ವಿದೇಶದಲ್ಲಿ ಪದವಿ ಪಡೆದ ಪವರ್ ಸ್ಟಾರ್ ಮಗಳು – ಧೃತಿ ಓದಿದ ಕಾಲೇಜು ಯಾವುದು?

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಪುತ್ರಿ ಧೃತಿ ಫಾರಿನ್‌ಲ್ಲಿ ಓದಿ ಪದವಿ ಪಡೆದಿದ್ದಾರೆ. ಪದವಿ ಪಡೆದ ಫೋಟೋವನ್ನು ಧೃತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: RCB Vs KKR.. ಪ್ಲೇಯಿಂಗ್ 11 ರೆಡಿ – ರೆಡ್ ಆರ್ಮಿ ಪ್ಲಸ್ & ಮೈನಸ್ ಏನು?
ಪುನೀತ್ ರಾಜ್‌ಕುಮಾರ್ ಹಿರಿಯ ಪುತ್ರಿ ಧೃತಿ ಕೆಲ ವರ್ಷಗಳಿಂದ ನ್ಯೂಯಾರ್ಕ್‌ನಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದರು. ‘ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್’ ಶಿಕ್ಷಣ ಸಂಸ್ಥೆಯಲ್ಲಿ ಧೃತಿ ಶಿಕ್ಷಣ ಪೂರ್ಣಗೊಳಿಸಿ ಡಿಸೈನರ್ ಪದವಿ ಪಡೆದಿದ್ದಾರೆ. ಪುನೀತ್ ಸಹೋದರಿಯ ಮಗಳು ಧನ್ಯಾ ರಾಮ್‌ಕುಮಾರ್ ಅವರು ಮನೆ ಮಗಳ ಸಾಧನೆಗೆ ಅವರ ಫೋಟೋ ಶೇರ್ ಮಾಡಿ ವಿಶ್ ಮಾಡಿದ್ದಾರೆ. ಫ್ಯಾನ್ಸ್ ಕೂಡ ಶುಭಹಾರೈಸಿದ್ದಾರೆ.
‘ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್’ ಶಿಕ್ಷಣ ಸಂಸ್ಥೆಯಲ್ಲಿ ಫ್ಯಾಷನ್ ಡಿಸೈನ್, ಇಂಟೀರಿಯರ್ ಡಿಸೈನ್, ಗ್ರಾಫಿಕ್ಸ್ ಡಿಸೈನ್ ಸೇರಿದಂತೆ ಹಲವು ಕೋರ್ಸ್‌ಗಳಿವೆ.
ಪುನೀತ್ ಪತ್ನಿ ಅಶ್ವಿನಿ ಮತ್ತು ಪ್ರಕೃತಿ ಬನವಾಸಿ ಬರಹದಲ್ಲಿ ಅಪ್ಪು ಜೀವನ ಚರಿತ್ರೆ ಬರಲಿದೆ. ಇತ್ತೀಚೆಗೆ ಪುಸ್ತಕದ ಲುಕ್ ಕೂಡ ರಿಲೀಸ್ ಮಾಡಿದ್ದರು. ಸದ್ಯದಲ್ಲೇ ಬಿಡುಗಡೆಯ ಬಗ್ಗೆಯೂ ಮಾಹಿತಿ ನೀಡಲಿದ್ದಾರೆ.