ತಾಂಡವ್‌ಗೆ ಭಾಗ್ಯಳದ್ದೇ ಜಪ.. ಶ್ರೇಷ್ಠಾ ಸಂಚು ಕಡೆಗೂ ಬಯಲು! – ಪೂಜಾ ಮದ್ವೆಗೆ ಕುಸುಮಾ ಟ್ವಿಸ್ಟ್

ತಾಂಡವ್‌ಗೆ ಭಾಗ್ಯಳದ್ದೇ ಜಪ.. ಶ್ರೇಷ್ಠಾ ಸಂಚು ಕಡೆಗೂ ಬಯಲು! – ಪೂಜಾ ಮದ್ವೆಗೆ ಕುಸುಮಾ ಟ್ವಿಸ್ಟ್

ತಾಂಡವ್‌ಗೆ ಭಾಗ್ಯ ಜಪ ಮಾಡಿಲ್ಲ ಅಂದ್ರೆ ತಿಂದ ಅನ್ನ ಜೀರ್ಣ ಆಗಲ್ಲ ಅನ್ಸುತ್ತೆ. ಭಾಗ್ಯ ಏನ್‌ ಮಾಡ್ತಿದ್ದಾಳೆ? ಎಲ್ಲಿಗೆ ಹೋಗ್ತಿದ್ದಾಳೆ? ಮುಂದೇನು ಮಾಡ್ತಾಳೆ ಅಂತಾ ತಿಳ್ಕೊಳ್ಳೋ ಕ್ಯೂರಿಯಾಸಿಟಿ. ಇದೀಗ ತಾಂಡವ್‌, ಶ್ರೇಷ್ಠಾ ಪೂಜಾ ಲೈಫ್‌ ನಲ್ಲೂ ಆಟ ಶುರು ಮಾಡ್ಕೊಂಡಿದ್ದಾರೆ. ಪೂಜಾ ಮದುವೆ ನಿಲ್ಲಿಸಲು ತಾಂಡವ್‌ ಶ್ರೇಷ್ಠಾ ಪ್ಲ್ಯಾನ್‌ ಮಾಡಿದ್ದಾರೆ.

ಇದನ್ನೂ ಓದಿ:ISI ಏಜೆಂಟರ್‌ಗಳ ಜೊತೆ ಜ್ಯೋತಿ ಮಲ್ಹೋತ್ರಾ ಸಂಪರ್ಕ – ಪದೇ ಪದೇ ಪಾಕ್‌ಗೆ ಹೋಗುತ್ತಿದ್ದ ಯುಟ್ಯೂಬರ್

ಭಾಗ್ಯಲಕ್ಷ್ಮೀ ಸೀರಿಯಲ್‌ ಈಗ ಹೊಸ ತಿರುವು ಪಡೆದುಕೊಂಡಿದೆ. ಭಾಗ್ಯ ವಿರುದ್ಧ ತಾಂಡವ್‌ ಏನ್‌ ಪ್ಲ್ಯಾನ್‌ ಮಾಡಿದ್ರೂ ಅದು ಉಲ್ಟಾ ಆಗ್ತಿದೆ. ಭಾಗ್ಯ ಬ್ಯುಸಿನೆಸ್‌ ಹಾಳು ಮಾಡ್ಬೇಕು ಅಂತಾ ಶ್ರೇಷ್ಠಾ ಜೊತೆ ಸೇರ್ಕೊಂಡು ಏನೇನೋ ಕುತಂತ್ರ ಮಾಡಿದ್ದ. ಆದ್ರೆ ಅದೆಲ್ಲಾ ಠುಸ್‌ ಆಯ್ತು. ಭಾಗ್ಯ ಮುಂದೆ ಆತನೇ ಸೋಲೋ ತರ ಆಗ್ತಿದೆ.. ಆದ್ರೂ ತಾಂಡವ್‌ ಗೆ ಬುದ್ದಿ ಬರೋತರ ಕಾಣ್ತಿಲ್ಲ.. ಇದೀಗ ಭಾಗ್ಯ ಸೋಲ್ಬೇಕು ಅಂತಾ ಪೂಜಾ ಜೀವನ ಹಾಳು ಮಾಡಲು ಮುಂದಾಗಿದ್ದಾನೆ.

ಹೌದು, ಭಾಗ್ಯ ತಂಗಿಗೆ ಮದ್ವೆ ಮಾಡಿಸ್ಬೇಕು ಅಂತಾ ಮುಂದಾಗಿದ್ದಾಳೆ. ಆದ್ರೆ ಇದಕ್ಕೆ ತಾಂಡವ್‌ ಅಡ್ಡಿ ಆಗಿದ್ದಾನೆ. ಕಳೆದ ಬಾರಿ ಒಂದು ಪ್ರಪೋಸ್‌ ಬಂದಾಗಲೂ ತಾಂಡವ್‌ ಅಲ್ಲಿಗೆ ಬಂದು ಎಲ್ಲಾ ಹಾಳು ಮಾಡಿದ್ದ. ಇದೀಗ ಕಿಶನ್‌ ಪೂಜಾಳನ್ನ ಲವ್‌ ಮಾಡ್ತಿರೋ ವಿಚಾರ ಎಲ್ಲರಿಗೂ ಗೊತ್ತಾಗಿದೆ. ಕಿಶನ್ ಜೊತೆ ಪೂಜಾ ಮದ್ವೆ ಮಾಡಿಸಲು ಭಾಗ್ಯ ಮತ್ತು ಕುಸುಮಾ ಮುಂದಾಗಿದ್ದಾರೆ. ಇನ್ನು ಕಿಶನ್ ವ್ಯಕ್ತಿತ್ವ ಹೇಗಿದೆ ಎಂದು ತಿಳಿಯಲು ಕುಸುಮಾ ಕಿಶನ್ ನಡೆಸುವ ಜಿಮ್‌ಗೆ ಹೋಗಿದ್ಲು. ಕುಸುಮಾ ಪರೀಕ್ಷೆಯಲ್ಲಿ ಕಿಶನ್‌ ಪಾಸ್‌ ಆಗಿದ್ದಾನೆ. ಮನೆಗೆ ಹೋಗಿ ಮದ್ವೆ ಮಾತುಕತೆ ಮಾಡ್ಬೇಕು ಅಂತಾ ಕುಸುಮಾ ಭಾಗ್ಯ ಹೊರಟಿದ್ದಾರೆ. ಮತ್ತೊಂದ್ಕಡೆ ಭಾಗ್ಯ ತಾಯಿ ಸುನಂದ ತಾಂಡವ್‌ ಜೊತೆ ಕೈಜೋಡಿಸಿದ್ದಾಳೆ. ಮನೆಯಲ್ಲಿ ಏನೆಲ್ಲಾ ನಡಿತಾ ಇದೆ ಅಂತಾ ಆತನಿಗೆ ಎಲ್ಲಾ ರಿಪೋರ್ಟ್‌ ಮಾಡಿದ್ದಾಳೆ. ಇದೀಗ ಕಿಶನ್‌ ಮೇಲೆ ಸುನಂದಗೆ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಿದ್ದಾನೆ. ಇಷ್ಟೇ ಅಲ್ಲ ಇಲ್ಲೂ ತನ್ನ ದುಷ್ಠ ಬುದ್ದಿ ತೋರ್ಸಿದ್ದಾನೆ ತಾಂಡವ್‌.

ಹೌದು ಪೂಜಾ ಮದ್ವೆ ನಿಲ್ಲಿಸಲು ತಾಂಡವ್‌ ಶ್ರೇಷ್ಠಾ ಹೊಸ ಪ್ಲ್ಯಾನ್‌ ಮಾಡಿದ್ದಾರೆ. ಶ್ರೇಷ್ಠಾ ಗೆಳತಿಯನ್ನ ಕಿಶನ್‌ ಬಳಿ ಕಳ್ಸಿದ್ದಾಳೆ. ಆತನ ಜೊತೆ ಮಿಸ್‌ ಬಿಹೇವ್‌ ಮಾಡುವಂತೆ ಹೇಳಿದ್ದಾಳೆ. ಆಕೆ ಹೇಳಿದ್ದನ್ನ ಶ್ರೇಷ್ಠಾ ಫ್ರೆಂಡ್‌ ಚಾಚು ತಪ್ಪದೇ ಮಾಡಿದ್ದಾಳೆ. ಇದನ್ನ ನೋಡಿದ ಭಾಗ್ಯ, ಕುಸುಮಾ ಶಾಕ್‌ ಆಗಿದ್ದಾರೆ. ಬಳಿಕ ಭಾಗ್ಯಗೆ ಈ ಕೆಲಸದ ಹಿಂದೆ ಬೇರೆ ಯಾರೋ ಇದ್ದಾರೆ. ಕಿಶನ್‌ ಒಳ್ಳೆಯವನು ಅಂತ ಅನ್ನಿಸಲು ಶುರುವಾಗಿದೆ. ಇದೀಗ ಭಾಗ್ಯ ಪತ್ತೆದಾರಿ ಕೆಲಸ ಶುರು ಮಾಡಿದ್ದಾಳೆ. ಭಾಗ್ಯಗೆ ಈ ಕೆಲಸದ ಹಿಂದೆ ತಾಂಡವ್‌ ಶ್ರೇಷ್ಠಾ ಇದ್ದಾರೆ ಅಂತಾ ಗೊತ್ತಾದ್ರೆ ಅವರಿಬ್ರ ಕತೆ ಮುಗಿದಂತೆ ಲೆಕ್ಕ.

Shwetha M

Leave a Reply

Your email address will not be published. Required fields are marked *