Gaza ಆಸ್ಪತ್ರೆ ಮೇಲೆ Israel ಏರ್ ಸ್ಟ್ರೈಕ್, Hamas ಮುಖ್ಯಸ್ಥ ಮೊಹಮ್ಮದ್ ಸಿನ್ವಾರ್ ಸಾವು!

ಗಾಜಾಪಟ್ಟಿಯಲ್ಲಿ ಇಸ್ರೇಲ್ ಸೇನೆ ವಾಯುದಾಳಿ ಮುಂದುವರೆದಿದ್ದು, ಈ ಬಾರಿ ಹಮಾಸ್ ಉಗ್ರ ಸಂಘಟನೆಯ ಮುಖ್ಯಸ್ಥ Mohammed Sinwar ನನ್ನೇ ಇಸ್ರೇಲ್ ಭದ್ರತಾ ಪಡೆಗಳು ಹೊಡೆದುರುಸಿವೆ ಎಂದು ತಿಳಿದುಬಂದಿದೆ.
ಈ ಹಿಂದೆ ಇದೇ ಇಸ್ರೇಲ್ ಪಡೆ ನಡೆಸಿದ್ದ ಡ್ರೋನ್ ದಾಳಿಯಲ್ಲಿ ಹಮಾಸ್ ಸಂಘಟನೆಯ ಅಂದಿನ ಮುಖ್ಯಸ್ಥ ಯಾಹ್ಯಾ ಸಿನ್ವರ್ ಹತನಾಗಿದ್ದ. ಅವನ ಸಾವಿನ ಬಳಿಕ ಹಮಾಸ್ ಉಗ್ರ ಸಂಘಟನೆಯ ನಾಯಕತ್ವವನ್ನು ಮಹಮದ್ ಸಿನ್ವರ್ ವಹಿಸಿಕೊಂಡಿದ್ದ. ಇದೀಗ ಮಹಮದ್ ಸಿನ್ವರ್ ನನ್ನೂ ಕೂಡ ಇಸ್ರೇಲ್ ಸೇನೆ ವಾಯುದಾಳಿಯಲ್ಲಿ ಹೊಡೆದುರುಳಿಸಿದೆ.
ಇಸ್ರೇಲಿ ಭದ್ರತಾ ಪಡೆಗಳ ಮೂಲಗಳ ಪ್ರಕಾರ, ಹಮಾಸ್‌ನ ಹಿರಿಯ ನಾಯಕ ಮುಹಮ್ಮದ್ ಸಿನ್ವಾರ್ ನನ್ನು ಗುರಿಯಾಗಿಸಿಕೊಂಡು ಮಂಗಳವಾರ ಸಂಜೆ ದಕ್ಷಿಣ ಗಾಜಾ ನಗರದ ಖಾನ್ ಯೂನಿಸ್ ಆಸ್ಪತ್ರೆ ಮೇಲೆ ಇಸ್ರೇಲಿ ಯುದ್ಧ ವಿಮಾನಗಳು ಪ್ರಬಲ ವೈಮಾನಿಕ ದಾಳಿ ನಡೆಸಿದ್ದವು.
ಯುರೋಪಿಯನ್ ಆಸ್ಪತ್ರೆಯ ಬಳಿಯ ಪ್ರದೇಶವನ್ನು ಈ ದಾಳಿ ಹೊಡೆದಿದೆ ಎಂದು ವರದಿಯಾಗಿದೆ. ಅಲ್ಲಿ ಹಮಾಸ್ ಕಮಾಂಡ್ ಸೆಂಟರ್ ಭೂಗತದಲ್ಲಿತ್ತು. ಇದೇ ಪ್ರದೇಶದ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದೆ ಎಂದು ಇಸ್ರೇಲಿ ಸೇನೆ ಹೇಳಿಕೊಂಡಿದೆ.
ಅಂತೆಯೇ ಈ ದಾಳಿಯಲ್ಲಿ ಆರು ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದು, ಕನಿಷ್ಠ 40 ಜನರು ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ಟೀನಿಯನ್ ಆರೋಗ್ಯ ಸಚಿವಾಲಯ ವರದಿ ಮಾಡಿದೆ.