RCB Vs KKR.. ಪ್ಲೇಯಿಂಗ್ 11 ರೆಡಿ – ರೆಡ್ ಆರ್ಮಿ ಪ್ಲಸ್ & ಮೈನಸ್ ಏನು?
ಬೆಂಗಳೂರಲ್ಲಿ ಟಾಸ್ ಗೆದ್ದವ್ರೇ ಬಾಸ್!

RCB Vs KKR.. ಪ್ಲೇಯಿಂಗ್ 11 ರೆಡಿ – ರೆಡ್ ಆರ್ಮಿ ಪ್ಲಸ್ & ಮೈನಸ್ ಏನು?ಬೆಂಗಳೂರಲ್ಲಿ ಟಾಸ್ ಗೆದ್ದವ್ರೇ ಬಾಸ್!

18ನೇ ಸೀಸನ್ ಐಪಿಎಲ್​ನಲ್ಲಿ ಟ್ರೋಫಿ ಗೆಲ್ಲುವಂಥ ಫೇವರೆಟ್ ಟೀಮ್​ಗಳಲ್ಲಿ ಆರ್​ಸಿಬಿ ಟಾಪ್​ನಲ್ಲಿದೆ. ಈಗಾಗ್ಲೇ 8 ಮ್ಯಾಚ್​ಗಳನ್ನ ಗೆದ್ದು 16 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್​ನಲ್ಲಿ 2ನೇ ಸ್ಥಾನದಲ್ಲಿದೆ. ಸೋ ಇನ್ನೊಂದು ಪಂದ್ಯ ಗೆದ್ಕೊಂಡ್ರೂ ಪ್ಲೇಆಫ್ ಗೆ ಲಗ್ಗೆ ಇಡಲಿದೆ. ಈ ಸೀಸನ್​ನಲ್ಲಿ ಪ್ಲೇಆಫ್ಸ್ ಪ್ರವೇಶ ಪಡೆದ ಮೊದಲ ತಂಡ ಎನಿಸಿಕೊಳ್ಳಲಿದೆ. ಹಾಗೇ ಈ ಗೆಲುವಿನಿಂದ ಆರ್​ಸಿಬಿಗೆ ಸಾಕಷ್ಟು ಅಡ್ವಾಂಟೇಜಸ್ ಆಗಲಿದೆ. ಹೀಗಾಗಿ ಶನಿವಾರದ ಪಂದ್ಯಕ್ಕೆ ಪ್ಲೇಯಿಂಗ್ 11 ಕೂಡ ಅಷ್ಟೇ ಇಂಪಾರ್ಟೆಂಟ್ ಆಗಲಿದೆ. ಅದ್ರಲ್ಲೂ ಫಾರಿನ್ ಪ್ಲೇಯರ್ಸ್ ಕಮ್ ಬ್ಯಾಕ್ ಮಾಡಿರೋದೇ ಆನೆ ಬಲ ಬಂದಂತಾಗಿದೆ.

ಇದನ್ನೂ ಓದಿ : RCB 3ನೇ ಸ್ಲಾಟ್ ಮಯಾಂಕ್ ಗೆ – ಪಡಿಕ್ಕಲ್ ಸ್ಥಾನ ನಿಭಾಯಿಸ್ತಾರಾ ಕನ್ನಡಿಗ?

ಪ್ರಸ್ತುತ ಈ ಸೀಸನ್​ನಲ್ಲಿ ಆರ್ ಸಿಬಿ ತಂಡದಲ್ಲಿ ಇಂಗ್ಲೆಂಡ್‌ನ ಜೇಕಬ್ ಬೆಥೆಲ್, ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್ ಇದ್ದಾರೆ. ಹಾಗೇ ದಕ್ಷಿಣ ಆಫ್ರಿಕಾದ ಲುಂಗಿ ಎಂಗಿಡಿ, ಆಸ್ಟ್ರೇಲಿಯಾದ ಜೋಶ್ ಹೇಜಲ್‌ವುಡ್, ಟಿಮ್ ಡೇವಿಡ್ ಇದ್ದಾರೆ. ವೆಸ್ಟ್ ಇಂಡೀಸ್‌ನ ರೊಮಾರಿಯೋ ಶೆಫರ್ಡ್ ಮತ್ತು ಶ್ರೀಲಂಕಾದ ನುವಾನ್ ತುಷಾರ ಇದ್ದಾರೆ. ಈ ಪೈಕಿ ತುಷಾರ ಒಬ್ರನ್ನ ಬಿಟ್ಟು ಉಳಿದವ್ರೆಲ್ಲಾ ಆರ್​ಸಿಬಿ ಪರ ಕಣಕ್ಕಿಳಿದಿದ್ದಾರೆ. ಬಟ್ ಟೂರ್ನಿಯನ್ನ ಪೋಸ್ಟ್​​ಪೋನ್ ಮಾಡಿದ್ದಕ್ಕೆ ಕೆಲ ಆಟಗಾರರು ಆಡೋದು ಅನುಮಾನ ಇತ್ತು. ಬಟ್ ಈಗ ಎಲ್ರೂ ವಾಪಸ್ ಬಂದಾಗಿದೆ. ರೆಡ್ ಆರ್ಮಿಯನ್ನ ಕೂಡಿಕೊಂಡಿದ್ದಾರೆ. ಹೀಗಾಗಿ ಪ್ಲೇಯಿಂಗ್ 11 ಹೇಗಿರುತ್ತೆ ಅನ್ನೋ ಕುತೂಹಲ ಕೂಡ ಜಾಸ್ತಿಯಾಗಿದೆ.

ಆರ್ ಸಿಬಿ ಸಂಭಾವ್ಯ ಪ್ಲೇಯಿಂಗ್ 11

ಫಿಲ್ ಸಾಲ್ಟ್

ವಿರಾಟ್ ಕೊಹ್ಲಿ

ರಜತ್ ಪಾಟಿದಾರ್

ಲಿಯಾಮ್ ಲಿವಿಂಗ್ ಸ್ಟೋನ್ Or

ಮಯಾಂಕ್ ಅಗರ್ ವಾಲ್

ಜಿತೇಶ್ ಶರ್ಮಾ

ಟಿಮ್ ಡೇವಿಡ್

ಕೃನಾಲ್ ಪಾಂಡ್ಯ

ಸ್ವಪ್ನಿಲ್ ಸಿಂಗ್

ಭುವನೇಶ್ವರ್ ಕುಮಾರ್

ಲುಂಗಿ ಎಂಗಿಡಿ

ಯಶ್ ದಯಾಳ್

ರೊಮ್ಯಾರಿಯೋ ಶೆಫರ್ಡ್ ( ಇಂಪ್ಯಾಕ್ಟ್ ಪ್ಲೇಯರ್)

ಆರ್ ಸಿಬಿ & ಕೆಕೆಆರ್ ಪ್ಲಸ್ & ಮೈನಸ್!

ಬ್ಯಾಟಿಂಗ್ ಹಾಗೇ ಬೌಲಿಂಗ್ ಬ್ಯಾಲೆನ್ಸ್, ಸತತ 4 ಪಂದ್ಯ ಗೆಲುವು
ಚಿನ್ನಸ್ವಾಮಿ ಮೈದಾನದಲ್ಲಿ ಸಿಎಸ್ ಕೆ ವಿರುದ್ಧ ರೋಚಕ ರೀತಿಯಲ್ಲಿ ಗೆಲುವು

ಈ ಸೀಸನ್ ನಲ್ಲಿ ಆರ್ ​ಸಿಬಿಗೆ ಹೋಂ ಗ್ರೌಂಡ್ ವೀಕ್​ ನೆಸ್, 3 ಸೋಲು

ಹಾಲಿ ಚಾಂಪಿಯನ್ ತಂಡ ಈ ಸೀಸನ್​ನಲ್ಲಿ ಸಾಕಷ್ಟು ಸ್ಟ್ರಗಲ್ಸ್

ಪ್ಲೇಆಫ್ಸ್ ನಲ್ಲಿ ಉಳೀಬೇಕು ಅಂದ್ರೆ ಮುಂದಿನ ಎಲ್ಲಾ ಪಂದ್ಯಗಳನ್ನ ಗೆಲ್ಲಬೇಕು

ಹಿಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಎರಡು ವಿಕೆಟ್‌ ಗಳ ಸೋಲು

ಕೆಕೆಆರ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಾಕಷ್ಟು ಏರಿಳಿತ

ಆರ್​ಸಿಬಿ ಮತ್ತು ಕೆಕೆಆರ್ ತಂಡಗಳು ಐಪಿಎಲ್‌ನಲ್ಲಿ ಇದುವರೆಗೆ 36 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಕೋಲ್ಕತ್ತಾ ನೈಟ್ ರೈಡರ್ಸ್ 21 ಗೆಲುವುಗಳೊಂದಿಗೆ ಪ್ರಾಬಲ್ಯ ಸಾಧಿಸಿದೆ. ಆರ್​ಸಿಬಿ 15 ಪಂದ್ಯಗಳಷ್ಟೇ ಗೆದ್ದಿದೆ. ಕಳೆದ ಐದು ಪಂದ್ಯಗಳ ರಿಸಲ್ಟ್ ನೋಡಿದ್ರೆ ಕೆಕೆಆರ್ 4 ಮ್ಯಾಚ್ ಹಾಗೇ ಆರ್​ಸಿಬಿ ಒಂದರಲ್ಲಷ್ಟೇ ಗೆದ್ದಿದೆ. ಸೋ ಈ ಪಂದ್ಯವನ್ನೂ ಗೆದ್ರೆ ಆರ್​ಸಿಬಿಗೆ ಸಾಕಷ್ಟು ಅಡ್ವಾಂಟೇಜಸ್ ಸಿಗಲಿದೆ.

ಗೆದ್ದರೆ ಆರ್ ಸಿಬಿಗೆ ಅಡ್ವಾಂಟೇಜ್!

ಕೆಕೆಆರ್ ವಿರುದ್ಧ ಗೆದ್ರೆ ಆರ್ ಸಿಬಿಗೆ 2 ಅಂಕ

ಟೋಟಲ್ ಆಗಿ 18 ಅಂಕಗಳೊಂದಿಗೆ ಪ್ಲೇಆಫ್ಸ್ ಪ್ರವೇಶ

ಲೀಗ್ ಹಂತದಲ್ಲಿ 2 ಪಂದ್ಯ ಗೆದ್ರೆ ಟೇಬಲ್ ಟಾಪರ್

ಟೇಬಲ್ ಟಾಪರ್ ಆದ್ರೆ ಸೀದಾ ಫೈನಲ್ ಗೇರುವ ಅವಕಾಶ

ಕ್ಲಾಲಿಫೈಯರ್ 1ನಲ್ಲಿ ಗೆದ್ದರೆ ಫೈನಲ್, ಸೋತರೆ ಮತ್ತೆ ಚಾನ್ಸ್

ಕ್ವಾಲಿಫೈಯರ್​​-1ರಲ್ಲಿ ಸೋತ ತಂಡಕ್ಕೆ ಕ್ವಾಲಿಫೈಯರ್​​-2ನಲ್ಲಿ ಗೆದ್ದವರು

2ನೇ ಅವಕಾಶದಲ್ಲಿ ಗೆದ್ದರೆ ಫೈನಲ್​ ಗೆ ಎಂಟ್ರಿ ನೀಡಬಹುದು

3 ಹಾಗೂ 4ನೇ ಸ್ಥಾನದಲ್ಲಿರುವ ತಂಡಗಳಿಗೆ ಅಡ್ವಾಂಟೇಜ್ ಇರೋದಿಲ್ಲ

ಗೆದ್ದವರು ಮತ್ತೆ ಆಡ್ಬೇಕು, ಸೋತವರು ಟೂರ್ನಿಯಿಂದಲೇ ಔಟ್

Shantha Kumari

Leave a Reply

Your email address will not be published. Required fields are marked *