ಡೆಲ್ಲಿ ತಪ್ಪು ಮಾಡಿದ್ದು ಎಲ್ಲಿ? ರಾಹುಲ್ ಒಬ್ಬನೇ ಆಡಿದ್ರೆ ಸಾಕಾ?
ಪ್ಲೇ ಆಫ್ಗೆ ಹೋಗಲ್ವಾ DC?

ಗುಜರಾತ್ ಟೈಟನ್ಸ್ ವಿರುದ್ಧ ಎಲ್ಲಾದ್ರೂ ಡೆಲ್ಲಿ ಗೆದ್ದಿದ್ರೆ ಇನ್ನೂ ಕೂಡ ಯಾವುದೇ ತಂಡಗಳು ಪ್ಲೇ ಆಫ್ಗೆ ಎಂಟ್ರಿಕೊಡುವುದ್ದಕ್ಕೆ ಆಗುತ್ತಿರಲಿಲ್ಲ. ಇನ್ನೂ ಕೂಡ ಪ್ಲೇ ಆಫ್ ಪೈಪೋಟಿ ನಡೆಯುತಿತ್ತು. ಆದ್ರೆ ಡೆಲ್ಲಿ ಸೋಲಿನಿಂದ ಗುಜರಾತ್ ಜೊತೆ ಆರ್ಸಿಬಿ ಮತ್ತು ಪಂಜಾಬ್ ಕೂಡ ಪ್ಲೇ ಆಫ್ಗೆ ಎಂಟ್ರಿಕೊಟ್ಟಿವೆ. ನಾಲ್ಕನೇ ಸ್ಥಾನಕ್ಕೆ ಡೆಲ್ಲಿ ಮತ್ತು ಮುಂಬೈ ಹಾಗೂ ಎಲ್ಎಸ್ಜಿ ನಡುವೆ ಪೈಪೋಟಿ ನಡೆಯುತ್ತಿದೆ.
Full GFx: ಕೆ.ಎಲ್ ರಾಹುಲ್ ಬಿಟ್ಟು, ಉಳಿದವರು ಡಮ್ಮಿ
ಡೆಲ್ಲಿ ಕ್ಯಾಪಿಟಲ್ಸ್ನ ಅಗ್ರ ಕ್ರಮಾಂಕದಲ್ಲಿ ಸ್ಥಿರತೆಯ ಕೊರತೆ ನೀಟ್ ಆಗಿ ಗೊತ್ತಾಗುತ್ತಿದೆ. ಕೆಎಲ್ ರಾಹುಲ್ ಹೊರತುಪಡಿಸಿ, ಯಾವುದೇ ಬ್ಯಾಟ್ಸ್ಮನ್ ರನ್ ಗಳಿಸೋಕೆ ಒದ್ದಾಡುತ್ತಿದ್ದಾರೆ. ರಾಹುಲ್ ಎಷ್ಟು ಮುಖ್ಯ ಅನ್ನೋದು ಗೊತ್ತಾಗುತ್ತೆ ಬಿಟ್ರೆ, ಬೇರೆ ಆಟಗಾರರು ಏನ್ ಮಾಡುತ್ತಿದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ. ರಾಹುಲ್ 11 ಪಂದ್ಯಗಳಲ್ಲಿ 493 ರನ್ ಗಳಿಸಿದ್ದಾರೆ. ಇದನ್ನು ಹೊರತುಪಡಿಸಿ, ಯಾವುದೇ ಬ್ಯಾಟ್ಸ್ಮನ್ 300 ರನ್ಗಳನ್ನು ಸಹ ಗಳಿಸಿಲ್ಲ. ಮುಖ್ಯವಾಗಿ ಫಾಫ್ ಡು ಪ್ಲೆಸಿಸ್ ಮತ್ತು ಕರುಣ್ ನಾಯರ್ ಸ್ಥಿರವಾಗಿ ರನ್ ಗಳಿಸುವಲ್ಲಿ ಫೆಲ್ಯೂರ್ ಆಗಿದ್ದಾರೆ.
ಬೌಲಿಂಗ್ನಲ್ಲಿ ಪ್ಲಾಫ್ ಆದ ಡಿಸಿ
ಈ ಸೀಸನ್ ಆರಂಭದಲ್ಲಿ ಮಿಚೆಲ್ ಸ್ಟಾರ್ಕ್ ಸಖತ್ ಬೌಲಿಂಗ್ ಮಾಡಿದರು. ಇವರನ್ನ ಬಿಟ್ಟು ಉಳಿದವರು ಬೌಲಿಂಗ್ನಲ್ಲಿ ಪ್ರಭಾವ ಬೀರುವಲ್ಲಿ ಫೆಲ್ಯೂರ್ ಆಗಿದ್ದಾರೆ. ಮುಖೇಶ್ ಕುಮಾರ್ ನಿರಂತರವಾಗಿ ದುಬಾರಿ ಎಂದು ಸಾಬೀತಾದ ನಂತರ ಅವರನ್ನು ಕೈಬಿಡಲಾಗಿದೆ. ದುಷ್ಮಂತ ಚಮೀರ ಮತ್ತು ಮೋಹಿಲ್ ಶರ್ಮಾ ಕೂಡ ಯಾವುದೇ ಮ್ಯಾಜಿಕ್ ಮಾಡಿಲ್ಲ. ಸ್ಟಾರ್ಕ್ ನಿರ್ಗಮನದ ನಂತರ, ಬೌಲಿಂಗ್ ಸಂಪೂರ್ಣ ಪ್ಲಾಫ್ ಆಗಿದೆ. ಇದು ಕೂಡ ಎಲ್ಲೋ ಒಂದ್ಕಡೆ ಪ್ಲೇ ಆಫ್ ಹಾದಿಯನ್ನ ಕಷ್ಟಕ್ಕೆ ಸಿಲುಕಿಸಿದೆ.
ವಿಕೆಟ್ ಕೀಳದ ಕುಲದೀಪ್ ಯಾದವ್
ಕುಲದೀಪ್ ಯಾದವ್ ಐಪಿಎಲ್ 2025 ರ ಆರಂಭಿಕ ಪಂದ್ಯಗಳಲ್ಲಿ ಅದ್ಭುತ ಬೌಲಿಂಗ್ ಮಾಡಿದರು. ಅವರು ಪರ್ಪಲ್ ಕ್ಯಾಪ್ನ ರೇಸ್ನಲ್ಲಿ ಕೂಡ ಕಾಣಿಸಿಕೊಂಡರು. ಆದ್ರೆ ಬರ್ತಾ ಬರ್ತಾ ಕುಲದೀಪ್ ಫಾರ್ಮ್ ಕುಸಿದಿದೆ. ಕಳೆದ ನಾಲ್ಕು ಇನ್ನಿಂಗ್ಸ್ಗಳಲ್ಲಿ ಅವರು ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಇದೇ ಕಾರಣಕ್ಕೆ ದೆಹಲಿ ತಂಡ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್ಮನ್ಗಳ ಮೇಲೆ ಒತ್ತಡ ಹೇರಲು ಸಾಧ್ಯವಾಗುತ್ತಿಲ್ಲ.
ನಾಯಕತ್ವದಲ್ಲಿ ಎಡವಿದ್ರಾ ಅಕ್ಷರ್ ಪಟೇಲ್
ಇನ್ನು ಎಲ್ಲೋ ಒಂದ್ಕಡೆ ಅಕ್ಷರ್ ಪಟೇಲ್ ಅವರ ನಾಯಕತ್ವವನ್ನು ಯಾರೂ ಅರ್ಥಮಾಡಿಕೊಳ್ಳಲಾಗುತ್ತಿಲ್ಲ. ನಟರಾಜನ್ ಪವರ್ಪ್ಲೇನಲ್ಲಿ ಬೌಲಿಂಗ್ ಮಾಡುವುದಕ್ಕೆ ಹೆಸರುವಾಸಿಯಲ್ಲ, ಆದರೆ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಅವರಿಗೆ ಚಾನ್ಸ್ ನೀಡಲಾಯಿತು. ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಸ್ಟಾರ್ಕ್ ಮತ್ತು ಚಮೀರ ತಮ್ಮ ಓವರ್ಗಳನ್ನು ಬೌಲ್ ಮಾಡಿದ ನಂತರವೂ, ಮುಖೇಶ್ ಅವರಿಗೆ 19 ನೇ ಓವರ್ ನೀಡಲಾಯಿತು. ಇದಿಷ್ಟೆ ಅಲ್ಲದೆ, ಪಂದ್ಯದಿಂದ ಪಂದ್ಯಕ್ಕೆ ತಂಡದ ಆರಂಭಿಕ ಜೋಡಿ ಕೂಡ ನಿರಂತರವಾಗಿ ಬದಲಾಗುತ್ತಿದೆ.
ಒಂದು ಸ್ಥಾನಕ್ಕೆ 3 ತಂಡಗಳ ಫೈಟ್
ಇಲ್ಲಿ ಡೆಲ್ಲಿ ಸೋಲುತ್ತಿದ್ದಂತೆ ಆರ್ಸಿಬಿ, ಗುಜರಾತ್ ಹಾಗೂ ಪಂಜಾಬ್ ತಂಡದಲ್ಲಿ ಪ್ಲೇ ಆಫ್ ಟಿಕೆಟ್ ಕನ್ಫರ್ಮ ಆಯ್ತು. ಆದ್ರೆ ಒಂದು ಸ್ಥಾನಕ್ಕೆ 3 ತಂಡಗಳ ನಡುವೆ ಫೈಟ್ ಶುರುವಾಗಿದೆ. ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಇನ್ನೂ 2 ಪಂದ್ಯಗಳಿವೆ. ಈ ಮ್ಯಾಚ್ಗಳಲ್ಲಿ ಜಯಗಳಿಸಿದರೆ ಪ್ಲೇಆಫ್ಗೇರುವುದು ಖಚಿತ. ಅದರಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದರೆ ಮುಂಬೈ ಇಂಡಿಯನ್ಸ್ ತಂಡದ ಪ್ಲೇಆಫ್ ಸ್ಥಾನ ಬಹುತೇಕ ಪಕ್ಕಾ . ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆದ್ದು, ಪಂಜಾಬ್ ಕಿಂಗ್ಸ್ ವಿರುದ್ಧ ಸೋತರೂ ಪ್ಲೇಆಫ್ಗೆ ಎಂಟ್ರಿ ಕೊಡಬಹುದು. ಏಕೆಂದರೆ ಲಕ್ನೋ ಸೂಪರ್ ಜೈಂಟ್ಸ್ ಮುಂದಿನ ಮೂರು ಪಂದ್ಯಗಳಲ್ಲಿ ಜಯಗಳಿಸಿ ಉತ್ತಮ ನೆಟ್ ರನ್ ರೇಟ್ ಅನ್ನು ಹೊಂದಿದರೆ ಮಾತ್ರ ಮುಂಬೈ ಇಂಡಿಯನ್ಸ್ ತಂಡವನ್ನು ಹಿಂದಿಕ್ಕಬಹುದು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಪಡೆ ಜಯ ಸಾಧಿಸಿದರೆ ಪ್ಲೇಆಫ್ ಆಡುವುದು ಬಹುತೇಕ ಖಚಿತವಾಗಲಿದೆ. ಡೆಲ್ಲಿ ಎರಡು ಪಂದ್ಯ ಗೆದ್ದು, ಮುಂಬೈ ಎರಡು ಪಂದ್ಯ ಸೋತ್ರೆ ಡೆಲ್ಲಿಗೆ ಚಾನ್ಸ್ ಇದೆ.. ಹೀಗಾಗಿ ಡೆಲ್ಲಿ ಇನ್ನು ಮುಂದಿನ ಪಂದ್ಯವನ್ನ ಸಾಕಷ್ಟು ಪ್ಲ್ಯಾನ್ ಮಾಡಿ ಆಡಿದ್ರೆ, ಪ್ಲೇ ಆಫ್ಗೆ ಚಾನ್ಸ್ ಇದೆ..