RCBಗೆ ಬ್ಲ್ಯಾಕ್ ಚೀತಾ ಎಂಟ್ರಿ – ಲುಂಗಿ ಔಟ್.. ಯಾರು ಈ ಬ್ಲೆಸ್ಸಿಂಗ್?
 ಅದ್ಭುತ T-20 ರೆಕಾರ್ಡ್ಸ್.. ಕಪ್ ನಮ್ದೇ!

RCBಗೆ ಬ್ಲ್ಯಾಕ್ ಚೀತಾ ಎಂಟ್ರಿ – ಲುಂಗಿ ಔಟ್.. ಯಾರು ಈ ಬ್ಲೆಸ್ಸಿಂಗ್? ಅದ್ಭುತ T-20 ರೆಕಾರ್ಡ್ಸ್.. ಕಪ್ ನಮ್ದೇ!

ಐಪಿಎಲ್​ ಪೋಸ್ಟ್ ಪೋನ್ ಆಗಿ ರೀ ಸ್ಟಾರ್ಟ್ ಆದ್ಮೇಲೆ ತುಂಬಾ ಫ್ರಾಂಚೈಸಿಗಳು ವಿದೇಶಿ ಆಟಗಾರರನ್ನ ಮಿಸ್ ಮಾಡಿಕೊಳ್ತಿವೆ. ರಾಷ್ಟ್ರೀಯ ತಂಡಗಳ ಪಂದ್ಯಗಳಿಗಾಗಿ ತಮ್ಮ ದೇಶಗಳಿಗೆ ರಿಟರ್ನ್ ಆಗ್ತಿದ್ದಾರೆ. ಈಗಾಗ್ಲೇ ಒಂದಷ್ಟು ಟೀಮ್ಸ್​ ಅವ್ರ ಬದಲಿಗೆ ಬೇರೆ ಆಟಗಾರರನ್ನ ರಿಪ್ಲೇಸ್ ಮಾಡ್ಕೊಂಡಿವೆ. ಇದೀಗ ಆರ್​ಸಿಬಿಯ ಸರದಿ. ಚೆನ್ನೈ ವಿರುದ್ಧದ ಮ್ಯಾಚಲ್ಲಿ ಮೂರು ವಿಕೆಟ್​ಗಳನ್ನ ಬೇಟೆಯಾಡಿದ್ದ ಲುಂಗಿ ಎನ್​ಗಿಡಿ ಸೌತ್ ಆಫ್ರಿಕಾಕ್ಕೆ ವಾಪಸ್ ಆಗಲಿದ್ದಾರೆ. ಜೂನ್ 11ರಿಂದ ನಡೆಯಲಿರುವ ಸೌತ್ ಆಫ್ರಿಕಾ ವರ್ಸಸ್ ಆಸ್ಟ್ರೇಲಿಯಾ ನಡುವಿನ ಡಬ್ಲ್ಯೂಸಿಟಿ ಫೈನಲ್ ತಂಡದಲ್ಲಿ ಸ್ಥಾನ ಪಡೆದಿದ್ದು ಹೋಗಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಎನ್​ಗಿಡಿ ಸ್ಥಾನಕ್ಕೆ ಈ ಬ್ಲೆಸ್ಸಿಂಗ್ ಮುಜರಬಾನಿಯನ್ನ ಆರ್​ಸಿಬಿ ಫ್ರಾಂಚೈಸಿ ಖರೀದಿ ಮಾಡಿದೆ.

ಇದನ್ನೂ ಓದಿ : ಪ್ಲೇಆಫ್ಸ್ ಗೆ GT, RCB, PBKS – 1 ಸ್ಥಾನ.. 3 ಟೀಮ್ಸ್.. ಹೇಗಿದೆ ಫೈಟ್?

ಸದ್ಯ ಈ ಸೀಸನ್​ನಲ್ಲಿ ಸೌತ್ ಆಫ್ರಿಕಾದ 8 ಪ್ಲೇಯರ್ಸ್ ಬೇರೆ ಬೇರೆ ಟೀಮ್​ಗಳಲ್ಲಿ ಆಡ್ತಿದ್ದಾರೆ. ಈ ಪೈಕಿ ಕೆಲವರು ಡಬ್ಲ್ಯೂಟಿಸಿ ಫೈನಲ್ ಪಂದ್ಯಕ್ಕೆ ಸೆಲೆಕ್ಟ್ ಆಗಿದ್ದಾರೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ತಯಾರಿಗಾಗಿ ಸೌತ್ ಆಫ್ರಿಕಾ ಆಟಗಾರರು ಮೇ 26 ರಂದು ತವರಿಗೆ ತೆರಳಲಿದ್ದಾರೆ. ಲುಂಗಿ ಎನ್‌ಗಿಡಿ ಕೂಡ ಆರ್‌ಸಿಬಿ ತಂಡವನ್ನು ತೊರೆಯಲಿದ್ದಾರೆ. ಲುಂಗಿ ಎನ್‌ಗಿಡಿ ಬದಲಿಗೆ ಫ್ರಾಂಚೈಸಿ ಝಿಂಬಾಬ್ವೆ ವೇಗಿ ಬ್ಲೆಸಿಂಗ್ ಮುಝರಬಾನಿ ಅವರನ್ನು ಆಯ್ಕೆ ಮಾಡಿದೆ. 75 ಲಕ್ಷ ರೂಪಾಯಿಯೊಂದಿಗೆ ಬೆಂಗಳೂರು ತಂಡವನ್ನ ಸೇರಿಕೊಂಡಿದ್ದಾರೆ.

ಅಷ್ಟಕ್ಕೂ ಈ ಸಲ ಆರ್​ಸಿಬಿ ಪ್ರತಿಯೊಬ್ಬ ಆಟಗಾರನನ್ನೂ ಕ್ಯಾಲ್ಕುಲೇಟ್ ಮಾಡಿಯೇ ಪಿಕ್ ಮಾಡಿದೆ. ಬ್ಯಾಟಿಂಗ್, ಬೌಲಿಂಗ್, ಆಲ್​ರೌಂಡರ್ ಹೀಗೆ ಎಲ್ಲಾ ಸ್ಲಾಟ್​ಗಳಲ್ಲೂ ಬೆಸ್ಟ್ ಸೆಲೆಕ್ಷನ್ ಆಗಿದೆ. ಸದ್ಯ ಮುಜರಬಾನಿ ವಿಚಾರದಲ್ಲೂ ಅದೇ ಆಗಿದೆ.

ರಣಬೇಟೆಗಾರ ಮುಜರಬಾನಿ!

ಜಿಂಬಾಬ್ವೆಯ 6 ಅಡಿ 8 ಇಂಚು ಎತ್ತರದ ಈ ವೇಗದ ಬೌಲರ್

12 ಟೆಸ್ಟ್, 55 ಏಕದಿನ ಮತ್ತು 70 ಟಿ20ಐಗಳನ್ನು ಆಡಿದ್ದಾರೆ

ಟಿ20 ಕ್ರಿಕೆಟ್​ನ ಫ್ರೀಲ್ಯಾನ್ಸ್ ಆಗಿದ್ದಾರೆ.. ಪ್ರಪಂಚದಾದ್ಯಂತದ ವಿವಿಧ ಲೀಗ್‌

ಗಲ್ಫ್ ಜೈಂಟ್ಸ್‌, ಪಿಎಸ್‌ ಎಲ್‌ ನಲ್ಲಿ ಕರಾಚಿ ಕಿಂಗ್ಸ್ ಮತ್ತು ಮುಲ್ತಾನ್ ಸುಲ್ತಾನ್ಸ್‌

ಸಿಪಿಎಲ್‌ ನಲ್ಲಿ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್‌ ಗಾಗಿ

ಟಿ20 ಬ್ಲಾಸ್ಟ್‌ ನಲ್ಲಿ ನಾರ್ಥಾಂಪ್ಟನ್‌ ಶೈರ್‌ಗಾಗಿ ಆಡಿ ಸೈ ಎನಿಸಿಕೊಂಡಿದ್ದಾರೆ

28 ವರ್ಷದ ಮುಜಾರಬಾನಿ 118 ಟಿ20 ಪಂದ್ಯಗಳನ್ನು ಆಡಿದ್ದು 127 ವಿಕೆಟ್‌

6.8 ಅಡಿ ಎತ್ತರ ಇರೋದ್ರಿಂದ ಬೌನ್ಸ್​ ಮೂಲಕವೇ ಮಾರಕವಾಗಿದ್ದಾರೆ

ಮೇ 22 ರಿಂದ ಆರಂಭವಾಗುವ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯ

ಮೇ 27 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಎಂಟ್ರಿ

ಸದ್ಯ ಆರ್​ಸಿಬಿ ಫ್ರಾಂಚೈಸಿ ಬ್ಲೆಸ್ಸಿಂಗ್​ ಮುಜರಬಾನಿ ಸೇರ್ಪಡೆ ಬಗ್ಗೆ ಅಧಿಕೃತವಾಗಿ ಅನೌನ್ಸ್ ಮಾಡಿದೆ.  ಮೇ 26ಕ್ಕೆ ಲುಂಗಿ ಎನ್​ಗಿಡಿ ತಂಡವನ್ನ ತೊರೆಯಲಿದ್ದು ಆ ಬಳಿಕ ಬ್ಲೆಸ್ಸಿಂಗ್​ ಮುಜರಬಾನಿ ಆರ್​ಸಿಬಿ ಟೀಂ ಸೇರಿಕೊಳ್ತಾರೆ. ಪ್ಲೇಆಫ್ಸ್ ಪಂದ್ಯಗಳಲ್ಲಿ ಕಣಕ್ಕಿಳಿಸೋ ಸಾಧ್ಯತೆ ಇದೆ. ಪ್ರಸ್ತುತ ಅವ್ರ ಕರಿಯರ್ ರೆಕಾರ್ಡ್ಸ್ ನೋಡ್ತಿದ್ರೆ ಬೇಟೆಗಾರರ ಬೇಟೆಯಾಡೋ ರಣಬೇಟೆಗಾರನಂತೆ ಕಾಣ್ತಿದ್ದಾರೆ.

Shantha Kumari

Leave a Reply

Your email address will not be published. Required fields are marked *