ರಾಹುಲ್ Vs ಗಿಲ್.. ಕ್ಯಾಪ್ಟನ್ಸಿ ವಾರ್ – ಟೆಸ್ಟ್ ನಾಯಕತ್ವಕ್ಕೆ ಯಾರು ಬೆಸ್ಟ್?
ಆಟ & ಅನುಭವ.. ಹೇಗಿದೆ ಲೆಕ್ಕಾಚಾರ?

ಏಕದಿನ ಮತ್ತು ಟಿ-20 ಫಾರ್ಮೆಟ್ ಜನಪ್ರಿಯತೆ ಹೆಚ್ಚಾದಂತೆಲ್ಲಾ ಟೆಸ್ಟ್ ಫಾರ್ಮೆಟ್ ನೋಡೋರೇ ಇಲ್ಲದಾಗಿದ್ರು. ಆದ್ರೆ ವಿರಾಟ್ ಕೊಹ್ಲಿ ಕ್ಯಾಪ್ಟನ್ ಆದ್ಮೇಲೆ ರೆಡ್ ಬಾಲ್ ಫಾರ್ಮೆಟ್ ಇಮೇಜ್ ಕಂಪ್ಲೀಟ್ ಚೇಂಜ್ ಆಗಿದೆ. ಬೋರಿಂಗ್ ಅನ್ನಿಸ್ತಿದ್ದ ಪಂದ್ಯಗಳು ಕಾದುನೋಡುವಷ್ಟ್ರರ ಮಟ್ಟಿಗೆ ಪಾಪ್ಯುಲಾರಿಟಿ ಪಡೆದಿವೆ. ವಿರಾಟ್ ಬಳಿಕ ರೋಹಿತ್ ಶರ್ಮಾ ಕೂಡ ಅಷ್ಟೇ ಸಮರ್ಥವಾಗಿ ಟೀಂ ಮುನ್ನಡೆಸಿದ್ರು. ಹೀಗಾಗೇ ಕಳೆದೊಂದು ದಶಕದಲ್ಲಿ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ನ ಸಾರ್ವಭೌಮನಾಗಿ ಮೆರೆದಿದೆ. ಇನ್ಮುಂದೆಯೇ ಟೀಂ ಇಂಡಿಯಾ ಇಮೇಜ್ ಹೀಗೇ ಕಂಟಿನ್ಯೂ ಆಗ್ಬೇಕು ಅಂದ್ರೆ ಸಮರ್ಥ ನಾಯಕನನ್ನೇ ಆಯ್ಕೆ ಮಾಡಬೇಕಿದೆ.
ಇದನ್ನೂ ಓದಿ : ರೋಹಿತ್ & ಕೊಹ್ಲಿ ಸ್ಥಾನಕ್ಕೆ ಐವರ ರೇಸ್ – ಕೆಎಲ್ ರಾಹುಲ್ ಸ್ಲಾಟ್ ಇನ್ನಾದ್ರೂ ಫಿಕ್ಸ್ ಆಗುತ್ತಾ?
ಭಾರತ ತಂಡದಲ್ಲಿ ಮೊದ್ಲಿಂದಲೂ ಅನುಭವಿಗಳಿಗೆ ಕೊರತೆ ಇಲ್ಲ. ಆದ್ರೀಗ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಆರ್. ಅಶ್ವಿನ್ರಂಥ ಮದ್ದಾನೆಗಳು ಮೈದಾನದಿಂದ ಹೊರ ನಡೆದಿದಿದ್ದಾರೆ, ಟೀಂ ಇಂಡಿಯಾದಲ್ಲಿ ಈಗೇನಿದ್ರೂ ಯಂಗ್ಸ್ಟರ್ಸ್ ಜಮಾನ. ಡ್ರೆಸ್ಸಿಂಗ್ ರೂಮ್ನಲ್ಲೂ ಕೂಡ ಅವ್ರದ್ದೇ ಕಾರುಬಾರು. ಐಪಿಎಲ್ನಲ್ಲಿ ಬ್ಯುಸಿಯಾಗಿರೋ ಇವ್ರೆಲ್ಲಾ ಟೂರ್ನಿ ಬಳಿಕ ಇಂಗ್ಲೆಂಡ್ ಫ್ಲೈಟ್ ಏರಲಿದ್ದಾರೆ. ಈ ಪ್ರವಾಸದ ಮೇಲೆ ಎಲ್ಲರ ಕಣ್ಣಿದೆ. ಯಾಕಂದ್ರೆ ಈಗ ತಂಡದಲ್ಲಿ ಅನುಭವಿ ಆಟಗಾರರ ಕೊರತೆ ಎದ್ದು ಕಾಣ್ತಿದೆ. ಕ್ರೂಶಿಯಲ್ ಟೈಮಲ್ಲಿ ಗೈಡೆನ್ಸ್ ಕೊಡೋರು ಇಲ್ಲದ ಕಾರಣ ತಂಡವನ್ನ ಅಚ್ಚುಕಟ್ಟಾಗಿ ನಿಭಾಯಿಸಬೇಕು. ಈ ಲಿಸ್ಟ್ನಲ್ಲಿ ಗಿಲ್ ವರ್ಸಸ್ ರಾಹುಲ್ ಕಂಪೇರಿಸನ್ ನಡೀತಿದೆ.
ಟೆಸ್ಟ್ ಕ್ಯಾಪ್ಟನ್ಸಿ ರೇಸ್ ನಲ್ಲಿ ಗಿಲ್ ಹೆಸರು ಮುಂಚೂಣಿ!
ಹೌದು. ಮೊದ್ಲಿಂದಲೂ ಶುಭ್ಮನ್ ಗಿಲ್ರನ್ನ ಭವಿಷ್ಯದ ನಾಯಕ ಎಂದೇ ಬಿಂಬಿಸಿಕೊಂಡು ಬರಲಾಗ್ತಿದೆ. ಟೀಂ ಇಂಡಿಯಾದ ಪ್ರಿನ್ಸ್ ಎಂದೇ ಕರೆಯಲಾಗಿದೆ. ಆದ್ರೆ ಗಿಲ್ ಏಷ್ಯಾ ಖಂಡದಲ್ಲಿ ಮಾತ್ರ ಕಿಂಗ್ ಆಗಿದ್ರೆ, ಬೇರೆ ಖಂಡಗಳಲ್ಲಿ ಫೇಲ್ಯೂರ್ ಆಗಿದ್ದಾರೆ. ಶುಭಮನ್ ಗಿಲ್ ಈವರೆಗೆ ತವರಿನಲ್ಲಿ 17 ಪಂದ್ಯಗಳನ್ನು ಆಡಿದ್ದು 42ರ ಸರಾಸರಿಯಲ್ಲಿ 4 ಶತಕ, 5 ಅರ್ಧಶತಕಗಳೊಂದಿಗೆ 1177 ರನ್ ಸಿಡಿಸಿದ್ದಾರೆ. ಆದ್ರೆ ವಿದೇಶ ಅಂತಾ ಬಂದಾಗ ಇವ್ರ ಪ್ರದರ್ಶನ ಕಂಪ್ಲೀಟ್ ಸೈಲೆಂಟ್ ಆಗುತ್ತೆ. ಗಿಲ್ ವಿದೇಶದಲ್ಲಿ ಈ ವರೆಗೆ ಒಟ್ಟು 13 ಟೆಸ್ಟ್ ಪಂದ್ಯ ಆಡಿದ್ದು, 29ರ ಸರಾಸರಿಯಲ್ಲಿ 649 ರನ್ ಸಿಡಿಸಿದ್ದಾರೆ. ಈ ವೇಳೆ ಒಂದೇ ಒಂದು ಶತಕ ಹಾಗೂ 2 ಅರ್ಧಶತಕಗಳು ಸೇರಿವೆ. ಸೆನಾ ರಾಷ್ಟ್ರಗಳಲ್ಲಿ ಗಿಲ್ ಬ್ಯಾಟ್ ಅಬ್ಬರಿಸಿಲ್ಲ. ಅಂದ್ರೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಪಿಚ್ಗಳಲ್ಲಿ ಮಂಕಾಗಿದ್ದಾರೆ. ಹೀಗಾಗಿ ಏಕ್ಧಂ ಗಿಲ್ ತಲೆಗೆ ಕ್ಯಾಪ್ಟನ್ಸಿ ಕಿರೀಟ ತೊಡಿಸೋದು ಎಷ್ಟು ಸರಿ ಅನ್ನೋ ಪ್ರಶ್ನೆಯೂ ಕಾಡ್ತಿದೆ.
ಅನುಭವ + ಅದ್ಭುತ ಪ್ರದರ್ಶನವಿದ್ರೂ ರಾಹುಲ್ ಗಿಲ್ವಾ ಕ್ಯಾಪ್ಟನ್ಸಿ?
ಕ್ಯಾಪ್ಟನ್ಸಿ ರೇಸ್ನಲ್ಲಿ ಮುಂಚೂಣಿಯಲ್ಲಿರೋ ಮತ್ತೊಂದು ಹೆಸರು ಕೆಎಲ್ ರಾಹುಲ್. ರಾಹುಲ್ ಪರ್ಫಾಮೆನ್ಸ್ ಹೇಗಿರುತ್ತೆ ಅನ್ನೋದನ್ನ ಇಡೀ ಜಗತ್ತೇ ನೋಡಿದೆ. ತವರಿನಲ್ಲಿ 39ರ ಸರಾಸರಿಯಲ್ಲಿ 1,149 ರನ್ ಕಲೆ ಹಾಕಿದ್ದಾರೆ. ಈ ವೇಳೆ ತವರಿನಲ್ಲಿ 1 ಶತಕ ಸಿಡಿಸಿದ್ದಾರೆ. ಬಟ್ ವಿದೇಶ ಅಂತಾ ಬಂದಾಗ ರಾಹುಲ್ ಆರ್ಭಟ ಜೋರಾಗಿದೆ. ರಾಹುಲ್ 31ರ ಸರಾಸರಿಯಲ್ಲಿ 2108 ರನ್ ಸಿಡಿಸಿದ್ದು, ಈ ವೇಳೆ ಏಳು ಶತಕ ಹಾಗೂ ಏಳು ಅರ್ಧಶತಕ ಸಿಡಿಸಿದ್ದಾರೆ. ಹೀಗಿದ್ರೂ ರಾಹುಲ್ಗೆ ಕ್ಯಾಪ್ಟನ್ಸಿ ಸಿಗೋದು ಡೌಟ್ ಇದೆ. ಭವಿಷ್ಯದ ದೃಷ್ಟಿಯಿಂದ ಒಂದಷ್ಟು ವರ್ಷ ಟೀಂ ಲೀಡ್ ಮಾಡುವಂಥ ನಾಯಕನನ್ನ ನೋಡ್ತಿರೋ ಬಿಸಿಸಿಐ ಗಿಲ್ ಮೇಲೆಯೇ ಹೆಚ್ಚು ಇಂಟ್ರೆಸ್ಟ್ ತೋರಿಸಬಹುದು.