ ಕೊಟ್ಟಿದ್ದಾರೆ ಸೀರಿಯಲ್ ಡೈರೆಕ್ಟರ್.
ಇದನ್ನೂ ಓದಿ: ಗೃಹ ಸಚಿವ ಪರಮೇಶ್ವರ್‌ಗೆ ಇಡಿ ಶಾಕ್ – ಸಿದ್ದಾರ್ಥ ಮೆಡಿಕಲ್ ಕಾಲೇಜು ಸೇರಿದಂತೆ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ
ಪುಟ್ಟಕ್ಕನ ಮಕ್ಕಳು ಸೀರಿಯಲ್ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪಾತ್ರಗಳು ಬದಲಾದಂತೆ ಸ್ಟೋರಿ ಕೂಡ ಚೇಂಜ್ ಮಾಡಲಾಗ್ತಿದೆ. ಡಿಸಿ ಸ್ನೇಹ ಸತ್ತ ಬಳಿಕ ಕಂಠಿ ಒಂಟಿಯಾಗಿದ್ದ. ಬಳಿಕ ಆತನ ಬಾಳಲ್ಲಿ ಮತ್ತೊಬ್ಬಳು ಸ್ನೇಹ ಎಂಟ್ರಿ ಕೊಟ್ಟಿದ್ಲು. ಆಕೆಗೆ ಡಿಸಿ ಸ್ನೇಹ ಹೃದಯ ಕಸಿ ಮಾಡಲಾಗಿತ್ತು. ಈ ವಿಚಾರ ಆತನಿಗೆ ಗೊತ್ತಾಗ್ತಿದ್ದಂತೆ ಆಕೆ ಮೇಲೆ ಕಂಠಿಗೆ ಪ್ರೀತಿ ಚಿಗುರಿತು. ಆದ್ರೆ ಕುತಂತ್ರಿ ರಾಧಾ ಅವರಿಬ್ಬರನ್ನ ದೂರ ಮಾಡಲು ಟ್ರೈ ಮಾಡಿದ್ಲು.. ಕೊನೆಗೆ ಆಕೆಯ ಕೃತ್ಯ ಎಲ್ಲರ ಮುಂದೆ ಬಯಲಾಯ್ತು.. ಕಂಠಿ, ಸ್ನೇಹಾ ಮದುವೆಗೆ ಅಡ್ಡಿಯಾಗಿದ್ದ ಆತಂಕಗಳು ದೂರವಾಯ್ತು. ಹೀಗಾಗಿ ಬಂಗಾರಮ್ಮ ಪುಟ್ಟಕ್ಕ ಸೇರ್ಕೊಂಡು ಅವರಿಬ್ರ ಮದುವೆ ಮಾಡಿಸಿದ್ರು.. ಕಂಠಿ ಸ್ನೇಹ ಮದುವೆಯೂ ಆಯ್ತು.. ರಾಧಾ ಜೈಲುಪಾಲಾಗಿದ್ದು ಆಯ್ತು.. ಸೀರಿಯಲ್ ಸ್ಟೋರಿ ಇಷ್ಟೇ ಅಲ್ವಾ? ಇನ್ನೇನು ಕೆಲವೇ ದಿನಗಳಲ್ಲಿ ಈ ಸೀರಿಯಲ್ ಮುಕ್ತಾಯ ಆಗುತ್ತೆ ಅಂತಾ ವೀಕ್ಷಕರು ಅಂದ್ಕೊಂಡಿದ್ರು.. ಆದ್ರೆ ಅಲ್ಲಾಗಿದ್ದೇ ಬೇರೆ.. ಸೀರಿಯಲ್ ನಲ್ಲಿ ಹೊಸ ಟ್ವಿಸ್ಟ್ ಕೊಡೋ ಬಗ್ಗೆ ನಿರ್ದೇಶಕರು ಸುಳಿವು ನೀಡಿದ್ದಾರೆ.
ಹೌದು, ಕಂಠಿ ಸ್ನೇಹ ಈಗ ಬಂಗಾರಮ್ಮನ ಮನೆಗೆ ಬಂದಿದ್ದಾರೆ. ನವ ಜೋಡಿ ಪ್ರೀತಿಯ ಅಲೆಯಲ್ಲಿ ತೇಲಾಡ್ತಾ ಇದ್ರೆ, ಇತ್ತ ರಾಧಾ ಜೈಲಿನಲ್ಲೇ ಆಟ ಶುರುಮಾಡ್ಕೊಂಡಿದ್ದಾಳೆ. ಜೈಲಿನಿಂದಲೇ ರಾಧಾ ಸ್ನೇಹಾಗೆ ಕಾಲ್ ಮಾಡಿದ್ದಾಳೆ. ಏನೇ ನನ್ ಸೌತಿ.. ಕಂಠಿ ಮಾವನ್ನ ಮದ್ವೆ ಆಗಿ.. ಬಂಗಾರಮ್ಮನ ಸೊಸೆ ಆಗಿ ಮೆರಿತಾ ಇದ್ಯಾ ಅಂತಾ ಕೇಳಿದ್ದಾಳೆ. ಯಾರು ನೀವು ಅಂತಾ ಸ್ನೇಹ ಕೇಳಿದಾಗ ನಿನ್ನ ಗಂಡನ ಪಾಲಿನ ಯಮ.. ಮುತ್ತೈದೇ ಆದೆ ಅಂತಾ ಮೆರಿಬೇಡ.. ನಿನ್ನ ಗಂಡನ ಪ್ರಾಣ ತೆಗೆದು.. ನಿನ್ನನ್ನ ಆದಷ್ಟು ಬೇಗ ವಿಧವೆ ಮಾಡ್ತೀನಿ.. ಬಂಗಾರಮ್ಮನ ಮನೆಯವರನ್ನ ಯಾರನ್ನ ಬಿಡಲ್ಲ.. ಎಲ್ಲರನ್ನ ಸಾಯಿಸ್ತೀನಿ ಅಂತಾ ಹೇಳಿದ್ದಾಳೆ.
ಮತ್ತೊಂದ್ಕಡೆ ಸ್ನೇಹ ಹಾಗೂ ಕಂಠಿ ಆಚೆ ಸುತ್ತಾಡಲು ಹೋಗಿದ್ರು. ಮನೆಗೆ ವಾಪಾಸ್ ಬರುವಾಗ ಕಂಠಿ ಮೇಲೆ ಅಟ್ಯಾಕ್ ಮಾಡಿದ್ದಾರೆ. ಸ್ನೇಹ ಕಣ್ಣೆದುರೇ ಕಂಠಿಗೆ ಚಾಕು ಚುಚ್ಚಿದ್ದಾನೆ. ಈ ವೇಳೆ ಕಂಠಿ ನೆಲಕ್ಕೆ ಬಿದ್ದಿದ್ದಾನೆ. ಹಾಗಾದ್ರೆ ಕಂಠಿಯೂ ಸಾಯ್ತಾನಾ? ಸ್ನೇಹ ಮುಂದೇನು ಮಾಡ್ತಾಳೆ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರನ್ನ ಕಾಡ್ತಿದೆ.
ಇದೀಗ ಸೀರಿಯಲ್ ನೋಡಿದ ವೀಕ್ಷಕರು ಅಸಮಧಾನ ಹೊರ ಹಾಕಿದ್ದಾರೆ.. ಈ ಸೀರಿಯಲ್ ನಲ್ಲಿ ಬರೀ ಸಾಯೋದು.. ಅತ್ತು ಗೋಳಾಡೋದನ್ನ ನೋಡೋ ದೌರ್ಭಾಗ್ಯ ನಮ್ಮದು. ಸೀರಿಯಲ್ ಟ್ರ್ಯಾಕ್ ಬರ್ತಿದೆ ಅನ್ನುವಾಗಲೇ ಮತ್ತೆ ಸ್ಟೋರಿ ಹಳಿ ತಪ್ತಿದೆ.. ಕಂಠಿಯನ್ನ ಸಾಯಿಸಿದ್ರೆ.. ಇನ್ನು ಒಂದು ತಿಂಗಳು ಗೋಳಾಡೋದನ್ನ ನೋಡ್ಬೇಕಾಗುತ್ತೆ. ಇದಕ್ಕಿಂತ ಸೀರಿಯಲ್ ಮುಗಿಸಿದ್ರೆ ಬೆಸ್ಟ್ ಅಂತಾ ವೀಕ್ಷಕರು ಕಾಮೆಂಟ್ ಮಾಡ್ತಿದ್ದಾರೆ.