RCB ಪಂದ್ಯಗಳಿಗಿಲ್ಲ ಹೇಜಲ್ ವುಡ್? – ಪ್ಲೇಆಫ್ಸ್ ಹಂತದಲ್ಲೇ ತವರಿಗೆ ವಾಪಸ್
ಜೋಶ್ ಇಲ್ಲದ ರೆಡ್ ಆರ್ಮಿ ಹೇಗಿರುತ್ತೆ?

RCB ಪಂದ್ಯಗಳಿಗಿಲ್ಲ ಹೇಜಲ್ ವುಡ್? – ಪ್ಲೇಆಫ್ಸ್ ಹಂತದಲ್ಲೇ ತವರಿಗೆ ವಾಪಸ್ಜೋಶ್ ಇಲ್ಲದ ರೆಡ್ ಆರ್ಮಿ ಹೇಗಿರುತ್ತೆ?

18ನೇ ಸೀಸನ್​ನಲ್ಲಿ ಆರ್​ಸಿಬಿ ಟೇಬಲ್ ಟಾಪರ್ ಪರ್ಫಾಮೆನ್ಸ್ ನೀಡ್ತಿದೆ ಅಂದ್ರೆ ಅದಕ್ಕೆ ಮುಖ್ಯ ಕಾರಣ ಟೀಂ.. ಬೌಲಿಂಗ್ ಮತ್ತು ಬ್ಯಾಟಿಂಗ್ ಸ್ಕ್ವಾಡ್ ಬಲಿಷ್ಠವಾಗಿ ಇರೋದೇ ಪ್ಲಸ್ ಆಗ್ತಿದೆ. ಅದ್ರಲ್ಲೂ ಜೋಶ್ ಹೇಜಲ್​ವುಡ್ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್​ನ ಮರೆಯೋಕೆ ಸಾಧ್ಯನೇ ಇಲ್ಲ. ಇನ್ನೇನು ಪಂದ್ಯ ಕೈಜಾರಿತು ಅನ್ನುವಾಗ್ಲೆಲ್ಲಾ ಆಪತ್ಬಾಂಧವನಂತೆ ಬಂದು ಗೆಲ್ಲಿಸಿಕೊಟ್ಟಿದ್ದಾರೆ. ಬಟ್ ಈಗ ಕ್ರೂಶಿಯಲ್ ಟೈಮಲ್ಲೇ ಅವ್ರ ಆಬ್ಸೆನ್ಸ್ ಕಾಡುವ ಆತಂಕ ಶುರುವಾಗಿದೆ.

ಇದನ್ನೂ ಓದಿ : 16ಕ್ಕೆ ಸ್ಟಾರ್ಟ್.. 30ಕ್ಕೆ IPL ಫೈನಲ್? – RCB Vs LSG ನಡುವೆ ಫಸ್ಟ್ ಫೈಟ್

ಭಾರತ ಮತ್ತು ಪಾಕಿಸ್ತಾನ ನಡುವಿನ ವಾರ್​ನಿಂದಾಗಿ ಐಪಿಎಲ್​ ಟೂರ್ನಿಯನ್ನ ಒಂದು ವಾರ ಪೋಸ್ಟ್ ಪೋನ್ ಮಾಡ್ಲಾಗಿದೆ. ಹೀಗಾಗಿ ಅನೇಕ ವಿದೇಶಿ ಆಟಗಾರರು ಭಾರತವನ್ನು ತೊರೆದು ತಮ್ಮ ತಮ್ಮ ರಾಷ್ಟ್ರಗಳಿಗೆ ವಾಪಸ್ ಆಗಿದ್ದಾರೆ. ಜೋಶ್ ಹೇಜಲ್‌ವುಡ್ ಕೂಡ ಆಸ್ಟ್ರೇಲಿಯಾಕ್ಕೆ ವಾಪಸ್ ಆಗಿದ್ರು. ಆದ್ರೀಗ ಹೋದವ್ರೆಲ್ಲಾ ವಾಪಸ್ ಬರ್ತಾರಾ ಅನ್ನೋದೇ ಪ್ರಶ್ನೆಯಾಗಿದೆ. ಈ ಸೀಸನ್​ನಲ್ಲಿ ಆರ್​ಸಿಬಿ ಅದ್ಭುತ ಪ್ರದರ್ಶನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹೇಜಲ್​ವುಡ್ ಮುಂದಿನ ಪಂದ್ಯಗಳಿಗೆ ಬರೋದು ಡೌಟ್ ಇದೆ. ಅಲ್ದೇ ಪ್ರಸ್ತುತ ಗಾಯದಿಂದಲೂ ಬಳಲುತ್ತಿದ್ದಾರೆ. ಇದೇ ಕಾರಣಕ್ಕೆ ಮೇ 3ರಂದು ಬೆಂಗಳೂರಿನಲ್ಲಿ ನಡೆದಿದ್ದ ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಅಲ್ದೇ ಜೂನ್ 11 ರಿಂದ ಲಾರ್ಡ್ಸ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವನ್ನ ಆಡಬೇಕಾಗಿದೆ. ಈ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ಮಂಡಳಿಯು ಯುಕೆಯಲ್ಲಿ ಕಂಡೀಷನಿಂಗ್ ಶಿಬಿರವನ್ನು ನಡೆಸಲಿದ್ದು, ಹೇಜಲ್‌ವುಡ್ ಈ ಶಿಬಿರದ ಭಾಗವಾಗಲಿದ್ದಾರೆ. ಆದ್ದರಿಂದ, ಐಪಿಎಲ್ ರೀ ಸ್ಟಾರ್ಟ್ ಆದ್ರೆ ವಾಪಸ್ ಬರೋದು ಡೌಟ್ ಎನ್ನಲಾಗ್ತಿದೆ. ಬಂದ್ರೂ ಕೂಡ ಅಂತಿಮ ಹಂತದ ಪಂದ್ಯಗಳನ್ನ ಮಿಸ್ ಮಾಡಿಕೊಳ್ಳಬಹುದು.

ಈ ಸೀಸನ್​ನಲ್ಲಿ ಆರ್​ಸಿಬಿಯ ಅತಿದೊಡ್ಡ ಸ್ಟ್ರೆಂಥ್ ಅಂದ್ರೆ ಅದು ಹೇಜಲ್​ವುಡ್. ಪವರ್‌ಪ್ಲೇ ಆಗಿರಲಿ ಅಥವಾ ಡೆತ್ ಓವರ್‌ಗಳಾಗಿರಲಿ ಅವ್ರ ಬೌಲಿಂಗ್ ಕಂಟ್ರೋಲ್ ನೆಕ್ಸ್​ಟ್ ಲೆವೆಲ್​ನಲ್ಲಿತ್ತು. ರನ್‌ಗಳಿಗೆ ಕಡಿವಾಣ  ಹಾಕೋದ್ರ ಜೊತೆಜೊತೆಗೆ ವಿಕೆಟ್‌ಗಳನ್ನೂ ಬೇಟೆಯಾಡ್ತಿದ್ರು. ಸದ್ಯ ಆರ್‌ಸಿಬಿ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡ ಅವ್ರೇ ಆಗಿದ್ದಾರೆ.

 ಆರ್ ಸಿಬಿ ಸ್ಟ್ರೆಂಥ್ ಹೇಜಲ್ ವುಡ್!

ಆರ್ ಸಿಬಿ ಪರ ಅತೀ ಹೆಚ್ಚು ವಿಕೆಟ್​ ಗಳನ್ನ ಬೇಟೆಯಾಡಿರುವ ಬೌಲರ್

10 ಪಂದ್ಯ, 36.5 ಓವರ್​, ಒಟ್ಟು 311 ರನ್, 18 ವಿಕೆಟ್ ​ಗಳ ಬೇಟೆ

ಆರ್​ಸಿಬಿ ತಂಡದ ಯಾವುದೇ ವೇಗಿ 10 ವಿಕೆಟ್​ಗಳ ಮೇಲೆ ಪಡೆದಿಲ್ಲ

ಆರ್ ​ಸಿಬಿ ಪರ ಅತ್ಯಧಿಕ ಡಾಟ್ ಬಾಲ್ ಎಸೆದ ಬೌಲರ್ ಕೂಡ ಜೋಶ್

36.5 ಓವರ್​ಗಳಲ್ಲಿ  ಒಟ್ಟು 103 ಡಾಟ್ ಬಾಲ್​ಗಳನ್ನು ಎಸೆದಿದ್ದಾರೆ

ಯಾವುದೇ ಬೌಲರ್ ಈ ಬಾರಿ 100 ಡಾಟ್ ಬಾಲ್​ ಎಸೆದಿಲ್ಲ

ಪರ್ಪಲ್ ಕ್ಯಾಪ್ ರೇಸ್​ನಲ್ಲಿ ಮೂರನೇ ಸ್ಥಾನ, ಪ್ರಸಿದ್ಧ್ ಕೃಷ್ಣ ಫಸ್ಟ್ ಪ್ಲೇಸ್

ನೂರ್ ಅಹ್ಮದ್ ಸೆಕೆಂಡ್ ಪ್ಲೇಸ್, 18 ವಿಕೆಟ್ ಪಡೆದು ಹೇಜಲ್ವುಡ್ 3ನೇ ಸ್ಥಾನ

Shantha Kumari

Leave a Reply

Your email address will not be published. Required fields are marked *