ತಿರುಪತಿ ದೇವಸ್ಥಾನಕ್ಕೆ 100 ಕೆಜಿ ತೂಕದ ಬೆಳ್ಳಿ ದೀಪಗಳ ದಾನ – ಮೈಸೂರು ರಾಜಮಾತೆಯಿಂದ ಕಾಣಿಕೆ

ಮೈಸೂರು ರಾಜಮಾತೆ ತಿರುಮಲ ತಿರುಪತಿ ದೇವಸ್ಥಾನಕ್ಕೆ 100 ಕೆಜಿ ತೂಕದ ಬೆಳ್ಳಿ ದೀಪಗಳನ್ನು ದಾನ ಮಾಡಿ, 300 ವರ್ಷಗಳ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಿದ್ದಾರೆ. ಆಳೆತ್ತರದ ಬೆಳ್ಳಿ ದೀಪಗಳು ಇನ್ನುಮುಂದೆ ತಿರುಮಲ ದೇವಸ್ಥಾನಕ್ಕೆ ಬೆಳಗಲಿವೆ. ಭಕ್ತಿ ಮತ್ತು ರಾಜ ಪರಂಪರೆಯ ಸಂಕೇತವಾಗಿ ಮೈಸೂರು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ತಿರುಮಲ ದೇವಸ್ಥಾನದಲ್ಲಿ ವೆಂಕಟೇಶ್ವರನಿಗೆ ಎರಡು ದೊಡ್ಡ ಬೆಳ್ಳಿ ದೀಪಗಳನ್ನು ದಾನ ಮಾಡಿದರು. ರಂಗನಾಯಕಕುಲ ಮಂಟಪದಲ್ಲಿ ನಡೆದ ಅಧಿಕೃತ ಹಸ್ತಾಂತರ ಸಮಾರಂಭದಲ್ಲಿ ದೇವಾಲಯ ಆಡಳಿತದ ಪರವಾಗಿ ತಿರುಮಲ ತಿರುಪತಿ ದೇವಸ್ಥಾನಂ ಅಧ್ಯಕ್ಷ ಬಿ.ಆರ್. ನಾಯ್ಡು ಅವರು ಈ ಕಾಣಿಕೆಯನ್ನು ಸ್ವೀಕರಿಸಿದರು.
ಸರಿಸುಮಾರು 100 ಕೆಜಿ ತೂಕವಿರುವ ಈ ಬೆಳ್ಳಿ ದೀಪಗಳನ್ನು ಶಾಶ್ವತ ದೀಪಗಳಾಗಿ ಬಳಸಲಾಗುತ್ತದೆ. ಹಗಲು-ರಾತ್ರಿ ದೇವಾಲಯದ ಗರ್ಭಗುಡಿಯಲ್ಲಿ ಬೆಳಗುತ್ತಿರುವ ಅಖಂಡ ದೀಪಗಳನ್ನು ದೈವಿಕತೆಯ ಶಾಶ್ವತ ಉಪಸ್ಥಿತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮೈಸೂರು ರಾಜಮಾತೆಯ ಈ ಕಾಣಿಕೆಯು ದೇವಾಲಯದಲ್ಲಿ 300 ವರ್ಷಗಳಷ್ಟು ಹಳೆಯದಾದ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಿದೆ ಎನ್ನಲಾಗಿದೆ.
ಮೈಸೂರು ರಾಜಮಾತೆ ತಿರುಮಲ ತಿರುಪತಿ ದೇವಸ್ಥಾನಕ್ಕೆ 100 ಕೆಜಿ ತೂಕದ ಬೆಳ್ಳಿ ದೀಪಗಳನ್ನು ದಾನ ಮಾಡಿ, 300 ವರ್ಷಗಳ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಿದ್ದಾರೆ. ಆಳೆತ್ತರದ ಬೆಳ್ಳಿ ದೀಪಗಳು ಇನ್ನುಮುಂದೆ ತಿರುಮಲ ದೇವಸ್ಥಾನಕ್ಕೆ ಬೆಳಗಲಿವೆ. ಭಕ್ತಿ ಮತ್ತು ರಾಜ ಪರಂಪರೆಯ ಸಂಕೇತವಾಗಿ ಮೈಸೂರು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ತಿರುಮಲ ದೇವಸ್ಥಾನದಲ್ಲಿ ವೆಂಕಟೇಶ್ವರನಿಗೆ ಎರಡು ದೊಡ್ಡ ಬೆಳ್ಳಿ ದೀಪಗಳನ್ನು ದಾನ ಮಾಡಿದರು. ರಂಗನಾಯಕಕುಲ ಮಂಟಪದಲ್ಲಿ ನಡೆದ ಅಧಿಕೃತ ಹಸ್ತಾಂತರ ಸಮಾರಂಭದಲ್ಲಿ ದೇವಾಲಯ ಆಡಳಿತದ ಪರವಾಗಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧ್ಯಕ್ಷ ಬಿ.ಆರ್. ನಾಯ್ಡು ಅವರು ಈ ಕಾಣಿಕೆಯನ್ನು ಸ್ವೀಕರಿಸಿದರು.

ನೋಡಿರಿ

