4 ಶತಕ.. ಆರೆಂಜ್ ಕ್ಯಾಪ್ ಗೆ ಐವರ ಪೈಪೋಟಿ – 18ನೇ ಸೀಸನ್ ಸೂಪರ್

18ನೇ ಸೀಸನ್ ಐಪಿಎಲ್ ಮಾರ್ಚ್ 22ರಿಂದ ಸ್ಟಾರ್ಟ್ ಆಗಿದ್ದು ಮೇ 25ಕ್ಕೆ ಫೈನಲ್ ಮ್ಯಾಚ್ ಫಿಕ್ಸ್ ಮಾಡ್ಲಾಗಿತ್ತು. ಈಗಾಗ್ಲೇ 57 ಮ್ಯಾಚ್ಗಳು ಕಂಪ್ಲೀಟ್ ಆಗಿದ್ದು 58ನೇ ಪಂದ್ಯದಲ್ಲಿ ಪಂಜಾಬ್ ಮತ್ತು ಡೆಲ್ಲಿ ತಂಡಗಳು ಮುಖಾಮುಖಿಯಾಗಿದ್ವು. ಬಟ್ ಪಾಕ್ ದಾಳಿಯಿಂದಾಗಿ ಮ್ಯಾಚ್ನ ಅರ್ಧದಲ್ಲೇ ಕ್ಯಾನ್ಸಲ್ ಮಾಡ್ಲಾಗಿದೆ. ಉಳಿದಂತೆ ಲೀಗ್ ಹಂತದಲ್ಲಿ 12 ಹಾಗೇ ಪ್ಲೇಆಫ್ಸ್, ಫೈನಲ್ 4 ಮ್ಯಾಚ್ಗಳು ಸೇರಿ ಟೋಟಲ್ 16 ಪಂದ್ಯಗಳು ಬಾಕಿ ಇವೆ.
ಇದನ್ನೂ ಓದಿ : ಅಮ್ರಿಟಾ – ಸುನೀಲ್ ರಿಯಲ್ Love? – ಕಡೆಗೂ ಸತ್ಯ ಬಾಯ್ಬಿಟ್ಟ ಅಮ್ರಿಟಾ!
18ನೇ ಸೀಸನ್ ಶೈನಿಂಗ್ ಸ್ಟಾರ್ಸ್!
ಪಾಯಿಂಟ್ಸ್ ಟೇಬಲ್ ನಲ್ಲಿ ಗುಜರಾತ್ ಟೈಟಾನ್ಸ್ ನಂ.1 ಸ್ಥಾನ
ಆರ್ ಸಿಬಿ, ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಂತರ
ಎಂಐ ಪರ 12 ಪಂದ್ಯ, ಸೂರ್ಯ 510 ರನ್ ಆರೆಂಜ್ ಕ್ಯಾಪ್
ಸಾಯಿ ಸುದರ್ಶನ್ 509 ರನ್, ಗಿಲ್ 508, ಕೊಹ್ಲಿ 505, ಬಟ್ಲರ್ 500 ರನ್
ಪರ್ಪಲ್ ಕ್ಯಾಪ್ ಗುಜರಾತ್ ಟೈಟಾನ್ಸ್ ನ ಆಟಗಾರ ಪ್ರಸಿದ್ಧ್ ಕೃಷ್ಣ ಬಳಿ
ಸಿಎಸ್ ಕೆ ಬೌಲರ್ ನೂರ್ ಅಹ್ಮದ್ ಕೂಡ 20 ವಿಕೆಟ್ ಗಳ ಬೇಟೆ
ಜೋಶ್ ಹೇಜಲ್ವುಡ್ (18), ಟ್ರೆಂಟ್ ಬೌಲ್ಟ್ (18) ವರುಣ್ (17)
ಸಾಯಿ ಸುದರ್ಶನ್ ಅತಿ ಹೆಚ್ಚು ಬೌಂಡರಿ, 56 ಬೌಂಡರಿ
ನಿಕೋಲಸ್ ಪೂರನ್ 34 ಸಿಕ್ಸರ್ ಗಳನ್ನು ಬಾರಿಸಿ ಅಗ್ರಸ್ಥಾನ
ಪಂಜಾಬ್ ಕಿಂಗ್ಸ್ ವಿರುದ್ಧ 141 ರನ್ ಗಳಿಸಿರುವ ಅಭಿಷೇಕ್ ಶರ್ಮಾ
ಇಶಾನ್ ಕಿಶನ್ 106, ಪ್ರಿಯಾಂಶ್ ಆರ್ಯ 103, ವೈಭವ್ 101 ರನ್
ನಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿದ ಆಟಗಾರ ವಿರಾಟ್ ಕೊಹ್ಲಿ
ಈ ಬಾರಿಯ ಐಪಿಎಲ್ನಲ್ಲಿ ಸೀನಿಯರ್ಸ್ಗಿಂದ ಯಂಗ್ಸ್ಟರ್ಸ್ ಸಿಕ್ಕಾಪಟ್ಟೆ ಶೈನ್ ಆಗ್ತಿದ್ದಾರೆ. ಡೆಬ್ಯೂ ಪಂದ್ಯಗಳಲ್ಲಿ ರೆಕಾರ್ಡ್ಸ್ ಬ್ರೇಕಿಂಗ್ ಇನ್ನಿಂಗ್ಸ್ ಆಡಿದ್ದಾರೆ. ಈ ಆವೃತ್ತಿಯಲ್ಲಿ ಇನ್ನೂ 16 ಮ್ಯಾಚಸ್ ಬಾಕಿ ಇರೋದ್ರಿಂದ ಪಾಯಿಂಟ್ಸ್ ಟೇಬಲ್, ಪರ್ಪಲ್ ಕ್ಯಾಪ್, ಆರೆಂಜ್ ಕ್ಯಾಪ್ ಕೂಡ ಚೇಂಜ್ ಆಗಬಹುದು.