RCB ಪ್ಲೇಆಫ್ಸ್ ಗೆ ಇನ್ನೊಂದೇ ಹೆಜ್ಜೆ – ಟಾಪ್-2ನಲ್ಲೇ ಇದ್ರೆ ಕಪ್ ನಮ್ದೇ
ಹೇಗಿದೆ KNOCK OUT ಲೆಕ್ಕಾಚಾರ?

ಮೇ 17ಅಂದ್ರೆ ಶನಿವಾರದಿಂದ 18ನೇ ಸೀಸನ್ ಐಪಿಎಲ್ ರೀಸ್ಟಾರ್ಟ್ ಆಗಲಿದೆ. ಮೊದಲ ಪಂದ್ಯದಲ್ಲೇ ಆರ್ಸಿಬಿ ವರ್ಸಸ್ ಕೆಕೆಆರ್ ಮ್ಯಾಚ್ ಸ್ಟಾರ್ಟ್ ಆಗುತ್ತೆ. ಈ ಮ್ಯಾಚ್ ಆರಂಭದ ಜೊತೆ ಜೊತೆಗೆ ನಾಕೌಟ್ ಮ್ಯಾಚ್ಗಳಿಗೆ ಯಾರು ಉಳ್ಕೊಳ್ತಾರೆ ಯಾರು ತಮ್ಮ ಜರ್ನಿ ಎಂಡ್ ಮಾಡ್ತಾರೆ ಅನ್ನೋ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ. ಪ್ರಸ್ತುತ ಸೀಸನ್ನಲ್ಲಿ 10 ತಂಡಗಳ ಪೈಕಿ 3 ಟೀಮ್ಗಳು ಎಲಿಮಿನೇಟ್ ಆಗಿವೆ. ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದ್ರಾಬಾದ್ ಹಾಗೇ ರಾಜಸ್ಥಾನ ರಾಯಲ್ಸ್ ಪ್ಲೇಆಫ್ ಅವಕಾಶವನ್ನ ಕಳ್ಕೊಂಡಿವೆ. ಉಳಿದ 7 ತಂಡಗಳಿಗೆ ಇನ್ನೂ ಚಾನ್ಸ್ ಇದೆ.
ಇದನ್ನೂ ಓದಿ : IPL ರೀ ಸ್ಟಾರ್ಟ್.. RCBಗೆ ಬೂಸ್ಟ್ – ರೆಡ್ ಆರ್ಮಿಗೆ ಫಾರಿನರ್ಸ್ POWER
ಪ್ಲೇಆಫ್ ರೇಸ್ ನಂಬರ್ -1 ಗುಜರಾತ್
ಈ ಸೀಸನ್ನಲ್ಲಿ ಗುಜರಾತ್ ಟೈಟನ್ಸ್ ತಂಡ ಅದ್ಭುತ ಪ್ರದರ್ಶನ ನೀಡ್ತಿದ್ದು ಟೇಬಲ್ ಟಾಪರ್ ಆಗಿದೆ. ಪ್ರಸ್ತುತ 11 ಪಂದ್ಯಗಳನ್ನ ಆಡಿದ್ದು ಈ ಪೈಕಿ 8 ಮ್ಯಾಚ್ಗಳಲ್ಲಿ ಗೆಲುವು ಸಾಧಿಸಿದೆ. ನೆಟ್ರನ್ರೇಟ್ +0.793 ಇದ್ದು ನಂಬರ್ 1 ಸ್ಥಾನದಲ್ಲಿದೆ. ಅಲ್ದೇ ಗುಜರಾತ್ ಟೈಟಾನ್ಸ್ಗೆ ಇನ್ನೂ 3 ಪಂದ್ಯಗಳು ಪಂದ್ಯಗಳು ಬಾಕಿ ಇದ್ದು ಈ ಪೈಕಿ ಒಂದು ಮ್ಯಾಚ್ ಗೆದ್ರೂ ಪ್ಲೇ-ಆಫ್ನಲ್ಲಿ ಸ್ಥಾನ ಕನ್ಫರ್ಮ್ ಆಗುತ್ತೆ. ಡೆಲ್ಲಿ, ಲಖನೌ ಹಾಗೇ ಚೆನ್ನೈ ವಿರುದ್ಧ ಪಂದ್ಯಗಳನ್ನ ಆಡ್ಬೇಕಿದೆ. ಆದ್ರೆ ಮೂರಕ್ಕೆ ಮೂರೂ ಪಂದ್ಯಗಳನ್ನ ಸೋತ್ರೆ ಉಳಿದ ತಂಡಗಳ ರಿಸಲ್ಟ್ ಚೆನ್ನಾಗಿ ಬಂದ್ರೆ ನಾಕೌಟ್ ಮಿಸ್ ಮಾಡಿಕೊಂಡ್ರೂ ಅಚ್ಚರಿ ಇಲ್ಲ. ಯಾಕಂದ್ರೆ ಇನ್ನೂ 4 ತಂಡಗಳಿಗೆ ಗರಿಷ್ಠ 17 ಅಂಕಗಳನ್ನ ಗಳಿಸೋಕೆ ಅವಕಾಶ ಇದೆ.
ಪ್ಲೇಆಫ್ ರೇಸ್ ನಂಬರ್ -2 ಬೆಂಗಳೂರು
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಈ ಸೀಸನ್ನಲ್ಲಿ ಒಳ್ಳೆ ಪ್ರದರ್ಶನ ನೀಡ್ತಿದೆ. ಇಗಾಗ್ಲೇ 11 ಪಂದ್ಯಗಳನ್ನ ಆಡಿದ್ದು ಈ ಪೈಕಿ 8ರಲ್ಲಿ ಗೆಲುವು ಕಂಡಿದೆ. ಈ ಮೂಲಕ 16 ಅಂಕಗಳೊಂದಿಗೆ +0.482 ನೆಟ್ ರನ್ ರೇಟ್ ನೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನದಲ್ಲಿದೆ. ಲೀಗ್ ಹಂತದಲ್ಲಿ ಇನ್ನೂ ಮೂರು ಪಂದ್ಯಗಳು ಬಾಕಿ ಇದ್ದು ಕೆಕೆಆರ್, ಸನ್ರೈಸರ್ಸ್ ಹೈದ್ರಾಬಾದ್ ಹಾಗೇ ಲಖನೌ ವಿರುದ್ಧ ಕಣಕ್ಕಿಳಿಯಬೇಕು. ಈ ಪೈಕಿ ಒಂದು ಪಂದ್ಯ ಗೆದ್ರೂ ಪ್ಲೇಆಫ್ ಕನ್ಫರ್ಮ್ ಆಗಲಿದೆ. ಹಾಗಂತ ಆರ್ಸಿಬಿ ಇನ್ನೂ ಕಂಪ್ಲೀಟ್ ಆಗಿ ಸೇಫ್ ಜೋನ್ನಲ್ಲಿದೆ. ಲೀಗ್ ಹಂತದಲ್ಲಿ ಉಳಿದಿರೋ 3ಕ್ಕೆ ಮೂರೂ ಮ್ಯಾಚ್ ಸೋತ್ರೆ ಉಳಿದ ತಂಡಗಳ ರಿಸಲ್ಟ್ ಮೇಲೆ ಡಿಪೆಂಡ್ ಆಗ್ಬೇಕಾಗುತ್ತೆ. ಗುಜರಾತ್ ಹಾಗೂ ಪಂಜಾಬ್ 20 ಅಥವಾ ಅದಕ್ಕಿಂತ ಹೆಚ್ಚು ಅಂಕ ಗಳಿಸೋ ಅವಕಾಶ ಇದೆ. ಹೀಗಾಗಿ, ಆರ್ಸಿಬಿ 3ರಲ್ಲೂ ಗೆದ್ದು ಅಗ್ರ-2ರಲ್ಲಿ ಸ್ಥಾನ ಪಡೆಯುವ ಮೂಲಕ ಕ್ವಾಲಿಫೈಯರ್-1ಗೆ ಅರ್ಹತೆ ಪಡೆಯಲು ಟಾರ್ಗೆಟ್ ಇಟ್ಕೊಂಡಿದೆ.
ಪ್ಲೇಆಫ್ ರೇಸ್ ನಂಬರ್ – 3 ಪಂಜಾಬ್
ಇನ್ನು ಪಂಜಾಬ್ ಕಿಂಗ್ಸ್ ಕೂಡ ಈ ಸೀಸನ್ನಲ್ಲಿ ಒಳ್ಳೆ ಪ್ರದರ್ಶನ ನೀಡಿದೆ. 11 ಮ್ಯಾಚ್ಗಳನ್ನ ಆಡಿದ್ದು 7 ಪಂದ್ಯಗಳನ್ನ ಗೆದ್ದಿದೆ. ಹಾಗೇ ಒಂದು ಪಂದ್ಯ ರದ್ದಾಗಿದ್ದು 1 ಅಂಕದೊಂದಿಗೆ ಟೋಟಲ್ ಆಗಿ 15 ಅಂಕ ಪಡೆದು ಮೂರನೇ ಸ್ಥಾನದಲ್ಲಿದೆ. +0.376 ನೆಟ್ ರನ್ ರೇಟ್ ಹೊಂದಿದೆ. ರಾಜಸ್ಥಾನ, ಡೆಲ್ಲಿ ಹಾಗೇ ಮುಂಬೈ ವಿರುದ್ಧ ಮೂರು ಪಂದ್ಯಗಳಿದ್ದು ಸೋ ಅಟ್ಲೀಸ್ಟ್ ಪ್ಲೇಆಫ್ ಪ್ರವೇಶಕ್ಕೆ ಇನ್ನು 2 ಪಂದ್ಯಗಳನ್ನಾದ್ರೂ ಗೆಲ್ಲಲೇಬೇಕು. ಆಗ 19 ಅಂಕಗಳು ಸಿಗಲಿದೆ. ಅಥವಾ ಮುಂದಿನ ಎಲ್ಲಾ ಪಂದ್ಯಗಳನ್ನ ಸೋತ್ರೆ ಪ್ಲೇಆಫ್ ಅವಕಾಶ ಕೈತಪ್ಪೋ ಸಾಧ್ಯತೆ ಇದೆ. ಯಾಕಂದ್ರೆ ಒಟ್ಟಾರೆಯಾಗಿ 5 ತಂಡಗಳಿಗೆ 17 ಅಂಕಗಳನ್ನ ಪಡೆಯೋ ಚಾನ್ಸ್ ಇದೆ. ಒಂದು ವೇಳೆ ಡೆಲ್ಲಿ ವಿರುದ್ಧ ಪಂಜಾಬ್ ಗೆದ್ದು, ಉಳಿದೆರಡರಲ್ಲಿ ಸೋತರೆ, ಆಗ 17 ಅಂಕದೊಂದಿಗೆ ಪ್ಲೇ-ಆಫ್ ಪ್ರವೇಶಿಸಬಹುದು. ಪಂಜಾಬ್ 15 ಅಂಕದೊಂದಿಗೇ ಪ್ಲೇ-ಆಫ್ಗೇರಬೇಕು ಅಂದ್ರೆ ಡೆಲ್ಲಿ ತಂಡ ಮುಂದಿನ 2 ಪಂದ್ಯಗಳಲ್ಲಿ ಸೋಲಬೇಕಾಗುತ್ತೆ. ಲಖನೌ 2ಕ್ಕಿಂತ ಹೆಚ್ಚು ಪಂದ್ಯ ಗೆಲ್ಲಬಾರದು. ಆಗ ಮಾತ್ರವೇ ನೆಟ್ ರನ್ರೇಟ್ ಆಧಾರದಲ್ಲಿ ಪಂಜಾಬ್ ಮೇಲುಗೈ ಸಾಧಿಸಬಹುದು.
ಪ್ಲೇಆಫ್ ರೇಸ್ ನಂಬರ್ – 4 ಮುಂಬೈ
ಇನ್ನು ಈ ಸೀಸನ್ನಲ್ಲಿ ಆರಂಭದ ಪಂದ್ಯಗಳಲ್ಲಿ ಸೋಲು ಕಂಡ್ರೂ ಆ ನಂತ್ರ ಫಿನಿಕ್ಸ್ನಂತೆ ಕಮ್ ಬ್ಯಾಕ್ ಮಾಡಿದ ಮುಂಬೈ ಇಂಡಿಯನ್ಸ್ ಸದ್ಯ ಪಾಯಿಂಟ್ಸ್ ಡೇಬಲ್ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈವರೆಗೆ 12 ಪಂದ್ಯಗಳನ್ನ ಆಡಿದ್ದು +1.156 ನೆಟ್ ರನ್ ರೇಟ್ನೊಂದಿಗೆ 14 ಅಂಕ ಗಳಿಸಿದೆ. ಮುಂಬೈ ತಂಡಕ್ಕೆ ಡೆಲ್ಲಿ ಹಾಗೇ ಪಂಜಾಬ್ ವಿರುದ್ಧ ಎರಡು ಪಂದ್ಯಗಳಷ್ಟೇ ಬಾಕಿ ಇವೆ. ಮುಂಬೈ ಎರಡಕ್ಕೆ ಎರಡೂ ಪಂದ್ಯ ಗೆಲ್ಲಬೇಕು. ಒಂದರಲ್ಲಿ ಸೋತರೆ ಆಗ ತಂಡದ ಭವಿಷ್ಯ ಬೇರೆ ತಂಡಗಳ ರಿಸಲ್ಟ್ ಮೇಲೆ ಡಿಪೆಂಡ್ ಆಗ್ಬೇಕಾಗುತ್ತೆ. ಒಂದು ವೇಳೆ ಎರಡರಲ್ಲೂ ಸೋತರೆ ಪ್ಲೇಆಫ್ನಿಂದ ಹೊರಬೀಳಲಿದೆ. ಬಟ್ ಅತ್ಯುತ್ತಮ ನೆಟ್ ರನ್ರೇಟ್ ಇರೋದ್ರಿಂದ ಪ್ಲಸ್ ಆದ್ರೂ ಆಗಬಹುದು.
ಪ್ಲೇಆಫ್ ರೇಸ್ ನಂಬರ್ – 5 ಡೆಲ್ಲಿ
ಈ ಸೀಸನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಬೇರೆ ಲೆವೆಲ್ನಲ್ಲೇ ಪರ್ಫಾಮ್ ಮಾಡಿದೆ. ಸದ್ಯ 11 ಪಂದ್ಯಗಳನ್ನ ಆಡಿದ್ದು 13 ಅಂಕಗಳನ್ನ ಪಡೆದಿದೆ. 0.362 ನೆಟ್ ರನ್ ರೇಟ್ನೊಂದಿಗೆ ಐದನೇ ಸ್ಥಾನದಲ್ಲಿದೆ. ಸನ್ರೈಸರ್ಸ್ ವಿರುದದ್ಧ ಪಂದ್ಯ ಮಳೆಗೆ ಬಲಿಯಾಗಿದ್ದರಿಂದ ಡೆಲ್ಲಿಗೆ 1 ಅಂಕ ಸಿಕ್ಕಿತು. ಇದು ತಂಡವನ್ನು ಪ್ಲೇ-ಆಫ್ ರೇಸ್ನಲ್ಲಿ ಉಳಿಸಿದೆ. ಇನ್ನು ಪಂಜಾಬ್ ವಿರುದ್ಧ ಅರ್ಧಕ್ಕೆ ನಿಂತಿರೋ ಪಂದ್ಯ ಮತ್ತೆ ನಡೆಯೋದ್ರಿಂದ ಅಲ್ಲಿ 2 ಪಾಯಿಂಟ್ಸ್ ಪಡೆಯೋಕೆ ಅವಕಾಶ ಸಿಕ್ಕಿದೆ. ಗುಜರಾತ್, ಮುಂಬೈ, ಹಾಗೇ ಪಂಜಾಬ್ ವಿರುದ್ಧ ಮೂರೂ ಪಂದ್ಯಗಳನ್ನ ಗೆದ್ದರೆ ಸಲೀಸಾಗಿ ಪ್ಲೇ-ಆಫ್ ಪ್ರವೇಶಿಸಬಹುದು. ಬಟ್ ಫಾರ್ಮ್ ಕಳ್ಕೊಂಡಿರೋ ಟೀಂಕಳೆದ 5 ಪಂದ್ಯಗಳಲ್ಲಿ ಕೇವಲ 1ರಲ್ಲಿ ಮಾತ್ರ ಗೆದ್ದಿದೆ. ಸೋ ಆಟಗಾರರು ಕಮ್ ಬ್ಯಾಕ್ ಮಾಡಿದ್ರೆ ಪ್ಲೇಆಫ್ ಚಾನ್ಸ್ ಅಂತೂ ಇದ್ದೇ ಇದೆ.
ಪ್ಲೇಆಫ್ ರೇಸ್ ನಂಬರ್ – 6 ಕೊಲ್ಕತ್ತಾ
ಹಾಲಿ ಚಾಂಪಿಯನ್ ಕೊಲ್ಕತ್ತಾಗೆ ಪ್ಲೇಆಫ್ ಚಾನ್ಸ್ ಇದೆಯಾದ್ರೂ ಅದು ಅಷ್ಟು ಸುಲಭ ಇಲ್ಲ. ಪ್ರಸ್ತುತ 12 ಪಂದ್ಯಗಳನ್ನ ಆಡಿದ್ದು 5 ಮ್ಯಾಚ್ ಗೆದ್ದಿದೆ ಪಂದ್ಯ ರದ್ದತಿಯಿಂದ 1 ಅಂಕ ಸಿಕ್ಕಿದ್ದು ಟೋಟಲ್ಲಾಗಿ 11 ಅಂಕ ಪಡೆದು ಆರನೇ ಸ್ಥಾನದಲ್ಲಿದೆ. ಆರ್ಸಿಬಿ ಮತ್ತು ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧ 2 ಪಂದ್ಯಗಳಷ್ಟೇ ಬಾಕಿ ಇವೆ. ಸೋ ಎರಡೂ ಮ್ಯಾಚ್ ಗೆದ್ರೂ 15 ಪಾಯಿಂಟ್ಸ್ ಅಷ್ಟೇ ಆಗುತ್ತೆ. ಈಗಾಗಲೇ ಗುಜರಾತ್, ಆರ್ಸಿಬಿ 15ಕ್ಕಿಂತ ಹೆಚ್ಚು ಅಂಕ ಹೊಂದಿದ್ದು, ಪಂಜಾಬ್ 15 ಅಂಕ ಪಡೆದಿದೆ. ಮೂರೂ ತಂಡಗಳಿಗೆ ಇನ್ನೂ 3 ಪಂದ್ಯ ಬಾಕಿ ಇದೆ. ಈ ಮೂರು ತಂಡಗಳು ಅರ್ಹತೆ ಪಡೆದು 4ನೇ ಸ್ಥಾನಕ್ಕಾಗಿ ಪೈಪೋಟಿ ನಡೆದ್ರೆ ಆಗಷ್ಟೇ ಚಾನ್ಸ್. ಆಗ ಮುಂಬೈ ತನ್ನೆರಡೂ ಪಂದ್ಯಗಳನ್ನು ಸೋಲಬೇಕು. ಡೆಲ್ಲಿಗೆ ಮುಂಬೈ ವಿರುದ್ಧ ಪಂದ್ಯ ಪಂದ್ಯವಿದ್ದು, ಡೆಲ್ಲಿ ಗೆದ್ದರೆ ತಂಡ 15 ಅಂಕ ತಲುಪಲಿದೆ. ಆಗ 4ನೇ ಸ್ಥಾನ ನೆಟ್ ರನ್ರೇಟ್ ಆಧಾರದಲ್ಲಿ ನಿರ್ಧಾರವಾಗಲಿದೆ. ಮತ್ತೊಂದೆಡೆ ಪಂಜಾಬ್ ತನ್ನ ಮೂರೂ ಪಂದ್ಯಗಳನ್ನು ಸೋತರೆ, ಆಗ ಮುಂಬೈ 15 ಅಂಕ ದಾಟಲಿದ್ದು, ಡೆಲ್ಲಿ, ಪಂಜಾಬ್, ಕೆಕೆಆರ್ 15 ಅಂಕಗಳಲ್ಲಿ ಉಳಿಯಲಿವೆ. ಈ ಮೂರು ತಂಡಗಳ ನಡುವೆ ನೆಟ್ ರನ್ರೇಟ್ ಆಧಾರದಲ್ಲಿ 4ನೇ ಸ್ಥಾನ ನಿರ್ಧಾರವಾಗಲಿದೆ. ಬಟ್ ಈ ಸ್ಟ್ರಾಟರ್ಜಿ ವರ್ಕೌಟ್ ಆಗೋದು ತೀರಾ ಕಡಿಮೆ. ಸೋ ಕೆಕೆಆರ್ ನಾಕೌಟ್ ಹಾದಿ ತುಂಬಾನೇ ರಿಸ್ಕಿಯಾಗಿದೆ.
ಪ್ಲೇಆಫ್ ರೇಸ್ ನಂಬರ್ – 7 ಲಖನೌ
ಲಾಸ್ಟ್ ಬಟ್ ನಾಟ್ ಲೀಸ್ಟ್ ಎನ್ನುವಂತೆ ಲಕ್ನೋ ಕೂಡ ಪ್ಲೇಆಫ್ ರೇಸ್ನಲ್ಲಿ ಉಳ್ಕೊಂಡಿದೆ. 11 ಪಂದ್ಯಗಳನ್ನ ಆಡಿದ್ದು 5ರಲ್ಲಿ ಗೆದ್ದು ಟೋಟಲ್ 10 ಅಂಕ ಗಳಿಸಿದೆ. ಸನ್ರೈಸರ್ಸ್ ಹೈದ್ರಾಬಾದ್, ಗುಜರಾತ್, ಆರ್ಸಿಬಿ ವಿರುದ್ಧ ಪಂದ್ಯಗಳು ಬಾಕಿ ಇದ್ದು ಈ ಮೂರೂ ಮ್ಯಾಚ್ಗಳನ್ನ ಗೆದ್ರೆ ನಾಕೌಟ್ ಪ್ರವೇಶ ಪಡೀಬಹುದು. ಬಟ್ ಲಕ್ನೋ ಕೊನೆಯ 5 ಪಂದ್ಯಗಳಲ್ಲಿ 4 ರಲ್ಲಿ ಸೋತಿದ್ದು ಲಯ ಕಂಡುಕೊಳ್ಳಲು ಪರದಾಡುತ್ತಿದೆ. ತಂಡ ಬಾಕಿ ಇರುವ 3 ಪಂದ್ಯಗಳಲ್ಲಿ ಗೆದ್ದು 16 ಅಂಕ ತಲುಪಬಹುದು. ಆಗ ಉಳಿದ ತಂಡಗಳ ಫಲಿತಾಂಶ ಲಕ್ನೋಗೆ ಪ್ಲಸ್ ಆಗುವಂತೆ ಬಂದ್ರೆ ಮಾತ್ರವೇ ಅಂತಿಮ ನಾಲ್ಕರ ಘಟ್ಟದ ಕನಸು ಕಾಣ್ಬೋದು. ಬಟ್ ಒಂದು ಮ್ಯಾಚ್ ಸೋತ್ರೂ ಪ್ಲೇಆಫ್ ಕನಸು ಭಗ್ನವಾಗಲಿದೆ. ಯಾಕಂದ್ರೆ ನೆಟ್ ರನ್ ರೇಟ್ ಕೂಡ ಕಳಪೆಯಾಗಿದೆ.

ನೋಡಿರಿ

