ಮೂರು ಸಲ ಫೈನಲ್.. 10ನೇ ಸಲ ಪ್ಲೇಆಫ್ – ಈ ಸಲ ಕಪ್ ಗೆಲ್ಲುತ್ತಾ ಬೆಂಗಳೂರು ಟೀಂ?

ಮೂರು ಸಲ ಫೈನಲ್.. 10ನೇ ಸಲ ಪ್ಲೇಆಫ್ – ಈ ಸಲ ಕಪ್ ಗೆಲ್ಲುತ್ತಾ ಬೆಂಗಳೂರು ಟೀಂ?

ಐಪಿಎಲ್​ನ ಉದ್ಘಾಟನಾ ವರ್ಷ ಅಂದ್ರೆ 2008ರಿಂದಲೇ ಕರ್ನಾಟಕವನ್ನ ಪ್ರತಿನಿಧಿಸುತ್ತಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ 17 ಸೀಸನ್​ಗಳನ್ನೂ ಕಂಪ್ಲೀಟ್ ಮಾಡಿದೆ. ಸದ್ಯ 18ಸೀಸನ್​ನಲ್ಲೂ ಅದ್ಭುತ ಪ್ರದರ್ಶನ ನೀಡ್ತಿದೆ. ಹತ್ತೂ ಫ್ರಾಂಚೈಸಿಗಳ ಪೈಕಿ ದಿ ಮೋಸ್ಟ್ ಪಾಪ್ಯುಲರ್ ಫ್ರಾಂಚೈಸಿ ಆರ್​ಸಿಬಿಯೇ. ಕಪ್ ಗೆದ್ದಿಲ್ಲ ಅನ್ನೋದನ್ನ ಬಿಟ್ರೆ ಅಷ್ಟೂ ಸೀಸನ್​ಗಳ ಜರ್ನಿ ಅಲ್ಟಿಮೇಟ್ ಆಗಿದೆ. ಮೂರು ಸಲ ಫಿನಾಲೆಗೆ ಲಗ್ಗೆ ಇಟ್ಟಿದ್ರೂ ಟ್ರೋಫಿಯಿಂದ ವಂಚಿತವಾಗಿದೆ. ಹಾಗೇ ಈ ಸೀಸನ್​ನೂ ಸೇರಿ 10ನೇ ಬಾರಿಗೆ ಪ್ಲೇಆಫ್​​ಗೆ ಕಾಲಿಟ್ಟಿದೆ. ರೆಡ್ ಆರ್ಮಿ ಟೀಂ ಮೊದಲ ಬಾರಿಗೆ 2009ರಲ್ಲಿ ಫೈನಲ್​ ಪ್ರವೇಶಿಸಿತ್ತು. ಆದ್ರೆ ಡೆಕ್ಕನ್ ಚಾರ್ಜರ್ಸ್ ವಿನ್ ಆಗಿತ್ತು. ಇನ್ನು ಎರಡನೇ ಬಾರಿಗೆ 2011ರಲ್ಲಿ ಮತ್ತೆ ಫೈನಲ್ ಪ್ರವೇಶಿಸಿದ್ರೂ ಚೆನ್ನೈ ಸೂಪರ್ ಕಿಂಗ್ಸ್ ಮುಡಿಗೆ ಟ್ರೋಫಿ ಸಿಕ್ಕಿತ್ತು. ಇನ್ನು 2016ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಮೂರನೇ ಬಾರಿಗೆ ಫೈನಲ್​ಗೇರಿದ್ರು. ಬಟ್ ಸನ್ ರೈಸರ್ಸ್ ಹೈದ್ರಾಬಾದ್ ಎದುರು ಸೋತು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಕೊಂಡಿತ್ತು. ಹೀಗೆ ಮೂರೂ ಸಲವೂ ಕಪ್ ಗೆಲ್ಲೋದ್ರಲ್ಲಿ ಕೂದಲೆಳೆ ಅಂತರದಲ್ಲಿ ಮಿಸ್ ಮಾಡ್ಕೊಂಡಿದೆ. 2020ರ ಬಳಿಕ 2023ರನ್ನ ಹೊರತುಪಡಿಸಿ ಐದನೇ ಬಾರಿಗೆ ಈಗ ಪ್ಲೇಆಫ್​ಗೆ ಪ್ರವೇಶ ಪಡೆದಿದೆ.

ಇದನ್ನೂ ಓದಿ : RCBಗೆ ಬ್ಲ್ಯಾಕ್ ಚೀತಾ ಎಂಟ್ರಿ – ಲುಂಗಿ ಔಟ್.. ಯಾರು ಈ ಬ್ಲೆಸ್ಸಿಂಗ್?

ಆರ್ ಸಿಬಿ ಅದ್ಭುತ ಜರ್ನಿ!

ಹೆಚ್ಚು ಬಾರಿ ಪ್ಲೇ ಆಫ್ ತಲುಪಿದ ಲಿಸ್ಟ್ ​ನಲ್ಲಿ ಆರ್​ಸಿಬಿ ಮೂರನೇ ಸ್ಥಾನ

ಚೆನ್ನೈ 12 ಸಲ ಪ್ಲೇ ಆಫ್ ಪ್ರವೇಶಿಸಿದ್ದು 5 ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ

ಸಿಎಸ್‌ಕೆ ಪ್ರಸ್ತುತ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ

ಮುಂಬೈ ಇಂಡಿಯನ್ಸ್ 17ನೇ ಸೀಸನ್​ ವರೆಗೂ 10 ಬಾರಿ ಪ್ರೇಆಫ್ ಪ್ರವೇಶಿಸಿದ್ದು

5 ಬಾರಿ ಚಾಂಪಿಯನ್ ಆಗಿರುವ ಮುಂಬೈ ಈ ಆವೃತ್ತಿಯಲ್ಲೂ ಪ್ಳೇ ಆಫ್ ಸ್ಪರ್ಧಿ

​ ಬೆಂಗಳೂರು ತಂಡವು 10 ಸಲ ಪ್ಲೇಆಫ್, ಈ ಸಲವೂ ನಾಕೌಟ್ ಗೆ ಪ್ರವೇಶ

ಕೆಕೆಆರ್  8 ಬಾರಿ ಪ್ಲೇ ಆಫ್, ಪ್ರಸಕ್ತ ಸೀಸನ್​ನಲ್ಲಿ ನಿರೀಕ್ಷೆಯಂತೆ ಪ್ರದರ್ಶನ ನೀಡಿಲ್ಲ

ಹೈದರಾಬಾದ್ 8 ಬಾರಿ ಪ್ಲೇ ಆಫ್, ಬಟ್ ಕಪ್ ಗೆದ್ದಿರೋದು ಒಂದು ಸಲ

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಪ್ಲೇ ಆಫ್ ತಲುಪಿದ ಲಿಸ್ಟ್​ನಲ್ಲಿ ಆರ್​ಸಿಬಿ ಮೂರನೇ ಸ್ಥಾನದಲ್ಲಿದೆ.  ಈ ಪೈಕಿ ಮೊದಲ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇದೆ. 12 ಸಲ ಪ್ಲೇ ಆಫ್ ಪ್ರವೇಶಿಸಿದ್ದು 5 ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಆದ್ರೆ ಐಪಿಎಲ್ 2025ರ ಈ ಸೀಸನ್​ನಲ್ಲಿ ಚಾಂಪಿಯನ್ ಚೆನ್ನೈನ ಪುದರ್ಶನ ಅತ್ಯಂತ ಕಳಪೆಯಾಗಿದೆ. ಸಿಎಸ್‌ಕೆ ಪ್ರಸ್ತುತ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.   ಇನ್ನು ಐಪಿಎಲ್​ನ ಮತ್ತೊಂದು ಯಶಸ್ವಿ ತಂಡವಾಗಿರೋ ಮುಂಬೈ ಇಂಡಿಯನ್ಸ್ ಎರಡನೇ ಸ್ಥಾನ ಪಡೆದಿದೆ. ಮುಂಬೈ ಇಂಡಿಯನ್ಸ್ 17ನೇ ಸೀಸನ್​ವರೆಗೂ 10 ಬಾರಿ ಪ್ರೇಆಫ್ ಪ್ರವೇಶಿಸಿದ್ದು, ಎರಡನೇ ಸ್ಥಾನ ಪಡೆದಿದೆ. 5 ಬಾರಿ ಚಾಂಪಿಯನ್ ಆಗಿರುವ ಮುಂಬೈ ಈ ಆವೃತ್ತಿಯಲ್ಲೂ ಪ್ಳೇಆಫ್​ಗೇರುವ ಸ್ಪರ್ಧಿಯಾಗಿದೆ.  ಮುಂಬೈ ಕೊನೆಯ 2 ಲೀಗ್ ಪಂದ್ಯಗಳನ್ನು ಗೆದ್ದರೆ, ಅದು ನೇರವಾಗಿ ಪ್ಯೂಆಫ್ ತಲುಪುತ್ತದೆ. ಒಂದು ಸೋತರೆ ಅವಕಾಶದ ಸಾಧ್ಯತೆಗಳು ಕ್ಷೀಣಿಸಬಹುದು. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ನ ದಾಖಲೆ ಸರಿಗಟ್ಟಿದೆ. ಆರ್‌ಸಿಬಿ ಕೂಡ 10 ಸಲ ಪೈಆಫ್ ಪ್ರವೇಶಿಸಿದೆ. ಪುಸಕ್ತ ಅವ್ಯತ್ತಿಯಲ್ಲಿ ಆರ್‌ಸಿಬಿ 17 ಅಂಕಗಳೊಂದಿಗೆ ಮುಂದಿನ ಹಂತಕ್ಕೆ ಪ್ರವೇಶಿಸಿದೆ. ಆದರೆ ಇದುವರೆಗೂ ಪ್ರಶಸ್ತಿ ಗೆದ್ದಿಲ್ಲ.  ಇನ್ನು ಕೋಲ್ಕತಾ ನೈಟ್ ರೈಡರ್ಸ್ 4ನೇ ಸ್ಥಾನದಲ್ಲಿದೆ. ಕಕೆಆರ್ 8 ಬಾರಿ “ಆಫ್ ತಲುಪಿದೆ. ಆದಾಗ್ಯೂ, ಹಾಲಿ ಚಾಂಪಿಯನ್ ಕೆಕೆಆರ್ ಪ್ರಸಕ್ತ ಸೀಸನ್​ನಲ್ಲಿ ನಿರೀಕ್ಷೆಯಂತೆ ಪ್ರದರ್ಶನ ನೀಡಿಲ್ಲ. ಪ್ಲೇಆಫ್ ರೇಸ್​ನಿಂದ ಹೊರ ಬಿದ್ದಿದೆ. ಇನ್ನು ಕೆಕೆಆರ್ ಒಟ್ಟು 3 ಸಲ ಚಾಂಪಿಯನ್ ಆಗಿದೆ. ಇನ್ನು ಸನ್‌ ರೈಸರ್ಸ್ ಹೈದರಾಬಾದ್ 5ನೇ ಸ್ಥಾನದಲ್ಲಿದೆ. ಎಸ್‌ಆರ್ ಹೆಚ್ 8 ಬಾರಿ ಪೈ ಆಫ್ ಪ್ರವೇಶಿಸಿದೆ. ಬಟ್ ಕಪ್ ಗೆದ್ದಿರೋದು ಒಂದು ಸಲ. ಪ್ರಸ್ತುತ ಸೀಸನ್​ನಲ್ಲಿ ಕಳಪರ ಪ್ರದರ್ಶನ ನೀಡಿದ್ದು ಈಗಾಗ್ಲೇ ನಾಕೌಟ್ ರೇಸ್​ನಿಂದ ಹೊರ ಬಿದ್ದಿದೆ.

ಸದ್ಯ ಈ ಸೀಸನ್​ನಲ್ಲೂ ಆರ್​ಸಿಬಿ ಪ್ಲೇಆಫ್​ಗೆ ಲಗ್ಗೆ ಇಟ್ಟಿದೆ. ಹಾಗೇ ಗುಜರಾತ್ ಮತ್ತು ಪಂಜಾಬ್ ತಂಡಗಳೂ ನಾಕೌಟ್​ಗೆ ಸೆಲೆಕ್ಟ್ ಆಗಿವೆ. ಇದೀಗ ನಾಲ್ಕನೇ ಸ್ಥಾನಕ್ಕಾಗಿ ಮುಂಬೈ ಮತ್ತು ಡೆಲ್ಲಿ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಮುಂಬೈ ಇಂಡಿಯನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಬುಧವಾರ ವಾಂಖೇಡೆ ಕ್ರಿಕೆಟ್‌ ಸ್ಟೇಡಿಯಂನಲ್ಲಿ  ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಡೆಲ್ಲಿ ಕ್ಯಾಪಿಟಲ್ಸ್‌ ಸೋತರೆ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ. ಹೀಗಾಗಿ ಡೆಲ್ಲಿಗೆ ಇದು ಮಸ್ಟ್‌ ವಿನ್‌ ಗೇಮ್. ಮುಂಬೈ ಇಂಡಿಯನ್ಸ್‌ 12 ಪಂದ್ಯಗಳನ್ನಾಡಿದ್ದು, 7ರಲ್ಲಿ ಗೆದ್ದು 14 ಅಂಕ ಗಳಿಸಿದೆ. ಡೆಲ್ಲಿ ತಂಡ 12 ಪಂದ್ಯಗಳನ್ನಾಡಿ 13 ಅಂಕ ಹೊಂದಿದೆ. ನಾಳಿನ ಪಂದ್ಯದಲ್ಲಿ ಮುಂಬೈ ಸೋತರೆ ಟೂರ್ನಿಯಿಂದ ಹೊರಬೀಳಲ್ಲ. ಪಂಜಾಬ್‌ ವಿರುದ್ಧದ ಅಂತಿಮ ಪಂದ್ಯದಲ್ಲಿ ಮುಂಬೈ ಗೆದ್ದರೆ, ಡೆಲ್ಲಿ ತಂಡ ತನ್ನ ಕೊನೆಯ ಪಂದ್ಯದಲ್ಲಿ ಸೋತರೆ ಮುಂಬೈ ಒಂದು ಅಂಕದ ಮುನ್ನಡೆಯಿಂದ ನಾಲ್ಕನೇ ತಂಡವಾಗಿ ಪ್ಲೇ ಆಫ್‌ ಪ್ರವೇಶ ಮಾಡಲಿದೆ. ಬಟ್ ಡೆಲ್ಲಿಗೆ ನಾಕೌಟ್‌ ಹಂತ ತಲುಪಲು ಎರಡಕ್ಕೆ ಎರಡೂ ಪಂದ್ಯಗಳನ್ನ ಗೆಲ್ಲಬೇಕು.

Shantha Kumari

Leave a Reply

Your email address will not be published. Required fields are marked *