IPLನಿಂದ ಡೆಲ್ಲಿ BOYCOTT – ಪ್ಲೇಆಫ್ ಹೊಸ್ತಿಲಲ್ಲೇ ಬಹಿಷ್ಕಾರ ಶಿಕ್ಷೆ
ಬಿಸಿ ತುಪ್ಪವಾದ ಬಾಂಗ್ಲಾ ಪ್ಲೇಯರ್

IPLನಿಂದ ಡೆಲ್ಲಿ BOYCOTT –  ಪ್ಲೇಆಫ್ ಹೊಸ್ತಿಲಲ್ಲೇ ಬಹಿಷ್ಕಾರ ಶಿಕ್ಷೆಬಿಸಿ ತುಪ್ಪವಾದ ಬಾಂಗ್ಲಾ ಪ್ಲೇಯರ್

ಈಗ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡ್ತಿರೋ ವಿಷ್ಯ ಅಂದ್ರೆ ಬಾಯ್ಕಟ್ ಡೆಲ್ಲಿ ಅನ್ನೋ ಕೂಗು. ಇದ್ದಕ್ಕೆ ಕಾರಣವಾಗಿದ್ದು ಬಾಂಗ್ಲಾದೇಶ.. ಡೆಲ್ಲಿಗೂ ಬಾಂಗ್ಲಾಕ್ಕೂ ಏನ್ ಸಂಬಂಧ ಅಂದ್ರಾ.. ಇದೆ ಅದು ಏನ್ ಅಂತ ನೋಡ್ತಾ ಹೋದ್ರೆ.. ಈ ಬಾರಿಯ ಐಪಿಎಲ್ ಟೂರ್ನಿಯ ಉಳಿದ ಭಾಗದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಬದಲಿಗೆ ಬಾಂಗ್ಲಾದೇಶದ ಮುಸ್ತಾಫಿಜುರ್ ರೆಹಮಾನ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಇದಕ್ಕೆ ಸಾಕಷ್ಟು ಜನ ರೊಚ್ಚಿಗೆದ್ದು ಸೋಷಿಯಲ್ ಮೀಡಿಯಾದಲ್ಲಿ ಹೋರಾಟ ಮಾಡುತ್ತಿದ್ದಾರೆ.  ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಬಹಿಷ್ಕರಿಸುವಂತೆ ಸೋಷಿಯಲ್ ಮೀಡಿಯಾದಲ್ಲಿ  ಫೋಸ್ಟ್ ಮಾಡುತ್ತಿದ್ದಾರೆ.

ಮುಸ್ತಾಫಿಜುರ್ ರೆಹಮಾನ್ ದೇಶ ಅಂದ್ರೆ ಬಾಂಗ್ಲಾದಲ್ಲಿ ಹಿಂದೂ ಧರ್ಮದ ಜನರು ಶೋಷಣೆಗೆ ಒಳಗಾಗುತ್ತಿದ್ದಾರೆ.ಇತ್ತೀಚಿನ ಪಾಕ್ ವಿರುದ್ಧದ ಸೇನಾ ಸಂಘರ್ಷದ ವೇಳೆ ಬಾಂಗ್ಲಾದೇಶವು ಭಾರತದ ವಿರುದ್ಧ ಪಾಕಿಸ್ತಾನವನ್ನು ಬೆಂಬಲಿಸಿದೆ. ಐಪಿಎಲ್‌ನಲ್ಲಿ ಬಾಂಗ್ಲಾದೇಶದ ಆಟಗಾರರು ಇರಬಾರದು ಅಂತ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಆದ್ರೆ ಇವರು ಹಿಂದ್ ಕೂಡ ಐಪಿಎಲ್ ಆಡಿದ್ದಾರೆ.  ಆದ್ರೆ ಆ ದೇಶಕ್ಕೂ ಆಟಗಾರರಿಗೂ ಸಂಬಂಧವಿಲ್ಲ.  ಆಟನೇ ಬೇರೆ, ದೇಶದ ಆತಂರಿಕ ವಿಚಾರವೇ ಬೇರೆ ಅನ್ನೋ ರೀತಿಯಲ್ಲೂ ಇನ್ನೊಂದ್ಕಡೆ ಚರ್ಚೆ ಆಗುತ್ತಿದೆ. ಇಲ್ಲಿ ಬಾಂಗ್ಲಾ ಪ್ಲೇಯರ್ ಕರ್ಕೋಂಡು ಬಂದಿದ್ದಕ್ಕೆ ಡೆಲ್ಲಿ ತಂಡವನ್ನ ಬಾಯ್ಕಟ್ ಮಾಡಿ ಅನ್ನೋದು ತಪ್ಪು ಅಂತ ಕೂಡ ಚರ್ಚೆ ಆಗುತ್ತಿದೆ.

 ಗೊಂದಲಕ್ಕೆ ಕಾರಣವಾಯ್ತು  ಮುಸ್ತಾಫಿಜುರ್ ಟ್ವೀಟ್

ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಾಫಿಜುರ್ ರಹಮಾನ್ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಂಡಿದ್ದರೆ ಅವರು ಮಾಡಿರುವ ಟ್ವೀಟ್ ಇದೀಗ ತೀವ್ರ ಗೊಂದಲಕ್ಕೆ ಕಾರಣವಾಗಿದೆ. ಮುಸ್ತಾಫಿಜುರ್ ಅವರು “ಯುಎಇ ವಿರುದ್ಧ ಆಡಲು ಅಲ್ಲಿಗೆ ಹೋಗುತ್ತಿದ್ದೇನೆ. ನನಗೆ ಶುಭ ಹಾರೈಸಿ.” ಎಂದು ಟ್ವೀಟ್ ಮಾಡಿದ್ದರು. ಹಾಗಿದ್ದರೆ ಅವರು ಐಪಿಎಲ್ ನಲ್ಲಿ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಡೆಲ್ಲಿ ಕ್ಯಾಪಿಟಲ್ಸ್  ತಂಡವು ಮುಸ್ತಾಫಿಜುರ್ ಅವರನ್ನು ಆಯ್ಕೆ ಮಾಡಿರುವುದಾಗಿ ಘೋಷಿಸಿದ ಕೆಲವೇ ಗಂಟೆಗಳ ನಂತರ ಈ ಟ್ವೀಟ್ ಪೋಸ್ಟ್ ಆಗಿದೆ. ಹಾಗಿದ್ದರೆ ಮುಸ್ತಫಿಜುರ್ ಗೆ ಐಪಿಎಲ್ ಗೆ ಆಯ್ಕೆ ಆದ ಈ ವಿಚಾರ ಗೊತ್ತಿದೆಯೋ ಇಲ್ಲವೋ ಎಂಬ ಬಗ್ಗೆಯೂ ಸಂಶಯ ಮೂಡಿದೆ. ಸದ್ಯಕ್ಕೆ ಮುಸ್ತಾಫಿಜುರ್ ಯುಎಇಗೆ ಪ್ರಯಾಣ ಬೆಳೆಸಿದ್ದಾರೆ. ಆದರೆ, ಅವರು ಬಾಂಗ್ಲಾದೇಶ ತಂಡದಿಂದ ಬೇರ್ಪಟ್ಟು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರುತ್ತಾರೆಯೇ ಅನ್ನೋ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ.

NOC  ಕೇಳಿಲ್ಲ ಎಂದ ಬಾಂಗ್ಲಾ ಕ್ರಿಕೆಟ್

ಈ ವಿಚಾರವಾಗಿ ಮಾತನಾಡಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ  ಮುಸ್ತಾಫಿಜುರ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರುತ್ತಾರೋ ಇಲ್ಲವೋ ಎಂದು ನಾನು ಹೇಳಲು ಸಾಧ್ಯವಿಲ್ಲ. ಅವರು ನಮ್ಮಲ್ಲಿ NOC ಕೇಳಿಲ್ಲ. ಅವರು ತಂಡದೊಂದಿಗೆ  ಯುಎಇಗೆ  ಪ್ರಯಾಣಿಸುತ್ತಿದ್ದಾರೆ” ಎಂದು ಅವರು ತಿಳಿಸಿದೆ.

ಗೊಂದಲದಲ್ಲಿರೋ ಡಿಸಿ ತಂಡಕ್ಕೆ ಸಂಕಷ್ಟ

ಈ ಗೊಂದಲದಿಂದಾಗಿ DC ತಂಡವು ಸಂಕಷ್ಟಕ್ಕೆ ಸಿಲುಕಿದೆ. ಏಕೆಂದರೆ, ಪ್ಲೇಆಫ್ ರೇಸ್ ತೀವ್ರವಾಗಿದೆ. ಮುಸ್ತಾಫಿಜುರ್ ಅವರ ಅನುಭವವು ಡೆಲ್ಲಿಗೆ ಬಹಳ ಮುಖ್ಯವಾಗಬಹುದು. ಡೆಲ್ಲಿ ತಂಡವು ಗುಜರಾತ್ ಟೈಟಾನ್ಸ್, ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ ತನ್ನ ಕೊನೆಯ ಮೂರು ಪಂದ್ಯಗಳನ್ನು ಆಡಲಿದೆ. ಡೆಲ್ಲಿ ತಂಡವು 11 ಪಂದ್ಯಗಳಲ್ಲಿ 13 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಇನ್ನುಳಿದ ಮೂರು ಪಂದ್ಯಗಳಲ್ಲಿ ಮೂರನ್ನು ಗೆದ್ದಲ್ಲಿ ಮಾತ್ರ ಸುರಕ್ಷಿತವಾಗಿ ಪ್ಲೇ ಆಫ್ ತಲುಪಬಹುದು. ಒಂದು ಪಂದ್ಯ ಸೋತರೂ ಉಳಿದ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ. ಹೀಗಾಗಿ ಈ ಆಟಗಾರ ತಂಡಕ್ಕೆ ಮುಖ್ಯ ಆಗಿದ್ದ. ಆದ್ರೆ ಈಗ ಎಲ್ಲಾ ಉಲ್ಪಾಪಲ್ಟಾ ಆಗಿದೆ.

ಚುಟುಕು ಕ್ರಿಕೆಟ್‌ನ ಅತ್ಯಂತ ಅಪಾಯಕಾರಿ ಬೌಲರ್‌ಗಳಲ್ಲಿ ಒಬ್ಬರಾಗಿರುವ ಮುಸ್ತಾಫಿಜುರ್ ಅವರು ಐಪಿಎಲ್ ನಲ್ಲಿ ಒಟ್ಟು 61 ವಿಕೆಟ್‌ಗಳನ್ನು ಪಡೆದಿದ್ದಾರೆ. . ಅವರ ಲಭ್ಯತೆಯು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇಆಫ್ ಆಸೆಗೆ ದೊಡ್ಡ ಸಹಾಯವಾಗಬಹುದು. ಆದರೆ, ಸದ್ಯಕ್ಕೆ ಅವರು ಯುಎಇಗೆ ಪ್ರಯಾಣ ಬೆಳೆಸಿದ್ದಾರೆ. ಅವರು ಬಾಂಗ್ಲಾದೇಶ ತಂಡದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರುತ್ತಾರೆಯೇ ಎಂದು ಕಾದು ನೋಡಬೇಕಿದೆ.

Kishor KV

Leave a Reply

Your email address will not be published. Required fields are marked *