ಮದುಮಗನಿಂದ ವಧುವಿಗೆ ‘ಕತ್ತೆ’ ಉಡುಗೊರೆ

ಮದುಮಗನಿಂದ ವಧುವಿಗೆ ‘ಕತ್ತೆ’ ಉಡುಗೊರೆ

ಇಸ್ಲಾಮಾಬಾದ್‌: ಮದುವೆ ಮನೆ ಅಂದರೆ ಅಲ್ಲಿ ಉಡುಗೊರೆ ವಿನಿಮಯ ಇದ್ದೇ ಇರುತ್ತದೆ. ವಧು, ವರನಿಗೆ ಉಡುಗೊರೆ ನೀಡಿ ಸರ್ಪ್ರೈಸ್ ಕೊಟ್ಟರೆ, ವರ ವಧುವಿಗೆ ವಿಶೇಷ ಉಡುಗೊರೆ ನೀಡಿ ಸಂತಸ ಪಡಿಸುತ್ತಾನೆ. ಆದರೆ ಇಲ್ಲೊಬ್ಬ ತನ್ನ ಪತ್ನಿಗೆ ಉಡುಗೊರೆ ನೀಡಿದ್ದಾನೆ. ಇದರಿಂದ ಆಕೆ ಖುಷಿಗೊಂಡಿದ್ದರೆ, ಅಲ್ಲಿ ನೆರೆದಿದ್ದವರು ಶಾಕ್ ಆಗಿದ್ದಾರೆ.

ಪಾಕಿಸ್ತಾನದ ಯೂಟ್ಯೂಬರ್‌ ಅಜ್ಲಾನ್ ಶಾ ತನ್ನ ಮದುವೆಯಲ್ಲಿ ಪತ್ನಿ ವಾರಿಶಾಳಿಗೆ ಉಡುಗೊರೆಯೊಂದನ್ನು ಕೊಟ್ಟು ಸಂತಸ ಪಡಿಸಿದ್ದಾರೆ. ಅಂದರೆ ಯಾರೂ ನಿರೀಕ್ಷೆ ಮಾಡದ ಪ್ರೀತಿಯ ಉಡುಗೊರೆ ನೀಡಿದ್ದಾರೆ. ಅದು ಕೊಟ್ಟದ್ದು ಕತ್ತೆ ಮರಿಯನ್ನು.!

ಇದನ್ನೂ ಓದಿ:ಮದುವೆ ಮನೆಗೆ ಗೂಳಿ ಎಂಟ್ರಿ… ಉಸಿರು ಬಿಗಿಹಿಡಿದು ನೋಡುವಂತಿದೆ ವಿಡಿಯೋ…

ಖ್ಯಾತ ಯೂಟ್ಯೂಬರ್‌ ಆಗಿರುವ ಅಜ್ಲಾನ್‌ ಶಾ ತಾನು ಇಷ್ಟಪಟ್ಟ ವಾರಿಶಾ ಅವರೊಂದಿಗೆ ವಿವಾಹವಾಗಿದ್ದಾರೆ. ವಿವಾಹಕ್ಕೂ ಮೊದಲು ತನ್ನ ಇಷ್ಟಕಷ್ಟಗಳನ್ನು ಅರ್ಥ ಮಾಡಿಕೊಂಡು ಇಬ್ಬರೂ ಕುಟುಂಬದ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಮದುವೆಯ ವೇದಿಕೆಯಲ್ಲಿ ತನ್ನ ಪತ್ನಿಗೆ ಸರ್ಪ್ರೈಸ್‌ ನೀಡಲು ಅಜ್ಲಾನ್‌ ಮರಿ ಕತ್ತೆಯನ್ನು ಆಕೆಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ. ಅಜ್ಲಾನ್‌ ಅವರಿಗೆ ಕತ್ತೆಗಳೆಂದರೆ ಇಷ್ಟ, ಅವರ ಪತ್ನಿಗೂ ಕತ್ತೆಯ ಮರಿ ಎಂದರೆ ಇಷ್ಟ ಆ ಕಾರಣಕ್ಕಾಗಿ ಅಜ್ಲಾನ್‌ ಪತ್ನಿಗೆ ಪ್ರೀತಿಯಿಂದ ಕತ್ತೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಪತಿಯ ಉಡುಗೊರೆಗೆ ಭಾವುಕರಾಗಿ ಪತ್ನಿ ಕತ್ತೆಯನ್ನು ಪ್ರೀತಿಯಿಂದ ಮುದ್ದಾಡುವ ವಿಡಿಯೋ ಇನ್ಸ್ಟಾಗ್ರಾಮ್‌ ನಲ್ಲಿ ಪೋಸ್ಟ್ ಮಾಡಲಾಗಿದೆ. ಇದೀಗ ಭಾರಿ ವೈರಲ್ ಆಗಿದೆ. ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ಇಬ್ಬರ ಪ್ರಾಣಿ ಪ್ರೀತಿಗೆ ಶ್ಲಾಘಿಸಿದ್ದು, ಇನ್ನು ಕೆಲವರು ಟ್ರೋಲ್‌ ಮಾಡಿದ್ದಾರೆ. ವಾರಿಶಾ ಅವರಿಗೆ ಎರಡೂ ಕತ್ತೆಯೂ ಒಟ್ಟಾಗಿಯೇ ಸಿಕ್ಕಿದೆ ಎಂದು ಬಳಕೆದಾರರೊಬ್ಬರು ತಮಾಷೆಯಾಗಿ ಕಮೆಂಟ್‌ ಮಾಡಿದ್ದಾನೆ.

suddiyaana