ನಾನಲ್ಲ ಮಾರ್ರೇ ನಿಮ್ಮ ಮಗ..! ಯಕ್ಷಗಾನದ ಸ್ತ್ರೀ ಪಾತ್ರಧಾರಿ, ಬಾಲಕನ ಸಂಭಾಷಣೆಗೆ ನಕ್ಕು ಸುಸ್ತಾದ ಜನ

ಕರಾವಳಿಯ ಹೆಮ್ಮೆಯ ಗಂಡುಕಲೆ ಯಕ್ಷಗಾನ. ನವಿರಾದ ಹಾಸ್ಯದ ಮೂಲಕ ಯಕ್ಷಗಾನ ಎಲ್ಲರನ್ನೂ ತನ್ನತ್ತ ಸೆಳೆಯುತ್ತದೆ. ಕಲಾವಿದರ ಸೌಮ್ಯ, ಸರಳ ಸಂಭಾಷಣೆಯನ್ನು ಮತ್ತೆ ಮತ್ತೆ ಕೇಳೋಣ ಎಂದು ಯಕ್ಷ ಪ್ರೇಮಿಗಳಿಗೆ ಅನ್ನಿಸುತ್ತಲೇ ಇರುತ್ತದೆ. ಪೌರಾಣಿಕ ಪ್ರಸಂಗದ ಜೊತೆಗೆ ಅಲ್ಲಲ್ಲಿ ಯಕ್ಷಗಾನ ಕಲಾವಿದರು ನೆರೆದಿರುವ ಪ್ರೇಕ್ಷಕ ವರ್ಗವನ್ನು ನಗಿಸುವುದಿದೆ. ಕೆಲವೊಮ್ಮೆ ಯಕ್ಷಗಾನದ ನೋಡಲು ಬಂದ ಪ್ರೇಕ್ಷಕರ ಕಾಲೆಳೆಯುವ ಮೂಲಕ ಕಲಾವಿದರು ತಮಾಷೆಯಾಗಿ ಸಂಭಾಷಣೆ ನಡೆಸುವುದನ್ನು ನೋಡಬಹುದು. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ಯಕ್ಷಗಾನ ಕಲಾವಿದರೊಬ್ಬರು ಮಗುವಿನ ಜೊತೆಗೆ ನಡೆಸಿದ ಸಂಭಾಷಣೆ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ: RCB ಲೀಗ್ಸ್ ಪಂದ್ಯಗಳಿಗಿಲ್ಲ ಜೋಶ್ – ಪ್ಲೇಆಫ್ಸ್ ಗಾಗಿ KKR ಗೇಮ್ ಪ್ಲ್ಯಾನ್
Yakshabhimani ಹೆಸರಿನ ಖಾತೆಯಲ್ಲಿಈ ಫನ್ನಿ ವಿಡಿಯೋ ಪೋಸ್ಟ್ ಮಾಡಲಾಗಿದೆ. ಇದರಲ್ಲಿ ರಂಗದಲ್ಲಿರುವ ಸ್ತ್ರಿ ವೇಷಧಾರಿಯೊಬ್ಬರು, ಯಕ್ಷಗಾನ ನೋಡಲು ಬಂದ ಮಗುವಿನೊಂದಿಗೆ ತಮಾಷೆಯಾಗಿ ಸಂಭಾಷಣೆ ನಡೆಸಿದ್ದಾರೆ. ಸ್ತ್ರಿ ವೇಷಧಾರಿ ಮಗುವಿನೊಂದಿಗೆ ಅದು ಯಾರು ಎಂದು ಕೇಳಿದ್ದು, ಮಗು ಅದು ನನ್ನ ಅಪ್ಪ ಎಂದಿದೆ. ಆ ಬಳಿಕ ನಿನ್ನ ಅಮ್ಮ ಎಲ್ಲಿ ಎಂದಾಗ ನನ್ನ ಅಮ್ಮ ಮನೆಯಲ್ಲಿದ್ದಾರೆ ಎಂದು ಹೇಳಿದೆ. ನಿನ್ನ ಅಪ್ಪ ಬೇರೆ ಮದುವೆಯಾಗಿದ್ದಾನಂತೆ ಎಂದು ಹೇಳಿದ್ದು, ಆ ವ್ಯಕ್ತಿಯನ್ನೇ ಯಕ್ಷಗಾನ ಕಲಾವಿದರು ಹೌದಾ ಎಂದು ಕೇಳಿದ್ದಾರೆ. ಈ ಸಂಭಾಷಣೆಯನ್ನು ಕೇಳುತ್ತಿದ್ದಂತೆ ನೆರೆದಿದ್ದ ಪ್ರೇಕ್ಷಕರೆಲ್ಲರೂ ಬಿದ್ದು ಬಿದ್ದು ನಗುತ್ತಿದ್ದಾರೆ. ತದನಂತರದಲ್ಲಿ ಎಲ್ಲಿ ನಿನ್ನ ಅಪ್ಪ, ಎರಡು ಮದ್ವೆಯಾಗಿದ್ದಾನೆ ಎನ್ನುತ್ತಿದ್ದಂತೆ ಎಂತ ಮರೆ ಎಂದು ಮಗುವು ಕೇಳಿದೆ.
ನೀನು ನನ್ನ ಮಗು, ನಿನ್ನ ಅಪ್ಪನನ್ನು ಬೇಕಾದ್ರೆ ಕೇಳು, ನಿನ್ನ ಹೊತ್ಕೊಂಡು ಹೋಗಿದ್ದು ನಿಮ್ಮಮ್ಮ ಎಂದು ಸ್ತ್ರಿ ವೇಷಧಾರಿ ಕೇಳುತ್ತಿದ್ದಂತೆ ಎಲ್ಲರೂ ಜೋರಾಗಿ ನಗುತ್ತಿದ್ದಾರೆ. ಆದರೆ ಈ ಮಗು ಮಾತ್ರ ನಾನಲ್ಲ ನಿನ್ನ ಮಗು, ನನ್ನಮ್ಮ ಇವ್ರು ಎಂದು ಜೋರಾಗಿ ಹೇಳುತ್ತಿದ್ದಂತೆ ರಂಗದಲ್ಲಿ ಸ್ತ್ರಿ ವೇಷಧಾರಿ ಸೇರಿದಂತೆ ನೆರೆದಿದ್ದ ಎಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.